For Quick Alerts
ALLOW NOTIFICATIONS  
For Daily Alerts

ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

By Siddu Thoravat
|

ಜಗತ್ತಿನ ನೂರಾರು ಪ್ರಮುಖ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಲೇ ಇವೆ. ಕಳೆದ 2016ನೇ ಸಾಲಿನಲ್ಲಿ ಹಲವು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಇದಕ್ಕೆ ಭಾರತವೇನೂ ಹೊರತಾಗಿಲ್ಲ. ಪ್ರಸ್ತುತ ಸಾಲಿನಲ್ಲೂ ಭಾರತದ ದೊಡ್ಡ ದೊಡ್ಡ ಕಂಪನಿಗಳು ನೌಕರರನ್ನು ಕಿತ್ತೊಗೆಯಲು ಮುಂದಾಗಿವೆ. ಇದು ಉದ್ಯೋಗಿಗಳಲ್ಲಿ ಭಯವನ್ನುಂಟು ಮಾಡಿರುವುದು ಸಹಜ. ಟ್ರಂಪ್ ಎಚ್-1 ಬಿ ವೀಸಾ ನೀತಿಯ ಪರಿಣಾಮ ಕೂಡ ಎಲ್ಲಾ ಕಂಪನಿಗಳಿಗೆ ತಟ್ಟಿದೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

ಉದ್ಯೋಗ ಕಡಿತ ಪ್ರಕ್ರಿಯೆ ಭಾರತೀಯ ಐಟಿ ಮತ್ತು ನಾನ್ ಐಟಿ ಉದ್ಯೋಗಿಗಳ ಪಾಲಿಗಂತು ಇದು ಕಠಿಣ ಸಮಯವಾಗಿದ್ದು, ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಲವಾರು ಐಟಿ ಮತ್ತು ಟೆಲಿಕಾಂ ಕಂಪನಿಗಳು ಉದ್ಯೋಗಿಗಳನನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. 2017ರಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿ ಉದ್ಯೋಗಿಗಳಲ್ಲಿ ಆತಂಕವನ್ನುಂಟು ಮಾಡಿರುವ 10 ಕಂಪನಿಗಳ ವಿವರ ಇಲ್ಲಿದೆ ನೋಡಿ.....

1. ಕಾಗ್ನಿಜಂಟ್
 

1. ಕಾಗ್ನಿಜಂಟ್

ಯುಎಸ್ ಮೂಲದ ಭಾರತೀಯ ಕಂಪನಿ ಕಾಗ್ನಿಜಂಟ್ ಕಡಿಮೆ ಎಂದರೂ 6000 ಉದ್ಯೋಗ ಕಡಿತ ಮಾಡಲಿದೆ. ಅಧಿಕ ಅಟೋಮೆಷನ್ ಪರಿಣಾಮ ಐಟಿ ಉದ್ಯೋಗಿಗಳ ಮೇಲೆ ಉಂಟಾಗುತ್ತಿರುವುದರಿಂದ ಉದ್ಯೋಗ ಕಡಿತಕ್ಕೆ ನಿರ್ಧರಿಸಿದೆ ಎಂದು ಕಂಪನಿ ಹೇಳಿದೆ. ನಿರ್ದೆಶಕರು, ಸಹಾಯಕ ವಿ.ಪಿ ಗಳು ಮತ್ತು ಹಿರಿಯ ವಿ.ಪಿಗಳಿಗೆ ಕಾಗ್ನಿಜಂಟ್ ವಾಲಂಟರಿ ಸಪರೇಷನ್ ಪ್ರೋಗ್ರಾಂ ಜಾರಿ ಮಾಡಿದೆ. ಕಂಪನಿ 6-9 ತಿಂಗಳ ವೇತನ ನೀಡುವುದಾಗಿ ಹೇಳಿದೆ. 1000ಕ್ಕಿಂತ ಹೆಚ್ಚಿನ ಕಾರ್ಯನಿರ್ವಾಹಕರ ಮೇಲೆ ಈ ಪರಿಣಾಮ ಬೀರಲಿದೆ.

