For Quick Alerts
ALLOW NOTIFICATIONS  
For Daily Alerts

ಆರ್ಬಿಐ ನೂತನ ಗವರ್ನರ್ ಉರ್ಜಿತ್ ಪಟೇಲ್ ಮುಂದೆ ಅನೇಕ ಸವಾಲುಗಳು

By Siddu Thorat
|

ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ(ಆರ್ಬಿಐ) ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ರಘುರಾಮ್ ರಾಜನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿವೃತ್ತಿರಾಗಲಿರುವುದರಿಂದ ಅವರ ಸ್ಥಾನಕ್ಕೆ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೆಮಕಗೊಂಡಿದ್ದಾರೆ.

ಇದು ಷೇರುಪೇಟೆಯಲ್ಲಿ ಹೊಸ ಉತ್ಸಾಹ ಮೂಡಿಸಲಿದ್ದು, ಉತ್ತಮ ವಹಿವಾಟು ನಡೆಯಲಿದೆ ಎಂದು ಪರಿಣಿತರು ಹೇಳಿದ್ದಾರೆ.

ಪಟೇಲ್ ಮುಂದೆ ಅನೇಕ ಸವಾಲುಗಳಿದ್ದು, ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ? ಅವರ ಮುಂದಿನ ನಡೆಗಳು ಏನಾಗಬಹುದು? ಹಣಕಾಸು ನಿತಿ, ಆರ್ಥಿಕತೆ, ಹಣದುಬ್ಬರದ ಬಗೆಗಿನ ನಿಲುವುಗಳೇನು? ಪಟೇಲ್ ರವರ ಶಕ್ತಿ-ಸಾಮರ್ಥ್ಯಗಳೇನು? ಇತ್ಯಾದಿ ವಿಷಯದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಡೆಪ್ಯುಟಿ ಗವರ್ನರ್ ಹುದ್ದೆ
 

ಡೆಪ್ಯುಟಿ ಗವರ್ನರ್ ಹುದ್ದೆ

ಈ ಹಿಂದೆ ಉರ್ಜಿತ್ ಪಟೇಲ್ ಆರ್ಬಿಐನಲ್ಲಿ ಡೆಪ್ಯುಟಿ ಗವರ್ನರ್ ಆಗಿದ್ದರು. ಈಗ ಗವರ್ನರ್ ಆಗಿ ನೇಮಿಸಲಾಗಿದೆ. ಇದರಿಂದ ರಾಜನ್ ಅನುಸರಿಸುತಿದ್ದ ಹಣಕಾಸು ನೀತಿಯೇ ಮುಂದುವರೆಯಲಿದೆ ಎಂಬ ಸಂದೇಶ ಹೂಡಿಕೆದಾರರಿಗೆ ರವಾನೆಯಾಗಿದೆ. ಜತೆಗೆ ಇದು ಸಕಾರಾತ್ಮಕ ಹೂಡಿಕೆಗೆ ನೆರವಾಗಲಿದೆ ಎನ್ನುವುದು ಪಂಡಿತರ ಲೆಕ್ಕಾಚಾರ.

ಪೂರಕ ನಿರ್ಧಾರ

ಪೂರಕ ನಿರ್ಧಾರ

ನೂತನ ಗವರ್ನರ್ ಪಟೇಲ್ ಅವರು ದೇಶದ ಮಾರುಕಟ್ಟೆಗೆ ಪೂರಕವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಶ್ವಾಸ ಇದೆ. ಮಾರುಕಟ್ಟೆಯ ಸಕರಾತ್ಮಕ ಚಲನೆಗೆ ಅನ್ವಯವಾಗುವಂತಹ ನೀತಿಗಳು ಮುಂದುವರಿಯಲಿವೆ ಎಂಬ ನಿರೀಕ್ಷೆ ಇದೆ.

