For Quick Alerts
ALLOW NOTIFICATIONS  
For Daily Alerts

ಎಚ್-1ಬಿ ವೀಸಾ ಎಫೆಕ್ಟ್: ಇನ್ಫೋಸಿಸ್ ನಿಂದ 10 ಸಾವಿರ ಉದ್ಯೋಗ

By Siddu
|

H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

ಡೊನಾಲ್ಡ್ ಟ್ರಂಪ್ ಅವರ ಎಚ್-1ಬಿ ವೀಸಾ ಹೊಸ ನೀತಿಯ ಎಫೆಕ್ಟ್ ಹೇಗಿದೆ ನೋಡಿ. ಈಗಾಗಲೇ ಇದು ಹಲವು ದೇಶಗಳ ಮೇಲೆ ಅದರಲ್ಲೂ ಭಾರತೀಯ ಐಟಿ ಕಂಪನಿಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಇದರ ಪರಿಣಾಮ ಹೊರಗುತ್ತಿಗೆ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ಕೊಡುವಂತಾಗಿದೆ. ಇನ್ಫೋಸಿಸ್ ಮುಂಬರುವ ತಿಂಗಳುಗಳಲ್ಲಿ ನೇಮಕಾತಿ ಮಾಡಲಿರುವ ಬಗ್ಗೆ ವಿವರ ಇಲ್ಲಿದೆ ನೋಡಿ...(ಎಚ್-1ಬಿ ವೀಸಾ)

4 ತಾಂತ್ರಿಕ ಕೇಂದ್ರಗಳ ಸ್ಥಾಪನೆ
 

4 ತಾಂತ್ರಿಕ ಕೇಂದ್ರಗಳ ಸ್ಥಾಪನೆ

ಸ್ಥಳಿಯರಿಗೆ ಉದ್ಯೋಗ ನೀಡುವುದಕ್ಕೆ ಪೂರಕವಾಗಿ ನಾಲ್ಕು ತಾಂತ್ರಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಸಂಸ್ಥೆ ಉದ್ದೇಶಿಸಿದೆ. ಈ ಬಗ್ಗೆ ಕಂಪೆನಿ ಅಮೆರಿಕಾದ ಇಂಡಿಯಾನಾ ರಾಜ್ಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಕೇಂದ್ರಗಳ ಉದ್ದೇಶ

ಗ್ರಾಹಕರಿಗೆ ಹಣಕಾಸು ಸೇವೆ, ಉತ್ಪಾದನೆ, ಆರೋಗ್ಯ ಸೇವೆ, ಚಿಲ್ಲರೆ, ಇಂಧನ ಹೀಗೆ ಹಲವು ಕ್ಷೇತ್ರಗಳಲ್ಲಿ ನೆರವು ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಆರ್ಟ್ ಫಿಶಿಯಲ್ ಇಂಟೆಲಿಜೆನ್ಸ್, ಯಂತ್ರ ಕಲಿಕೆ, ದಾಖಲೆಗಳ ಕುರಿತು ನಾವೀನ್ಯತೆ ಮತ್ತು ಅಭಿವೃದ್ಧಿ ಹೀಗೆ ಹಲವಾರು ಉದ್ದೇಶಗಳನ್ನು ಹೊಂದಿದೆ.

ತಂತ್ರಜ್ಞರ ಆಯ್ಕೆ ಹೇಗೆ?

ಇನ್ಫೋಸಿಸ್ ನೇಮಕ ಮಾಡಲಿರುವ 10 ಸಾವಿರ ಉದ್ಯೋಗಿಗಳಲ್ಲಿ ಅನುಭವಿ ತಂತ್ರಜ್ಞರು, ಪದವೀಧರರಿಗೆ ಮೊದಲ ಆದ್ಯತೆ. ಆಯ್ಕೆಯಾಗುವವರಿಗೆ ಕ್ಲೌಡ್‌, ಬಿಗ್‌ ಡೇಟಾ, ಡಿಜಿಟಲ್‌, ಕಂಪ್ಯೂಟರ್‌ ವಿಜ್ಞಾನ, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಉದ್ದೇಶ ಕೂಡ ಸಂಸ್ಥೆಗಿದೆ.