2. ಇನ್ಫೋಸಿಸ್

ದೇಶದ ಮಾಹಿತಿ ತಂತ್ರಜ್ಞಾನ ರಂಗದ ದೈತ್ಯ ಮತ್ತು ಉದ್ಯೋಗಿಗಳ ನೆಚ್ಚಿನ ಕಂಪನಿ ಇನ್ಫೋಸಿಸ್ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ. ಇದು ದ್ವೈವಾರ್ಷಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಹಿರಿಯ ಮತ್ತು ಮಧ್ಯಮ ಮಟ್ಟದ ನೌಕರರನ್ನು ಕಡಿತಗೊಳಿಸಲಿದೆ. ಜಾಬ್ ಲೆವೆಲ್ 6 ಮತ್ತು ಅದಕ್ಕಿಂತ ಮೇಲ್ಪಟ್ಟ ಸುಮಾರು 1000 ಉದ್ಯೋಗಿಗಳು ಕಂಪನಿ ತೊರೆಯಲು ಕೇಳಲಾಗುತ್ತಿದೆ ಎಂದು ನಿರೀಕ್ಷಿಸಲಾಗಿದೆ.

3. ವಿಪ್ರೋ

ದೇಶದ ಇನ್ನೊಂದು ಪ್ರಮುಖ ಐಟಿ ಕಂಪನಿಯಾದ ವಿಪ್ರೋ ಕೂಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯೊಳಗಿರುವ ಹೆಚ್ಚುವರಿ ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಕರನ್ನು ತೆಗೆದು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ. ವಾರ್ಷಿಕ ಮೌಲ್ಯಮಾಪನದ ಭಾಗವಾಗಿ ನೂರಾರು ಉದ್ಯೋಗಿಗಳನ್ನು ವಿಪ್ರೋ ವಜಾ ಮಾಡಲಿದೆ. ಈಗಾಗಲೇ 600 ಉದ್ಯೋಗಿಗಳಿಗೆ ಮನೆ ಬಾಗಿಲು ತೋರಿಸಿದೆ.

4. ಸ್ನ್ಯಾಪ್ ಡೀಲ್
 

4. ಸ್ನ್ಯಾಪ್ ಡೀಲ್

ಪ್ರಮುಖ ಆನ್ಲೈನ್ ಮಾರುಕಟ್ಟೆ ಸಂಸ್ಥೆಯಾದ ಸ್ನ್ಯಾಪ್ ಡೀಲ್ ಫೆಬ್ರವರಿ ಅಂತ್ಯದಲ್ಲಿ ಉದ್ಯೋಗಿಗಳ ವಜಾ ಮಾಡುವುದನ್ನು ದೃಢಪಡಿಸಿದೆ. ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಹೇಳಲು ಸಂಸ್ಥೆ ನಿರಾಕರಿಸಿದೆ. ಆದರೆ ಶೇ. 30ರಷ್ಟು ಉದ್ಯೋಗ ಕಡಿತ ಮಾಡಲಿದೆ ಎಂದು ತಿಳಿಸಿದೆ. ಸುಮಾರು 1000 ಉದ್ಯೋಗ ಕಡಿತದ ಪರಿಣಾಮ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.

5. ಏರಸೆಲ್

ಟೆಲಿಕಾಂ ರಂಗದ ಪ್ರಮುಖ ಕಂಪನಿಯಾಗಿರುವ ಏರಸೆಲ್ ರಿಲಯನ್ಸ್ ಕಮ್ಯೂನಿಕೆಷನ್ ಜತೆ ವಿಲೀನವಾದ ಹಿನ್ನೆಲೆಯಲ್ಲಿ 700 ಉದ್ಯೋಗಿಗಳ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 10% ಉದ್ಯೋಗ ಕಡಿತ ಮಾಡಲಿದೆ. ಏರಸೆಲ್ ಕಂಪನಿ ಭಾರತದಲ್ಲಿ ಸುಮಾರು 8000 ಉದ್ಯೋಗಿಗಳನ್ನು ಹೊಂದಿದೆ.

6. ಟಾಟಾ ಟೆಲಿಸರ್ವಿಸ್

ದೇಶದ 19 ಟೆಲಿಕಾಂ ವಲಯಗಳಲ್ಲಿ ಟಾಟಾ ಟೆಲಿಸರ್ವಿಸ್ ವಿಸ್ತರಿಸಿದೆ. ಇದು 500-600 ಉದ್ಯೋಗಿಗಳನ್ನು ವಜಾ ಮಾಡಲಿದೆ. ಟೆಲಿಕಾಂ ಕ್ಷೆತ್ರದಲ್ಲಿರುವ ಅತಿಯಾದ ಸ್ಪರ್ಧೆಯ ಕಷ್ಟಕರ ಸಮಯ ಇದಕ್ಕೆ ಕಾರಣವಾಗಿದೆ. ಬೇರೆ ಬೇರೆ ನಗರಗಳಲ್ಲಿನ ಉದ್ಯೋಗಿಗಳ ಮೇಲೆ ಈ ಪರಿಣಾಮ ಉಂಟಾಗಲಿದೆ.

