ಆರ್ಬಿಐ UPI123Pay: ಫೀಚರ್ ಫೋನ್ಗಳಲ್ಲಿ ಡಿಜಿಟಲ್ ಪೇಮೆಂಟ್ ಹೇಗೆ ಮಾಡುವುದು?
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಇಂದು UPI 123Pay ಅನ್ನು ಪ್ರಾರಂಭಿಸಿವೆ. ಅಂದರೆ ಇಂಟರ್ನೆಟ್ ಇಲ್ಲದೆಯೇ ಪಾವತಿಗಳನ್ನು ಮಾಡಲು ಅನುಮತಿಸುವ ವಿಧಾನ ಇದಾಗಿದೆ. ಇದನ್ನು ಫೀಚರ್ ಫೋನ್ಗಳಿಗಾಗಿ ಪ್ರಸ್ತುತ ಪಡಿಸಲಾಗಿದೆ.
ಫೀಚರ್ ಫೋನ್ಗಳಿಗಾಗಿ UPI123PAY ಅಗತ್ಯವಿರುವ ಎಲ್ಲಾ ಸ್ಮಾರ್ಟ್ಫೋನ್ ಫೀಚರ್ಗಳನ್ನು ಹೊಂದಿರುತ್ತದೆ. ಈ ಉಪಕ್ರಮವು ಡಿಜಿಟಲ್ ಪಾವತಿಗಳನ್ನು ಉನ್ನತ ಮಟ್ಟಕ್ಕೆ ಸುಧಾರಿಸುತ್ತದೆ, ನಗದು ರಹಿತ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ.
ಜೇಬಿಗೆ ಮತ್ತೆ ಕತ್ತರಿ: ಶೀಘ್ರ ಪೆಟ್ರೋಲ್, ಡೀಸೆಲ್ ದರ ಏರಿಕೆ
"UPI123Pay ಮತ್ತು DigiSaathi ಎಂಬ ಎರಡು ಹೆಗ್ಗುರುತು ಉಪಕ್ರಮಗಳನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಇವೆರಡೂ ನಮ್ಮ ಪಾವತಿಗಳ ಪರಿಸರ ವ್ಯವಸ್ಥೆಯ ಎರಡು ವೈವಿಧ್ಯಮಯ ವಿಧಾನ. ಆದರೆ ಮಹತ್ವದ ಆಯಾಮಗಳನ್ನು ಪ್ರತಿನಿಧಿಸುತ್ತವೆ," ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

UPI123Pay ನಲ್ಲಿ, ವಹಿವಾಟುಗಳನ್ನು ಪೂರ್ಣಗೊಳಿಸಲು ಬಳಕೆದಾರರು ತೆಗೆದುಕೊಳ್ಳಬೇಕಾದ ಮೂರು ಹಂತಗಳಿವೆ. UPI123Pay ಫೀಚರ್ ಫೋನ್ಗಳ ಮೂಲಕ ಆನ್ಬೋರ್ಡ್ ಮಾಡಿದ ಡಿಜಿಟಲ್ ಅನುಭವವನ್ನು ಪಡೆಯಲು ಹೆಚ್ಚಿನ ಜನರಿಗೆ ಅಧಿಕಾರ ನೀಡುವುದಾಗಿದೆ. ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ಸಾಥಿ ಇದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
"UPI123Pay ಯ ಪ್ರಾರಂಭವು UPI ಅಡಿಯಲ್ಲಿನ ಸೌಲಭ್ಯಗಳನ್ನು ಇದುವರೆಗೆ ಡಿಜಿಟಲ್ ಪಾವತಿಯಿಂದ ದೂರವಿರುವ ಸಮಾಜದ ವರ್ಗಕ್ಕೆ ತಲುಪುವ ವ್ಯವಸ್ಥೆಯಾಗಿದೆ. ಆ ರೀತಿಯಲ್ಲಿ ಅದು ನಮ್ಮ ಆರ್ಥಿಕತೆಯಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತಿದೆ," ಎಂದು ಕೂಡಾ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಉಲ್ಲೇಖ ಮಾಡಿದ್ದಾರೆ. ಹಾಗಾದರೆ ಈ ಯುಪಿಐ ಪೇ ಅನ್ನು ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿಧಾನ ಮುಂದೆ ಓದಿ....
ಮಾ.9: ಕಚ್ಚಾತೈಲ ಬೆಲೆ ಸಾರ್ವಕಾಲಿಕ ಏರಿಕೆ ಕಂಡರೂ, ಭಾರತದಲ್ಲಿ ಇಂಧನ ದರ ಸ್ಥಿರ
UPI123PAY ಅನ್ನು ಹೇಗೆ ಬಳಸುವುದು?
