For Quick Alerts
ALLOW NOTIFICATIONS  
For Daily Alerts

ಸಾಲದ ಕಾಟ, ಆಸ್ತಿ ಮಾರಾಟಕ್ಕೆ ಜೆಟ್ ಏರ್ ವೇಸ್

By Mahesh
|

ಸಾಲದ ಕಾಟ, ಆಸ್ತಿ ಮಾರಾಟಕ್ಕೆ ಜೆಟ್ ಏರ್ ವೇಸ್
ಬೆಂಗಳೂರು, ನ.6: ಕಿಂಗ್ ಫಿಷರ್ ಏರ್ ಲೈನ್ಸ್ ನಂತೆ ಸಕತ್ ಸಾಲ ಮಾಡಿಕೊಂಡು ಕಂಗಾಲಾಗಿರುವ ಜೆಟ್ ಏರ್ ವೇಸ್ ಸಂಸ್ಥೆ ಈಗ ತನ್ನ ಆಸ್ತಿ ಮಾರಾಟಕ್ಕೆ ಮುಂದಾಗಿದೆ.

 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 600 ಮಿಲಿಯನ್ ಯುಎಸ್ ಡಾಲರ್ ನಷ್ಟು ಸಾಲವನ್ನು ತಗ್ಗಿಸಿಕೊಳ್ಳುವುದಾಗಿ ಜೆಟ್ ಏರ್ ವೇಸ್ ಸಂಸ್ಥೆ ಹೇಳಿದೆ.

ಸಾಲ ತೀರಿಸಲು ಏರ್ ಕ್ರಾಫ್ಟ್ ಗಳ ಮಾರಾಟ ಹಾಗೂ ಭೋಗ್ಯಕ್ಕೆ ಬಿಡಲು ಜೆಟ್ ಏರ್ ವೆಸ್ ಸಂಸ್ಥೆ ಮುಂದಾಗಿದೆ.

ಜೆಟ್ ಏರ್ ವೇಸ್ ಸಂಸ್ಥೆ ಏರ್ ಕ್ರಾಫ್ಟ್ ಮಾರಾಟ ಸುದ್ದಿ ಹೊರ ಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಕೆಲ ಹೊತ್ತು ಜೆಟ್ ಏರ್ ವೇಸ್ ಷೇರುಗಳು ಸಂಚಲನ ಮೂಡಿಸಿತ್ತು. ಆದರೆ, ದಿನದ ಕೊನೆಗೆ ಇಳಿಮುಖದ ಪ್ರಮಾಣ ತಗ್ಗಿತು.

ಮಾರುಕಟ್ಟೆ ಅಂತ್ಯಗೊಂಡಾಗ ಬಿಎಸ್ ಇನಲ್ಲಿ 370.80 ರು ನಂತೆ ಶೇ 1.54 ರಷ್ಟು ಕುಸಿತವಾಗಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 370.85 ರು ನಂತೆ ಶೇ 1.49 ರಷ್ಟು ಇಳಿಕೆಯಾಗಿತ್ತು.

ಮುಂದಿನ ವರ್ಷ ಮಾರ್ಚ್ ತಿಂಗಳೊಳಗೆ ಸಾಲದ ಪ್ರಮಾಣ ಸಂಪೂರ್ಣ ಇಳಿಕೆಯಾಗಲಿದೆ. 1.96 ಮಿಲಿಯನ್ ಯುಎಸ್ ಡಾಲರ್ ಪ್ರಮಾಣಕ್ಕೆ ಸಾಲವನ್ನು ಇಳಿಕೆ ಮಾಡಲು ಅಗತ್ಯ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ.

