For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಅತೀ ಶ್ರೀಮಂತ ನಗರಗಳು ಯಾವುವು ಗೊತ್ತೆ?

ಭಾರತವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ವೈವಿಧ್ಯತೆಯಲ್ಲಿ ಏಕತೆ ಏಕತೆ ಇರುವ ದೇಶ. ಭಾರತದ ಕೆಲವು ನಗರಗಳನ್ನು ಜಿಡಿಪಿ ಆಧಾರದ ಮೇಲೆ ಹೋಲಿಸಿ ನೋಡಲಾಗಿದ್ದು, ಹಲವು ನಗರಗಳು ಅತೀ ಶ್ರೀಮಂತ ನಗರಗಳೆನಿಸಿವೆ.

|

ಭಾರತವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ವೈವಿಧ್ಯತೆಯಲ್ಲಿ ಏಕತೆ ಏಕತೆ ಇರುವ ದೇಶ. ಭಾರತದ ಕೆಲವು ನಗರಗಳನ್ನು ಜಿಡಿಪಿ ಆಧಾರದ ಮೇಲೆ ಹೋಲಿಸಿ ನೋಡಲಾಗಿದ್ದು, ಹಲವು ನಗರಗಳು ಅತೀ ಶ್ರೀಮಂತ ನಗರಗಳೆನಿಸಿವೆ. ಹಳ್ಳಿಗಳ ಜನಸಂಖ್ಯೆಗೆ ಹೋಲಿಸಿದರೆ ಹಳ್ಳಿಗಳ ಜನರ ಸಿರಿವಂತಿಗೆಗಿಂತ ನಗರಗಳಲ್ಲಿರುವ ಜನರ ಶ್ರೀಮಂತಿಕೆ ಅಧಿಕವಾಗಿದೆ. ಹಾಗಾದರೆ ದೇಶದಲ್ಲಿನ ಯಾವ ನಗರಗಳು ಹೆಚ್ಚು ಶ್ರೀಮಂತವಾಗಿವೆ?

 

2018ರ ಭಾರತದಲ್ಲಿರುವ ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯನ್ನು ನೋಡೋಣ ಬನ್ನಿ..

10. ವಿಶಾಖಪಟ್ಟಣ

10. ವಿಶಾಖಪಟ್ಟಣ

26 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ವಿಶಾಖಪಟ್ಟಣ ನಗರವು ಶ್ರೀಮಂತ ನಗರಗಳ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಪೂರ್ವ ಕರಾವಳಿ ಪ್ರದೇಶದಲ್ಲಿರುವ ವಿಶಾಖಪಟ್ಟಣವು, ಬೃಹತ್ ಕೈಗಾರಿಕೆಗಳು, ಐಟಿ ಉದ್ಯಮ, ಉಕ್ಕು ಕೈಗಾರಿಕೆಗಳು, ಬ್ಯಾಂಕಿಂಗ್ ಗಳು ಆರ್ಥಿಕವಾಗಿ ಈ ನಗರವು ವೇಗವಾಗಿ ಬೆಳೆಯಲು ನೆರವಾಗುತ್ತಿದೆ. ವಿಶಾಖಪಟ್ಟಣದಲ್ಲಿ ದೇಶದ ಅತ್ಯಂತ ಹಳೆಯ ಹಡಗು ನಿರ್ಮಾಣ ಸ್ಥಳವಿದ್ದು, ಇದು ಭಾರತದ ಪ್ರಮುಖ ಸಮುದ್ರ ತೀರವಾಗಿದೆ.

