Englishहिन्दी മലയാളം தமிழ் తెలుగు

ಚಿನ್ನದ ಆಮದು ಇಳಿಕೆ, ದೇಶದ ರಪ್ತು ಪ್ರಮಾಣ ಏರಿಕೆ

Written By: Siddu
Subscribe to GoodReturns Kannada
ಭಾರತದ ವಾಣಿಜ್ಯ ರಪ್ತು ವಹಿವಾಟು ಸತತ ಐದನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಚೇತರಿಕೆ ಕಾಣುತ್ತಿರುವುದು ಧನಾತ್ಮಕ ಪರಿಣಾಮ ಬೀರಿದೆ.

ದೇಶದ ರಪ್ತು ಪ್ರಮಾಣ ಸತತವಾಗಿ ಹೆಚ್ಚುತ್ತಿರುವುದರಿಂದ ಜನೆವರಿಯಲ್ಲಿ ಶೇ. 4.32ರಷ್ಟು ಪ್ರಗತಿ ಸಾಧಿಸಿದೆ ಹಾಗೂ ಚಿನ್ನದ ಆಮದು ಕಡಿಮೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಚಿನ್ನದ ಆಮದು ಕುಸಿತ

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರದ ದಿನಗಳಲ್ಲಿ ಚಿನ್ನದ ಬೇಡಿಕೆ ಗಣನೀಯವಾಗಿ ತಗ್ಗಿದೆ. ಹೀಗಾಗಿ ಚಿನ್ನದ ಆಮದು ಕೂಡ ಶೇ. 30 ರಷ್ಟು ಕುಸಿತ ಕಂಡಿದೆ. ಚಿನ್ನದ ವಹಿವಾಟಿನ ಪ್ರಮಾಣ ರೂ. 20,400 ಕೋಟಿಗಳಿಂದ ರೂ. 13,600 ಕೋಟಿಗಳಿಗೆ ಕುಸಿತ ಕಂಡಿದೆ.

ರಪ್ತು ಏರಿಕೆ

ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ವಸ್ತುಗಳು ಮತ್ತು ಕಬ್ಬಿಣದ ಅದಿರು ಮುಂತಾದವುಗಳ ರಫ್ತು ಪ್ರಮಾಣ ಹೆಚ್ಚಾಗಿರುವುದರಿಂದ ರೂ. 1.49 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ ಎಂದು ವರದಿಯಾಗಿದೆ.

ದೇಶದ ಆಮದು ಇಳಿಕೆ

ದೇಶದ ಆಮದು ಪ್ರಮಾಣ ಶೇ. 11 ರಷ್ಟು ಇಳಿಕೆಯಾಗಿದ್ದು, ರೂ. 2.17 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಮಾತ್ರ ಆಮದಾಗಿವೆ.

ಟ್ರಂಪ್ ಎಫೆಕ್ಟ್

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ರಕ್ಷಣಾನೀತಿ, ವೀಸಾ ನೀತಿ, ಜಾಗತಿಕ ಕರೆನ್ಸಿ ಚಂಚಲತೆ ಹಾಗೂ ರಪ್ತುಗಳಲ್ಲಿನ ಅನಿಶ್ಚಿತತೆ ದೇಶದ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಇಂತಹ ಸಂಗತಿಗಳು ಭಾರತಕ್ಕೆ ಸವಾಲಾಗಲಿದೆ ಎನ್ನಲಾಗಿದೆ.

 

Read more about: export, import, gold, gdp, economy
English summary

India's Exports up 4.32% in Jan, imports rise faster at 10.7%

India’s merchandise exports grew 4.32 per cent to $22.11 billion in January on the back of raw material shipments, including petroleum products and iron ore.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC