For Quick Alerts
ALLOW NOTIFICATIONS  
For Daily Alerts

ಎಚ್‌-1ಬಿ ವೀಸಾ ನೀತಿ ಬದಲಾವಣೆ ಭಾರತೀಯ ಉದ್ಯೋಗಿಗಳಿಗೆ ಲಾಭ

By Siddu
|

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್‌-1ಬಿ ವೀಸಾ ಬಿಲ್ ನೀತಿಯಲ್ಲಿ ಬದಲಾವಣೆ ತರಲು ಮುಂದಾಗಿರುವುದರಿಂದ ಅಮೆರಿಕದಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.

ಹೊಸ ವೀಸಾ ನೀತಿಯಿಂದಾಗಿ ಅಮೆರಿಕದಲ್ಲಿರುವ ತಾಂತ್ರಿಕ ಕಂಪೆನಿ ಮತ್ತು ಹೊರಗುತ್ತಿಗೆ ಸೇವಾ ವೆಚ್ಚಗಳು ಹೆಚ್ಚಳವಾಗಲಿದೆ ಎಂದು ಬನ್ಯನ್ ಟ್ರೀ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಸ್ಥಾಪಕರಾಧ ಇಗ್ನೀಷಿಯಸ್ ಚಿತೆಲೆನ್ ಹೇಳಿದ್ದಾರೆ. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

ವಾರ್ಷಿಕ ವೆಚ್ಚ ಹೆಚ್ಚಳ
 

ವಾರ್ಷಿಕ ವೆಚ್ಚ ಹೆಚ್ಚಳ

ಟ್ರಂಪ್ ಜಾರಿ ಮಾಡುತ್ತಿರುವ ಹೊಸ ನೀತಿಯಿಂದಾಗಿ ವಾರ್ಷಿಕ ವೆಚ್ಚ 2.6ಬಿಲಿಯನ್ ಅಮೆರಿಕನ್‌ ಡಾಲರ್‌ (ಸುಮಾರು ರೂ. 260 ಕೋಟಿ) ಹೆಚ್ಚಾಗಲಿದ್ದು, ವೀಸಾ ಹೊಂದಿರುವವರಿಗೆ ವಾರ್ಷಿಕ ವೇತನದಲ್ಲಿ ಸುಮಾರು ರೂ. 64.30 ಲಕ್ಷ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.

ಜಾರಿ ಯಾವಾಗ?

ಹೊಸ ನೀತಿ ಪ್ರಮುಖ ಕಂಪೆನಿಗಳಿಗೆ ಅನ್ವಯಿಸಲಿದೆ. ಮುಂದಿನ ನವೆಂಬರ್‌ನಲ್ಲಿ ಹೊಸ ನೀತಿ ಜಾರಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಹೆಚ್ಚು ಸಂಬಳ

ಎಚ್‌-1ಬಿ ವೀಸಾ ಈ ಹೊಸ ನಿಯಮ ಜಾರಿಯಾದಲ್ಲಿ ಹೆಚ್ಚು ಕೌಶಲ್ಯ ಭರಿತ ಉದ್ಯೋಗಿಗಳಿಗೆ ವೀಸಾ ನೀಡಲಾಗುತ್ತದೆ. ಉನ್ನತ ಪದವಿ ಪಡೆದವರು ಮತ್ತು ಭಾರತದಲ್ಲಿ ಕೌಶಲ ನೌಕರಿಯಲ್ಲಿ ಇರುವವರು ಹೆಚ್ಚಾಗಿ ಅರ್ಜಿ ಸಲ್ಲಿಸಲಿದ್ದಾರೆ. ಇಂತಹ ಉದ್ಯೋಗಿಗಳಿಗೆ ಹೆಚ್ಚು ಸಂಬಳ ಇರುವಂತ ಉನ್ನತ ಹುದ್ದೆಗಳು ಸಿಗಲಿವೆ ಎಂದಿದ್ದಾರೆ.

ಹೊಸ ಬಿಲ್ ನಲ್ಲಿ ಏನಿತ್ತು?
 

ಹೊಸ ಬಿಲ್ ನಲ್ಲಿ ಏನಿತ್ತು?

ಹೊಸ ಬಿಲ್ ಪ್ರಕಾರ ಮೊದಲಿನದಕ್ಕಿಂತ ಎರಡು ಪಟ್ಟು ಸಂಬಳವನ್ನು ಹೆಚ್ಚಿಸಲಾಗುವುದು. 1989ರಿಂದ ಇಲ್ಲಿಯವರೆಗೆ 60,000 ಡಾಲರ್ ಸಂಬಳ ಇತ್ತು. ಈಗ ಅದನ್ನು 130,000 ಡಾಲರ್ ಗೆ ಏರಿಕೆ ಮಾಡಲಾಗಿದೆ. ಅಂದರೆ ಮೊದಲಿನ ಎರಡರಷ್ಟು ಹೆಚ್ಚಿಸಲಾಗಿದೆ. H1-B ವೀಸಾದ ಪ್ರಕಾರ ವಿದೇಶಿಯರು ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದರು. ಆದರೆ ಎಚ್-1ಬಿ ಹೊಸ ನೀತಿ ಪ್ರಕಾರ ಈ ಉದ್ಯೋಗವನ್ನು ಸ್ಥಳಿಯರಿಗೆ ಕೊಡಬೇಕು ಎನ್ನುವುದು ಟ್ರಂಪ್ ವಾದ ಆಗಿತ್ತು.

H1-B ವೀಸಾ ಏನು?

ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ ಆಗಿತ್ತು. (Read More: ಎಚ್‌-1ಬಿ ವೀಸಾ)

English summary

H-1B Visa Changes Could Benefit Indian IT Professionals: Expert

US President Donald Trump's proposed changes to the H-1B visa programme may end up benefiting Indian IT professionals in terms of higher wages, the founder of a leading asset management company has said.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more