For Quick Alerts
ALLOW NOTIFICATIONS  
For Daily Alerts

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಪಡೆಯುವುದು ಸಲೀಸು ಮಾಡಿಕೊಳ್ಳಿ

|

ಕೊರೊನಾ ಬಿಕ್ಕಟ್ಟು ವ್ಯಾಪಾರ- ಉದ್ಯಮಗಳ ಮೇಲೆ ಮಾಡಿರುವ ಹಾನಿ ದೊಡ್ಡ ಪ್ರಮಾಣದ್ದು. ಅದರಲ್ಲೂ ಲಾಕ್ ಡೌನ್ ನಂತರ ಅಗತ್ಯ ಪ್ರಮಾಣದ ಹಣಕಾಸು ನೆರವು ಸರಿಯಾದ ಸಮಯಕ್ಕೆ ಸಿಕ್ಕಿ, ಉದ್ಯೋಗಿಗಳನ್ನು ಉಳಿಸಿಕೊಂಡು, ಮತ್ತೆ ಕಾರ್ಯ ಚಟುವಟಿಕೆ ಮುಂದುವರಿಸುವುದರಲ್ಲಿ ಅತಿ ದೊಡ್ಡ ಸವಾಲು ಎದುರಾಗಿದೆ. ಯಾವಾಗ ಸಾಲ ಮಂಜೂರಾಗಿ, ಖಾತೆಗೆ ಬರುತ್ತದೋ ಎಂದು ಕಾಯುತ್ತಾ ಹಲವು ಸಂಸ್ಥೆಗಳು ದಿವಾಳಿಯಾಗುವ ಆತಂಕ ಎದುರಿಸುತ್ತಿವೆ.

 

ಚೇತರಿಸಿಕೊಳ್ಳುವುದರಲ್ಲಿ ವಿಳಂಬ, ಅಡಮಾನ ಮಾಡುವುದಕ್ಕೆ ಅಗತ್ಯ ಪ್ರಮಾಣದಲ್ಲಿ ಸೆಕ್ಯೂರಿಟಿ ಇಲ್ಲದಿರುವುದು, ಹಣಕಾಸು ಸ್ಥಿತಿ ಉತ್ತಮವಾಗಿ ಇಲ್ಲದಿರುವುದು ಹಾಗೂ ಹೆಚ್ಚಿನ ಬಡ್ಡಿ ದರದ ಕಾರಣಕ್ಕೆ ಎಂಎಸ್ ಎಂಇಗಳು (ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು) ನಿಯಂತ್ರಿತ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವನ್ನು ಕೇಳುತ್ತಿವೆ.

ಎಂಎಸ್ ಎಂಇ ವಲಯಗಳ ಬೆಳವಣಿಗೆಗೆ ಸಾಲ ಬಹಳ ಮುಖ್ಯ. ಸ್ಪರ್ಧಾತ್ಮಕವಾಗಿ ವ್ಯವಹಾರ ನಡೆಸಬೇಕು ಅಂದರೆ ಕಡಿಮೆ ದರದಲ್ಲಿ ಸಾಲ ಸಿಗಬೇಕಾಗುತ್ತದೆ.

ಎಂಎಸ್ ಎಂಇಗಳಿಗೆ ಸಾಲ ದೊರೆಯುವುದಕ್ಕೆ ಸವಾಲುಗಳೇನು?

ಎಂಎಸ್ ಎಂಇಗಳಿಗೆ ಸಾಲ ದೊರೆಯುವುದಕ್ಕೆ ಸವಾಲುಗಳೇನು?

* ಎಂಎಸ್ ಎಂಇಗಳಿಗೆ ವಿಶೇಷವಾಗಿ ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳಿಂದ ಸಾಲ ವಿತರಣೆ ಆಗುವುದು ತಡವಾಗುತ್ತದೆ.

