For Quick Alerts
ALLOW NOTIFICATIONS  
For Daily Alerts

ವಿಮಾನ ಪ್ರಯಾಣಕ್ಕೂ ಆಧಾರ್ ಕಡ್ಡಾಯ!

ಕೇಂದ್ರ ಸರ್ಕಾರ ಎಲ್ಲಾ ಸೇವೆಗಳಿಗೂ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ವಿಮಾನ ಪ್ರಯಾಣಕ್ಕೆ ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಾಧ್ಯತೆ ಇದೆ.

|

ಕೇಂದ್ರ ಸರ್ಕಾರ ಎಲ್ಲಾ ಸೇವೆಗಳಿಗೂ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ವಿಮಾನ ಪ್ರಯಾಣಕ್ಕೆ ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಸರ್ಕಾರ ದೇಶದ ಐಟಿ ದಿಗ್ಗಜ ವಿಪ್ರೋ ಸಂಸ್ಥೆಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ನೀಲಿನಕ್ಷೆ ತಯಾರಿಸುವ ಜವಾಬ್ಧಾರಿ ನೀಡಿದೆ.

ವಿಮಾನ ಪ್ರಯಾಣಕ್ಕೂ ಆಧಾರ್ ಕಡ್ಡಾಯ!

ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಪ್ರಯಾಣಿಕರ ಆಧಾರ್ ಕಾರ್ಡ್ ನೊಂದಿಗೆ ಸಂಪರ್ಕ ಹೊಂದಲಿದ್ದು, ವಿಪ್ರೋ ಮೇ ತಿಂಗಳ ಒಳಗಾಗಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಇದು ಯಶಸ್ವಿಯಾದ ನಂತರ ಪ್ರಯಾಣಿಕರು ತಮ್ಮ ಹೆಬ್ಬೆರಳು ಇಟ್ಟು ಗುರುತನ್ನು ನೀಡಬೇಕಾಗುತ್ತದೆ.

ಈ ವ್ಯವಸ್ಥೆ ದೇಶಿಯ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಮಾತ್ರ ಅನ್ವಯವಾಗಲಿದ್ದು, ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪಾಸ್ ಪೋರ್ಟ್ ಅಗತ್ಯವಿದೆ.

ಇನ್ನುಮುಂದೆ ವಿಮಾನ ಟಿಕೆಟ್ ಬುಕ್ ಮಾಡಲು ಸಹ ಆಧಾರ್ ಸಂಖ್ಯೆ ಮುಖ್ಯವಾಗಿದ್ದು, ಆಧಾರ್ ಸಂಖ್ಯೆಯನ್ನು ಟಿಕೆಟ್‌ ಜೊತೆ ಲಿಂಕ್ ಮಾಡುವ ಚಿಂತನೆ ನಡೆದಿದೆ. ನಕಲಿ ಡಿಎಲ್ ಸಮಸ್ಯೆಗಳನ್ನು ತಡೆಗಟ್ಟಲು ಚಾಲನಾ ಪರವಾನಿಗೆ ಹಾಗೂ ಡಿಎಲ್ ನವೀಕರಣಕ್ಕೆ ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಾಧ್ಯತೆ ಇದೆ.

ವಿಮಾನ ಪ್ರಯಾಣಕ್ಕೂ ಆಧಾರ್ ಕಡ್ಡಾಯ!

English summary

Now, Aadhaar for getting on a plane?

The government has asked IT major Wipro to develop a blueprint for Aadhaar-based biometric access to flyers at all airports across India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X