9. ಸೂರತ್

9. ಸೂರತ್

ಭಾರತದ ಮತ್ತೊಂದು ಪ್ರಮುಖ ಶ್ರೀಮಂತ ನಗರಗಳ ಪಟ್ಟಿಗೆ ಸೇರುವ ನಗರವೆಂದರೆ ಅದು ವಜ್ರದ ಕೇಂದ್ರವಿರುವ ಸೂರತ್. 40 ಬಿಲಿಯನ್ ಡಾಲರ್ ಜಿಡಿಪಿಯನ್ನು ಈ ನಗರ ಹೊಂದಿದೆ. ವಜ್ರವನ್ನು ಕತ್ತರಿಸುವ ಮತ್ತು ಹೊಳಪು ನೀಡುವ ಕೈಗಾರಿಕೆಗಳು, ಜವಳಿ ಉದ್ಯಮ, ಸ್ಟೀಲ್ ಮತ್ತು ಪೆಟ್ರೋಕೆಮಿಕಲ್ ಉದ್ಯಮಗಳು ಈ ನಗರದ ಕೇಂದ್ರಬಿಂದು. ಅಷ್ಟೇ ಅಲ್ಲದೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ಆರ್ಥಿಕವಾಗಿ ಬಹು ಬೇಗನೆ ಬೆಳೆಯುತ್ತಿದ್ದು, ಸದ್ಯ ಭಾರತದ ಶ್ರೀಮಂತ ನಗರಗಳಲ್ಲಿ ಒಂದೆನಿಸಿದೆ.

8. ಪುಣೆ
 

8. ಪುಣೆ

ಪುಣೆಯು 48 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ಭಾರತದ ಅತೀ ಹೆಚ್ಚು ವಿದ್ಯಾಭ್ಯಾಸ ಕೇಂದ್ರಗಳಿರುವ ಪುಣೆಯಂತ ಸಣ್ಣ ನಗರಿಯೂ ಕೂಡ ಐಟಿ ಉದ್ಯಮ, ಆಟೋಮೊಬೈಲ್, ಗಾಜು ಮತ್ತು ಸಕ್ಕರೆ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿದೆ. ಕೆನೆಟಿಕ್ ಮೋಟರ್ಸ್ ಮತ್ತು ಮರ್ಸಿಡಿಸ್ ಬೆಂಜ್ ನಂತರ ಪ್ರಮುಖ ಆಟೋಮೊಬೈಲ್ ಕಂಪನಿಗಳು ಈ ಸಿಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಹಕರಿಸಿದೆ.

7. ಅಹಮದಾಬಾದ್

7. ಅಹಮದಾಬಾದ್

ಭಾರತದ ಮತ್ತೊಂದು ಪ್ರಮುಖ ಸಿರಿವಂತ ಸಿಟಿ ಎಂಬ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಅಹಮದಾಬಾದ್. ಗುಜರಾತ್ ನ ಪ್ರಮುಖ ಕೈಗಾರಿಕಾ ಕ್ಷೇತ್ರ ಇದು. ಇಲ್ಲಿನ ಜಿಡಿಪಿ ಬರೋಬ್ಬರಿ 64 ಬಿಲಿಯನ್ ಡಾಲರ್. ಔದ್ಯೋಗಿಕವಾಗಿ ಇಲ್ಲಿಂದಲೇ ಮೇಲೆ ಬಂದ ಪ್ರಮುಖರೆಂದರೆ ಅದಾನಿ ಗ್ರೂಪ್, ಟೊರೆಂಟೋ ಫಾರ್ಮಸಿಟಿಕಲ್ಸ್ ಮತ್ತು ನಿರ್ಮಾ. ಇತ್ತೀಚೆಗೆ ಈ ನಗರವು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಪ್ರವಾಸಿ ಸೆಳೆತಗಳಿಂದಾಗಿ ಭಾರತದ ಪ್ರಮುಖ ಸಿಟಿ ಎಂದೆನಿಸಿ ಎಲ್ಲರಿಗೂ ಮೆಚ್ಚುಗೆಯಾಗುತ್ತಿದೆ.