* ಅಸಂಘಟಿತ ವಲಯದ ಎಂಎಸ್ ಎಂಇಗಳ ಆರ್ಥಿಕ ಸ್ಥಿತಿ ಹೇಗಿದೆ ಎಂದು ನಿರ್ಧರಿಸುವುದು ಬ್ಯಾಂಕ್ ಗಳಿಗೆ ಬಹಳ ಕಷ್ಟವಾಗುತ್ತದೆ. ಆ ವ್ಯವಹಾರದ ಲಾಭ- ನಷ್ಟ ಮತ್ತಿತರ ಮಾಹಿತಿ ನಿಖರವಾಗಿ ದೊರೆಯುವುದು ಕಷ್ಟ. ಆ ಕಾರಣದಿಂದಲೇ ಯಾವುದೇ ಅಡಮಾನವೂ ಇಲ್ಲ ಎಂದಾಗ ಬಡ್ಡಿ ದರ ಹೆಚ್ಚಾಗುತ್ತದೆ. ಯಾವಾಗ ಬಡ್ಡಿ ಜಾಸ್ತಿ ಆಗುತ್ತದೋ ಆಗ ಎಂಎಸ್ ಎಂಇಗಳಿಗೆ ಕಾರ್ಯ ನಿರ್ವಹಣೆ ವೆಚ್ಚವೂ ಹೆಚ್ಚಾಗುತ್ತದೆ.

* ಎಂಎಸ್ ಎಂಇಗಳ ಕಾರ್ಯ ನಿರ್ವಹಣೆ ಸಣ್ಣ ಪ್ರಮಾಣದ್ದಾಗಿರುತ್ತದೆ. ಆದ್ದರಿಂದಲೇ ರಿಸ್ಕ್ ಕ್ಯಾಪಿಟಲ್ ಕೂಡ ಸಂಗ್ರಹ ಮಾಡಲು ಸಾಧ್ಯವಾಗುವುದಿಲ್ಲ.

* ಇನ್ನು ಸರ್ಕಾರದಿಂದ ಸಿಗುವ ಯೋಜನೆಗಳು ಅನುಕೂಲ ಕೂಡ ಎಂಎಸ್ ಎಂಇಗಳಿಗೆ ಪಡೆಯುವುದಕ್ಕೆ ಆಗಲ್ಲ. ಏಕೆಂದರೆ, ಅವುಗಳಿಗಾಗಿ ಫಲಾನುಭವಿಗಳಿಗೆ ಸ್ವಲ್ಪವಾದರೂ ಡಿಜಿಟಲ್ ಅಸ್ಮಿತೆ ಮತ್ತು ಅಸ್ತಿತ್ವ ಇರಬೇಕಾಗುತ್ತದೆ.

* ಗ್ರಾಹಕರು ಹಣ ಪಾವತಿಸುವುದು ತಡವಾಗುವುದರಿಂದ (ಸಾಮಾನ್ಯವಾಗಿ ದೊಡ್ಡ ಕೈಗಾರಿಕೆಗಳು) ಹಣದ ಹರಿವು ಮತ್ತು ವರ್ಕಿಂಗ್ ಕ್ಯಾಪಿಟಲ್ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಾರ್ಯನಿರ್ವಹಣೆ ಅವಧಿ ಹೆಚ್ಚಿಸುತ್ತದೆ ಮತ್ತು ಹೊಸ ಆರ್ಡರ್ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆ ಆಗುತ್ತದೆ ಅಥವಾ ಸದ್ಯದ ಆರ್ಡರ್ ಪೂರ್ತಿ ಮಾಡಿಕೊಡುವುದು ಕಷ್ಟವಾಗುತ್ತದೆ. MSMED ಕಾಯ್ದೆ, 2006ರ ಪ್ರಕಾರ, ಖರೀದಿದಾರರು ಪಾವತಿ ವಿಳಂಬ ಮಾಡಿದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಆದರೆ ಎಲ್ಲಿ ಗ್ರಾಹಕರನ್ನೇ ಕಳೆದುಕೊಳ್ಳಬೇಕಾಗುತ್ತದೋ ಎಂಬ ಚಿಂತೆ ಮತ್ತು ಚೌಕಾಶಿ ಮಾಡುವ ಸ್ಥಿತಿಯಲ್ಲಿ ಇರದ ಸಂಸ್ಥೆಗಳಿಗೆ ಈ ನಿಯಮ ಬಳಸಿಕೊಳ್ಳುವುದು ಕಷ್ಟವಾಗುತ್ತದೆ. ಆರ್ ಬಿಐನಿಂದ ಸಮೀಕ್ಷೆ (ಜೂನ್ 2019ರಲ್ಲಿ ಬಿಡುಗಡೆ) ಆಗಿತ್ತು. ಅದರಲ್ಲಿ ಕಂಡುಬಂದ ಪ್ರಕಾರ, ಗ್ರಾಹಕರಿಂದ ಬರಬೇಕಾದ ಮೊತ್ತದಲ್ಲಿನ ವಿಳಂಬ/ಖರೀದಿದಾರರು ಹಣ ಪಾವತಿಸದಿರುವುದರಿಂದ ಎಂಎಸ್ ಎಂಇಗಳ ಆಸ್ತಿ ಗುಣಮಟ್ಟವನ್ನು ಕೆಳಕ್ಕೆ ಇಳಿಸುತ್ತವೆ.

