For Quick Alerts
ALLOW NOTIFICATIONS  
For Daily Alerts

20 ಲಕ್ಷ ಕೋಟಿ ಪ್ಯಾಕೇಜ್ ಇಂಪ್ಯಾಕ್ಟ್: 1.29 ಲಕ್ಷ ಕೋಟಿ ವಿತ್ತೀಯ ಕೊರತೆ

|

ಕೊರೊನಾವೈರಸ್‌ನಿಂದಾಗಿ ಆಗಿರುವ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಸರ್ಕಾರ ಇಲ್ಲಿಯವರೆಗೆ ಘೋಷಿಸಿರುವ ಆರ್ಥಿಕ ಪ್ರಚೋದಕ ಪ್ಯಾಕೇಜ್‌ಗಳು ಹಣಕಾಸಿನ ಕೊರತೆಯನ್ನು ಜಿಡಿಪಿಯ 0.6 ಪರ್ಸೆಂಟ್‌ರಷ್ಟು ಅಥವಾ ಪ್ರಸಕ್ತ ಹಣಕಾಸು ವರ್ಷದಲ್ಲಿ 1.29 ಲಕ್ಷ ಕೋಟಿ ರುಪಾಯಿಯಷ್ಟಿರಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ.

 

ಈಗಾಗಲೇ ಸರ್ಕಾರವು ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಉತ್ತೇಜನಾ ಕೊಡುಗೆಗಳ ಮೊತ್ತವು ಜಿಡಿಪಿಯ 10 ಪರ್ಸೆಂಟ್‌ನಷ್ಟು ಇರಲಿದೆ. ಈ ಎಲ್ಲಾ ಉಪಕ್ರಮಗಳಿಂದ ಹೆಚ್ಚಲಿರುವ ನಗದು ಹರಿವು ಪರಿಗಣಿಸಿ ವಿತ್ತೀಯ ಕೊರತೆ ಪರಿಷ್ಕರಿಸಲಾಗಿದೆ.

20ಲಕ್ಷ ಕೋಟಿ ಪ್ಯಾಕೇಜ್ ಇಂಪ್ಯಾಕ್ಟ್:1.29 ಲಕ್ಷ ಕೋಟಿ ವಿತ್ತೀಯ ಕೊರತೆ

"ಒಟ್ಟಾರೆಯಾಗಿ, ಮೂರು ಪ್ಯಾಕೇಜ್‌ಗಳ ಘೋಷಣೆಯ ನಂತರದ ನೇರ ಆರ್ಥಿಕ ಹಿಟ್ ಜಿಡಿಪಿಯ ಶೇಕಡಾ 0.6 ರಷ್ಟು ಮಾತ್ರ ಅಂದಾಜು 1.29 ಲಕ್ಷ ಕೋಟಿ ರುಪಾಯಿ. ಆದರೆ, ಅಗತ್ಯವಿರುವವರಿಗೆ ಆಹಾರ ಮತ್ತು ಸಾಲವನ್ನು ಪ್ರವೇಶಿಸಲು ಅನುಕೂಲ ಮಾಡಿಕೊಡುವ ಮೂಲಕ ಬೆಂಬಲವನ್ನು ನೀಡಲಾಗಿದೆ. ಒಟ್ಟು 3.16 ಲಕ್ಷ ಕೋಟಿ ರುಪಾಯಿ (ಗುರುವಾರ), ಸರ್ಕಾರಕ್ಕೆ ಒಟ್ಟು ಹಣದ ವಿನಿಯೋಗ ಸುಮಾರು 14,500-14,750 ಕೋಟಿ ರುಪಾಯಿ ಆಗಲಿದೆ. ಹಣಕಾಸಿನ ಕೊರತೆಯ ಮೇಲೆ ಗುರುವಾರದ ಪ್ಯಾಕೇಜ್‌ನ ಪರಿಣಾಮವು 0.07 ಪರ್ಸೆಂಟ್‌ರಷ್ಟು ಜಿಡಿಪಿ ಸಣ್ಣದಾಗಿದೆ ಎಂದು ನಿರೀಕ್ಷಿಸಲಾಗಿದೆ '' ಎಂದು ಎಸ್‌ಬಿಐನ ಇಕೋವ್ರಾಪ್ ವರದಿ ತಿಳಿಸಿದೆ.

ಇತ್ತೀಚಿನ ಬಿಕ್ಕಟ್ಟು ಭಾರತದಂತಹ ಬೃಹತ್ ದೇಶವು ಮೂಲಸೌಕರ್ಯಗಳನ್ನು ಹೊಂದಿರುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. ಅದು ರಾಜ್ಯಗಳು ಮತ್ತು ಕೇಂದ್ರಗಳ ನಡುವೆ ಪರಸ್ಪರ ಕಾರ್ಯಾಚರಣೆಯನ್ನು ಉತ್ತೇಜಿಸುತ್ತದೆ ಎಂದು ಎಸ್‌ಬಿಐ ವರದಿ ಹೇಳಿದೆ.

English summary

20 Lakh Cr Packages Impact Rs 1.29 Lakh Crore On Fiscal Deficit SBI Report

The packages announced by the govt so far to mitigate the economic impact of COVID-19 will dent the fiscal deficit by 0.6 per cent of the GDP or Rs 1.29 lakh crore
Story first published: Friday, May 15, 2020, 19:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X