40 ಕೋಟಿಗೂ ಹೆಚ್ಚು ಭಾರತೀಯರು ಫೀಚರ್ ಫೋನ್ಗಳನ್ನು ಬಳಸುತ್ತಿದ್ದಾರೆ ಮತ್ತು ಅವರಿಗೆ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಆರ್ಬಿಐ ಡಿಜಿಟಲ್ ಪಾವತಿ ವಿಧಾನವನ್ನು ಪ್ರಾರಂಭಿಸಿದ್ದು, ಫೀಚರ್ ಫೋನ್ ಹೊಂದಿರುವವರು ಈಗ ಡಿಜಿಟಲ್ ಪಾವತಿ ವಿಧಾನಗಳನ್ನು ಕೂಡಾ ಪಾಲಿಸಬಹುದು. ಫೀಚರ್ ಫೋನ್ ಹೊಂದಿರುವವರು ವಹಿವಾಟು ಮಾಡಲು ಡಿಜಿಟಲ್ ವಿಧಾನಗಳನ್ನು ಬಳಸಲು ಅನುಮತಿಸಲು ಸಾಮಾನ್ಯ ಸರ್ವರ್ ಸೈಟ್ ಲೈಬ್ರರಿಯನ್ನು ರಚಿಸಲಾಗಿದೆ.
123PAY ಫೀಚರ್ನೊಂದಿಗೆ ಆನ್ಲೈನ್ ವಹಿವಾಟು ನಡೆಸಲು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಇದಲ್ಲದೆ, ಈ ಸೇವೆಯನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಪಡೆಯಬಹುದು. ಈ ಹೊಸ ವಿಧಾನದಿಂದಾಗಿ ಸ್ಮಾರ್ಟ್ ಫೋನ್ ಹಾಗೂ ಫೀಚರ್ ಫೋನ್ ಹೊಂದಿರುವವರು ಸುಲಭವಾಗಿ ವಹಿವಾಟು ನಡೆಸಬಹುದು. ಫೀಚರ್ ಫೋನ್ಗಳಲ್ಲಿ UPI123Pay ಮೂರು-ಹಂತದ ಪ್ರಕ್ರಿಯೆಯಾಗಿದೆ. ನೀವು ಕರೆ ಮಾಡಿ, ಆಯ್ಕೆ ಮಾಡಿ, ಪಾವತಿಸಬಹುದಾಗಿದೆ.
*ನೀವು ಪಾವತಿ ಪ್ರಕ್ರಿಯೆ ಆರಂಭ ಮಾಡುವುದಕ್ಕೂ ಮುನ್ನ ಫೀಚರ್ ಫೋನ್ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗಿದೆ.
*ಬಳಿಕ ಡೆಬಿಟ್ ಕಾರ್ಡ್ ಬಳಿಕೆ ಮಾಡಿ ಯುಪಿಐ ಪಿನ್ ಅನ್ನು ಸೆಟ್ ಮಾಡಕೊಳ್ಳಬೇಕು.
* ಒಮ್ಮೆ ಯುಪಿಐ ಪಿನ್ ಅನ್ನು ಸೆಟ್ ಮಾಡಿದ ಬಳಿಕ ಬಳಕೆದಾರರು ಸಾಮಾನ್ಯ ಸ್ಮಾರ್ಟ್ ಫೋನ್ನಂತೆಯೇ ತಮ್ಮ ಫೀಚರ್ ಫೋನ್ ಅನ್ನು ಬಳಕೆ ಮಾಡಿಕೊಳ್ಳಬಹುದು
* ಫೀಚರ್ ಫೋನ್ ಬಳಕೆದಾರರು ಐವಿಆರ್ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ
* ಬಳಿಕ ಹಣ ವರ್ಗಾವಣೆ, ಎಲ್ಪಿಜಿ ಗ್ಯಾಸ್ ರೀಫಿಲ್, ಫಾಸ್ಟ್ಟ್ಯಾಗ್ ರೀಚಾರ್ಜ್, ಮೊಬೈಲ್ ರೀಚಾರ್ಜ್, ಬ್ಯಾಲೆನ್ಸ್ ಚೆಕ್ ಮುಂತಾದ ಅಗತ್ಯವಿರುವ ಸೇವೆಯನ್ನು ಅವಲಂಬಿಸಿ ಫೋನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.