 

ಕಂಪೆನಿಯ ಆರ್ಥಿಕ ಆರೋಗ್ಯದ ನಿಗಾ ಮಾಡುವ ಅಗತ್ಯ
 

ಕಂಪೆನಿಯ ಆರ್ಥಿಕ ಆರೋಗ್ಯದ ನಿಗಾ ಮಾಡುವ ಅಗತ್ಯ


ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳು ಹೀಗೆ ವ್ಯಾಪಾರ- ಉದ್ಯಮಕ್ಕೆ ಹಣ ಸಾಲ ನೀಡುವ ಯಾವುದೇ ಸಂಸ್ಥೆಗಳು ಅಪಾಯದ ಪ್ರಮಾಣವನ್ನು ಅಳೆಯಲು ಬಯಸುತ್ತವೆ. ತಾವು ನೀಡಿದ ಸಾಲ ಸಮಯಕ್ಕೆ ಸರಿಯಾಗಿ ವಾಪಸ್ ಬರುತ್ತಾ ಎಂಬ ಬಗ್ಗೆ ಅವುಗಳಿಗೆ ಖಾತ್ರಿ ಬೇಕು.

ಅದಕ್ಕಾಗಿ ಅವುಗಳಿಗೆ ಇರುವ ಒಂದು ದಾರಿ ಅಂದರೆ, ಸ್ವತಂತ್ರ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಅಥವಾ ಕ್ರೆಡಿಟ್ ಮಾಹಿತಿ ಕಂಪೆನಿಗಳು ಸಿದ್ಧಪಡಿಸಿದ ವರದಿ ಮತ್ತು ಮಾಹಿತಿ. ಈ ಕಂಪೆನಿಗಳು ಏನು ಮಾಡುತ್ತವೆ ಅಂದರೆ, ವೈಯಕ್ತಿಕವಾಗಿ ಹಾಗೂ ವ್ಯಾಪಾರದ ಸಾಲದ ಇತಿಹಾಸ (ಕ್ರೆಡಿಟ್ ಹಿಸ್ಟರಿ) ಮತ್ತು ಇತರ ಮಾಹಿತಿಗಳ ಡೇಟಾ ಬೇಸ್ ನಿರ್ವಹಣೆ ಮಾಡುತ್ತವೆ. ಈ ಮಾಹಿತಿಯ ಮೂಲಕವಾಗಿ ಸಾಲದ ಅರ್ಜಿಯನ್ನು ಮಂಜೂರು ಮಾಡಬೇಕಾ ಅಥವಾ ಬೇಡವಾ ಎಂದು ಹಣಕಾಸು ಸಂಸ್ಥೆಗಳು ತೀರ್ಮಾನ ಮಾಡುತ್ತವೆ.

