For Quick Alerts
ALLOW NOTIFICATIONS  
For Daily Alerts

ಎಸ್ಬಿಐ: ಕಾರ್ಪೋರೇಟ್ ಸಂಸ್ಥೆಗಳಿಗಿಂತ ಚಿಲ್ಲರೆ ವ್ಯಾಪಾರಕ್ಕೆ ಹೆಚ್ಚು ಸಾಲ

By Siddu
|

ಇತ್ತೀಚಿನ ವಿದ್ಯಮಾನದ ಪ್ರಕಾರ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ ಸಾಲ ಒದಗಿಸುವುದು ಬ್ಯಾಂಕು ಮತ್ತು ಸಾಲ ಕಂಪನಿಗಳಿಗೆ ತುಂಬಾ ದುಬಾರಿ ಹಾಗೂ ಕಷ್ಟಕರವಾಗಿದೆ. ಆದರಿಂದ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚು ಚಿಲ್ಲರೆ ವ್ಯಾಪಾರಕ್ಕಾಗಿ ಸಾಲ ನೀಡುವಂತೆ ಆರ್ಬಿಐ ಪ್ರೋತ್ಸಾಹಿಸುತ್ತಿದೆ ಎಂದು ಎಸ್ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ಎಸ್ಬಿಐ ಗೃಹ ಸಾಲ ಯೋಜನೆ: ಗ್ರಾಹಕರಿಗೆ ಬಂಪರ್ ಆಫರ್

ಆರ್ಬಿಐ ಪ್ರಸ್ತಾಪ

ಆರ್ಬಿಐ ಪ್ರಸ್ತಾಪ

ಪ್ರಸ್ತುತ ಶೇ. 55ರಷ್ಟು ಕಾರ್ಪೋರೇಟ್ ಗುಂಪುಗಳಿಗೆ ಬಂಡವಾಳ ಮಿತಿಯಿದ್ದು, ಅದನ್ನು ಶೇ. 25ರಷ್ಟು ಕಡಿಮೆ ಮಾಡಬೇಕೆಂದು ಆರ್ಬಿಐ ಪ್ರಸ್ತಾಪಿಸಿದೆ.

ಆರ್ಬಿಐ ಅಂತಿಮ ಮಾರ್ಗಸೂಚಿ

ಆರ್ಬಿಐ ಅಂತಿಮ ಮಾರ್ಗಸೂಚಿ

ಆರ್ಬಿಐ ಆಗಸ್ಟ್ 25ರಂದು ಕರಡು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಡ್ರಾಪ್ಟ್ ಫ್ರೇಮ್ ವರ್ಕ್ ಕಾರ್ಯ ನಡೆದಿದೆ. ಸೆಪ್ಟಂಬರ್ 15, 2016 ರವರೆಗೆ ಸಲಹೆ ಮತ್ತು ಒಳಹರಿವುಗಳನ್ನು ಪಡೆದು, ಅಂತಿಮ ಮಾರ್ಗಸೂಚಿಗಳನ್ನು ಮಾರ್ಚ್ 31, 2019ರಿಂದ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.

20% ಚಿಲ್ಲರೆ ಸಾಲ

20% ಚಿಲ್ಲರೆ ಸಾಲ

ಕಳೆದ ಹಣಕಾಸು ವರ್ಷದಲ್ಲಿ ಶೇ. 20ರಷ್ಟು ಚಿಲ್ಲರೆ ಸಾಲ ದ ಬಂಡವಾಳವನ್ನು ಹೆಚ್ಚಿಸಿ ಇರಿಸುವಲ್ಲಿ ಎಸ್ಬಿಐ ನಿರಾಯಾಸವಾಗಿ ಯಶಸ್ವಿಯಾಗಿತ್ತು ಎಂದು ಭಟ್ಟಾಚಾರ್ಯ ಹೇಳಿದರು.

ಬೆಳವಣಿಗೆಗೆ ವ್ಯಾಪಕ ಅವಕಾಶ

ಬೆಳವಣಿಗೆಗೆ ವ್ಯಾಪಕ ಅವಕಾಶ

ಪ್ರಸ್ತುತ ಭಾರತದಲ್ಲಿ ಚಿಲ್ಲರೆ ಸಾಲದ ಪ್ರಮಾಣ ಶೇ. 10ರಷ್ಟಿದ್ದು, ಮಲೇಷಿಯಾದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಹೀಗಾಗಿ ದೇಶದ ಜನಸಂಖ್ಯೆಗೆ ಅನುಗುಣವಾಗಿ ಬೆಳವಣಿಗೆಗೆ ವ್ಯಾಪಕ ಅವಕಾಶ ಕೊಡಬೇಕಾಗುತ್ತದೆ ಎಂದರು.

ಅತಿದೊಡ್ಡ ಬ್ಯಾಂಕು

ಅತಿದೊಡ್ಡ ಬ್ಯಾಂಕು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಆಸ್ತಿಯಿಂದ ದೇಶದ ಅತಿದೊಡ್ಡ ಬ್ಯಾಂಕಾಗಿ ಹೊರಹೊಮ್ಮಿದೆ. ಜತೆಗೆ ಜಾಗತಿಕವಾಗಿ ಬೃಹತ್ ಬ್ಯಾಂಕಾಗಿ ಗುರುತಿಸಲ್ಪಟ್ಟಿದ್ದು, ಅಗ್ರ ೫೦ರಲ್ಲಿದೆ.

ಎಸ್ಬಿಐ ವಿಲೀನ: ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳುಎಸ್ಬಿಐ ವಿಲೀನ: ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

English summary

SBI: Corporate lending norms could lead to higher retail loans

State Bank of India (SBI), the country's largest bank by assets, feels the new draft guidelines put up by the Reserve Bank of India (RBI) on lending to large corporates tantamount to the central bank "nudging" commercial banks to move towards retail lending.
Story first published: Monday, September 12, 2016, 15:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X