For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

|

ದುಬೈನಲ್ಲಿ ಚಿನ್ನ ಖರೀದಿ ಮಾಡುವುದನ್ನು ಬಹಳ ಮಂದಿ ಇಷ್ಟ ಪಡುತ್ತಾರೆ. ಅದರಲ್ಲೂ ದುಬೈಗೆ ಭೇಟಿ ನೀಡುವ ಪ್ರವಾಸಿಗರು, ಬೇರೆ ದೇಶಗಳಿಂದ ವಲಸೆ ಹೋದವರಿಗೆ ಅಲ್ಲಿನ ಚಿನ್ನ ಖರೀದಿಯಲ್ಲಿ ಆಸಕ್ತಿ ಹೆಚ್ಚು. ಹಳದಿ ಲೋಹಕ್ಕೆ ಈ ದೇಶದಲ್ಲಿ ಏಕೆ ಅಂಥ ಖ್ಯಾತಿ ಎಂಬ ಪ್ರಶ್ನೆ ಬರುವುದು ಸಹಜ. ಅಂದ ಹಾಗೆ ದುಬೈನಲ್ಲಿ ಚಿನ್ನ ಖರೀದಿಗೆ ಆಸಕ್ತಿ ಹೆಚ್ಚಲು ಹಲವಾರು ಕಾರಣಗಳಿವೆ.

 

ನಿತ್ಯ ಧರಿಸುವ ಆಭರಣವೇ ಇರಲಿ ಅಥವಾ ಅದ್ಧೂರಿ ಸಮಾರಂಭಗಳಲ್ಲಿ ಧರಿಸುವಂಥವೇ ಆಗಿರಲಿ ದುಬೈನಲ್ಲಿ ನಾನಾ ಬಗೆಯ ಆಫರ್ ಗಳು ಸಿಗುತ್ತವೆ. ಇದರಿಂದಾಗಿ ಚಿನ್ನಾಭರಣ ಖರೀದಿ ಬಹಳ ಹೆಸರುವಾಸಿಯಾಗಿದೆ. ಆದರೆ ದುಬೈನ ವಿಶೇಷತೆಗಳ ಬಗ್ಗೆ ಮುಖ್ಯವಾಗಿ ಐದು ಕಾರಣಗಳನ್ನು ಪಟ್ಟಿ ಮಾಡಿ ಇಲ್ಲಿ ನೀಡಲಾಗಿದೆ.

ದುಬೈನಲ್ಲಿ ಶುದ್ಧ ಚಿನ್ನ ದೊರೆಯುತ್ತದೆ

ದುಬೈನಲ್ಲಿ ಶುದ್ಧ ಚಿನ್ನ ದೊರೆಯುತ್ತದೆ

ದುಬೈನಲ್ಲಿ ಚಿನ್ನ ಖರೀದಿಸುವಾಗ ಶುದ್ಧತೆ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಜ್ಯುವೆಲ್ಲರಿ ಶಾಪ್ ನವರು ಮಾರುವ ಎಲ್ಲ ಆಭರಣಗಳ ಪರಿಶುದ್ಧತೆ ಬಗ್ಗೆ ಸರ್ಕಾರವೇ ಖಾತ್ರಿ ಪಡಿಸುತ್ತದೆ. ಆಭರಣದ ಪರಿಶುದ್ಧತೆಯನ್ನು ತಿಳಿಸುವ ಹಾಲ್ ಮಾರ್ಕ್ ಕಡ್ಡಾಯ. ಗ್ರಾಹಕರು ಕೇಳುವಾಗ ಆ ಪರಿಶುದ್ಧತೆಯ ಪ್ರಮಾಣಪತ್ರ ನೀಡಬೇಕು. ಇನ್ನು ಆ ಸರ್ಟಿಫಿಕೇಟ್ ನಲ್ಲಿ ಶುದ್ಧತೆ, ಕ್ಯಾರಟ್, ಚಿನ್ನದ ಹಾಗೂ ರತ್ನಗಳು ಬಳಸಿದಲ್ಲಿ ಅದರ ತೂಕ, ತಯಾರಿಕೆ ವೆಚ್ಚವನ್ನು ನಮೂದಿಸಲಾಗಿರುತ್ತದೆ. ಪ್ರತಿ ಖರೀದಿಗೂ ಖಾತ್ರಿ ಮತ್ತು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಮೌಲ್ಯಮಾಪನ ಮಾಡಬಹುದಾಗಿರುತ್ತದೆ. ಆ ಕಾರಣಕ್ಕೆ ದುಬೈಗೆ ವಲಸೆ ಹೋಗಿದ್ದವರು ಬಹುಪಾಲು ಮಂದಿ ತಮ್ಮ ತವರು ದೇಶಗಳಿಗೆ ತೆರಳುವಾಗ ಇಲ್ಲಿ ಖರೀದಿ ಮಾಡುತ್ತಾರೆ.

