For Quick Alerts
ALLOW NOTIFICATIONS  
For Daily Alerts

ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಯನ್ನು ಏಕೆ ನಿಷೇಧಿಸಲಾಗಿದೆ?

|

ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಕುರಿತಾಗಿ ನೀವು ಸಾಕಷ್ಟು ಸುದ್ದಿಗಳನ್ನ ಓದಿರ್ತೀರಿ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್‌ರ ಕಂಪನಿಯು ಬಿಟ್‌ಕಾಯಿನ್ ಖರೀದಿ ಬಳಿಕವಂತೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ ನಂತರ ಮಸ್ಕ್‌ರ ಒಂದೇ ಒಂದು ಟ್ವೀಟ್‌ ಬಿಟ್‌ಕಾಯಿನ್‌ ನಷ್ಟಕ್ಕೂ ಕಾರಣವಾಗಿತ್ತು.

ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಗೆ ತಂದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಇದರ ಒಳಿತು ಕೆಡುಕುಗಳ ಬಗ್ಗೆ ಗಮನ ಹರಿಸಿದೆ. ಬಿಟ್ ಕಾಯಿನ್ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ. ಹಾಗಿದ್ದಾಗ ತ್ವರಿತ ಸಂದರ್ಭದಲ್ಲಿ ಇದನ್ನು ನಿಷೇಧ ಮಾಡುವುದಾದರೂ ಕಷ್ಟ ಸಾಧ್ಯ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಯನ್ನು ತಮ್ಮ ದೇಶದೊಳಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಇವೆ

ಬಿಟ್‌ಕಾಯಿನ್ ಹೇಗಿರುತ್ತದೆ?
 

ಬಿಟ್‌ಕಾಯಿನ್ ಹೇಗಿರುತ್ತದೆ?

ಬಿಟ್‌ಕಾಯಿನ್‌ ನಿಮಗೆಲ್ಲಾ ಗೊತ್ತಿರುವ ಹಾಗೆ ಕ್ರಿಪ್ಟೋಕರೆನ್ಸಿಯಾಗಿದೆ. ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.

ಬಿಟ್‌ಕಾಯಿನ್ ಉಪಯೋಗಕ್ಕಿಂತ ಅಪಾಯ ಹೆಚ್ಚು!

ಬಿಟ್‌ಕಾಯಿನ್ ಉಪಯೋಗಕ್ಕಿಂತ ಅಪಾಯ ಹೆಚ್ಚು!

ಆರ್ಥಿಕ ತಜ್ಞರು ಸೇರಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಪ್ರಕಾರ ಇದು ದೇಶದ ಆರ್ಥಿಕತೆಗೆ ಅಪಾಯವನ್ನುಂಟು ಮಾಡುತ್ತದೆ. ಇದನ್ನು ಜನಸಾಮಾನ್ಯರು ಸುಲಭವಾಗಿ ತಿಳಿದುಕೊಳ್ಳುವುದು ಕಷ್ಟವಾಗಿದೆ. ಒಮ್ಮೆ ಬಿಟ್ ಕಾಯಿನ್ ಸಂದಾಯವಾದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ.

ಇದರ ಜೊತೆಗೆ ಈ ಬಿಟ್‌ಕಾಯಿನ್ ಮೂಲಕ ಈಗಾಗಲೇ ಆರ್ಥಿಕ ಅಪರಾಧ, ಮೋಸಕ್ಕೆ ಒಳಗಾಗಿರುವ ಸಾಕ್ಷಿಯು ಇದೆ. ಡ್ರಗ್ಸ್/ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಬಿಟ್ ಕಾಯಿನ್ ಬಳಸಲ್ಪಡುತ್ತದೆ. ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಬಿಟ್ ಕಾಯಿನ್ ಬೆಲೆ ಯಾವುದೇ ಕ್ಷಣದಲ್ಲಿ ತೀವ್ರ ಏರಿಳಿತಗಳಿಗೆ ಒಳಗಾಗುವುದರಿಂದ ಹೂಡಿಕೆದಾರರಿಗೆ ಭಾರಿ ನಷ್ಟ ಆಗಬಹುದು.

ಕ್ರಿಪ್ಟೋಕರೆನ್ಸಿ ದೇಶಕ್ಕೆ ದೊಡ್ಡ ಬೆದರಿಕೆ!

ಕ್ರಿಪ್ಟೋಕರೆನ್ಸಿ ದೇಶಕ್ಕೆ ದೊಡ್ಡ ಬೆದರಿಕೆ!

