For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಒಂದೇ ದಿನ 15.49 ಲಕ್ಷ ಐಟಿ ರಿಟರ್ನ್ಸ್ ಸಲ್ಲಿಕೆ

|

ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಚುರುಕುಗೊಂಡಿದೆ. "ಕಳೆದ ಡಿಸೆಂಬರ್ 27ರಂದು ಒಂದೇ ದಿನ 15.49 ಲಕ್ಷ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದ್ದು, ದೇಶದಲ್ಲಿ ಈವರೆಗೂ 4.67 ಕೋಟಿ ರೂಪಾಯಿ ಐಟಿ ಮರುಪಾವತಿ ಸಲ್ಲಿಸಲಾಗಿದೆ," ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

 

ಕಳೆದ 2020-21ನೇ ಹಣಕಾಸು ಸಾಲಿನಲ್ಲಿ ವೈಯಕ್ತಿಕ ತೆರಿಗೆದಾರರಿಂದ ಆದಾಯ ತೆರಿಗೆ ಪಾವತಿಗೆ ಮಾರ್ಚ್ 21, 2021 ಕೊನೆಯ ದಿನಾಂಕವಾಗಿತ್ತು. ಜುಲೈ 31, 2021ರವರೆಗೂ ಐಟಿ ಮರುಪಾವತಿಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು. ಅಂತಿಮವಾಗಿ ಡಿಸೆಂಬರ್ 31 ಆದಾಯ ತೆರಿಗೆ ಮರುಪಾವತಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.

ಎಚ್ಚರ: 2021-22 ರ ಹಣಕಾಸು ವರ್ಷದ ಮೊದಲಾರ್ಧದಲ್ಲೇ 4,071 ಬ್ಯಾಂಕಿಂಗ್‌ ವಂಚನೆ!

"2021-22ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 27ರಂದು ಒಂದೇ ದಿನ 15,49,831 ಐಟಿ ರಿಟರ್ನ್ಸ್ ಸಲ್ಲಿಸಲಾಗಿದ್ದು, "ಒಟ್ಟು 4,67,45,249 ರೂಪಾಯಿ ಆದಾಯ ತೆರಿಗೆ ಮರುಪಾವತಿಯನ್ನು ಸಲ್ಲಿಸಲಾಗಿದೆ," ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದರಲ್ಲಿ 2.50 ಕೋಟಿಗೂ ಅಧಿಕ ITR-1 ಮತ್ತು 1.17 ಕೋಟಿಗೂ ಹೆಚ್ಚು ITR-4 ಸೇರಿದೆ. 2019-20ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 5.95 ಕೋಟಿ ಐಟಿ ಮರುಪಾವತಿಯನ್ನು ಜನವರಿ 10ರೊಳಗೆ ಸಲ್ಲಿಸಲಾಗಿತ್ತು.

ಭಾರತದಲ್ಲಿ ಒಂದೇ ದಿನ 15.49 ಲಕ್ಷ ಐಟಿ ರಿಟರ್ನ್ಸ್ ಸಲ್ಲಿಕೆ

ಐಟಿ ಮರುಪಾವತಿ ಸರಳ ವಿಧಾನ:

ಸಣ್ಣ ಮತ್ತು ಮಧ್ಯಮ ತೆರಿಗೆದಾರರರು ಐಟಿಆರ್ ಅರ್ಜಿ 1 (ಸಹಜ್) ಮತ್ತು ಐಟಿಆರ್ ಅರ್ಜಿ 4 (ಸುಗಮ್) ಮೂಲಕ ಸಲ್ಲಿಸುವುದು ಸರಳ ವಿಧಾನವಾಗಿರುತ್ತದೆ. 50 ಲಕ್ಷದವರೆಗೆ ಆದಾಯ ಹೊಂದಿರುವ ಮತ್ತು ಸಂಬಳ, ಒಂದು ಮನೆ ಆಸ್ತಿ/ಇತರ ಮೂಲಗಳಿಂದ (ಬಡ್ಡಿ ಇತ್ಯಾದಿ) ಆದಾಯವನ್ನು ಪಡೆಯುವ ವ್ಯಕ್ತಿಗಳು ಸಹಜ್ ಅನ್ನು ಸಲ್ಲಿಸಬಹುದು. ಎಚ್‌ಯುಎಫ್‌ಗಳು ಮತ್ತು ಸಂಸ್ಥೆಗಳು 50 ಲಕ್ಷ ರೂ.ವರೆಗಿನ ಒಟ್ಟು ಆದಾಯದೊಂದಿಗೆ ಮತ್ತು ವ್ಯಾಪಾರ ಮತ್ತು ವೃತ್ತಿಯಿಂದ ಆದಾಯವನ್ನು ಹೊಂದಿರುವವರು ಐಟಿಆರ್-4 ಅನ್ನು ಸಲ್ಲಿಸಬಹುದು.

English summary

15.49 Lakh Income Tax Returns In Single Day; 4.67 Crore ITRs Filed so Far: CBDT

15.49 Lakh Income Tax Returns In Single Day; 4.67 Crore ITRs Filed so Far: CBDT.
Story first published: Wednesday, December 29, 2021, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X