For Quick Alerts
ALLOW NOTIFICATIONS  
For Daily Alerts

Success Story: Tengin ಕಂಪೆನಿ ಕಟ್ಟಿದ ಅರಸೀಕೆರೆಯ ರೈತರ ಮಗ

|

ರೈತರ ಮಗ ಉದ್ಯಮಿಯಾಗಿ ಸಾಧನೆ ಮಾಡಿದ ಯಶೋಗಾಥೆ ಇದು. 'ಯುವರ್ ಸ್ಟೋರಿ'ಯಲ್ಲಿ ಈ ಬಗ್ಗೆ ವರದಿ ಬಂದಿದೆ. ಸಾಧಕರಾಗಿ ಹೊರಹೊಮ್ಮಿರುವ ಈ ವ್ಯಕ್ತಿಯ ಹೆಸರು ಮಧು ಕರ್ಗುಂದ್. ತೆಂಗಿನ ಮರಗಳ ನೆರಳಿನಲ್ಲೇ ಬೆಳೆದ ಮಧು, Tengin ಎಂಬ ಕಂಪೆನಿ ಕಟ್ಟಿದ್ದು, ಅದರ ಮೂಲಕ ತೆಂಗಿನ ಉತ್ಪನ್ನಗಳಾದ ತೈಲ, ಸಾಬೂನು, ಮೋಂಬತ್ತಿ ಇತ್ಯಾದಿಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ಉತ್ಪಾದಿಸುತ್ತಿದ್ದಾರೆ.

ಮಧು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವರು. ಅವರದು ಕೃಷಿಕ ಕುಟುಂಬ. ಬಾಲ್ಯದಿಂದ ತೆಂಗಿನ ಬಗ್ಗೆ ಕಲಿಕೆಗಾಗಿಯೇ ಹೆಚ್ಚು ಸಮಯ ಕಳೆದಿದ್ದಾರೆ. ಬಾಲ್ಯದಿಂದ ನೋಡುತ್ತಾ ಬಂದಿದ್ದ ತೆಂಗಿನ ಕೃಷಿಯ ಕಷ್ಟ- ಸುಖಗಳಿಂದ ತಮ್ಮದೇ ಆಲೋಚನೆ ಮೂಡಿಸಿಕೊಂಡಿದ್ದರು.

ಆಲೂಗಡ್ಡೆ ಬೆಳೆದು ವರ್ಷಕ್ಕೆ 25 ಕೋಟಿ ಗಳಿಸುವ ರೈತ ಕುಟುಂಬ; ಅದ್ಯಾವ ತಳಿ ಗೊತ್ತೆ?

 

ಆದರೆ, ಕೃಷಿಯಿಂದ ಜೀವನ ನಡೆಯುತ್ತಿಲ್ಲ. ಆ ಕಾರಣಕ್ಕೆ ಹಲವರು ಕೃಷಿ ಬಿಟ್ಟು, ಪಟ್ಟಣ- ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿತ್ತು. ಇದಕ್ಕೆ ಕಾರಣ ಏನು ಅಂತ ನೋಡಿದರೆ, ಮೂರು ಸಮಸ್ಯೆಗಳು ಕಣ್ಣೆದುರು ನಿಂತಿದ್ದವು: ನಿಶ್ಚಿತವಾದ ಆದಾಯ ಕೃಷಿಯಿಂದ ಬರುತ್ತಿಲ್ಲ, ಉತ್ಪನ್ನಗಳನ್ನು ಖರೀದಿ ಮಾಡುವವರಿಲ್ಲ ಹಾಗೂ ಕೃಷಿಕರ ಕೌಶಲವನ್ನು ಹೆಚ್ಚಿಸುವುದಕ್ಕೆ ಮಾರ್ಗಗಳು ಕಂಡುಬರುತ್ತಿಲ್ಲ.