ಟ್ರಂಪ್ ಎಫೆಕ್ಟ್
 

ಟ್ರಂಪ್ ಎಫೆಕ್ಟ್

ಎಚ್‌-1ಬಿ ವೀಸಾ ನೀತಿ ಮೂಲಕ ವಿದೇಶೀಗರಿಗೆ ಉದ್ಯೋಗಾವಕಾಶಗಳನ್ನು ನೀಡುತಿದ್ದ ಹೊರಗುತ್ತಿಗೆ ಸಂಸ್ಥೆಗಳು ಡೊನಾಲ್ಡ್‌ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದವು. ಹೀಗಾಗಿ ಅವರ ಆಡಳಿತದ ಮನ ಗೆಲ್ಲಲು ಇನ್ಫೋಸಿಸ್ ಮುಂದಾಗಿದೆ ಎನ್ನಲಾಗಿದೆ. ಡೊನಾಲ್ಡ್ ಟ್ರಂಪ್ ಅವರ ಎಚ್-1ಬಿ ವೀಸಾ ಹೊಸ ನೀತಿಯ ಪರಿಣಾಮವೇ ಈ ಬೆಳವಣಿಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

2 ಸಾವಿರ ಉದ್ಯೋಗ

ಇನ್ಫೋಸಿಸ್ ಮೊದಲ ಘಟಕ ಆಗಸ್ಟ್ ನಲ್ಲಿ ಇಂಡಿಯಾನಾದಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ. ಇಲ್ಲಿ 2021ರ ವೇಳೆಗೆ 2,000 ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ನಿರೀಕ್ಷೆಯಿದೆ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.

ಸ್ಥಳೀಯರ ನೇಮಕಕ್ಕೆ ಕಾರಣ

ಅಮೆರಿಕದ ಸ್ಥಳಿಯರ ನೇಮಕಕ್ಕೆ ನೇರವಾದ ಕಾರಣ ಟ್ರಂಪ್ ಎಚ್-1ಬಿ ವೀಸಾ ನೀತಿ ಎಫೆಕ್ಟ್. ಟ್ರಂಪ್ ವೀಸಾ ಪಡೆಯುವುದರ ಮೇಲೆ ನಿರ್ಬಂಧ ಹೇರಿದ್ದಾರೆ. ಇದರ ಪರಿಣಾಮವಾಗಿ ಅಮೆರಿಕಾಗೆ ಉದ್ಯೋಗಿಗಳನ್ನು ಹೊರದೇಶಗಳಿಂದ ಕಳಿಸುವುದು ಹೊರಗುತ್ತಿಗೆ ಸಂಸ್ಥೆಗಳಿಗೆ ದುಬಾರಿಯಾಗಿದೆ. ಈ ಕಾರಣಕ್ಕಾಗಿಯೇ ಸ್ಥಳೀಯ ತಂತ್ರಜ್ಞರನ್ನು ನೇಮಕ ಮಾಢಲು ಇನ್ಫೊಸಿಸ್ ಮುಂದಾಗಿದೆ.

ಏನಿದು H1-B ವೀಸಾ?

ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ಹೊಗುತ್ತಿಗೆ ಕಂಪನಿಗಳ ಮೂಲಕ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಆದರೆ ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಹೊಸ ಬಿಲ್ ನಲ್ಲಿ ಏನಿದೆ?

ಹೊಸ ಬಿಲ್ ಪ್ರಕಾರ ಮೊದಲಿನದಕ್ಕಿಂತ ಎರಡು ಪಟ್ಟು ಸಂಬಳವನ್ನು ಹೆಚ್ಚಿಸಲಾಗುವುದು. 1989ರಿಂದ ಇಲ್ಲಿಯವರೆಗೆ 60,000 ಡಾಲರ್ ಸಂಬಳ ಇತ್ತು. ಈಗ ಅದನ್ನು 130,000 ಡಾಲರ್ ಗೆ ಏರಿಕೆ ಮಾಡಲಾಗಿದೆ. ಅಂದರೆ ಮೊದಲಿನ ಎರಡರಷ್ಟು ಹೆಚ್ಚಿಸಲಾಗಿದೆ. H1-B ವೀಸಾದ ಪ್ರಕಾರ ವಿದೇಶಿಯರು ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದರು. ಆದರೆ ಇದೀಗ ಹೊಸ ನೀತಿ ಪ್ರಕಾರ ಈ ಉದ್ಯೋಗವನ್ನು ಸ್ಥಳಿಯರಿಗೆ ಕೊಡಬೇಕು ಎನ್ನುವುದು ಟ್ರಂಪ್ ವಾದ ಆಗಿದೆ. ಅಮೆರಿಕ ಆರೋಪ: ಟಿಸಿಎಸ್, ಇನ್ಫೊಸಿಸ್, ಕಾಗ್ನಿಜೆಂಟ್ ಎಚ್‌-1ಬಿ ವೀಸಾ ದುರ್ಬಳಕೆ!

English summary

H1-B Visa Impact: Infosys To Hire 10,000 Americans

IT firm Infosys will hire 10,000 Americans in the next two years and open four centers in the US in a bid to woo the Trump administration, which has been critical of outsourcing firms for unfairly taking jobs away from US workers.
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more