Englishहिन्दी മലയാളം தமிழ் తెలుగు

ಕಾಗ್ನಿಜಂಟ್ 6000 ಉದ್ಯೋಗ ಕಡಿತ

Written By: Siddu
Subscribe to GoodReturns Kannada

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಮೂಲದ ಪ್ರಮುಖ ಐ.ಟಿ ಸೇವಾ ಸಂಸ್ಥೆ ಕಾಗ್ನಿಜಂಟ್ 6000 ಉದ್ಯೋಗಗಳನ್ನು ಕಡಿತ ಮಾಡಲು ನಿರ್ಧರಿಸಿದೆ.

ನಾಸ್ಡಾಕ್(Nasdaq) ಪ್ರಕಾರ ಡಿಸೆಂಬರ್ 31, 2016ಕ್ಕೆ ಸುಮಾರು 2.6 ಲಕ್ಷ ಉದ್ಯೋಗಿಗಳನ್ನು ಕಾಗ್ನಿಜಂಟ್ ಹೊಂದಿದೆ ಎಂದು ಹೇಳಿದೆ. ಅಂದರೆ ಒಟ್ಟು ಕಾರ್ಯಪಡೆಯ ಶೇ. 2ರಷ್ಟು ಉದ್ಯೋಗಗಳನ್ನು ಕಡಿತ ಮಾಡಲಿದೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

ನಿರಾಶದಾಯಕ ಪ್ರದರ್ಶನ

ಕಂಪನಿಯ ವಾರ್ಷಿಕ ವರದಿಯ ಪ್ರಕಾರ ಉದ್ಯೋಗಿಗಳ ನಿರಾಶದಾಯಕ ಪ್ರದರ್ಶನ ಉದ್ಯೋಗ ಕಡಿತ ಮಾಡಲು ಮುಖ್ಯ ಕಾರಣ ಎಂದು ಕಂಪನಿ ಹೇಳಿದೆ.

ಪ್ರದರ್ಶನ ಪರಿಶೀಲನೆ

ನಿರ್ವಹಣಾ ತಂತ್ರದ ಭಾಗವಾಗಿ ಕ್ಲೈಂಟ್ಸ್ ಅಗತ್ಯತೆಗಳನ್ನು ಪೂರೈಸಲು ಮತ್ತು ವ್ಯವಹಾರ ಗುರಿಗಳನ್ನು ಸಾಧಿಸುವ ಸಲುವಾಗಿ ಪ್ರತಿನಿತ್ಯ ಉದ್ಯೋಗಿಗಳ ಪ್ರದರ್ಶನ ಪರಿಶೀಲನೆ ಮಾಡಲಾಗುತ್ತದೆ. ಹಿಂದಿನ ವರ್ಷಗಳಲ್ಲಿನ ಉದ್ಯೋಗಿಗಳ ಪ್ರದರ್ಶನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಕಾಗ್ನಿಜಂಟ್ ವಿಫಲ

ಕಾಗ್ನಿಜಂಟ್ ಪ್ರದರ್ಶನ ಆಧಾರಿತ ಸಂಸ್ಕ್ರತಿ ಹೊಂದಿದ್ದು, ವೈಯಕ್ತಿಕ ಕೌಶಲ್ಯ ಮತ್ತು ಪ್ರದರ್ಶನ ಸಂಬಳ ಪಾವತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ವರ್ಷಗಳಲ್ಲಿ ಕಂಪನಿ ತನ್ನ ಗುರಿ ಮುಟ್ಟುವಲ್ಲಿ ಸಫಲವಾಗಿದ್ದರೂ, 2016ರಲ್ಲಿ ಅಂದುಕೊಂಡ ಮಟ್ಟದಲ್ಲಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

English summary

IT Major Cognizant Likely To Lay Off 6,000 Employees

IT major Cognizant, which has significant operations in India, is likely to cut at least 6,000 jobs, according to people familiar with the matter. This represents over 2 per cent per cent of its total workforce.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC