For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 185 ಅಂಕ ಏರಿಕೆ

ರಾಷ್ಟ್ರೀಯ ಸಂವೇದಿ ಸೂಚ್ಯಂಕ(ಎನ್ಎಸ್ಇ) 8497.05 ಅಂಶಗಳೊಂದಿಗೆ 63.3. ಅಂಕ ಏರಿಕೆ ಕಂಡು ಅಂತ್ಯಗೊಂಡಿದೆ.

By Siddu
|

ಹಿಲರಿ ಕ್ಲಿಂಟನ್ ಗೆಲ್ಲುವ ನಿರೀಕ್ಷೆ ಹೆಚ್ಚುತ್ತಿರುವ ಪರಿಣಾಮ ಷೇರುಪೇಟೆ ಮೇಲೂ ಉಂಟಾಗಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಏರುಮುಖವಾಗಿ ಸಾಗಿದೆ.

 

ರಾಷ್ಟ್ರೀಯ ಸಂವೇದಿ ಸೂಚ್ಯಂಕ(ಎನ್ಎಸ್ಇ) 8497.05 ಅಂಶಗಳೊಂದಿಗೆ 63.3. ಅಂಕ ಏರಿಕೆ ಕಂಡು ಅಂತ್ಯಗೊಂಡಿದೆ. ಬಿಎಸ್ಇ ಸೂಚ್ಯಂಕ 27,458.99 ಅಂಶಗಳೊಂದಿಗೆ 184.84 ಅಂಕ ಏರಿಕೆಯಾಗಿ ಕೊನೆಗೊಂಡಿದೆ.

 

ಬಿಎಸ್ಇ ವಲಯದ ಸೂಚ್ಯಂಕಗಳು, ಆರೋಗ್ಯ ಸೂಚ್ಯಂಕ ಶೇ. 2.67ರಷ್ಟು ಲಾಭ ಪಡೆದಿವೆ. ಲೋಹ ಶೇ. 2.17, ರಿಯಾಲ್ಟಿ ಶೇ. 1.82 ಮತ್ತು ಪಿಎಸ್ ಯು ಶೇ. 1.74 ಲಾಭ ಗಳಿಸಿವೆ. ಕ್ರಮವಾಗಿ ನಿಪ್ಟಿ ಬ್ಯಾಂಕ್ ಸೂಚ್ಯಂಕ ಶೇ. 1.68 ಮತ್ತು ನಿಪ್ಟಿ ಫಾರ್ಮಾ ಸೂಚ್ಯಂಕ ಶೇ. 3.26ರಷ್ಟು ಏರಿಕೆ ಕಂಡಿದೆ.

ಲುಪಿನ್ (+ 7.85%), ಐಟಿಸಿ (+ 3.71%), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (+ 3.5%), ಐಸಿಐಸಿಐ ಬ್ಯಾಂಕ್ (+ 3.5%) ಮತ್ತು ಹೀರೋ ಮೊಟೊಕಾರ್ಪ್ (+ 2.51%) ಅಗ್ರ ಐದು ಲಾಭದಾಯಕ ಸಂಸ್ಥೆಗಳಾಗಿವೆ.
ಟಿಸಿಎಸ್ (-1.59%), ಎಲ್ & ಟಿ (-0.77%), ಎಚ್ ಯುಎಲ್ (-0.73%), ವಿಪ್ರೊ (-0.38%) ಮತ್ತು ಟಾಟಾ ಮೋಟಾರ್ಸ್ (-0.35%) ಇವು ಸೆನ್ಸೆಕ್ಸ್ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.

ಸೆನ್ಸೆಕ್ಸ್ 185 ಅಂಕ ಏರಿಕೆ

English summary

Sensex surges 185 points

The broader NSE index ended 63.3 points or 0.75 per cent higher at 8,497.05, after rising as much as 1.2 per cent earlier in the day.
Story first published: Monday, November 7, 2016, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X