For Quick Alerts
ALLOW NOTIFICATIONS  
For Daily Alerts

ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಪವರ್‌ಹೌಸ್ ''ವಾಲ್‌ ಸ್ಟ್ರೀಟ್''

|

ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಹಣಕಾಸು ವ್ಯವಹಾರದ ಕೇಂದ್ರಬಿಂದುವಾಗಿ ಕಂಗೊಳಿಸುವುದೇ ವಾಲ್‌ಸ್ಟ್ರೀಟ್. ನ್ಯೂಯಾರ್ಕ್‌ ನಗರದ ಲೋವರ್‌ ಮ್ಯಾನ್‌ಹ್ಯಾಟನ್‌ನಲ್ಲಿರುವ ಹಣಕಾಸು ವಹಿವಾಟಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಣಕಾಸಿನ ತಾಣ ಇದಾಗಿದೆ.

16 ಶತಮಾನದಲ್ಲಿ ಕಡಲ್ಗಳ್ಳರು ಮತ್ತು ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರ ದಾಳಿಯಿಂದ ಡಚ್ಚರನ್ನು ರಕ್ಷಿಸಲು ಮತ್ತು ಇತರೆ ಸಂಭಾವ್ಯ ಅಪಾಯಗಳಿಂದ ಪಾರಾಗಲು 12 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಯಿತು. ಶತ ಶತಮಾನಗಳ ಇತಿಹಾಸ ಹೊಂದಿರುವ ವಾಲ್‌ಸ್ಟ್ರೀಟ್ ಅಮೆರಿಕಾ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಬಹಳ ಪ್ರಸಿದ್ಧ ಸ್ಥಳವಾಗಿದೆ.

ವಾಲ್‌ಸ್ಟ್ರೀಟ್ ಎಂದರೇನು?
 

ವಾಲ್‌ಸ್ಟ್ರೀಟ್ ಎಂದರೇನು?

ವಾಲ್ ಸ್ಟ್ರೀಟ್ ನ್ಯೂಯಾರ್ಕ್‌ ನಗರದ ಅತ್ಯಂತ ಹಳೆಯ ಬೀದಿಗಳಲ್ಲಿ ಒಂದಾಗಿದೆ. 16ನೇ ಶತಮಾನದ ಆರಂಭದಲ್ಲಿ, ಅನೇಕ ಬಂದರುಗಳ ಈ ಭೂಮಿಯಲ್ಲಿ ವ್ಯಾಪಾರವು ಪ್ರವರ್ಧಮಾನಕ್ಕೆ ಬಂದಿತು. ಹಡಗುಗಳು ಮತ್ತು ವ್ಯಾಪಾರಿಗಳು ದಿನದ ಸರಕುಗಳನ್ನು ಆಮದು ಮಾಡಿಕೊಂಡು ರಫ್ತು ಮಾಡುತ್ತಿದ್ದರು. ಅಂದಿನಿಂದ ಇಲ್ಲಿ ವ್ಯಾಪಾರವು ಸಾಮಾನ್ಯ ಚಟುವಟಿಕೆಯಾಗಿದೆ. ಆದಾಗ್ಯೂ, ವಾಲ್ ಸ್ಟ್ರೀಟ್ ರಸ್ತೆ ಮತ್ತು ಕಟ್ಟಡಗಳಿಗಿಂತ ಹೆಚ್ಚು.

ವಾಲ್‌ಸ್ಟ್ರೀಟ್ ಇತಿಹಾಸದ ಆರಂಭದಲ್ಲಿ, ವಾಲ್‌ಸ್ಟ್ರೀಟ್ ನ್ಯೂ ವರ್ಲ್ಡ್ ಮತ್ತು ಯುವ ಯುನೈಟೆಡ್ ಸ್ಟೇಟ್‌ನಲ್ಲಿ ವಾಣಿಜ್ಯ ಮತ್ತು ಬಂಡವಾಳಶಾಹಿಯ ಸಂಕೇತವಾಯಿತು. ಇದು ವಿಶ್ವದ ಅತ್ಯಂತ ಪ್ರಸಿದ್ದ ತಾಣವಾಗಿದೆ.

ವಾಲ್‌ಸ್ಟ್ರೀಟ್ ಎಲ್ಲಿದೆ ಮತ್ತು ಹೇಗಿದೆ?

ವಾಲ್‌ಸ್ಟ್ರೀಟ್ ಎಲ್ಲಿದೆ ಮತ್ತು ಹೇಗಿದೆ?

ಸೆಪ್ಟೆಂಬರ್ 11, 2001ರಂದು ಅಮೆರಿಕದಲ್ಲಿ ನಡೆದ ದಾಳಿಯನ್ನು ಎಂದು ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರು ಎರಡು ಅವಳಿ ಕಟ್ಟಡಗಳನ್ನು ಧ್ವಂಸಮಾಡಿದರು. ಈ ಕಟ್ಟಡಗಳಿದ್ದ ಆಗ್ನೇಯ ಭಾಗದಲ್ಲಿ ವಾಲ್‌ಸ್ಟ್ರೀಟ್ ಕಾಣಬಹುದು. ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನ ದಕ್ಷಿಣಕ್ಕೆ ನಾಲ್ಕೂವರೆ ಮೈಲಿಗಳ ಕೆಳ ಮ್ಯಾನ್‌ಹ್ಯಾಟನ್‌ನಲ್ಲಿ ವಾಲ್‌ಸ್ಟ್ರೀಟ್ ಇದೆ.