ಆದ್ದರಿಂದ ಬೇಗ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಬೇಕು ಎಂದಾದಲ್ಲಿ ವ್ಯಾಪಾರ, ವ್ಯವಹಾರ- ಉದ್ಯಮದ ಕ್ರೆಡಿಟ್ ರಿಪೋರ್ಟ್ ಇತಿಹಾಸ ಉತ್ತಮವಾಗಿರಬೇಕು. ಹಾಗಂತ ಸಾಲ ಬೇಕಾದಾಗ ಮಾತ್ರ ಆ ಕಡೆ ಗಮನ ವಹಿಸಿದರೆ ಸಾಲದು. ಇದೊಂದು ನಿರಂತರವಾದ ಪ್ರಕ್ರಿಯೆ ಆಗಿರಬೇಕು. ಒಂದು ವೇಳೆ ಈ ಹಿಂದೆ ಸಾಲ ತೀರಿಸಿರುವ ಇತಿಹಾಸ (ಕ್ರೆಡಿಟ್ ಹಿಸ್ಟರಿ) ಚೆನ್ನಾಗಿಲ್ಲ ಎಂದಾದರೆ, ಈಗ ಹೊಸ ಸಾಲ ಸಿಗುವುದು ತಡವಾಗಬಹುದು ಅಥವಾ ಹಣಕಾಸು ನೆರವು ಸಿಗುವ ಅವಕಾಶವೇ ಕಡಿಮೆ ಆಗಬಹುದು.

ಟ್ರಾನ್ಸ್ ಯೂನಿಯನ್ ಸಿಬಿಲ್ ನಂಥ ಕಂಪೆನಿಗಳು ಸಿದ್ಧಪಡಿಸುವ ವರದಿಗಳಿಂದಾಗಿ ವ್ಯಾಪಾರ- ಉದ್ಯಮದ ಆರ್ಥಿಕ ಆರೋಗ್ಯ ಹೇಗಿದೆ ಎಂದು ಆಗಾಗ ಮತ್ತು ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳಬಹುದು.

ಎಂಎಸ್ ಎಂಇ ಸಾಲಗಳ ಬಗೆಗಿನ ಮಿಥ್ಯೆಗಳು

ಹಣಕಾಸು ಸಂಸ್ಥೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಬಗ್ಗೆ ತಿಳಿವಳಿಕೆ ಕೊರತೆ ಇರುವ ಕಾರಣಕ್ಕೆ ವ್ಯಾಪಾರಕ್ಕಾಗಿ ಸಂಘಟಿತವಾಗಿ ಸಾಲ ನೀಡುವಂಥ ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳಿಂದ ಸಾಲ ಕೇಳುವುದನ್ನೇ ನಿಲ್ಲಿಸಲಾಗುತ್ತದೆ. ಸಾಲದ ಮೇಲಿನ ಬಡ್ಡಿ ದರ ನಿಶ್ಚಿತವಾಗಿ (ಫಿಕ್ಸೆಡ್) ಇರುತ್ತದೆ ಹಾಗೂ ಸಾಲ ಮಂಜೂರಾಗುವುದಕ್ಕೆ ಬಹಳ ಸಮಯ ಹೋಗುತ್ತದೆ ಎಂಬ ತಪ್ಪು ಕಲ್ಪನೆ ಇದ್ದುಹೋಗಿದೆ.

ಆದರೆ, ಉತ್ತಮವಾದ ಕ್ರೆಡಿಟ್ ಶ್ರೇಯಾಂಕ ಇದ್ದರೆ ವ್ಯಾಪಾರಕ್ಕಾಗಿ ಕಡಿಮೆ ಬಡ್ಡಿ ದರಕ್ಕೆ ಸಾಲವನ್ನು ನೀಡುವಂತೆ ಚೌಕಾಶಿ ಮಾಡುವುದು ಕಷ್ಟದ ವಿಚಾರ ಏನಲ್ಲ.