ಕೆಲವು ದೇಶಗಳಲ್ಲಿ, ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳನ್ನು ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳಿಂದ ಮೇಲ್ವಿಚಾರಣೆ ಮಾಡಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲದ ಕಾರಣ ಅವುಗಳನ್ನು ತೊಂದರೆಯೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಭಾರತ ಕೂಡ ಒಂದಾಗಿದೆ. ಕ್ರಿಪ್ಟೋವನ್ನು ನಿಷೇಧಿಸಲು ರಾಷ್ಟ್ರವು ಯಾವುದೇ ಸಮರ್ಥನೆಯನ್ನು ನೀಡಿದರೂ, ಅದು ತನ್ನದೇ ಆದ ಹಣಕಾಸು ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವುದು.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಜನರು ಮತ್ತು ಅಪರಾಧಿಗಳನ್ನು ಆಕರ್ಷಿಸುತ್ತದೆ.

ವಹಿವಾಟು ಪತ್ತೆಹಚ್ಚಲು ಕಷ್ಟಸಾಧ್ಯ!
 

ವಹಿವಾಟು ಪತ್ತೆಹಚ್ಚಲು ಕಷ್ಟಸಾಧ್ಯ!

ವ್ಯಕ್ತಿಯು ಬ್ಯಾಂಕ್ ಮೂಲಕ ವ್ಯವಹಾರ ನಡೆಸಿದರೆ ಸುಲಭವಾಗಿ ಆತನ ವಹಿವಾಟು ಪತ್ತೆ ಹಚ್ಚಬಹುದು. ಆದರೆ ಕ್ರಿಪ್ಟೋಕರೆನ್ಸಿ ಹಾಗಲ್ಲ.. ಏಕೆಂದರೆ ಇದು ಸಾಂಪ್ರದಾಯಿಕ ಬ್ಯಾಂಕಿಂಗ್ ಸಂಸ್ಥೆಗಳಿಗೆ ಸವಾಲು ಹಾಕಲಾಗುತ್ತದೆ ಇದರರ್ಥ, ವ್ಯವಹಾರಗಳು ನಮ್ಮ ಸಾಮಾನ್ಯ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ನಡೆಯುತ್ತವೆ ಮತ್ತು ಈ ಮೊದಲು ಬ್ಯಾಂಕ್ ಅನ್ನು ಬಳಸದ ಯಾರಾದರೂ ಇದನ್ನು ನಡೆಸಬಹುದು, ಇದರಿಂದಾಗಿ ವಹಿವಾಟನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ.

ಕ್ರಿಪ್ಟೋಕರೆನ್ಸಿ ಬೇಡಿಕೆ ಹೆಚ್ಚುತ್ತಿದೆ!

ಕ್ರಿಪ್ಟೋಕರೆನ್ಸಿ ಬೇಡಿಕೆ ಹೆಚ್ಚುತ್ತಿದೆ!

ಡಾಲರ್, ಯೂರೋ, ಪೌಂಡ್ ಹೀಗೆ ನಾನಾ ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡದ ಜನರು ಬಿಟ್‌ಕಾಯಿನ್‌ ಮೊರೆ ಹೋಗುತ್ತಿದ್ದಾರೆ. ಹೀಗಾಗಿಯೇ ಇಂತಹ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಪ್ರತಿದಿನ ಹೆಚ್ಚುತ್ತಿದೆ. ಇಷ್ಟಾದರೂ ಕೆಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಾಗಿದೆ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಹೀಗೆ ನಾನಾ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ನಿಷೇಧಿಸಿವೆ.

ಭಾರತವು ಆರ್ಥಿಕ ಬೆದರಿಕೆಯಿಂದ ಬಿಟ್‌ಕಾಯಿನ್ ನಿಷೇಧಿಸಿದರೆ, ಸೌದಿ ಅರೇಬಿಯಾ ಧಾರ್ಮಿಕ ಕಾರಣಗಳಿಗಾಗಿ ಬಿಟ್ ಕಾಯಿನ್ ಅನ್ನು ನಿಷೇಧಿಸಿದೆ, ಇದು ಮುಸ್ಲಿಂ ಕಾನೂನಿಗೆ ಹೊಂದಿಕೆಯಾಗುವುದಿಲ್ಲ ಎಂದು ವಾದಿಸಿದೆ. ಐಸ್‌ಲ್ಯಾಂಡ್ ದೇಶವು ಬಿಟ್ ಕಾಯಿನ್ ಮೂಲಕ ಹಣವು ದೇಶದಿಂದ ಹೆಚ್ಚು ಹೊರಹೋಗದಂತೆ ರಕ್ಷಿಸಲು ಈ ನಿರ್ಧಾರಕ್ಕೆ ಬಂದಿದೆ. ಬೊಲಿವಿಯನ್ ಸರ್ಕಾರವು ಅದನ್ನು ಸರಳವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನಿಷೇಧಿಸಿತು.

English summary

Why Bitcoin Is Banned In Some Countries? Why is India fearing cryptocurrency?

Here the complete details of why bitcoin is banned in some countries including India.
Story first published: Saturday, February 27, 2021, 15:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X