For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಪರಿಷ್ಕರಿಸಿದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: ನೂತನ ದರವೆಷ್ಟು?

|

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ & ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಡೊಮೆಸ್ಟಿಕ್ ಟರ್ಮ್ ಡೆಪಾಸಿಟ್ಸ್, ಎನ್‌ಆರ್‌ಒ ಖಾತೆ, ಬಂಡವಾಳ ಗಳಿಕೆ ಖಾತೆಗಳ ಯೋಜನೆ 1988, ರಿಕ್ಯೂಡಿಂಗ್ ಡೆಪಾಸಿಟ್ ಸ್ಕೀಮ್ ಹಾಗೂ ಪಿಎಸ್‌ಬಿ ಫಿಕ್ಸಿಡ್ ಡೆಪಾಸಿಟ್ ತೆರಿಗೆ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ.

 

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಹಾಗೂ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತಿದೆ. ಪಂಜಾಬ್ & ಸಿಂಧ್ ಬ್ಯಾಂಕ್ ಕೂಡ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಬ್ಯಾಂಕಿನ ವೆಬ್‌ಸೈಟ್‌ನ ಪ್ರಕಾರ ಹೊಸ ಬಡ್ಡಿ ದರಗಳು ಇಂದು ಮೇ 9, 2022 ರಂದು ಜಾರಿಗೆ ಬರುತ್ತವೆ.

ಹಣದುಬ್ಬರ: ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇ.7 ಬಡ್ಡಿದರ ನೀಡುತ್ತೆ ಈ ಬ್ಯಾಂಕುಗಳು

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 09/05/2022 ರಿಂದ ಜಾರಿಗೆ ಬರುವಂತೆ 7 ರಿಂದ 45 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಶೇಕಡ 3.00ರಷ್ಟು ಬಡ್ಡಿದರವನ್ನು ನೀಡುತ್ತದೆ. 46 ರಿಂದ 90 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸಾಮಾನ್ಯ ಜನರು ಈಗ 3.70 ಶೇಕಡಾ ಬಡ್ಡಿದರವನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದೆ.

 ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ ಈ ಬ್ಯಾಂಕ್: ನೂತನ ದರವೆಷ್ಟು?

ಇನ್ನು 91 ರಿಂದ 179 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳ ಮೇಲೆ, ಸಾಮಾನ್ಯ ಗ್ರಾಹಕರು ಈಗ 3.90 ಶೇಕಡಾ ಬಡ್ಡಿದರವನ್ನು ಪಡೆಯುತ್ತಾರೆ ಎಂದು ಕೂಡಾ ಪಂಜಾಬ್ & ಸಿಂಧ್ ಬ್ಯಾಂಕ್ (ಪಿಎಸ್‌ಬಿ) ತಿಳಿಸಿದೆ. ಪಿಎಸ್‌ಬಿ ಈಗ 180 - 269 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳ ಮೇಲೆ ಶೇಕಡಾ 4.45 ರ ನಿಯಮಿತ ದರವನ್ನು ಮತ್ತು 270 - 364 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳ ಮೇಲೆ 4.50 ಶೇಕಡಾವನ್ನು ಒದಗಿಸುತ್ತದೆ.

ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ

ಒಂದರಿಂದ ಎರಡು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ಈಗ ಕ್ರಮವಾಗಿ ಶೇಕಡಾ 5.15 ಮತ್ತು 5.20 ರಷ್ಟು ಬಡ್ಡಿ ದೊರೆಯುತ್ತದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಪ್ರಸ್ತುತ ಮೂರರಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಠೇವಣಿಗಳ ಮೇಲೆ 5.40 ಶೇಕಡಾ ಬಡ್ಡಿ ದರವನ್ನು ನೀಡುತ್ತಿದೆ.

 ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ ಈ ಬ್ಯಾಂಕ್: ನೂತನ ದರವೆಷ್ಟು?

ಪರಿಷ್ಕರಣೆ ಬಳಿಕ ಜಾರಿಗೆ ಬರುವ ಬಡ್ಡಿದರ ಇಲ್ಲಿದೆ

7 ದಿನದಿಂದ 14 ದಿನ: 3 ಶೇಕಡ ಬಡ್ಡಿದರ
15 ದಿನದಿಂದ 30 ದಿನ: 3 ಶೇಕಡ ಬಡ್ಡಿದರ
31 ದಿನದಿಂದ 45 ದಿನ: 3 ಶೇಕಡ ಬಡ್ಡಿದರ
46 ದಿನದಿಂದ 90 ದಿನ: 3.7 ಶೇಕಡ ಬಡ್ಡಿದರ
91 ದಿನದಿಂದ 120 ದಿನ: 3.9 ಶೇಕಡ ಬಡ್ಡಿದರ
121 ದಿನದಿಂದ 150 ದಿನ: 3.9 ಶೇಕಡ ಬಡ್ಡಿದರ
151 ದಿನದಿಂದ 179 ದಿನ: 3.9 ಶೇಕಡ ಬಡ್ಡಿದರ
180 ದಿನದಿಂದ 269 ದಿನ: 4.45 ಶೇಕಡ ಬಡ್ಡಿದರ
270 ದಿನದಿಂದ 364 ದಿನ: 4.5 ಶೇಕಡ ಬಡ್ಡಿದರ
1 ವರ್ಷದಿಂದ 2 ವರ್ಷ: 5.15 ಶೇಕಡ ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: 5.2 ಶೇಕಡ ಬಡ್ಡಿದರ
3 ವರ್ಷದಿಂದ 5 ವರ್ಷ: 5.4 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಅಧಿಕ 10 ವರ್ಷದವರೆಗೆ: 5.4 ಶೇಕಡ ಬಡ್ಡಿದರ

 

ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ

7 ದಿನದಿಂದ 14 ದಿನ: 3 ಶೇಕಡ ಬಡ್ಡಿದರ
15 ದಿನದಿಂದ 30 ದಿನ: 3 ಶೇಕಡ ಬಡ್ಡಿದರ
31 ದಿನದಿಂದ 45 ದಿನ: 3 ಶೇಕಡ ಬಡ್ಡಿದರ
46 ದಿನದಿಂದ 90 ದಿನ: 3.7 ಶೇಕಡ ಬಡ್ಡಿದರ
91 ದಿನದಿಂದ 120 ದಿನ: 3.9 ಶೇಕಡ ಬಡ್ಡಿದರ
121 ದಿನದಿಂದ 150 ದಿನ: 3.9 ಶೇಕಡ ಬಡ್ಡಿದರ
151 ದಿನದಿಂದ 179 ದಿನ: 3.9 ಶೇಕಡ ಬಡ್ಡಿದರ
180 ದಿನದಿಂದ 269 ದಿನ: 4.95 ಶೇಕಡ ಬಡ್ಡಿದರ
270 ದಿನದಿಂದ 364 ದಿನ: 5 ಶೇಕಡ ಬಡ್ಡಿದರ
1 ವರ್ಷದಿಂದ 2 ವರ್ಷ: 5.65 ಶೇಕಡ ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: 5.7 ಶೇಕಡ ಬಡ್ಡಿದರ
3 ವರ್ಷದಿಂದ 5 ವರ್ಷ: 5.9 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಅಧಿಕ 10 ವರ್ಷದವರೆಗೆ: 5.9 ಶೇಕಡ ಬಡ್ಡಿದರ

English summary

Punjab & Sind Bank Revises Fixed Deposit Rates, Here's Latest Updates

Punjab & Sind Bank Revises Fixed Deposit Rates, Here's Latest Updates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X