ಕ್ರೆಡಿಟ್ ಮಾಹಿತಿ ನೀಡುವ ಕಂಪೆನಿಗಳಲ್ಲೇ ಮುಂಚೂಣಿಯಲ್ಲಿ ಇರುವ ಟ್ರಾನ್ಸ್ ಯೂನಿಯನ್ CIBILನಿಂದ CIBIL Rank and Company Credit Report (CCR) ಒದಗಿಸಲಾಗುತ್ತದೆ. ಸಾಲ ಅಥವಾ ಹಣಕಾಸು ನೆರವು ದೊರೆಯುವುದನ್ನು ಸರಳೀಕರಿಸಿ, ಅಂದರೆ ಸಿಸಿಆರ್ ಸಾರವನ್ನು ಸಮಗ್ರಗೊಳಿಸಿ, ಅದಕ್ಕೆ ಹತ್ತರಿಂದ ಒಂದರ ತನಕ ಶ್ರೇಯಾಂಕ ನೀಡುತ್ತದೆ.

ಅಂದರೆ, ಯಾವ ಕಂಪೆನಿಯ ಶ್ರೇಯಾಂಕ CIBIL ನಂಬರ್ 1ಕ್ಕೆ ಸಮೀಪ ಆಗಿರುತ್ತದೋ ಅದಕ್ಕೆ ಬಿಜಿನೆಸ್ ಸಾಲವು ಕಡಿಮೆ ಬಡ್ಡಿ ದರಕ್ಕೆ ಹಾಗೂ ಸುಲಭವಾಗಿ ಮಂಜೂರಾಗುವ ಅವಕಾಶ ಅತಿ ಹೆಚ್ಚಿರುತ್ತದೆ.

 

CIBIL ಶ್ರೇಯಾಂಕ ಮತ್ತು ಸಿಸಿಆರ್ ನಿಂದ ಎಂಎಸ್ ಎಂಇಗಳಿಗೆ/ಸಾಲ ಪಡೆಯುವವರಿಗೆ ಹೇಗೆ ನೆರವಾಗುತ್ತದೆ?

CIBIL ಶ್ರೇಯಾಂಕ ಮತ್ತು ಸಿಸಿಆರ್ ನಿಂದ ಎಂಎಸ್ ಎಂಇಗಳಿಗೆ/ಸಾಲ ಪಡೆಯುವವರಿಗೆ ಹೇಗೆ ನೆರವಾಗುತ್ತದೆ?

CIBIL ಶ್ರೇಯಾಂಕ ಮತ್ತು ಸಿಸಿಆರ್ ಪರಿಶೀಲನೆಯಿಂದ ಮೂರು ಮುಖ್ಯ ಅನುಕೂಲಗಳಿವೆ:

* ಸಾಲಕ್ಕೆ ಅರ್ಜಿ ಹಾಕುವ ಸಮಯದಲ್ಲಿ ಆರ್ಥಿಕ ಸ್ಥಿರತೆಗೆ ಸಾಕ್ಷ್ಯ ಎಂಬಂತೆ CIBIL ಶ್ರೇಯಾಂಕ ಮತ್ತು ಸಿಸಿಆರ್ ಒದಗಿಸಿದರೆ ಕಡಿಮೆ ಬಡ್ಡಿ ದರ ಮತ್ತು ಸುಲಭವಾಗಿ ಸಾಲ ಮಂಜೂರಾತಿ ಪಡೆಯಲು ನೆರವಾಗುತ್ತದೆ.

* ಪ್ರಾಜೆಕ್ಟ್ ಪ್ರಸ್ತಾವವನ್ನು ಸಲ್ಲಿಸುವ ವೇಳೆಯೇ ಉದ್ಯಮದ ಮಾಲೀಕರು CIBIL ಶ್ರೇಯಾಂಕ ಮತ್ತು ಸಿಸಿಆರ್ ಅನ್ನು ಕಂಪೆನಿಯ ಹಣಕಾಸು ಸ್ಥಿತಿಯ ಉತ್ತಮ ಆರೋಗ್ಯಕ್ಕೆ ಸಾಕ್ಷ್ಯ ಎಂಬಂತೆ ತೋರಿಸಬಹುದು.