ಸದ್ಯ ಜೆಟ್ ಏರ್ ವೇಸ್ ಸಂಸ್ಥೆ 2.3 ಬಿಲಿಯನ್ ಯುಎಸ್ ಡಾಲರ್ ನಷ್ಟು ಸಾಲ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 600 ಮಿಲಿಯನ್ ಯುಎಸ್ ಡಾಲರ್ ನಷ್ಟು ಸಾಲ ತಗ್ಗಲಿದೆ ಎಂದು ಜೆಟ್ ಏರ್ ವೇಸ್ ಸಿಎಫ್ ಒ ರವಿಶಂಕರ್ ಹೇಳಿದ್ದಾರೆ.

ಸೆಪ್ಟೆಂಬರ್ 30,2012ರ ಗಣತಿಯಂತೆ ಕಂಪನಿಯ ಬ್ಯಾಲೆನ್ಸ್ ಶೀಟ್ ನಲ್ಲಿ 12,000 ಕೋಟಿ ರು ಸಾಲ ಬಾಕಿ ಎಂದು ಹೇಳಲಾಗಿದೆ. ಜೂನ್ ತ್ರೈಮಾಸಿಕದಲ್ಲಿ 2.4 ಬಿಲಿಯನ್ ಡಾಲರ್ ನಷ್ಟು ಸಾಲವಿತ್ತು.

A330 ಶ್ರೇಣಿಯ ಏರ್ ಕ್ರಾಫ್ಟ್ ಗಳನ್ನು ಲೀಸ್ ಮೇಲೆ ಬಿಟ್ಟು ವಾರ್ಷಿಕವಾಗಿ ಸುಮಾರು 1 ಮಿಲಿಯನ್ ಯುಎಸ್ ಡಾಲರ್ ಗಳಿಸಲು ಜೆಟ್ ಏರ್ ವೇಸ್ ಚಿಂತನೆ ನಡೆಸಿದೆ. ನಂತರ A777 ಏರ್ ಕ್ರಾಫ್ಟ್ ಗಳನ್ನು ಥಾಯ್ ಏರ್ ವೇಸ್ ಗೆ ಲೀಸ್ ನೀಡಲು ಯೋಜಿಸಿದೆ. ಪ್ರಸಕ್ತ ವರ್ಷಾಂತ್ಯಕ್ಕೆ ಥಾಯ್ ಏರ್ ವೇಸ್ ಜೊತೆಗಿನ ಲೀಸ್ ಅವಧಿ ಮುಕ್ತಾಯವಾಗಲಿದೆ.

ಕಳೆದ ತ್ರೈಮಾಸಿಕದಲ್ಲಿ ಜೆಟ್ ಏರ್ ವೇಸ್ ಕೆಲ ಆಸ್ತಿ ಮಾರಾಟದಿಂದ ಸುಮಾರು 42 ಮಿಲಿಯನ್ ಯುಎಸ್ ಡಾಲರ್ ನಷ್ಟು ಹಣ ಸಂಗ್ರಹಿಸಿತ್ತು. ಸುಮಾರು ಏಳಕ್ಕೂ ಅಧಿಕ ಬೋಯಿಂಗ್ 737S ಗಳನ್ನು ಲೀಸ್ ಮೇಲೆ ಬಿಟ್ಟಿತ್ತು. ಇದರಿಂದ ಸಾಲದ ಪ್ರಮಾಣ ಹಾಗೂ ಕಾರ್ಯ ನಿರ್ವಹಣಾ ವೆಚ್ಚದ ಮೇಲಿನ ಸಾಲ ಕೂಡಾ ಇಳಿಮುಖವಾಗಿತ್ತು.

English summary

Jet Airways looking to sell and lease back aircrafts to repay $600mn debt | ಸಾಲದ ಕಾಟ, ಏರ್ ಕ್ರಾಫ್ಟ್ ಮಾರಾಟಕ್ಕೆ ಜೆಟ್ ಸಂಸ್ಥೆ ಚಿಂತನೆ |

Debt laden, Jet Airways has said that it will retire USD 600-million debt by this fiscal end by way of sale and lease back of some its aircraft. The total debt on the company's balance sheet stood at Rs 12,000 crore by the end of the September quarter against USD 2.4 billion in the June quarter, Ravi Shankar
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more