6. ಚೆನ್ನೈ

6. ಚೆನ್ನೈ

ಚೆನ್ನೈ ಭಾರತದ ಒಂದು ಪ್ರಮುಖ ಮೆಟ್ರೋ ಸಿಟಿ. ಇಲ್ಲಿನ ಜಿಡಿಪಿ ಬರೋಬ್ಬರಿ 66 ಬಿಲಿಯನ್ ಆಗಿದ್ದು, ಈ ಪಟ್ಟಿಯ 6ನೇ ಸ್ಥಾನದಲ್ಲಿದೆ. ಇಲ್ಲಿ ದಕ್ಷಿಣ ಭಾರತದಲ್ಲೇ ದೊಡ್ಡ ಮಟ್ಟದ ವಾಣಿಜ್ಯೀಕರಣ, ಕೈಗಾರಿಕೀಕರಣ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರಗಳು ಇಲ್ಲಿವೆ. ಇಲ್ಲಿಂದಲೇ ಅತೀ ಹೆಚ್ಚು ಐಟಿ ಸರ್ವೀಸ್ ಗಳು ರಫ್ತಾಗುತ್ತದೆ. ಈ ಸಿಟಿಯು ಆಟೋಮೊಬೈಲ್, ಟೆಕ್ನಾಲಜಿ, ಹಾರ್ಡ್ವೇರ್, ಮತ್ತು ಆರೋಗ್ಯ ಕೇಂದ್ರಗಳಿಂದಾಗಿ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ಗುರುತಿಸುವಂತಾಗಿದೆ. ಇದನ್ನು ಭಾರತದ " ಡೆಟ್ರಾಯ್ಟ್ ಸಿಟಿ" ಎಂದು ಕರೆಯುತ್ತಾರೆ.

5. ಹೈದರಾಬಾದ್

5. ಹೈದರಾಬಾದ್

74 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಹೈದ್ರಾಬಾದ್ ಮತ್ತೊಂದು ಆರ್ಥಿಕವಾಗಿ ಏಳಿಗೆ ಕಾಣುತ್ತಿರುವ ದೇಶದ ಪ್ರಮುಖ ನಗರ. ಮುತ್ತು ಮತ್ತು ವಜ್ರಗಳ ವ್ಯಾಪಾರಕ್ಕಾಗಿ ಈ ಸಿಟಿಯು ಹೆಚ್ಚು ಗುರುತಿಸಿಕೊಂಡಿತ್ತು. ಆದರೆ ಈಗ ದೊಡ್ಡ ಮಟ್ಟದ ತಯಾರಿಕಾ ಕ್ಷೇತ್ರ, ಅಧ್ಯಯನ ಕೇಂದ್ರಗಳು ಮತ್ತು ಹಣಕಾಸು ಕ್ಷೇತ್ರದಿಂದಾಗಿ ಗುರುತಿಸಿಕೊಳ್ಳುತ್ತಿದೆ.

4. ಬೆಂಗಳೂರು

4. ಬೆಂಗಳೂರು

ಬೆಂಗಳೂರನ್ನು ಭಾರತದ ಐಟಿ ಸಿಟಿ ಅಥವಾ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಭಾರತದ ಶ್ರೀಮಂತ ನಗರಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದು, ಇದರ ಜಿಡಿಪಿ 83 ಬಿಲಿಯನ್ ಆಗಿದೆ. ದೇಶದ ಪ್ರಮುಖ ಐಟಿ ಉದ್ಯೋಗಿಗಳ ಕೇಂದ್ರ ಮಾತ್ರವಲ್ಲದೆ, ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಅತೀ ಹೆಚ್ಚು ಇಷ್ಟವಾಗುವ ನಗರ ಇದಾಗಿದೆ. ಹಾಗಾಗಿ ಬ್ಯುಸಿನೆಸ್ ಮಾಡುವವರು ಅಥವಾ ಹೊಸ ಕೈಗಾರಿಕೆಗಳು ಆರಂಭಿಸುವವರು ಬೆಂಗಳೂರನ್ನೇ ಹೆಚ್ಚು ಆಯ್ದುಕೊಳ್ಳುತ್ತಿದ್ದಾರೆ.

3. ಕೋಲ್ಕತ್ತಾ

3. ಕೋಲ್ಕತ್ತಾ

150 ಬಿಲಿಯನ್ ಡಾಲರ್ ಜಿಡಿಪಿಯನ್ನು ಕೋಲ್ಕತ್ತಾ ಹೊಂದಿದೆ. ಈ ಪಟ್ಟಿಯ ಟಾಪ್ 3ನೇ ಸ್ಥಾನದಲ್ಲಿ ಕೋಲ್ಕತ್ತಾ ನಗರವಿದೆ. ಪೂರ್ವ ಭಾರತದ ಮುಖ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ಇದಾಗಿದೆ. ಇಲ್ಲಿ ಪ್ರಮುಖ ಕೈಗಾರಿಕೆಗಳು ಉದಾಹರಣೆಗೆ ಟೆಕ್ಸ್ಟೈಲ್, ಉಕ್ಕು, ಐಟಿ, ಫಾರ್ಮಸಿಟಿಕಲ್ ಮತ್ತು ಗಣಿಕಾರಿಕೆಗಳು ಈ ನಗರವನ್ನು ಆರ್ಥಿಕವಾಗಿ ಹೆಚ್ಚು ಶ್ರೀಮಂತಗೊಳಿಸಲು ನೆರವಾಗುತ್ತಿದೆ.

