For Quick Alerts
ALLOW NOTIFICATIONS  
For Daily Alerts

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್- ಪೇಟಿಎಂನಿಂದ MSME ಸಾಲ

By ಅನಿಲ್ ಆಚಾರ್
|

ಭಾರತದ್ದೇ ಮೂಲದ ಡಿಜಿಟಲ್ ಹಣಕಾಸು ಸೇವಾ ಪ್ಲಾಟ್ ಫಾರ್ಮ್ ಪೇಟಿಎಂ ಇದೀಗ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹಯೋಗದಲ್ಲಿ ಎಂಎಸ್ ಎಂಇಗಳಿಗೆ ಶೀಘ್ರ ಡಿಜಿಟಲ್ ಸಾಲ ನೀಡುವುದಾಗಿ ಬುಧವಾರ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲ ದೊರೆಯದವರಿಗೆ ತಕ್ಷಣದ ಕಿರುಸಾಲ ಒದಗಿಸುವ ಉದ್ದೇಶ ಇದೆ ಎಂದು ತಿಳಿಸಲಾಗಿದೆ.

 

ಪೇಟಿಎಂನಿಂದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹಯೋಗದಲ್ಲಿ ಮುಂದಿನ ಹನ್ನೆರಡರಿಂದ ಹದಿನೆಂಟು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಣ್ಣ ಉದ್ಯಮಗಳಿಗೆ ಸಾಲ ವಿತರಣೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಯಾವ ಸಾಲ ಮುಂಚಿತವಾಗಿ ತೀರಿಸಬೇಕು? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರ

ವರ್ತಕರಿಗೆ ಯಾವುದೇ ಸಮಸ್ಯೆ ಇಲ್ಲದೆ ಸಾಲ ಒದಗಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪೇಟಿಎಂನಿಂದ ಹಣಕಾಸು ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಲಾಗುತ್ತಿದೆ. ಇಡೀ ಸಾಲ ಒದಗಿಸುವ ಪ್ರಕ್ರಿಯೆಯನ್ನು ಪೇಟಿಎಂನಿಂದ ಸಂಪೂರ್ಣ ಡಿಜಿಟಲ್ ಹಾಗೂ ಯಾವುದೇ ಸಮಸ್ಯೆ ಇಲ್ಲದಂತೆ ಸಿಗಲು ವ್ಯವಸ್ಥೆ ಮಾಡಲಾಗುತ್ತಿದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್- ಪೇಟಿಎಂನಿಂದ MSME ಸಾಲ

ಫೋನ್ ನಲ್ಲಿ ಒಂದು ಬಾರಿ ಟ್ಯಾಪ್ ಮಾಡಿದರೆ ಸಾಲ ದೊರೆಯುತ್ತದೆ. ಅರ್ಜಿ ಸಲ್ಲಿಸುವುದರಿಂದ ಸಾಲ ಮಂಜೂರಾತಿ ತನಕ ಎಲ್ಲವೂ ಪೇಟಿಎಂ ಆಪ್ ನಲ್ಲೇ ಆಗುತ್ತದೆ. ಸಾಲದ ನಿಯಮಾವಳಿ ಪೂರೈಸಿದ ಮೇಲೆ ಸೂರ್ಯೋದಯ್ ದಿಂದ ವಿತರಣೆ ಮಾಡಲಾಗುತ್ತದೆ. ರಿಯಲ್ ಟೈಮ್ ನಲ್ಲಿ ಮಂಜೂರಾತಿ ಹಾಗೂ ವಿತರಣೆ ಆಗುವಂತೆ ವ್ಯವಸ್ಥೆ ರೂಪಿಸಲಾಗಿದೆ.

ಸಾಲ ಬೇಕಾದ ವರ್ತಕರು ಪೇಟಿಎಂ ಲಾಗ್ ಆನ್ ಆಗಬೇಕು. ಸಾಲದ ಆಫರ್ ಆಯ್ಕೆ ಮಾಡಿಕೊಂಡು, ಬ್ಯಾಂಕ್ ನ ಅತ್ಯಂತ ಚಿಕ್ಕ ಹಾಗೂ ಸರಳ ಪ್ರಕ್ರಿಯೆಯನ್ನು ಅನುಸರಿಸಿದರೆ ಸಾಕು. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೇಲೆ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ.

English summary

Instant Digital Loan To MSME By Paytm With Partnership Of Suryoday Small Bank

Paytm with Surodaya small bank will provide instant digital loan to MSME. Today announced details about this.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X