For Quick Alerts
ALLOW NOTIFICATIONS  
For Daily Alerts

ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...

|

ದೇಶದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಖಾತೆದಾರರಿಗೆ PAN ಮಾಹಿತಿಯನ್ನು ಅಪ್ ಡೇಟ್ ಮಾಡುವಂತೆ ಕೇಳಿದೆ. ಎಸ್ ಬಿಐ ಡೆಬಿಟ್ ಕಾರ್ಡ್ ಗಳ ಮೂಲಕ ಸುಲಭವಾಗಿ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮಾಡಬೇಕು ಎಂದಾದಲ್ಲಿ ಇದು ಅತ್ಯಗತ್ಯ. ಈ ಬಗ್ಗೆ ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಟ್ವೀಟ್ ಮಾಡಲಾಗಿದೆ.

 

"ಅಂತರರಾಷ್ಟ್ರೀಯ ವಹಿವಾಟು ನಡೆಸುವುದಕ್ಕೆ ಸಮಸ್ಯೆಯಾಗಿದೆಯಾ? ನಿಮ್ಮ PAN ಮಾಹಿತಿಯನ್ನು ಬ್ಯಾಂಕ್ ನ ದಾಖಲೆಯಲ್ಲಿ ಅಪ್ ಡೇಟ್ ಮಾಡಿ. ಯಾವುದೇ ಸಮಸ್ಯೆ ಇಲ್ಲದೆ ಎಸ್ ಬಿಐ ಕಾರ್ಡ್ ಮೂಲಕ ವಿದೇಶಿ ವಹಿವಾಟನ್ನು ನಡೆಸಿ," ಎಂದಿದೆ. ನಿಮ್ಮ PAN ಮಾಹಿತಿಯನ್ನು ಎಸ್ ಬಿಐ ಖಾತೆಗೆ ಆನ್ ಲೈನ್ ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಪ್ ಡೇಟ್ ಮಾಡಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲದ ಮೇಲೆ ಮತ್ತಷ್ಟು ರಿಯಾಯಿತಿ

ಎಸ್ ಬಿಐ ಖಾತೆಗೆ ಆನ್ ಲೈನ್ ಮೂಲಕ PAN ಮಾಹಿತಿಯನ್ನು ಅಪ್ ಡೇಟ್ ಮಾಡುವ ಹಂತಗಳು ಹೀಗೆ:
* ಎಸ್ ಬಿಐ ಇಂಟರ್ ನೆಟ್ ಬ್ಯಾಂಕಿಂಗ್ ಲಾಗ್ ಇನ್ ಆಗಬೇಕು.

* 'ಇ- ಸರ್ವೀಸಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

* PAN ನೋಂದಣಿ ಆಯ್ಕೆ ಮಾಡಬೇಕು.

* PAN ನೋಂದಣಿ ಪುಟಕ್ಕೆ ಹೋಗುತ್ತದೆ. ಅಲ್ಲಿ ಪ್ರೊಫೈಲ್ ಪಾಸ್ ವರ್ಡ್ ನಮೂದಿಸಬೇಕು.

* ವಹಿವಾಟಿನ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ PAN ಮಾಹಿತಿಯನ್ನು ನಮೂದಿಸಿ, ಸಲ್ಲಿಸಿ.

* ನೀವು ಸಲ್ಲಿಸಿದ ಮೇಲೆ ಒಟಿಪಿ ಜನರೇಟ್ ಆಗಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

* ಒಟಿಪಿ ನಮೂದಿಸಿ, ಮನವಿಯನ್ನು ಸಲ್ಲಿಸಿ.

* PAN ಮಾಹಿತಿಯನ್ನು ಎಸ್ ಬಿಐ ಖಾತೆಗೆ ಜೋಡಣೆ ಮಾಡುವ ಮನವಿಯನ್ನು ನಿಮ್ಮ ಬ್ಯಾಂಕ್ ಶಾಖೆಗೆ ಕಳುಹಿಸಲಾಗುತ್ತದೆ.

* ಒಂದು ಸಲ ನಿಮ್ಮ PAN ಮಾಹಿತಿಯು ಖಾತೆ ಜತೆ ಜೋಡಣೆಯಾದ ಮೇಲೆ ಬ್ಯಾಂಕ್ ನಿಂದ ಈ ಬಗ್ಗೆ ಖಾತ್ರಿ ಎಸ್ಸೆಮ್ಮೆಸ್ ಬರುತ್ತದೆ.

 

ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...

ಎಸ್ ಬಿಐ ಶಾಖೆಗೆ ತೆರಳಿ PAN ಮಾಹಿತಿಯನ್ನು ಜೋಡಣೆ ಮಾಡುವ ಹಂತಗಳು ಹೀಗಿವೆ:
* PAN ನಕಲಿನೊಂದಿಗೆ ಬ್ಯಾಂಕ್ ಶಾಖೆಗೆ ತೆರಳಬೇಕು.

* ಬ್ಯಾಂಕ್ ಶಾಖೆಯಲ್ಲಿ ದೊರೆಯುವ ಅರ್ಜಿಯನ್ನು ಭರ್ತಿ ಮಾಡಿ, PAN ಕಾರ್ಡ್ ನಕಲಿನೊಂದಿಗೆ ಸಲ್ಲಿಸಬೇಕು.

* ಬ್ಯಾಂಕ್ ಗೆ ತೆರಳುವ ವೇಳೆ PAN ಕಾರ್ಡ್ ತೆಗೆದುಕೊಂಡು ಹೋಗಬೇಕು. ಬ್ಯಾಂಕ್ ಅಧಿಕಾರಿಗಳು ಅದನ್ನು ಕೇಳಬಹುದು.

* ಒಂದು ಸಲ ಎಲ್ಲ ವೆರಿಫಿಕೇಷನ್ ಆದ ಮೇಲೆ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಎಸ್ಸೆಮ್ಮೆಸ್ ಬರುತ್ತದೆ.

ಇನ್ನು ಸರ್ಕಾರದ ಸಬ್ಸಿಡಿಯನ್ನು ಪಡೆಯುವುದಕ್ಕೆ ಎಸ್ ಬಿಐ ಖಾತೆದಾರರು PAN ಮಾಹಿತಿಯನ್ನು ಜೋಡಣೆ ಮಾಡಿರಬೇಕು. ಎಸ್ ಬಿಐನಿಂದ ಏಳು ಬಗೆಯ ಎಟಿಎಂ ಕಮ್ ಡೆಬಿಟ್ ಕಾರ್ಡ್ ಗಳನ್ನು ಗ್ರಾಹಕರಿಗೆ ನೀಡುತ್ತದೆ. ನಿತ್ಯದ ವಿಥ್ ಡ್ರಾ ಮಿತಿ 20 ಸಾವಿರ ರುಪಾಯಿಯಿಂದ 1 ಲಕ್ಷ ರುಪಾಯಿ ತನಕ ಇದೆ.

English summary

SBI Account Holders Must Update PAN Card Details For International Transactions Through Debit Card

India's leading bank State Bank Of India's account holders must update their PAN card details to international transactions through debit card. Here is the steps to follow.
Story first published: Wednesday, January 20, 2021, 12:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X