ಹಣಕಾಸು ನೀತಿಯ ಸೂತ್ರೀಕರಣ

ಹಣಕಾಸು ನೀತಿಯ ಸೂತ್ರೀಕರಣ

ವಿತ್ತಿ ನೀತಿಯ ಸೂತ್ರೀಕರಣ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅನೇಕ ಸವಾಲುಗಳು ಹೊಸ ಗವರ್ನರ್ ಮುಂದಿವೆ. ಹಣಕಾಸು ನೀತಿ ಕಮಿಟಿಯ ಆರು ಸದಸ್ಯರ ಮಂಡಳಿಯ ಮೊದಲ ಮೀಟಿಂಗ್ ನಲ್ಲಿ ಡಾ. ಪಟೇಲ್ ಉಪಸ್ಥಿತರಿದ್ದರು. ಹೀಗಾಗಿ ಬಡ್ಡಿದರ, ಹಣದುಬ್ಬರ, ಅಕ್ಟೋಬರ್ 4ರ ನೀತಿ ಘೋಷಣೆಗಳ ಬಗ್ಗೆ ಗೊತ್ತಿರುವುದರಿಂದ ಅದನ್ನು ನಿರ್ಧರಿಸುತ್ತಾರೆ ಹಾಗೂ ಕಾರ್ಯರೂಪಕ್ಕೆ ತರುತ್ತಾರೆ ಎಂಬ ಕುತೂಹಲ ಇದೆ.

ಹೂಡಿಕೆದಾರರ ನೋಟ
 

ಹೂಡಿಕೆದಾರರ ನೋಟ

ಮುಂದಿನ ದಿನಗಳಲ್ಲಿ ತ್ವರಿತಗತಿಯ ಬೆಳವಣಿಗೆಗೆ ಯಾವ ವಿಧಾನಗಳನ್ನು ಅನುಸರಿಸಬಹುದು, ಆರ್ಥಿಕ ಸಂಯಮ ಏನಾಗಬಹುದು ಇತ್ಯಾದಿ ಅಂಶಗಳ ಬಗ್ಗೆ ಹೂಡಿಕೆದಾರರು ಮತ್ತು ಮಾರುಕಟ್ಟೆ ತಜ್ಞರು ಮುಂದಿನ ಪ್ರಕ್ರಿಯೆ ಬಗೆಗಿನ ಪಟೇಲ್ ರವರ ನಿಲುವು ಬಗ್ಗೆ ಎದುರು ನೋಡುತ್ತಿದ್ದಾರೆ.

ಪಟೇಲ್ ವ್ಯಾಪಕ ಅನುಭವ

ಪಟೇಲ್ ವ್ಯಾಪಕ ಅನುಭವ

ರಿಲಾಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ದೇಶದ ಅನೇಕ ಪ್ರತಿಷ್ಠಿತ ವೈವಿಧ್ಯಮಯ ಸಂಸ್ಥೆ ಹಾಗೂ ಸಾಲ ಸಂಸ್ಥೆಗಳಲ್ಲಿ ವ್ಯವಹಾರ ಅಭಿವೃದ್ಧಿ ತಂತ್ರಜ್ಞ, ವಿಶ್ಲೇಷಕನಾಗಿ ಅಪಾರ ಅನುಭವ ಹೊಂದಿದ್ದಾರೆ.

ಮಾರುಕಟ್ಟೆಯಲ್ಲಿನ ಸಂಕೀರ್ಣತೆಗಳನ್ನು ನಿಯಂತ್ರಿಸುವ, ಉದ್ಯಮಗಳ ಹಣಕಾಸು ಸೇವೆ, ಪಾವತಿ ವ್ಯವಸ್ಥೆ, ಕಾಲಕಾಲದ ಕ್ಷಿಪ್ರ ತಾಂತ್ರಿಕ ಬದಲಾವಣೆ ಮುಂತಾದ ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ.

