For Quick Alerts
ALLOW NOTIFICATIONS  
For Daily Alerts

Big Alert: ಜೂನ್ 01ರಿಂದ ಈ ನಿಯಮಗಳು ಬದಲಾವಣೆ: ಯಾವುದೆಲ್ಲಾ ಬೆಲೆ ಏರಿಕೆ?

|

2021ರ ಮೇ ತಿಂಗಳು ಮುಗಿದು ಜೂನ್‌ಗೆ ಕಾಲಿಟ್ಟಿದ್ದೇವೆ, ಜೊತೆಗೆ ಹಲವು ದೊಡ್ಡ ಬದಲಾವಣೆಗಳನ್ನು ಮುಂದಿದೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳು ಮತ್ತು ನಿಯಮಗಳು ಜೂನ್ 1 ರಿಂದ ಬದಲಾಗಲಿವೆ.

 

ಪ್ರತಿ ತಿಂಗಳು ಮೊದಲನೆಯದಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾಗುತ್ತದೆ. ಈ ತಿಂಗಳು ದೊಡ್ಡ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಅದೇ ಸಮಯದಲ್ಲಿ ಆದಾಯ ತೆರಿಗೆ ಪಾವತಿದಾರರಿಗೂ ನಿಯಮಗಳು ಬದಲಾಗುತ್ತಿವೆ. ಇನ್ನು ಆಡ್ರಾಂಯ್ಡ್‌ ಫೋನ್‌ಗಳನ್ನು ಬಳಸುವವರಿಗೆ ಫೋಟೋಗಳನ್ನು ಸ್ಟೋರೇಜ್‌ನಲ್ಲಿಡುವುದು ಹಚ್ಚು ಕಷ್ಟವಾಗಬಹುದು. ಹೀಗೆ ಜೂನ್ 1ರಿಂದ ಆಗುತ್ತಿರುವ ಬದಲಾವಣೆ ಕುರಿತು ಮಾಹಿತಿ ಈ ಕೆಳಗಿದೆ.

ದೇಶೀಯ ವಿಮಾನ ಪ್ರಯಾಣ ದುಬಾರಿಯಾಗಲಿದೆ!

ದೇಶೀಯ ವಿಮಾನ ಪ್ರಯಾಣ ದುಬಾರಿಯಾಗಲಿದೆ!

ದೇಶೀಯ ವಿಮಾನ ಪ್ರಯಾಣವು ಇನ್ಮುಂದೆ ದುಬಾರಿಯಾಗಲಿದೆ. ವಿಮಾನ ದರಗಳನ್ನು ಸರ್ಕಾರ ಶೇಕಡಾ 13 ರಿಂದ ಶೇಕಡಾ 16 ಕ್ಕೆ ಹೆಚ್ಚಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ನೀಡಿರುವ ಅಧಿಕೃತ ಆದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ಈ ವಿಮಾನ ಪ್ರಯಾಣ ಶುಲ್ಕ ಹೆಚ್ಚಳವು ಜೂನ್ 1 ರಿಂದ ಜಾರಿಗೆ ಬರಲಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಳ?

ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಳ?

ಪ್ರತಿ ತಿಂಗಳ ಮೊದಲ ಮತ್ತು 15 ರಂದು ಸರ್ಕಾರವು ಎಲ್‌ಪಿಜಿಯ ಬೆಲೆಗಳನ್ನು ಪರಿಶೀಲಿಸುತ್ತದೆ. ಹೀಗಾಗಿ, ಜೂನ್ 1 ರಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾಗಬಹುದು. ಪ್ರಸ್ತುತ, ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 809 ರೂ.ನಷ್ಟಿದೆ. ಆದರೆ ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಹೆಚ್ಚಾಗುತ್ತಿರುವುದರಿಂದ, ಇದರ ಜೊತೆಗೆ 14.2 ಕೆಜಿ ಸಿಲಿಂಡರ್, 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯೂ ಬದಲಾಗಬಹುದು.

ಗೂಗಲ್‌ ಡ್ರೈವ್‌ನಲ್ಲಿ 15GB ಗಿಂತಹ ಹೆಚ್ಚಿನ ಸ್ಟೋರೇಜ್‌ ಶುಲ್ಕ
 

ಗೂಗಲ್‌ ಡ್ರೈವ್‌ನಲ್ಲಿ 15GB ಗಿಂತಹ ಹೆಚ್ಚಿನ ಸ್ಟೋರೇಜ್‌ ಶುಲ್ಕ

ಬಳಕೆದಾರರು ಗೂಗಲ್ ಡ್ರೈವ್‌ನಲ್ಲಿ 15 ಜಿಬಿಗಿಂತ ಹೆಚ್ಚಿನ ಸ್ಟೋರೇಜ್ ಬಳಸಲು ಇನ್ಮುಂದೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಗೂಗಲ್ ಪ್ರಕಾರ ಪ್ರತಿ ಜಿಮೇಲ್ ಬಳಕೆದಾರರಿಗೆ 15 ಜಿಬಿ ಸ್ಟೋರೇಜ್ ನೀಡಲಾಗುವುದು. ಈ ಸ್ಟೋರೇಜ್‌ ಫೋಟೋಗಳು, ಇಮೇಲ್‌ಗಳು, ವೀಡಿಯೋಗಳನ್ನು ಒಳಗೊಂಡಿರುತ್ತದೆ. ನೀವು ಬ್ಯಾಕಪ್‌ ಮಾಡುವ ಗೂಗಲ್‌ ಡ್ರೈವ್‌ ಇದನ್ನು ಒಳಗೊಂಡಿದೆ.