ಸಾಂಪ್ರದಾಯಿಕ ವಿಧಾನದಲ್ಲಿ ಉತ್ಪಾದನೆ

ಸಾಂಪ್ರದಾಯಿಕ ವಿಧಾನದಲ್ಲಿ ಉತ್ಪಾದನೆ

ಆಗ ಮಧುಗೆ ತಾವು ಬೆಳೆದಿದ್ದ ಪರಿಸರ, ಅಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯುವ ತೆಂಗಿನಕಾಯಿ, ಅದರಿಂದ ಇರುವ ವ್ಯಾಪಾರದ ಅವಕಾಶಗಳು ಮತ್ತು ರೈತರಿಗೆ ಹೇಗೆ ನೆರವಾಗಬಹುದು ಎಂಬ ಚಿಂತನೆ ಬಂದಿದೆ. ಆಗಲೇ ಆರಂಭಿಸಿದ್ದು Tengin. ಇಸವಿ 2017ರಲ್ಲಿ. ತೆಂಗಿನಕಾಯಿ ಮೌಲ್ಯವರ್ಧನೆ ಮಾಡಿ, ಅದರಿಂದ ಗರಿಷ್ಠ ಲಾಭ ಪಡೆದು, ರೈತರಿಗೂ ಸಹಾಯ ಮಾಡುವ ಉದ್ದೇಶ ಅವರಿಗಿತ್ತು. ಇದೀಗ ಬೆಂಗಳೂರಿನಲ್ಲಿ ಇರುವ ಆ ಕಂಪೆನಿಯಿಂದ ಚಿಪ್ಸ್ (ತೆಂಗಿನ ಎಣ್ಣೆಯಲ್ಲಿ ಕರಿದದ್ದು), ಸಾಬೂನು, ತೆಂಗಿನಕಾಯಿ ಎಣ್ಣೆ ಇತ್ಯಾದಿಗಳ ಉತ್ಪಾದನೆ ಮಾಡಲಾಗುತ್ತದೆ. ಈ ಬ್ರ್ಯಾಂಡ್ ಅಡಿಯಲ್ಲಿ ಗ್ರಾಮೀಣ ಜನರ ಸಹಾಯದಿಂದ ಹಾಗೂ ಸ್ಥಳೀಯವಾಗಿ ಬೆಳೆದ ತೆಂಗಿನಕಾಯಿಯಿಂದ ಸಾಂಪ್ರದಾಯಿಕ ವಿಧಾನ ಬಳಸಿ, ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

100ರಿಂದ 850 ರುಪಾಯಿ ಮಧ್ಯೆ ಉತ್ಪನ್ನಗಳು ಮಾರಾಟಕ್ಕೆ

100ರಿಂದ 850 ರುಪಾಯಿ ಮಧ್ಯೆ ಉತ್ಪನ್ನಗಳು ಮಾರಾಟಕ್ಕೆ

ಹಾಗಿದ್ದರೆ ಈ ಕಂಪೆನಿಯ ವಾರ್ಷಿಕ ವಹಿವಾಟು ಎಷ್ಟು ಎಂಬುದನ್ನು ಮಧು ಹೇಳಿಕೊಳ್ಳುವುದಕ್ಕೆ ಇಷ್ಟಪಡಲ್ಲ. ಆದರೆ ಹತ್ತು ವಿವಿಧ ವಿಭಾಗದ ಅಡಿಯಲ್ಲಿ ಉತ್ಪನ್ನಗಳು ಲಭ್ಯವಿದ್ದು, 100ರಿಂದ 850 ರುಪಾಯಿ ಮಧ್ಯೆ ಬೆಲೆ ನಿಗದಿ ಮಾಡಲಾಗಿದೆ. ಹಾಗಂತ ಮಧು ಅವರಿಗೆ ಎಲ್ಲವೂ ಸುಲಭಕ್ಕೇನೂ ಆಗಿಲ್ಲ. ಎಂಜಿನಿಯರಿಂದ ಪದವೀಧರ ಆಗಿರುವ ಅವರಿಗೆ ಆರಂಭದಲ್ಲಿ ಹಲವು ಸವಾಲುಗಳು ಎದುರಾಗಿವೆ. ತಮ್ಮೊಂದಿಗೆ ಕೆಲಸ ಮಾಡುವಂತೆ ರೈತರನ್ನು ಮನವೊಲಿಸುವುದು ಕಷ್ಟವಿತ್ತು. ಅದರ ಜತೆಗೆ ಮಾರ್ಕೆಟಿಂಗ್ ಗೆ ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಿತ್ತು. "ಜನರಿಗೆ ತೆಂತಾ ಎಣ್ಣೆ (ತೆಂಗಿನಕಾಯಿ ಎಣ್ಣೆ) ಬಗ್ಗೆ ಗೊತ್ತೇ ಇರಲಿಲ್ಲ. ನಾನೇ ಅದರ ಅನುಕೂಲಗಳನ್ನು ವಿವರಿಸಬೇಕಿತ್ತು. ಅದಾಗಲೇ ಈ ವಲಯದಲ್ಲಿ ದೊಡ್ಡ ದೊಡ್ಡವರಿದ್ದರು. ಯಾವ ಸಮಯದಲ್ಲಾದರೂ ನಮ್ಮನ್ನು ಅಪ್ಪಚ್ಚಿ ಮಾಡಿಬಿಡಬಹುದಿತ್ತು" ಎನ್ನುತ್ತಾರೆ ಮಧು.

