For Quick Alerts
ALLOW NOTIFICATIONS  
For Daily Alerts

ಕೇಂದ್ರದಿಂದ ತುಟ್ಟಿ ಭತ್ಯೆ ಘೋಷಣೆ, ನೌಕರರಿಗೆ ದೀಪಾವಳಿ ಕೊಡುಗೆ!

ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶೇ. 2ರಷ್ಟು ತುಟ್ಟಿ ಭತ್ಯೆ ನೀಡುವ ಶುಭ ಸುದ್ದಿಯನ್ನು ನೀಡಿದೆ.

By Siddu
|

ಕೇಂದ್ರ ಸರ್ಕಾರದಿಂದ ನೌಕರರಿಗೆ ದೀಪಾವಳಿ ಹಬ್ಬದ ಭರ್ಜರಿ ಕೊಡುಗೆ..!

ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶೇ. 2ರಷ್ಟು ತುಟ್ಟಿ ಭತ್ಯೆ ನೀಡುವ ಶುಭ ಸುದ್ದಿಯನ್ನು ನೀಡಿದೆ. ಕೇಂದ್ರ ನೌಕರರಿಗೆ 2 ವರ್ಷಗಳ ಬೋನಸ್ ಘೋಷಿಸಿದ ಸರ್ಕಾರ

ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜುಲೈ 1, 2016ರಿಂದ ಪೂರ್ವಾನ್ವಯವಾಗಿ ಇದು ಜಾರಿ ಆಗಲಿದೆ. ಕೇಂದ್ರ ಸರ್ಕಾರ: 45 ಸಾವಿರ ಕೋಟಿ ಬಾಕಿ ಪಾವತಿ ನಿರ್ಧಾರ

1. ಯಾರಿಗೆ ಪ್ರಯೋಜನ?

1. ಯಾರಿಗೆ ಪ್ರಯೋಜನ?

ದೀಪಾವಳಿ ಗಿಪ್ಟ್ ಆಗಿ ಕೇಂದ್ರ ಸರ್ಕಾರ ಘೋಷಿಸಿರುವ ಈ ಸೌಲಭ್ಯವನ್ನು 50.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 58 ಲಕ್ಷ ಪಿಂಚಣಿದಾರರು ಇದರ ಸಂಪೂರ್ಣ ಪ್ರಯೋಜನ ಪಡೆಯಲಿದ್ದಾರೆ.

2. ಕೇಂದ್ರಕ್ಕೆ ಹೊರೆ

2. ಕೇಂದ್ರಕ್ಕೆ ಹೊರೆ

ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ರೂ. 5622 ಕೋಟಿ ಹೊರೆ ಆಗಲಿದೆ. ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಶೇ. 6ರಷ್ಟು ತುಟ್ಟಿಭತ್ಯೆಯನ್ನು ಏರಿಕೆ ಮಾಡಿದ್ದರಿಂದ ತುಟ್ಟಿಭತ್ಯೆಯ ಪ್ರಮಾಣ ಶೇ. 125ರಷ್ಟು ಆಗಿತ್ತು. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಇದು ಹೊರೆಯಾಗಲಿದೆ.

3. 7ನೇ ವೇತನ ಆಯೋಗದ ಶಿಫಾರಸ್ಸು
 

3. 7ನೇ ವೇತನ ಆಯೋಗದ ಶಿಫಾರಸ್ಸು

ಈ ವರ್ಷ ಕೇಂದ್ರ ಸರ್ಕಾರ ಶೇ.6 ರಿಂದ ಶೇ. 125ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ಸೇರ್ಪಡೆಗೊಳಿಸಿತ್ತು. ಈ ಹೆಚ್ಚಳವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

4. 33 ಲಕ್ಷ ನೌಕರರಿಗೆ ಬೋನಸ್

4. 33 ಲಕ್ಷ ನೌಕರರಿಗೆ ಬೋನಸ್

33 ಲಕ್ಷ ಕೇಂದ್ರ ನೌಕರರಿಗೆ ಬರಬೇಕಿರುವ 2014-15 ಮತ್ತು 2015-16 ನೇ ಸಾಲಿನ ಬೋನಸ್ ಹಾಗೂ ಇದರ ಜತೆಗೆ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚುವರಿ ಬೋನಸ್ ಕೂಡ ಸಿಗಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕಳೆದ ತಿಂಗಳು ಹೇಳಿದ್ದರು.

5. 45 ಸಾವಿರ ಕೋಟಿ ವೇತನ ಬಾಕಿ ಪಾವತಿ

5. 45 ಸಾವಿರ ಕೋಟಿ ವೇತನ ಬಾಕಿ ಪಾವತಿ

ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಅಗಸ್ಟ್-ಸೆಷ್ಟಂಬರ್ ತಿಂಗಳಿನಲ್ಲಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 45 ಸಾವಿರ ಕೋಟಿ ವೇತನ ಬಾಕಿ ಪಾವತಿಸಿತ್ತು. ಕೇಂದ್ರದ ಈ ನಿರ್ಧಾರದಿಂದಾಗಿ ಭಾರಿ ಪ್ರಮಾಣದಲ್ಲಿ ಹಣ ನೌಕರರ ಮತ್ತು ಪಿಂಚಣಿದಾರರ ಕೈಸೇರಿತ್ತು. 45 ಸಾವಿರ ಕೋಟಿ ಹಣ ಬಾಕಿ ಪಾವತಿ ಮಾಡುವುದರಿಂದ ಹೆಚ್ಚು ಕಡಿಮೆ 30 ಲಕ್ಷ ಕುಟುಂಬಗಳು ಇದರ ಲಾಭ ಪಡೆದಿದ್ದವು. ಇದರಿಂದಾಗಿ ಬೇರೆ ಬೇರೆ ವಸ್ತುಗಳ ಖರೀದಿ, ವಿದೇಶಿ ಪ್ರವಾಸ ಹೀಗೆ ಅನೇಕ ಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರದ ನೌಕರರು ತೊಡಗಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿತ್ತು.

English summary

Diwali Bonamza, Centre to announce 2% DA

In what could bring cheers to 50 lakh central employees and 58 lakh pensioners ahead of Diwali, the Centre is all set to announce 2% dearness allowance to be effective from July 1, 2016.
Story first published: Friday, October 28, 2016, 11:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X