ಆರ್ಥಿಕ ಚೇತರಿಕೆ

ಆರ್ಥಿಕ ಚೇತರಿಕೆ

ಹಣದುಬ್ಬರ ನಿಯಂತ್ರಣ ಸೇರಿದಂತೆ ರಾಜನ್ ರೂಪಿಸಿದ್ದ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವರು ಎಂಬ ವಿಶ್ವಾಸ ಇದೆ. ಹಣದುಬ್ಬರವನ್ನು ನಿಗದಿತ ಅವಧಿಯೊಳಗೆ ನಿಯಂತ್ರಿಸಿ ದೇಶದ ಆರ್ಥಿಕತೆಯನ್ನು ಬಲಾಢ್ಯಗೊಳಿಸುವುದು ಅವರ ಪ್ರಮಖ ಆಧ್ಯತೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಹಣದುಬ್ಬರ

ಹಣದುಬ್ಬರ

ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ದರ ಶೇ. 5ಕ್ಕಿಂತ ಕೆಳಗಿರಬೇಕು ಎನ್ನುವ ಗುರಿ ಹೊಂದಿರುವಾಗಲೇ ಇದೀಗ ಹಣದುಬ್ಬರ ದರ ಶೇ. 6.07ಕ್ಕೆ ತಲುಪಿರುವುದರಿಂದ ಉರ್ಜಿತ್ ಪಟೇಲ್ ಹೊಸ ಸವಾಲನ್ನು ಎದುರಿಸಬೇಕಾಗಿದೆ. ಹಣದುಬ್ಬರ ನಿಯಂತ್ರಣ ಮಾಡುವರೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ರೂಪಾಯಿ ಮತ್ತು ಎಫ್ಸಿಎನ್ಆರ್(FCNR)

ರೂಪಾಯಿ ಮತ್ತು ಎಫ್ಸಿಎನ್ಆರ್(FCNR)

ಪ್ರಸ್ತುತ ರೂಪಾಯಿ ಮೌಲ್ಯ ಒಂದು ಡಾಲರ್ ಗೆ 67 ರೂ. ಇದೆ. ಮುಂದಿನ ಮೂರು ತಿಂಗಳಲ್ಲಿ ಇದು ಹೊಡೆತ ಅಥವಾ ಏರಿಳಿತಕ್ಕೆ ಒಳಗಾಗಬಹುದೆ ನೋಡಬೇಕಿದೆ. ಅನಿವಾಸಿ ವಿದೇಶಿ ಕರೆನ್ಸಿ (FCNR-foreign currency non-resident) ಠೇವಣಿಗಳಲ್ಲಿ ಸೆಪ್ಟಂಬರ್ ಮತ್ತು ನವೆಂಬರ್ ತಿಂಗಳುಗಳ ಅವಧಿಯಲ್ಲಿ ಬಿರುಸಿನ ಡಾಲರ್ ಹೊರಹರಿವು ಪಡೆಯುಬಹುದೆ ಎಂದು ನಿರೀಕ್ಷಿಸಲಾಗಿದೆ.

ಡಿಜಿಟಲ್ ಬ್ಯಾಂಕು

ಡಿಜಿಟಲ್ ಬ್ಯಾಂಕು

ಮುಂಬರುವ ತಿಂಗಳುಗಳಲ್ಲಿ ಡಿಜಿಟಲ್ ಪಾವತಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಕಾರ್ಯಾಚರಣೆ ಪ್ರಾರಂಭಗೊಳಿಸಲಿವೆ. ಈ ಹೊಸ ಕಾರ್ಯಾಚರಣೆಗಳು ಸಹ ಆರ್ಬಿಐ ಗೆ ಹೊಸ ಸವಾಲುಗಳಾಗಲಿವೆ ಎನ್ನಲಾಗಿದೆ. ಇದನ್ನು ಉರ್ಜಿತ್ ಪಟೇಲ್ ಹೇಗೆ ನಿಭಾಯಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಷೇರುಪೇಟೆ ಮೇಲೆ ಪ್ರಭಾವ