7. ಟೆಕ್ ಮಹಿಂದ್ರಾ

ತನ್ನ ಆದಾಯದ ಮೂಲಕ ಭಾರತೀಯ ಐಟಿ ಸಂಸ್ಥೆಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಟೆಕ್ ಮಹಿಂದ್ರಾ ವಾರ್ಷಿಕ ಪ್ರದರ್ಶನ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮುಂಬಯಿ ಮೂಲದ ಈ ಕಂಪೆನಿ ಎಷ್ಟು ನೌಕರರನ್ನು ಕೈಬಿಡಲಿದೆ ಎಂದುಅಧಿಕೃತವಾಗಿ ಹೇಳಿಲ್ಲ.ಆದರೆ ನೂರರ ಗಡಿ ದಾಟಲಿದೆಎಂದು ಮೂಲಗಳು ಸೂಚಿಸಿವೆ. ಕಂಪನಿಯು ಡಿಸೆಂಬರ್ 2016ರ ಕೊನೆಯಲ್ಲಿ 1.17 ಲಕ್ಷ ನೌಕರರನ್ನು ಹೊಂದಿತ್ತು.

8. ಕ್ಯಾಪ್ ಜೆಮಿನಿ

ಫ್ರಾನ್ಸ್ ಮೂಲದ ಐಟಿ ಸೇವಾ ಕಂಪನಿ ಕ್ಯಾಪ್ ಜೆಮಿನಿ ತನ್ನ 35 VP, SVPs, ನಿರ್ದೇಶಕರು ಮತ್ತು ಹಿರಿಯ ನಿರ್ದೇಶಕರನ್ನು ಕೆಲಸ ಬೀಡುವಂತೆ ಫೆಬ್ರವರಿಯಲ್ಲಿ ಕೇಳಿಕೊಂಡಿದೆ. ಮುಂಬೈನ ಒಂದು ಆಫೀಸ್ ನಲ್ಲಿ 200 ಜನರಿಗೆ ಕೆಲಸ ಬೀಡುವಂತೆ ಕೇಳಿದೆ. ಒಂದು ವರದಿ ಪ್ರಕಾರ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಲು ನಿರೀಕ್ಷಿಸಿದೆ.

9. DXC ಟೆಕ್ನಾಲಜಿ

DXC ಟೆಕ್ನಾಲಜಿ ಕಂಪನಿ ಕೂಡ ಮೂರು ವರ್ಷದ ಯೋಜನೆ ಮಧ್ಯೆ ಹಲವಾರು ನೌಕರರನ್ನು ಕಡಿತ ಮಾಡುವ ಬಗ್ಗೆ ಚಿಂತಿಸಿದೆ. DXC ಕಂಪನಿ ತನ್ನ ಒಟ್ಟು 1,70,000 ಉದ್ಯೋಗಿಗಳ ಪೈಕಿ 10,000 ಉದ್ಯೋಗಿಗಳಿಗೆ ಈ ವರ್ಷ ಕೆಲಸ ಬಿಡುವಂತೆ ತಿಳಿಸಿದೆ.

10. ಟಿಸಿಎಸ್

ದೇಶದ ಅತಿದೊಡ್ಡ ಐಟಿ ಉದ್ಯೋಗದಾತ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್(TCS) 3,90,000 ಉದ್ಯೋಗಿಗಳನನ್ಉ ಹೊಂದಿದೆ. ಈ ಕಂಪನಿ ತನ್ನ ಉದ್ಯೋಗಿಗಳಿಗೆ ಈ ವರ್ಷ ಕೆಲಸ ಬಿಡುವಂತೆ ಕೇಳಿಕೊಂಡಿಲ್ಲ ಎಂದು ತಿಳಿದುಬಂದಿದೆ.

English summary

These10 Companies Are Cutting Jobs In India

It seems tough times for IT and non-IT employees in the country. Many large IT and telecom companies are in the process of laying off employees. Here are seven companies that are preparing for layoffs.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more