U.S. ನ ವಾಲ್ ಸ್ಟ್ರೀಟ್ ನಂತೆಯೇ ದಲಾಲ್ ಸ್ಟ್ರೀಟ್ ಎಂಬ ಶಬ್ದವು ಭಾರತದಲ್ಲಿ ಬಳಸಲ್ಪಡುತ್ತದೆ. ಇದು ದೇಶದ ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ ಮತ್ತು ಒಟ್ಟಾರೆ ಹಣಕಾಸು ವ್ಯವಸ್ಥೆಯನ್ನು ಉಲ್ಲೇಖಿಸುತ್ತದೆ. ವಿಶ್ವ ಪ್ರಸಿದ್ಧವಾದ ವಾಲ್‌ ಸ್ಟ್ರೀಟ್ ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡಿದರೆ ಹೆಚ್ಚು ಬ್ರೋಕರೇಜ್ ಮನೆಗಳು, ಬ್ಯಾಂಕುಗಳ ಮುಖ್ಯ ಕಚೇರಿಗಳು ಮತ್ತು NYSE ಕಟ್ಟಡಗಳನ್ನು ನೋಡಬಹುದು.

ವಾಲ್‌ಸ್ಟ್ರೀಟ್ ಹೆಸರು ಹೇಗೆ ಬಂದಿತು?

ವಾಲ್‌ಸ್ಟ್ರೀಟ್ ಹೆಸರು ಹೇಗೆ ಬಂದಿತು?

ವಾಲ್‌ಸ್ಟ್ರೀಟ್ ಹೆಸರು ಬರಲು ಪ್ರಮುಖ ಕಾರಣ ಎತ್ತರದ ಗೋಡೆಗಳ ಬಳಿ ಇದ್ದಂತಹ ಅತ್ಯಂತ ಜನನಿಬಿಡ ವ್ಯಾಪಾರ ಪ್ರದೇಶವಾಗಿದೆ. ವಾಲ್‌ ಬಳಿಯೇ ಈ ರಸ್ತೆ ಇದ್ದುದ್ದರಿಂದ ವಾಲ್‌ಸ್ಟ್ರೀಟ್ ಎಂದು ನಾಮಕರಣ ಮಾಡಲಾಯಿತು. ಪೂರ್ವ ನದಿ ಮತ್ತು ಹಡ್ಸನ್ ನದಿಯ ನಡುವಿನ ಮ್ಯಾನ್‌ಹಟನ್ ನಡುವಿನ ಅಗಲವಾದ ಜಾಗ ಇದಾಗಿದೆ.

1699 ರಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ತನ್ನ ಆಳ್ವಿಕೆಯಲ್ಲಿ ಇಲ್ಲಿದ್ದ ಗೋಡೆಗಳನ್ನು ಕಿತ್ತುಹಾಕಿತು. ಆದರೆ ಅಂದಿನಿಂದ ಇಂದಿನವರೆಗೂ ಹಳೆಯ ಹೆಸರು ಮಾತ್ರ ಹೋಗದೆ ವಾಲ್‌ಸ್ಟ್ರೀಟ್ ಎಂದೇ ಅಂಟಿಕೊಂಡಿದೆ.

1792ರಲ್ಲಿ ಹಣಕಾಸು ಉದ್ಯಮ ಆರಂಭ
 

1792ರಲ್ಲಿ ಹಣಕಾಸು ಉದ್ಯಮ ಆರಂಭ

ಮೇ 17, 1792ರಲ್ಲಿ ವಾಲ್‌ಸ್ಟ್ರೀಟ್‌ನಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಹಣಕಾಸು ವ್ಯವಹಾರವು ಆರಂಭವಾಯಿತು. ಆ ದಿನ ಬಟನ್ವುಡ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನ್ಯೂಯಾರ್ಕ್‌ನ ಮೊದಲ ಅಧಿಕೃತ ಷೇರು ವಿನಿಮಯವನ್ನು ಸ್ಥಾಪಿಸಲಾಯಿತು. ಬಟನ್‌ವುಡ್ ಮರದ ಕೆಳಗೆ ಆರಂಭಿಕ ಷೇರು ವ್ಯಾಪಾರಿಗಳು ಸಹಿ ಹಾಕಿದ್ದರಿಂದ ಬಟನ್ವುಡ್ ಒಪ್ಪಂದ ಎಂದು ಕರೆಯಲಾಯಿತು. ಈ ಒಪ್ಪಂದವು ಈಗಿನ ಆಧುನಿಕ ನ್ಯೂಯಾರ್ಕ್‌ನ ಸ್ಟಾಕ್ ಎಕ್ಸೇಂಜ್ NYSEಗೆ ಜನ್ಮ ನೀಡಿತು.

English summary

What is Wall Street And Why It Is Called That

wall street is very famous in newyork. In this article explained why it is called wall street
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more