* ನೀವು ಹಣವನ್ನು ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ರವಾನೆ ಮಾಡಬೇಕಾದರೆ ನೀವು ಹಣ ಕಳುಹಿಸಲು ಬಳಸುವ ವ್ಯಕ್ತಿಯ ಫೋನ್ ಸಂಖ್ಯೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು
* ನಿಮ್ಮ ಯುಪಿಐ ಪಿನ್ ಹಾಗೂ ಎಷ್ಟು ಹಣ ಎಂದು ನಮೂದಿಸಬೇಕು
* ಇಲ್ಲಿಗೆ ಪಾವತಿ ಪ್ರಕ್ರಿಯೆ ಕೊನೆಯಾಗಲಿದೆ
* ನೀವು ವ್ಯಾಪಾರಿಗೆ ಪಾವತಿ ಮಾಡಬೇಕಾದರೆ, ಅಪ್ಲಿಕೇಶನ್ ಆಧಾರಿತ ಪಾವತಿ ವಿಧಾನ ಅಥವಾ ಮಿಸ್ಡ್ ಕಾಲ್ ಪಾವತಿ ವಿಧಾನವನ್ನು ಬಳಸಬಹುದು
* ನೀವು ಡಿಜಿಟಲ್ ಪೇಮೆಂಟ್ಗಾಗಿ ಧ್ವನಿ ಆಧಾರಿತ ವಿಧಾನವನ್ನು ಕೂಡಾ ಬಳಕೆ ಮಾಡಬಹುದು.
ನಿಮಗಿದೆ ನಾಲ್ಕು ಆಯ್ಕೆ...!
ಆಪ್ ಆಧಾರಿತ ಕಾರ್ಯನಿರ್ವಹಣೆ: ಫೀಚರ್ ಫೋನ್ನಲ್ಲಿ ಅಪ್ಲಿಕೇಶನ್ ಅನ್ನು ಇನ್ಸ್ಸ್ಟಾಲ್ ಮಾಡಬೇಕಾಗಿದೆ. ಇದು ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿರುವ ಹಲವಾರು UPI ಕಾರ್ಯಗಳನ್ನು ಫೀಚರ್ ಫೋನ್ಗಳಲ್ಲಿಯೂ ಲಭ್ಯವಾಗುವಂತೆ ಮಾಡುತ್ತದೆ.
ಮಿಸ್ಡ್ ಕಾಲ್: ನಿಮ್ಮ ಔಟ್ಲೆಟ್ನಲ್ಲಿ ಪ್ರದರ್ಶಿಸಲಾದ ಸಂಖ್ಯೆಗೆ ಮಿಸ್ಡ್ ಕಾಲ್ ಅನ್ನು ನೀಡುವ ಮೂಲಕ, ಫೀಚರ್ ಫೋನ್ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ಮಿಸ್ಡ್ ಕಾಲ್ ಮೂಲಕ ಹಣವನ್ನು ಸ್ವೀಕರಿಸುವುದು, ಹಣವನ್ನು ವರ್ಗಾಯಿಸುವುದು, ನಿಯಮಿತ ಖರೀದಿಗಳು, ಬಿಲ್ ಪಾವತಿಗಳು ಮತ್ತು ಮುಂತಾದ ದಿನನಿತ್ಯದ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಗ್ರಾಹಕರು ತಮ್ಮ ಯುಪಿಐ ಪಿನ್ ಅನ್ನು ನಮೂದಿಸುವ ಮೂಲಕ ವಹಿವಾಟನ್ನು ಖಚಿತಪಡಿಸಲು ಕೇಳುವ ಕರೆಯೊಂದು ಬರಲಿದ್ದು, ಈ ಬಳಿಕ ಪ್ರಕ್ರಿಯೆ ಪೂರ್ಣವಾಗಲಿದೆ.
ಇಂಟರ್-ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR): ಪೂರ್ವ ನಿರ್ಧಾರಿತ ಐವಿಆರ್ ಸಂಖ್ಯೆಗಳ ಮೂಲಕ ಫೀಚರ್ ಫೋನ್ನಲ್ಲಿ ಹಣದ ವಹಿವಾಟು ಪ್ರಾರಂಭ ಮಾಡಬಹುದು
ಪ್ರಾಕ್ಸಿಮಿಟಿ ಸೌಂಡ್-ಬೇಸ್ಡ್ ಪಾವತಿ: ಯಾವುದೇ ಸಾಧನದಲ್ಲಿ ಸಂಪರ್ಕರಹಿತ, ಆಫ್ಲೈನ್ ಮತ್ತು ಸಾಮೀಪ್ಯ ಡೇಟಾ ಸಂವಹನವನ್ನು ಸಕ್ರಿಯಗೊಳಿಸಲು ಈ ತಂತ್ರಜ್ಞಾನವು ಧ್ವನಿ ತರಂಗಗಳನ್ನು ಬಳಸಿಕೊಳ್ಳುತ್ತದೆ.