ಹೀಗೆ ನಿಮಗೆ ಉಚಿತವಾಗಿ ನೀಡುವ 15GBಗಿಂತ ಹೆಚ್ಚಿನ ಸ್ಟೋರೇಜ್‌ ಬೇಕಾದಲ್ಲಿ ಅದಕ್ಕೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಗೂಗಲ್ ಫೋಟೋಸ್ ಇನ್ಮುಂದೆ ಉಚಿತವಿಲ್ಲ: ಸ್ಟೋರೇಜ್‌ಗೆ ಹಣ ಪಾವತಿಸಬೇಕು!

ಯೂಟ್ಯೂಬ್‌ ಆದಾಯಕ್ಕೆ ತೆರಿಗೆ ಪಾವತಿಸಬೇಕು!

ಯೂಟ್ಯೂಬ್‌ ಆದಾಯಕ್ಕೆ ತೆರಿಗೆ ಪಾವತಿಸಬೇಕು!

ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದಂತೆ ದೊಡ್ಡ ಪ್ರಕಟಣೆ ನೀಡಿದೆ. ನಿಮಗೆ ತಿಳಿದಿರುವಂತೆ ಯೂಟ್ಯೂಬ್ ಮೂಲಕ ಅನೇಕ ಜನರು ಹಣ ಗಳಿಸುತ್ತಾರೆ. ಇದೊಂದು ಆಧುನಿಕ ಯುಗದ ಆದಾಯದ ಮೂಲವಾಗಿದೆ. ಆದರೆ ಜೂನ್ 1 ರಿಂದ ಬಳಕೆದಾರರು ಈ ಗಳಿಕೆಯ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ನೀವು ಅಮೆರಿಕನ್ ವೀಕ್ಷಕರಿಂದ ಸ್ವೀಕರಿಸಿದ ವೀಕ್ಷಣೆಗಳಿಗೆ ಮಾತ್ರ ನೀವು ತೆರಿಗೆ ಪಾವತಿಸಬೇಕಾಗುತ್ತದೆ.

ಯೂಟ್ಯೂಬ್ ಸ್ಟಾರ್ಸ್ ಆಫ್ 2020 ಪಟ್ಟಿ: ಟಾಪ್ ಗಳಿಕೆ 217 ಕೋಟಿ ರು.

ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್

ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್

ಆದಾಯ ತೆರಿಗೆ ಇಲಾಖೆ ಜೂನ್ 7 ರಿಂದ ಹೊಸ ಐಟಿಆರ್ ವೆಬ್‌ಸೈಟ್ ಅನ್ನು ಪ್ರಾರಂಭಿಸುತ್ತದೆ. ಜೂನ್ 1 ರಿಂದ 6 ರವರೆಗೆ ಅಸ್ತಿತ್ವದಲ್ಲಿರುವ ವೆಬ್‌ಸೈಟ್‌ನ ಐಟಿಆರ್ ಸಂಬಂಧಿತ ಕೆಲಸಗಳನ್ನು ಮಾಡಲಾಗುವುದಿಲ್ಲ. ಹಳೆಯ ವೆಬ್‌ಸೈಟ್ www.incometaxindiaefiling.gov.in ಮುಂದುವರಿಯಲು www.incometaxgov.in ಗೆ ಹೊಸ ಪೋರ್ಟಲ್‌ಗೆ ಭೇಟಿ ನೀಡಿ. ಇಲಾಖೆಯ ಪ್ರಕಾರ, ಜೂನ್ 1 ರಿಂದ 6 ರವರೆಗೆ ಇ-ಫೈಲಿಂಗ್ ಸೇವೆ ಕಾರ್ಯನಿರ್ವಹಿಸುವುದಿಲ್ಲ.

ಬ್ಯಾಂಕ್ ಆಫ್ ಬರೋಡಾ ಚೆಕ್ ನಿಯಮಗಳು ಬದಲಾವಣೆ

ಬ್ಯಾಂಕ್ ಆಫ್ ಬರೋಡಾ ಚೆಕ್ ನಿಯಮಗಳು ಬದಲಾವಣೆ

ಬ್ಯಾಂಕ್ ಆಫ್ ಬರೋಡಾ ಜೂನ್ 1 ರಿಂದ ಬ್ಯಾಂಕ್ ಚೆಕ್ ಪಾವತಿಯ ನಿಯಮಗಳನ್ನು ಬದಲಾಯಿಸಲಿದೆ. ಜೂನ್ 1 ರಿಂದ ಬ್ಯಾಂಕ್ ಪಾಸಿಟಿವ್ ಪೇ ಕನ್ಫರ್ಮೇಶನ್ ಸೇವೆಯನ್ನು ಪ್ರಾರಂಭಿಸುತ್ತಿದೆ. ಇದು ಚೆಕ್ ವಂಚನೆಯನ್ನು ಕಡಿಮೆ ಮಾಡುತ್ತದೆ. ಗ್ರಾಹಕರು 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್ ನೀಡಿದರೆ, ಗ್ರಾಹಕರು ವಿವರಗಳನ್ನು ಬ್ಯಾಂಕಿನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಅದರ ನಂತರ ಬ್ಯಾಂಕ್ ಕ್ರಾಸ್ ಚೆಕ್ ಮಾಡುತ್ತದೆ.

English summary

These Rules Changing from June 1 including LPG Cylinder Price, Driving license, Gold Jewellery Hallmarking

Many Things have Changing from June 1 including LPG Cylinder Price, Driving license, Gold Jewellery Hallmarking, BoB Cheque and IFSC Code. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X