For Quick Alerts
ALLOW NOTIFICATIONS  
For Daily Alerts

ಮಾಹಿತಿ ತಂತ್ರಜ್ಞಾನ(I.T) ವಲಯದಲ್ಲಿ 2 ಲಕ್ಷ ಉದ್ಯೋಗ ಕಡಿತ!

By Siddu
|

ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ಮೇಲಿಂದ ಮೇಲೆ ಅಘಾತಕಾರಿ ಸುದ್ದಿಗಳು ನಡುಕ ಹುಟ್ಟಿಸುತ್ತಿದ್ದು, ಇದೀಗ ಹೆಡ್‌ ಹಂಟರ್ಸ್ ಇಂಡಿಯಾ ಸಂಸ್ಥೆಯ ವರದಿ ಗಾಯದ ಮೇಲೆ ಬರೆ ಎಳೆದಂತಾಗಿದೆ!

ಕಳೆದ 2016ನೇ ಸಾಲಿನಲ್ಲಿ ಹಲವು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಉದ್ಯೋಗ ಕಡಿತ ಪ್ರಕ್ರಿಯೆ ಭಾರತೀಯ ಐಟಿ ಮತ್ತು ನಾನ್ ಐಟಿ ಉದ್ಯೋಗಿಗಳ ಪಾಲಿಗಂತು ನುಂಗಲಾಗದ ತುತ್ತಾಗಿದೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

2 ಲಕ್ಷ ಉದ್ಯೋಗ ಕಡಿತ
 

2 ಲಕ್ಷ ಉದ್ಯೋಗ ಕಡಿತ

ಮುಂದಿನ ಮೂರು ವರ್ಷಗಳಲ್ಲಿ 1.75 ಲಕ್ಷದಿಂದ 2 ಲಕ್ಷದವರೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೆಡ್‌ ಹಂಟರ್ಸ್ ಇಂಡಿಯಾ ಸಂಸ್ಥೆ ಹೇಳಿದೆ. ಈ ಹೇಳಿಕೆ ಐಟಿ ಉದ್ಯೋಗಿಗಳ ಪಾಲಿಗೆ ನುಂಗಲಾಗದ ತುತ್ತೆ ಸರಿ. ಅಲ್ಲದೇ ಈಗಾಗಲೇ ಇನ್ಫೋಸಿಸ್, ವಿಪ್ರೋ., ಕಾಗ್ನಿಜಂಟ್, ಸ್ನ್ಯಾಪ್ಡೀಲ್, ಟಾಟಾ ಟೆಲಿಸರ್ವಿಸಸ್, ಏರಸೆಲ್ ನಂತಹ ಹಲವು ಕಂಪನಿಗಳು ಉದ್ಯೋಗ ಕಡಿತದ ಬಗ್ಗೆ ಅಧಿಕೃತವಾಗಿ ಹೇಳಿವೆ.

ಕೆಲಸ ಕಳೆದುಕೊಳ್ಳಲು ಕಾರಣ

ಕೆಲಸ ಕಳೆದುಕೊಳ್ಳಲು ಕಾರಣ

ಈಗಂತೂ ತಂತ್ರಜ್ಞಾನ ತುಂಬಾ ಮುಂದುವರೆಯುತ್ತಿದೆ. ಹೀಗಾಗಿ ಕ್ಲೌಡ್‌ನಂತಹ ಹೊಸ ತಂತ್ರಜ್ಞಾನಗಳಿಗೆ 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಿಬ್ಬಂದಿಗಳಿಗೆ ಕ್ಲೌಡ್‌ನಂತಹ ಹೊಸ ತಂತ್ರಜ್ಞಾನ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಅಂತಹ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ಈ ವರ್ಷ ಎಷ್ಟು?

ಈ ವರ್ಷ ಎಷ್ಟು?

ಸುಮಾರು 56,000 ಐಟಿ ಉದ್ಯೋಗಿಗಳು ಈ ವರ್ಷ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಕರು ಮತ್ತು ಮಾದ್ಯಮಗಳು ವರದಿ ಮಾಡಿದ್ದವು. ಆದರೆ ವಾಸ್ತವದಲ್ಲಿ ಪ್ರತಿ ವರ್ಷ 1.75-2 ಲಕ್ಷ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೆಡ್‌ ಹಂಟರ್ಸ್ ಇಂಡಿಯಾ ಹೇಳಿದೆ.

ಮ್ಯಾಕ್‌ ಕಿನ್ಸ್ ಆಂಡ್‌ ಕಂಪೆನಿ ವರದಿ
 

ಮ್ಯಾಕ್‌ ಕಿನ್ಸ್ ಆಂಡ್‌ ಕಂಪೆನಿ ವರದಿ

ಮುಂಬರುವ 3-4 ವರ್ಷಗಳಲ್ಲಿ ಭಾರತದ ಐಟಿ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ಅಪ್ರಸ್ತುತವಾಗಲಿದ್ದು, ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಜಾಗತಿಕ ಸಮೀಕ್ಷಾ ಸಂಸ್ಥೆ ಮ್ಯಾಕ್‌ ಕಿನ್ಸ್ ಆಂಡ್‌ ಕಂಪೆನಿ ಫೆಬ್ರುವರಿಯಲ್ಲಿ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಲೀಡರ್‌ಶಿಪ್‌ ಫೋರಂಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ.

39 ಲಕ್ಷ ಉದ್ಯೋಗಿಗಳಿದ್ದಾರೆ!

39 ಲಕ್ಷ ಉದ್ಯೋಗಿಗಳಿದ್ದಾರೆ!

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅಂದಾಜು 39 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ನೂತನ ತಂತ್ರಜ್ಞಾನಗಳ ತರಬೇತಿ ಅಗತ್ಯವಿದೆ. ಅದಾಗ್ಯೂ, ಶೇ 30-40ರಷ್ಟು ಉದ್ಯೋಗಿಗಳನ್ನು ಮುಂದುವರಿಸುವುದು ಅಸಾಧ್ಯವಾಗಲಿದೆ. ಬೆಂಗಳೂರು, ಕೊಯಮಂತ್ತೂರ್ ಮತ್ತು ಮುಂಬೈನಂತಹ ಮಹಾನಗರಗಳ ಉದ್ಯೋಗಿಗಳಿಗಿಂತ ಕೊಯಮತ್ತೂರು ಹಾಗೂ ಕೆಲ ದೂರದ ನಗರಗಳಲ್ಲಿನ ನೌಕರರು ಉದ್ಯೋಗ ಕಳೆದುಕೊಳ್ಳಬಹುದು ಎಂದು ಕೆ. ಲಕ್ಷ್ಮೀಕಾಂತ್ ತಿಳಿಸಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

English summary

2 lakh IT employees to lose jobs annually in the next 3 years

Executive search firm Head Hunters India today said the job cuts in IT sector will be between 1.75 lakh and 2 lakh annually for next three years due to under-preparedness in adapting to newer technologies.
Story first published: Monday, May 15, 2017, 15:29 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more