ಮೋಂಬತ್ತಿ, ಸಾಬೂನು ಮಹಿಳೆಯರು ತಯಾರಿಸುತ್ತಾರೆ
 

ಮೋಂಬತ್ತಿ, ಸಾಬೂನು ಮಹಿಳೆಯರು ತಯಾರಿಸುತ್ತಾರೆ

ಅಂದ ಹಾಗೆ Tengin ಸ್ಪರ್ಧಿಸುತ್ತಿರುವುದು Cocosoul ಹಾಗೂ Maxcare ಬ್ರ್ಯಾಂಡ್ ಗಳ ಜತೆಗೆ. ಮಧು ಹೇಳುವಂತೆ, ಉತ್ಪನ್ನಗಳ ತಯಾರಿಗೆ ಅವರು ಸಾಂಪ್ರದಾಯಿಕ ವಿಧಾನ ಅನುಸರಿಸುವುದಕ್ಕೆ ತೀರ್ಮಾನಿಸುತ್ತಾರೆ. ಹಾಗೆ ಮಾಡುವುದರಿಂದ ನ್ಯೂಟ್ರಿಯೆಂಟ್ ಗಳು ಕಡಿಮೆ ಆಗುವುದಿಲ್ಲ ಎಂಬ ಅಭಿಪ್ರಾಯ ಅವರದು. ಅದರಂತೆ ಉತ್ಪಾದನೆ ಆಗುವುದನ್ನು ರೈತರು ಪ್ಯಾಕ್ ಮಾಡುತ್ತಾರೆ. ಅಂತಿಮವಾಗಿ ಬೆಂಗಳೂರಿಗೆ ತಲುಪಿಸುತ್ತಾರೆ. ಅಲ್ಲಿಂದ ಮಾರಾಟ ಆಗುತ್ತದೆ. ಕಂಪೆನಿಯ ಮೋಂಬತ್ತಿ, ಸಾಬೂನು ಹಾಗೂ ಬೌಲ್ ಗಳನ್ನು ಮಹಿಳೆಯರು ತಯಾರಿಸುತ್ತಾರೆ. ಇನ್ನು ಉತ್ಪಾದನೆಯಲ್ಲಿ ಪಾರದರ್ಶಕತೆ ತರಬೇಕು ಎಂಬ ಕಾರಣಕ್ಕೆ ಗ್ರಾಹಕರಿಗೆ ತೆಂಗಿನ ಪ್ರವಾಸೋದ್ಯಮ ಆಯೋಜಿಸುತ್ತಾರೆ. ಜಮೀನಿಗೆ ಸ್ವತಃ ಭೇಟಿ ನೀಡಿ, ತೆಂಗಿನಿಂದ ಹೇಗೆ ಉತ್ಪನ್ನಗಳು ತಯಾರಾಗುತ್ತವೆ ಎಂದು ಕಣ್ಣಾರೆ ನೋಡಬಹುದು.

ಸಿಂಗಪೂರಕ್ಕೆ ಕೂಡ ರಫ್ತಾಗುತ್ತದೆ

ಸಿಂಗಪೂರಕ್ಕೆ ಕೂಡ ರಫ್ತಾಗುತ್ತದೆ

ಸದ್ಯಕ್ಕೆ ಈ ಬ್ರ್ಯಾಂಡ್ ಬೆಂಗಳೂರಿನ ಇಪ್ಪತ್ತು ಮಳಿಗೆಯಲ್ಲಿ ಹಾಗೂ ಮೈಸೂರಿನ ಮೂರು ಮಳಿಗೆಯಲ್ಲಿ ಲಭ್ಯ ಇದೆ. ಇದರ ಜತೆಗೆ ಅಮೆಜಾನ್, ಕಮ್ಯೂನಿಟಿ ಫಾರ್ಮ್ ಮತ್ತು ಫಾರ್ಮಿಜೆನ್ ನಲ್ಲಿ ಸಿಗುತ್ತದೆ. ಇತ್ತೀಚೆಗೆ ಸಿಂಗಪೂರಕ್ಕೆ ಕೂಡ ರಫ್ತು ಮಾಡುವುದಕ್ಕೆ ಆರಂಭಿಸಲಾಗಿದೆ. ಕೊರೊನಾದಿಂದ ಹೇಗೆ ವ್ಯವಹಾರ- ಉದ್ಯಮಗಳಿಗೆ ಸಮಸ್ಯೆ ಆಗಿದೆಯೋ ಅದೇ ರೀತಿ ಈ ಕಂಪೆನಿಗೂ ಆಗಿದೆ. ಆದರೆ Tenginನಿಂದ ಮುಂಬೈನಲ್ಲಿ ಉತ್ಪನ್ನಗಳನ್ನು ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ 2021ರ ಹೊತ್ತಿಗೆ ರೈತರಿಂದಲೇ ಮೂರು ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುವುದು ಎಂದು ಮಧು ಮಾತು ಮುಗಿಸುತ್ತಾರೆ.

English summary

Success Story Of Arasikere Farmer Son Madhu Kargund's Tengin Company

Tengin, company by a Arasikere farmer's son Madhu Kargund. Here is the story about his successful journey.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more