For Quick Alerts
ALLOW NOTIFICATIONS  
For Daily Alerts

350 ಅಂಕ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ

|

ಬೆಂಗಳೂರು, ಅ. 17: ಷೇರು ಮಾರುಕಟ್ಟೆಯಲ್ಲಿ ದಿಢೀರ್ ಬಿರುಗಾಳಿ ಎದುರಾಗಿದೆ. ಏಕಾಏಕಿ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತ ಕಂಡಿವೆ. ಗುರುವಾರದ ಅಂತ್ಯಕ್ಕೆ ಸೆನ್ಸೆಕ್ಸ್ 350 ಅಂಕಗಳ ಕುಸಿತ ಕಂಡಿದೆ. ಶೇಕಡಾ 1.33ರಷ್ಟು ಕಳೆದುಕೊಂಡು 26 ಸಾವಿರಕ್ಕಿಂತ ಕೆಳಗೆ ಇಳಿದಿದೆ.

ಬಿಎಸ್‌ಸಿ ಸೂಚ್ಯಂಕ ಸಹ ತೀವ್ರ ಇಳಿಕೆ ದಾಖಲಿಸಿದೆ. ಗುರುವಾರ ಬೆಳಗ್ಗೆ 26,260.35 ಆರಂಭವಾದ ಸೆನ್ಸೆಕ್ಸ್ 25,999.34ರಲ್ಲಿ ಕೊನೆಗೊಂಡಿತು. ಒಟ್ಟು 349.99 ಅಂಕಗಳ ಕುಸಿತ ಕಂಡಿತು. ಬುಧವಾರ 26,349.33 ಅಂಕಕ್ಕೆ ಕೊನೆಗೊಂಡ ವಹಿವಾಟು ಗುರುವಾರ ಬೆಳಗ್ಗೆ ಉತ್ತಮವಾಗಿಯೇ ಆರಂಭವಾಗಿತ್ತು.[ಸೆಬಿ ನಿಷೇಧ, ನೆಲ ಕಚ್ಚಿದ ಡಿಎಲ್ಎಫ್ ಷೇರು]

350 ಅಂಕ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ

ಒಂದು ಸಮಯದಲ್ಲಿ 26,462.08 ಅಂಕ ದಾಖಲಿಸಿದ್ದ ಸೆನ್ಸೆಕ್ಸ್ ದಿಢೀರ್ ಕುಸಿತ ಕಂಡಿತು. ಗ್ರಾಹಕ ಸ್ನೇಹಿ ವಸ್ತುಗಳು 405.05 ಅಂಕ ಕುಸಿತ ಕಂಡಿದ್ದು ದಾಖಲೆ. ಆಟೋಮೊಬೈಲ್ ಮತ್ತು ಬಂಡವಾಳ ಷೇರುಗಳು ದಿಢೀರ್ ಕುಸಿತಕ್ಕೆ ಒಳಗಾದವು. ಲೋಹ ಸಂಬಂಧಿ, ಗ್ಯಾಸ್, ಬ್ಯಾಂಕ್ ಈ ರೀತಿ ಎಲ್ಲ ಸೂಚ್ಯಂಕಗಳಲ್ಲೂ ಇಳಿಕೆ ಕಂಡುಬಂತು.

ನಿಫ್ಟಿ ಕೂಡಾ ದಿನದ ಕೊನೆಗೆ 115.80 ಅಂಕ ಕುಸಿತ ಕಂಡು 7,748.20 ಕ್ಕೆ ಅಂತ್ಯವಾಯಿತು. ಆದರೆ ಡಿಎಲ್‌ಎಫ್ ಷೇರುಗಳು ಚೇತರಿಸಿಕೊಂಡಿದ್ದು ದಿನದ ವಿಶೇಷ. ಐಟಿಸಿ ಮತ್ತು ಎನ್ಎಂಡಿಸಿ ಷೇರುಗಳಲ್ಲೂ ಏರಿಕೆ ಕಂಡುಬಂತು. ಟಿಸಿಎಸ್ ಮಾತ್ರ ಕುಸಿತ ದಾಖಲಿಸಿತು.[ಡಿಎಲ್ ಎಫ್ ಸಂಸ್ಥೆಗೆ ಮೂರು ವರ್ಷ ನಿಷೇಧ]

ಒಟ್ಟಿನಲ್ಲಿ ಏಷ್ಯಾ ಖಂಡದ ಷೇರು ಮಾರುಕಟ್ಟೆ ಗುರುವಾರ ಬಹುದೊಡ್ಡ ಕುಸಿತಕ್ಕೆ ಒಳಗಾಗಿದ್ದು ನಿಖರ ಕಾರಣಗಳು ತಿಳಿದು ಬಂದಿಲ್ಲ. ಅಮೆರಿಕದ ಫೆಡರಲ್ ಬ್ಯಾಂಕ್ ನ ಕ್ಯೂ-3 ಕಾರ್ಯಕ್ರಮ ಏಷ್ಯಾದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಅತ್ತ ಯುರೋಪಿನ ಮಾರುಕಟ್ಟೆಯಲ್ಲೂ ತೀವ್ರ ಕುಸಿತ ಕಂಡುಬಂದಿದೆ. ಸ್ಪೇನ್ ಮತ್ತು ಜರ್ಮನಿಯ ಮಾರುಕಟ್ಟೆ ಸಹ ಕುಸಿತ ಕಂಡಿದ್ದು ಭಾರತೀಯ ಷೇರು ಹೂಡಿಕೆ ಮತ್ತು ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಇದು ಆರ್ಥಿಕ ವಲಯದಲ್ಲಿ ಹೊಸ ಸಮಸ್ಯೆ ಸೃಷ್ಟಿಸಬಹುದು ಎಂದು ಹೇಳಲಾಗಿದೆ.

English summary

Sensex falls 350 points; consumer durable stocks down

A benchmark index of Indian equities markets Thursday provisionally closed the day's trade 350 points or 1.33 percent down, as consumer durables, automobile, capital goods, metal and banks stocks plunged. All sector-based indices of the S&P Bombay Stock Exchange (BSE) ended in red.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X