2. ನವದೆಹಲಿ

2. ನವದೆಹಲಿ

ನಮ್ಮ ದೇಶದ ರಾಜಧಾನಿ ದೆಹಲಿಯು ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಇಲ್ಲಿನ ಜಿಡಿಪಿ 167 ಬಿಲಿಯನ್ ಡಾಲರ್. ವಿದೇಶಿ ಹೂಡಿಕೆದಾರರಿಗೆ ದೆಹಲಿಯು ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ದಕ್ಷಿಣ ಏಷ್ಯಾದ ದೊಡ್ಡ ವಾಣಿಜ್ಯೀಕರಣ ಕೇಂದ್ರವಾಗಿ ದೆಹಲಿ ಗುರುತಿಸಿಕೊಂಡಿದೆ. ರೀಟೈಲ್, ಟೆಲಿಕಾಂ, ವಿದ್ಯುಚ್ಛಕ್ತಿ ಸೆಕ್ಟರ್, ನಿರ್ಮಾಣ ಕ್ಷೇತ್ರದವರಿಗೆ ಈ ನಗರಿ ಮನೆ ಇದ್ದಂತೆ.

1. ಮುಂಬೈ

1. ಮುಂಬೈ

ಟಾಪ್ 10 ಭಾರತದ ಶ್ರೀಮಂತ ಸಿಟಿಯ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿನ ಜಿಡಿಪಿ 209 ಬಿಲಿಯನ್ ಡಾಲರ್ ಆಗಿದೆ. ಪ್ರಪಂಚದ ದೊಡ್ಡ ನಗರಗಳ ಪಟ್ಟಿಯಲ್ಲಿ ಮುಂಬೈ ಕೂಡ ಸೇರ್ಪಡೆಗೊಳ್ಳುತ್ತದೆ. ಅತೀ ಹೆಚ್ಚು ಕೋಟ್ಯಾಧೀಶರು ಇಲ್ಲಿದ್ದಾರೆ. ಅಷ್ಟೇ ಅಲ್ಲದೆ ಇದೊಂದು ದೇಶದ ಟೆಕ್ನಿಕಲ್ ರಾಜಧಾನಿಯಾಗಿ ಕೂಡ ಗುರುತಿಸಿಕೊಂಡಿದೆ. ದೇಶದ ಪ್ರಮುಖ ಮತ್ತು ಪ್ರಸಿದ್ಧ ಫಿಲ್ಮ್ ಇಂಡಸ್ಟ್ರಿ ಬಾಲಿವುಡ್ ಇಲ್ಲೇ ಇರುವುದು. ವೈಜ್ಞಾನಿಕ ಮತ್ತು ನ್ಯೂಕ್ಲಿಯರ್ ಅಧ್ಯಯನ ಕೇಂದ್ರಗಳಿಂದಾಗಿ ಈ ನಗರ ಅಗ್ರ ಸ್ಥಾನದಲ್ಲಿದೆ. ಬಾಲಿವುಡ್ ನಿಂದಾಗಿ ಮುಂಬೈಗೆ ಜಾಗತಿಕವಾಗಿ ಖ್ಯಾತಿ ಸಿಗುತ್ತಿದೆ.

ಈ ಎಲ್ಲಾ ನಗರಗಳು ಅತೀ ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಮತ್ತು ಹಣ ತೊಡಗಿಸಿ ಬ್ಯುಸಿನೆಸ್ ಮಾಡುವವರು ತಾವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೆರವು ನೀಡುತ್ತದೆ.

English summary

Top 10 Richest Cities in India 2018

The prosperity of the cities of India is measured in terms of their GDP, which makes some cities richer as compared to others.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X