* CIBIL ಶ್ರೇಯಾಂಕ ಮತ್ತು ಸಿಸಿಆರ್ ಬಳಸಿಕೊಂಡು ಕಂಪೆನಿಯ ಆರ್ಥಿಕ ಆರೋಗ್ಯ ಉತ್ತಮವಾಗಿದೆಯೇ ಎಂಬುದನ್ನು ನಿಗಾ ಮಾಡಿಟ್ಟುಕೊಂಡಿದ್ದಲ್ಲಿ ಕಂಪೆನಿಗೆ ಅಗತ್ಯ ಇರುವ ಸಾಲವನ್ನು ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು.

ಆಯಾ ಬ್ಯಾಂಕ್, ಉದಾಹರಣೆಗೆ ಬ್ಯಾಂಕ್ ಆಫ್ ಬರೋಡಾ CIBIL ಶ್ರೇಯಾಂಕ ಬಳಸಿಕೊಂಡೇ ಎಂಎಸ್ ಎಂಇಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಉದ್ಯಮ- ವ್ಯಾಪಾರ ಸಾಲವನ್ನು ಒದಗಿಸುತ್ತದೆ.

ಇನ್ನು ಸಿಆರ್ ಆರ್ ಅಂದರೆ ಕಂಪೆನಿಯ ಸಾಲ ಪಡೆದ ಹಾಗೂ ಮರು ಪಾವತಿಸಿದ ದಾಖಲೆ. ಭಾರತದಾದ್ಯಂತ ಇರುವ ಹಣಕಾಸು ಸಂಸ್ಥೆಗಳು ಒದಗಿಸುವ ಮಾಹಿತಿ ಮೂಲಕ ಸಿಬಿಲ್ ಇದನ್ನು ಸಿದ್ಧಪಡಿಸುತ್ತದೆ. ಈ ಹಿಂದೆ ಕಂಪೆನಿಯು ಹೇಗೆ ಸಾಲ ಮರುಪಾವತಿಸಿತು ಎಂಬ ಸಂಗತಿ ಭವಿಷ್ಯದ ನಡವಳಿಕೆಗೆ ಸೂಚಕ ಆಗಿರುತ್ತದೆ. ಆ ಕಾರಣದಿಂದಲೇ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಸಾಲದ ಅರ್ಜಿ ಮೌಲ್ಯಮಾಪನ ಹಾಗೂ ಮಂಜೂರಾತಿ ಮಾಡುವುದಕ್ಕೆ ಸಿಸಿಆರ್ ಎಂಬುದು ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳು ಒದಗಿಸುವ ಮಾಹಿತಿ ಆಧಾರವಾಗಿರುತ್ತದೆ.

ಒಂದು ಕಂಪೆನಿಯ ಸಾಲ ತೆಗೆದುಕೊಳ್ಳುವ ಮತ್ತು ಮರುಪಾವತಿಸುವ ಸ್ವಭಾವದ ಬಗ್ಗೆ ಯಾವುದೇ ಪೂರ್ವಗ್ರಹ ಇಲ್ಲದ ಒಳನೋಟವನ್ನು ಸಾಲ ವಿತರಿಸುವ ಸಂಸ್ಥೆಗಳಿಗೆ ಸಿಸಿಆರ್ ಒದಗಿಸುತ್ತದೆ. ಆ ಮೂಲಕ ಉದ್ಯಮವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ನೆರವಾಗುತ್ತದೆ.

ಶ್ರೇಯಾಂಕ (Rank) ಮೇಲ್ಮಟ್ಟದ್ದಾಗಿದ್ದರೆ ಆ ಉದ್ಯಮವು ಪಡೆದ ಹಣವನ್ನು ಹಿಂತಿರುಗಿಸುವುದಕ್ಕೆ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಬ್ಯಾಂಕ್ ನಿರ್ಧರಿಸುತ್ತದೆ. ಅಂಥ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನೂ ನೀಡುತ್ತದೆ.

