For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರ: 45 ಸಾವಿರ ಕೋಟಿ ಬಾಕಿ ಪಾವತಿ ನಿರ್ಧಾರ

By Siddu Thorat
|

ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಅಗಸ್ಟ್-ಸೆಷ್ಟಂಬರ್ ತಿಂಗಳಿನಲ್ಲಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 45 ಸಾವಿರ ಕೋಟಿ ವೇತನ ಬಾಕಿ ಪಾವತಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಭಾರಿ ಪ್ರಮಾಣದಲ್ಲಿ ಹಣ ನೌಕರರ ಮತ್ತು ಪಿಂಚಣಿದಾರರ ಕೈಸೇರಲಿದೆ.

45 ಸಾವಿರ ಕೋಟಿ ಹಣ ಬಾಕಿ ಪಾವತಿ ಮಾಡುವುದರಿಂದ ಹೆಚ್ಚು ಕಡಿಮೆ 30 ಲಕ್ಷ ಕುಟುಂಬಗಳು ಇದರ ಲಾಭ ಪಡೆಯಲಿದ್ದಾರೆ. ಇದರಿಂದಾಗಿ ಬೇರೆ ಬೇರೆ ವಸ್ತುಗಳ ಖರೀದಿ, ವಿದೇಶಿ ಪ್ರವಾಸ ಹೀಗೆ ಅನೇಕ ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ನೌಕರರು ತೊಡಗಿಸಿಕೊಳ್ಳಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ವಾಹನ ಖರೀದಿ

ವಾಹನ ಖರೀದಿ

ಬಾಕಿ ಪಾವತಿ ಹಿನ್ನೆಲೆಯಲ್ಲಿ ವಾಹನ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ, ಸ್ಮಾರ್ಟ್ ಫೋನ್, ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಕೂಡ ಹೆಚ್ಚಲಿದೆ.

ವಿದೇಶಿ ಪ್ರವಾಸ

ವಿದೇಶಿ ಪ್ರವಾಸ

ಅದೇ ರೀತಿ 8.5 ಲಕ್ಷ ನೌಕರರು ವಿದೇಶಿ ಪ್ರವಾಸ ಹೊರಡುವ ಯೋಜನೆ ಹಾಕಿಕೊಂಡಿದ್ದು, 4.5 ಲಕ್ಷ ಜನರು ವಾಹನ ಖರೀದಿ ಸಿದ್ದತೆಯಲ್ಲಿ ತೊಡಗಿದ್ದಾರೆಂದು ವರದಿ ಅಂದಾಜಿಸಿದೆ

ಹೆಚ್ಚಿನ ಪಾಲು ಯಾರಿಗೆ?

ಹೆಚ್ಚಿನ ಪಾಲು ಯಾರಿಗೆ?

ಮೊದಲ ಕಂತಿನ 45 ಸಾವಿರ ಕೋಟಿಗಳ ಪೈಕಿ ಶೇ. 40ರಷ್ಟು ಹಣ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂದ್ರಪ್ರದೇಶದ ಪಾಲಾಗಲಿದೆ. ಬೆಂಗಳೂರು, ಪುಣೆ, ಅಹಮ್ಮದಾಬಾದ್ ನಂತಹ ದೊಡ್ಡ ನಗರಗಳಿಗೆ ಹಾಗೂ ಲಖನೌ, ಅಲಹಾಬಾದ್, ನಾಗಪುರ, ಡೆಹರಾಡೂನ್ ನಂತಹ ನಗರಗಳಿಗೆ ಕಡಿಮೆ ಪಾಲು ಸಿಗಲಿದೆ.

ಪಿಂಚಣಿ ಹೆಚ್ಚಳ

ಪಿಂಚಣಿ ಹೆಚ್ಚಳ

ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. 2016ಕ್ಕಿಂತ ಮೊದಲು ನಿವೃತ್ತರಾದ ನೌಕರರಿಗೆ ಏಳನೇ ವೇತನ ಆಯೋಗದ ಪಿಂಚಣಿ ಪ್ರಯೋಜನ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Check gold rates in Bangalore

English summary

Central Govt. Decided to payment of 45 thousand crore

According to the central government 7th pay commission recommendation employees and pensioners will get 45 thousand crore in the month of August-September.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X