ಚಿನ್ನದ ಬೆಲೆ ಅಗ್ಗ

ಚಿನ್ನದ ಬೆಲೆ ಅಗ್ಗ

ದುಬೈನಲ್ಲಿ ತೆರಿಗೆಯಿಂದ ವಿನಾಯಿತಿ ಇದೆ. ಇದೊಂದೇ ಕಾರಣಕ್ಕೆ ದುಬೈಗೆ ತೆರಳಲು ಮತ್ತು ಚಿನ್ನ ಖರೀದಿಸಲು ಜನರು ಇಷ್ಟ ಪಡುತ್ತಾರೆ. ಗ್ರಾಹಕರು ಚಿನ್ನಾಭರಣಕ್ಕೆ ಮಾತ್ರ ಹಣ ಪಾವತಿ ಮಾಡುತ್ತಾರೆ. ಕಳೆದ ವರ್ಷ ದುಬೈನಲ್ಲಿ ಐದು ಪರ್ಸೆಂಟ್ ವ್ಯಾಟ್ ಪರಿಚಯಿಸಲಾಗಿದೆ. ಆದರೂ ಈ ದೇಶದಲ್ಲಿ ಉಳಿದೆಡೆಗಿಂತ ‌ಚಿನ್ನ ಅಗ್ಗ. ಭಾರತಕ್ಕೆ ಹೋಲಿಸಿದರೆ ಹತ್ತು ಪರ್ಸೆಂಟ್ ನಷ್ಟು ವ್ಯತ್ಯಾಸ ಮೇಲ್ನೋಟಕ್ಕೆ ಕಂಡುಬರುತ್ತದೆ.

ನಾನಾ ಡಿಸೈನ್ ಆಭರಣಗಳು ದೊರೆಯುತ್ತವೆ
 

ನಾನಾ ಡಿಸೈನ್ ಆಭರಣಗಳು ದೊರೆಯುತ್ತವೆ

ದುಬೈ ಅನ್ನು ಖರೀದಿದಾರರ ಪಾಲಿಗೆ ಸ್ವರ್ಗ ಎನ್ನಲಾಗುತ್ತದೆ. ಬಟ್ಟೆ, ಎಲೆಕ್ಟ್ರಾನಿಕ್ಸ್ ಮಾತ್ರವಲ್ಲ, ಇಲ್ಲಿ ಚಿನ್ನ ಖರೀದಿ ಕೂಡ ಖ್ಯಾತಿ ಪಡೆದಿದೆ. ದುಬೈನಲ್ಲಿ ಚಿನ್ನ ಖರೀದಿಗೆ ನಾನಾ ಮಳಿಗೆಗಳಿವೆ. ನಗರದ ಯಾವುದೇ ಮಾಲ್ ನಲ್ಲಿ ಹತ್ತಾರು ಚಿನ್ನಾಭರಣ ಮಳಿಗೆಗಳು ಕಂಡುಬರುತ್ತವೆ. ಎಲ್ಲೇ ಹೋದರೂ ಜಗತ್ತಿನ ನಾನಾ ಡಿಸೈನ್ ನ ಆಭರಣಗಳು ದೊರೆಯುತ್ತವೆ.