ಹಾಗೆ ನೋಡಿದರೆ, ಟ್ರಾನ್ಸ್ ಯೂನಿಯನ್ ಸಿಬಿಲ್ ಪ್ರಕಾರ, ಸಾಲ ಮಂಜೂರಾದ ಕಂಪೆನಿಗಳ ಪೈಕಿ ಶೇಕಡಾ 70ರಷ್ಟು 4ರಿಂದ 1ನೇ ಶ್ರೇಯಾಂಕದಲ್ಲಿ ಇದ್ದಂಥವು.

ಸರಿಯಾದ ಸಮಯಕ್ಕೆ ಹಾಗೂ ನಿಯಮಿತವಾಗಿ ಸಾಲಗಾರರಿಗೆ ಹಣ ಪಾವತಿ ಮಾಡಿದರೆ ಆ ವ್ಯವಹಾರದ ಶ್ರೇಯಾಂಕ ಉತ್ತಮಗೊಳ್ಳುವುದಕ್ಕೆ ಸಹಾಯ ಆಗುತ್ತದೆ.

 

ಸಿಬಿಲ್ ಸ್ಕೋರ್ ಮತ್ತು ಸಿಬಿಲ್ Rankಗೂ ವ್ಯತ್ಯಾಸ ಏನು?

ಸಿಬಿಲ್ ಸ್ಕೋರ್ ಮತ್ತು ಸಿಬಿಲ್ Rankಗೂ ವ್ಯತ್ಯಾಸ ಏನು?

ಸಿಬಿಲ್ ಸ್ಕೋರ್ ಅನ್ನೋದು ಮೂರಂಕಿಯ ಸಂಖ್ಯೆ. ವೈಯಕ್ತಿಕ ಗ್ರಾಹಕರ ಸಾಲ ಪಡೆಯುವ ಸಾಮರ್ಥ್ಯವನ್ನು ಅಳತೆ ಮಾಡಿ, ಅದನ್ನು ಸಮಗ್ರವಾಗಿ ಸಂಖ್ಯೆಗಳ ಮೂಲಕ ತಿಳಿಸಲಾಗುತ್ತದೆ.

ಇನ್ನು CIBIL Rank ಇರುವುದು 50 ಕೊಟಿ ರುಪಾಯಿ ತನಕ ಸಾಲ ಪಡೆಯುವಂಥ ಅವಕಾಶ ಇರುವ ಕಂಪೆನಿಗಳಿಗಾಗಿ.

ಸಾಲ ಪಡೆಯುವ ಪ್ರಕ್ರಿಯೆ ಅನ್ನೋದು ಬಹಳ ಹೆದರಿಕೆ ಹುಟ್ಟಿಸುತ್ತದೆ ಮತ್ತು CIBIL Rank ಹಾಗೂ ಸಿಸಿಆರ್ ಈ ಎರಡೂ ಎಂಎಸ್ ಎಂಇ ಮಾಲೀಕರಲ್ಲಿ ತಮ್ಮ ಸಾಲದ ಅರ್ಜಿ ಸುಲಭವಾಗಿ ವಿಲೇವಾರಿ ಆಗುವ ವಿಶ್ವಾಸವನ್ನು ನೀಡುತ್ತದೆ.

ಇನ್ನೂ ಹೆಚ್ಚು ಮಾಹಿತಿಗೆ, ಲಾಗ್ ಇನ್ ಆಗಿ.

 

English summary

Monitoring CIBIL Rank Can Help Businesses Apply For A Loan With Confidence

Banks and NBFCs are in the business of lending money and like any business, they refer to credit information and reports generated by independent credit rating agencies, or credit information companies to ascertain risk of lending. So, good credit rank helps to get loan cheaper and faster.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X