ಷೇರುಪೇಟೆ ಮೇಲೆ ಪ್ರಭಾವ

ಎಂದಿನಂತೆ ವಿದೇಶಿ ಹೂಡಿಕೆ ಪ್ರಮಾಣ, ಡಾಲರ್ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಕಚ್ಚಾ ತೈಲ ಬೆಲೆ ಷೇರುಪೇಟೆಯ ಮೇಲೆ ಹೇಗೆ ಪ್ರಭಾವ ಬೀರಲಿವೆ ಎನ್ನಲಾಗಿದೆ.

ಸಾಂಸ್ಥಿಕ ಹೂಡಿಕೆದಾರರು ಸ್ವಾಗತ

ಸಾಂಸ್ಥಿಕ ಹೂಡಿಕೆದಾರರು ಸ್ವಾಗತ

ಪಟೇಲ್ ಅವರ ನೇಮಕವನ್ನು ಸಾಂಸ್ಥಿಕ ಹೂಡಿಕೆದಾರರು(ದೇಶಿ ಮತ್ತು ವಿದೇಶಿ) ಸ್ವಾಗತಿಸಲಿದ್ದಾರೆ.

ಆರ್ಬಿಐ ಸ್ವತಂತ್ರವಾಗಿ ರೂಪಿಸಿರುವ ಹಣಕಾಸು ನೀತಿಯು ಯಾವುದ$ಏ ಅಡೆತಡೆಗಳಿಲ್ಲದೆ ನಿರಂತರವಾಘಿ ಮುಂದುವರೆಯಲಿದೆ ಎನ್ನುವುದನ್ನು ಈ ನೇಮಕ ಸೂಚಿಸುತ್ತಿದೆ ಎಂದು ಪಿಎಂಎಸ್ ಸಿಇಒ ಅಜಯ್ ಬೋಡ್ಕೆ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಸಂಬಂಧಗಳ ನಿಯಂತ್ರಣ

ರಾಜಕೀಯ ಸಂಬಂಧಗಳ ನಿಯಂತ್ರಣ

ಆರ್ಬಿಐ ಗವರ್ನರ್ ಆದವರು ಅನೇಕ ಹಂತಗಳಲ್ಲಿ ರಾಜಕೀಯ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ಉರ್ಜಿತ್ ಪಟೇಲ್ ರಾಜಕೀಯ ಒತ್ತಡ ನಿಭಾಯಿಸಿ ರಾಜಕೀಯ ಸಂಬಂಧವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಬಗ್ಗೆಯೂ ಕುತೂಹಲ ಇದೆ.

ಮಿತ ಭಾಷಿ

ಮಿತ ಭಾಷಿ

ಆಪ್ತ ವಲಯದಲ್ಲಿ ಮುಕ್ತ ಮನಸ್ಸಿನ ವ್ಯಕ್ತಿ ಹಾಗೂ ಮಿತ ಭಾಷಿ ಎಂದೇ ಉರ್ಜಿತ್ ಪಟೇಲ್ ಕರೆಯಲ್ಪಡುತ್ತಾರೆ. ಸಾರ್ವಜನಿಕ ವಲಯಗಳಲ್ಲಿ ಭಾಷಣಗಳನ್ನು ಕೊಟ್ಟಿದ್ದು ಅಪರೂಪ. ಹೀಗಾಗಿ ಮಿತ ಭಾಷಿಯಾಗಿರುವ ಇವರು ಮುಂದಿನ ಸವಾಲುಗಳನ್ನು, ರಾಜಕೀಯ ಒತ್ತಡಗಳನ್ನು ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ.

English summary

RBI New Governor Urjit Patel Will face many challenges

Urjit Patel, Reserve Bank of India (RBI) deputy governor, will take over as the central bank’s new head, ending two months’ speculation about Raghuram Rajan’s successor. Patel’s appointment can bring continuity to monetary policy in the country.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more