ಎಲ್ಲ ಮಳಿಗೆಗಳಲ್ಲೂ ಒಂದೇ ದರ ಇರುತ್ತದೆ

ಎಲ್ಲ ಮಳಿಗೆಗಳಲ್ಲೂ ಒಂದೇ ದರ ಇರುತ್ತದೆ

ದುಬೈನಲ್ಲಿ ಚಿನ್ನದ ಬೆಲೆಯು ಅಂತರರಾಷ್ಟ್ರೀಯ ದರವನ್ನು ಅನುಸರಿಸುತ್ತದೆ. ಅಲ್ಲಿ ಎಲ್ಲ ಮಳಿಗೆಗಳಲ್ಲೂ ಒಂದೇ ಬಗೆಯ ದರ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೇಗೆ ಏರಿಳಿತ ದಾಖಲಿಸುತ್ತದೋ ಅದೇ ರೀತಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಏರಿಳಿತವಾಗುತ್ತದೆ. ಅದರ ಲಾಭವನ್ನು ಪಡೆಯಬಹುದಾದ ಗ್ರಾಹಕರು ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿ ಮಾಡಬಹುದು. ಆದ್ದರಿಂದ ಚಿನ್ನ ಖರೀದಿಗೂ ಮುನ್ನ ದುಬೈನ ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ತಯಾರಿಕೆ ವೆಚ್ಚದಲ್ಲಿ ಚೌಕಾಶಿ ಮಾಡಬಹುದು

ತಯಾರಿಕೆ ವೆಚ್ಚದಲ್ಲಿ ಚೌಕಾಶಿ ಮಾಡಬಹುದು

ದುಬೈನಲ್ಲಿ ತಯಾರಿಕೆ ವೆಚ್ಚವನ್ನು ಚೌಕಾಶಿ ಮಾಡಬಹುದು. ಒಂದು ಆಭರಣ ತಯಾರಿಸಲು ತಗುಲುವ ವೆಚ್ಚವನ್ನು ತಯಾರಿಕೆ ವೆಚ್ಚ ಎನ್ನಲಾಗುತ್ತದೆ. ಎಂಥ ಆಭರಣ ಮತ್ತು ಯಾವ ಜ್ಯುವೆಲ್ಲರಿ ಮಳಿಗೆಯಿಂದ ಖರೀದಿಸುತ್ತಿದ್ದೀರಿ ಎಂಬುದರ ಆಧಾರದಲ್ಲಿ ತಯಾರಿಕೆ ವೆಚ್ಚ ನಿರ್ಧಾರ ಆಗುತ್ತದೆ. ಆದರೆ ದೊಡ್ಡ ಆಭರಣ ಮಳಿಗೆಗಳಲ್ಲಿ ಚೌಕಾಶಿ ಮಾಡುವುದು ಸವಾಲಿನ ಸಂಗತಿ. ಆದರೆ ಮಾಮೂಲಿ ಮಳಿಗೆಗಳಲ್ಲಿ ಇಂಥ ಸಮಸ್ಯೆ ಇಲ್ಲ. ಎಷ್ಟು ಮೊತ್ತದ ಚಿನ್ನವನ್ನು ಖರೀದಿಸುತ್ತಿದ್ದೀರಿ ಎಂಬ ಆಧಾರದಲ್ಲಿ ತಯಾರಿಕೆ ವೆಚ್ಚವನ್ನು ಕಡಿಮೆ ಮಾಡಿಸಬಹುದು.

English summary

Why Gold Purchase In Dubai Is Cheap And Best?

Here is the 5 reasons for why gold purchase is cheap and best in Dubai.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more