ರೆಕರಿಂಗ್ ಡೆಪಾಸಿಟ್ ಗೆ ಪೋಸ್ಟ್ ಆಫೀಸ್ ನಲ್ಲಿ ಆನ್ ಲೈನ್ ಹಣ ಜಮೆ ಹೇಗೆ?
ತುಂಬ ಸುಲಭವಾಗಿ ಅರ್ಥವಾಗುವ ಹಾಗೂ ಜನಪ್ರಿಯವಾದ ಉಳಿತಾಯ ಯೋಜನೆ ರೆಕರಿಂಗ್ ಡೆಪಾಸಿಟ್ (ಆರ್ ಡಿ) ಸ್ಕೀಮ್. ಕೇಂದ್ರ ಸರ್ಕಾರದಿಂದ ಸಂಚಿತ ಠೇವಣಿ (ರೆಕರಿಂಗ್ ಡೆಪಾಸಿಟ್) ಸೇರಿದಂತೆ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಜನವರಿಯಿಂದ ಮಾರ್ಚ್ ತ್ರೈಮಾಸಿಕ ಅವಧಿಗೆ ಯಾವುದೇ ಪರಿಷ್ಕರಣೆ ಮಾಡಿಲ್ಲ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತದೆ. ನಿಮಗೆ ಗೊತ್ತಿರಲಿ, ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅಪ್ಲಿಕೇಷನ್ ಮೂಲಕ ಆನ್ ಲೈನ್ ನಲ್ಲೇ ಹಣ ಜಮೆ ಮಾಡಬಹುದು. ಈ ಅಪ್ಲಿಕೇಷನ್ ಮೂಲಕವೇ ತಿಂಗಳ ಕಂತನ್ನು ನಿಮ್ಮ ಆರ್ ಡಿ ಖಾತೆಗೆ ವರ್ಗಾವಣೆ ಮಾಡಬಹುದು.
ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ Online ಹಣ ಜಮೆ ಹೇಗೆ
ಪೋಸ್ಟ್ ಆಫೀಸ್ ನಲ್ಲಿನ ರೆಕರಿಂಗ್ ಡೆಪಾಸಿಟ್ ಖಾತೆಗೆ ಐಪಿಪಿಬಿ ಮೂಲಕ ಆನ್ ಲೈನ್ ಹಣ ವರ್ಗಾವಣೆ ಮಾಡುವ ವಿವಿಧ ಹಂತಗಳ ವಿವರ ಹೀಗಿದೆ:
1. ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ಸೇರ್ಪಡೆ ಮಾಡಬೇಕು.
2. ಡಿಒಪಿ ಪ್ರಾಡಕ್ಟ್ಸ್ ಗೆ ತೆರಳಬೇಕು. ಅದರಲ್ಲಿ ರೆಕರಿಂಗ್ ಡೆಪಾಸಿಟ್ ಖಾತೆಯನ್ನು ಆರಿಸಿಕೊಳ್ಳಬೇಕು.
3. SSY ಖಾತೆ ಸಂಖ್ಯೆ ಮತ್ತು ನಂತರ DOP ಗ್ರಾಹಕರ ಐ.ಡಿ. ನಮೂದಿಸಬೇಕು.
4. ಕಂತಿನ ಅವಧಿ ಮತ್ತು ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.
5. IPPB ಮೊಬೈಲ್ ಅಪ್ಲಿಕೇಷನ್ ಮೂಲಕ ಯಶಸ್ವಿಯಾಗಿ ಹಣ ವರ್ಗಾವಣೆ ಆದ ಮೇಲೆ ನೋಟಿಫಿಕೇಷನ್ ಬರುತ್ತದೆ.
6. ಪೋಸ್ಟ್ ಆಫೀಸ್ ವಿವಿಧ ಹೂಡಿಕೆಗಳನ್ನು IPPB ಬೇಸಿಕ್ ಉಳಿತಾಯ ಖಾತೆಯಿಂದ ನಿಯಮಿತವಾಗಿ ಪಾವತಿ ಮಾಡಬಹುದು.
ಒಂದರಿಂದ ಐದು ವರ್ಷದ ಅವಧಿಗೆ 5.5ರಿಂದ 6.7 ಪರ್ಸೆಂಟ್ ಬಡ್ಡಿ ದರ ಇದೆ. ತ್ರೈಮಾಸಿಕಕ್ಕೆ ಒಮ್ಮೆ ಪಾವತಿಸಲಾಗುತ್ತದೆ. ಐದು ವರ್ಷದ ರೆಕರಿಂಗ್ ಡೆಪಾಸಿಟ್ ಗೆ 5.8% ಬಡ್ಡಿ ಬರುತ್ತದೆ.
ಕಳೆದ ತಿಂಗಳು DakPay ಡಿಜಿಟಲ್ ಪೇಮೆಂಟ್ಸ್ ಅಪ್ಲಿಕೇಷನ್ ಶುರು ಮಾಡಲಾಗಿದೆ. ಪೋಸ್ಟ್ ಆಫೀಸ್ ಮತ್ತು ಐಪಿಪಿಬಿ ಗ್ರಾಹಕರು ಇದನ್ನು ಬಳಕೆ ಮಾಡಬಹುದು. ಇಂಡಿಯಾ ಪೋಸ್ಟ್ ಮತ್ತು ಐಪಿಪಿಬಿ ಮೂಲಕ ದೊರೆಯುವ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಯನ್ನು ಪಡೆಯಬಹುದು.
ಹಣ ಕಳುಹಿಸುವುದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಸೇವೆಗಳಿಗೆ ಹಣ ಪಾವತಿ ಹಾಗೂ ವರ್ತಕರಿಗೆ ಡಿಜಿಟಲ್ ಪಾವತಿಯನ್ನು ಮಾಡಬಹುದು. ಜತೆಗೆ ದೇಶದ ಯಾವುದೇ ಬ್ಯಾಂಕ್ ಜತೆಗೆ ಗ್ರಾಹಕರು ವ್ಯವಹಾರ ನಡೆಸಬಹುದು.