For Quick Alerts
ALLOW NOTIFICATIONS  
For Daily Alerts

ಶುಲ್ಕವಿಲ್ಲದೆ ಡಿಮ್ಯಾಟ್ ಅಕೌಂಟ್ ಆರಂಭಿಸಿ

By Mahesh
|

ಶುಲ್ಕವಿಲ್ಲದೆ ಡಿಮ್ಯಾಟ್ ಅಕೌಂಟ್ ಆರಂಭಿಸಿ
ನವದೆಹಲಿ, ಅ.1: ಸಣ್ಣ ಹೂಡಿಕೆದಾರರು ಇನ್ನು ಮುಂದೆ ಯಾವುದೇ ಶುಲ್ಕವಿಲ್ಲದೆ ಡಿಮ್ಯಾಟ್ ಅಕೌಂಟ್ ತೆರೆಯುವ ಸೌಲಭ್ಯ ಅಕ್ಟೋಬರ್ 1 ರಿಂದ ಆರಂಭಗೊಂಡಿದೆ. ಬೇಸಿಕ್ ಸರ್ವೀಸ್ ಡಿಮ್ಯಾಟ್ ಅಕೌಂಟ್ ಹೆಸರಿನಲ್ಲಿ ಈ ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಬಹುದಾಗಿದೆ. ಸಣ್ಣ ಹೂಡಿಕೆದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೆಬಿ ಈ ಕ್ರಮ ಕೈಗೊಂಡಿದೆ.

50 ಸಾವಿರ ತನಕ ಡಿಮ್ಯಾಟ್ ಅಕೌಂಟ್ ಉಚಿತವಾಗಿರುತ್ತದೆ ಹಾಗೂ ಯಾವುದೇ ವಾರ್ಷಿಕ ಉಸ್ತುವಾರಿ ಖರ್ಚುವೆಚ್ಚ ಭರಿಸಬೇಕಾಗಿಲ್ಲ. ಆದರೆ ವಹಿವಾಟು 50 ಸಾವಿರ ದಾಟಿದರೆ ವಾರ್ಷಿಕ ರೂ. 100 ಶುಲ್ಕ ವಿಧಿಸಲಾಗುತ್ತದೆ. ಈ ಡಿಮ್ಯಾಟ್ ಅಕೌಂಟ್ ಗೆ ರೂ. 2 ಲಕ್ಷ ವಹಿವಾಟಿನ ಮಿತಿ ಹೇರಲಾಗಿದೆ.

ಜನ ಸಾಮಾನ್ಯರಲ್ಲಿ ಹೂಡಿಕೆ ಮನೋಭಾವ ಬೆಳೆಸಲು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ(ಸೆಬಿ) ಈ ಕ್ರಮ ಕೈಗೊಂಡಿದೆ. ಷೇರು ವಹಿವಾಟು ನಡೆಸಲು ಡಿಮ್ಯಾಟ್ ಅಕೌಂಟ್ ಅಗತ್ಯವಾಗಿದೆ. ಖರೀದಿಸಿದ ಷೇರುಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಡಿಮ್ಯಾಟ್ ಅಕೌಂಟ್ ಗೆ ಬಂದು ಬೀಳುತ್ತದೆ.

ಈಗ ಸೆಬಿ ಹೊರಡಿಸಿರುವ ನಿಯಮಗಳಿಗೂ ಮುಂಚೆಯೇ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಹಲವು ಬ್ಯಾಂಕ್ ಗಳು ಇಂತಹುದೇ ಡಿಮ್ಯಾಟ್ ಅಕೌಂಟ್ ಸೌಲಭ್ಯ ನೀಡುತ್ತಿದ್ದವು. ಹಳೆ ಬಿಲ್ಲಿಂಗ್ ಆಧಾರದ ಮೇಲೆ ಹಾಲಿ ಡಿಮ್ಯಾಟ್ ಖಾತೆ ಹೊಂದಿರುವ ಭದ್ರತೆ ಮೌಲ್ಯಕ್ಕೆ ಅನುಗುಣವಾಗಿ ಮುಂದಿನ ಬಿಲ್ಲಿಂಗ್ ಅವಧಿಯೊಳಗೆ ಹಾಲಿ ಡಿಮ್ಯಾಟ್ ಖಾತೆಯನ್ನು Basic Services Demat Account" (BSDA) ಆಗಿ ಪರಿವರ್ತಿಸಬಹುದಾಗಿದೆ.

English summary

No-frills demat account from today (Oct.1) | ಶುಲ್ಕವಿಲ್ಲದೆ ಡಿಮ್ಯಾಟ್ ಅಕೌಂಟ್ ಆರಂಭಿಸಿ |

Small investors to get no-frills account from today(Oct.1) without any annual maintenance charges for holdings up to Rs 50,000.In a move to encourage small investor market regulator, Securities Exchange Board of India (SEBI) slashed the demat annual charges
Story first published: Monday, October 1, 2012, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X