For Quick Alerts
ALLOW NOTIFICATIONS  
For Daily Alerts

ಎಚ್ಚರಗೊಳ್ಳಿ..! 3ನೇ ಮಹಾಯುದ್ದ ಪ್ರಾರಂಭವಾಗಿದೆ...!?

By Siddu
|

ಒಂದು ಜಾಗತಿಕ ವಿಚಾರದ ಪ್ರಕಾರ ಈಗಾಗಲೇ ಮೂರನೇ ಮಹಾಯುದ್ದ ಪ್ರಾರಂಭವಾಗಿದೆ... ಹೌದಾ..? ಅದು ಹೇಗೆ ಅನ್ನೋ ಪ್ರಶ್ನೆ ಮೂಡುವುದು ಸಹಜ. ಯುದ್ದಗಳಿಗಾಗಿ ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದ ಮೇಲೆ ಅಣುಬಾಂಬ್ ದಾಳಿಯನ್ನೆ ಮಾಡಬೇಕೆಂದೆನಿಲ್ಲ..! ಹಾಗಾದ್ರೆ ಅದು ಹೇಗೆ ಸಾಧ್ಯ?? ಇದು ಮತ್ತೆ ಮೂಡುವ ಮರು ಪ್ರಶ್ನೆ....

ಮೂರನೇ ಮಹಾಯುದ್ದ ಶುರುವಾಗಿದೆ.. ಇದು ಬರೀಯ ಮಾತಲ್ಲ ದೇವಮಾನವರ, ಅರ್ಥಶಾಸ್ತ್ರಜ್ಞರ, ಪಂಡಿತರ, ವಿಜ್ಞಾನಿಗಳ, ಜ್ಯೋತಿಷ್ಯಿಗಳ ಲೆಕ್ಕಾಚಾರ. ಈ ಲೆಕ್ಕಚಾರ ಸತ್ಯ ಎನ್ನುವುದರಲ್ಲಿ ಸಂಶಯ ಕೂಡ ಇಲ್ಲ. ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?

ಏನಿದು 3ನೇ ಮಹಾಯುದ್ದ?
 

ಏನಿದು 3ನೇ ಮಹಾಯುದ್ದ?

ಒಂದು ದೇಶ ಇನ್ನೊಂದು ದೇಶದ ಮೇಲೆ ದಾಳಿ ಮಾಡುವುದು ಒಂದೇಡೆಯಾದರೆ, ಒಂದು ರಾಷ್ಟ್ರ ತನ್ನ ಸರಕುಗಳನ್ನು ಮಾರಾಟ ಮಾಡುವುದರಲ್ಲಿ ಜಗತ್ತಿನಾದ್ಯಂತ ಏಕಸ್ವಾಮ್ಯ ಸ್ಥಾಪಿಸುವುದು ಕೂಡ ಮಹಾಯುದ್ದ. ಇದನ್ನು ಆರ್ಥಿಕ ಯುದ್ದ(Economic War) ಎನ್ನಲಾಗುತ್ತದೆ. ಅಂದರೆ ಇಡೀಯ ಜಗತ್ತಿನ ಮಾರುಕಟ್ಟೆಯನ್ನು ತನ್ನ ವಸ್ತುಗಳ ಮೂಲಕ ಆವರಿಸಿ ತನ್ನ ಕೆನ್ನಾಲಗೆಯನ್ನು ಜಗತ್ತಿನಗಲ ಪಸರಿಸಿ ಅಧಿಪತ್ಯ ಸಾಧಿಸುವುದು. ಈ ನಿಟ್ಟಿನಲ್ಲಿ ಚೈನಾ ಈಗಾಗಲೇ ದಾಪುಗಾಲು ಇಟ್ಟಿದೆ. ಜತೆಗೆ ಆಗಾಗ ಕಾಡುತ್ತಿರುವ ಇಡೀ ಜಗತ್ತನ್ನೇ ಬಿಚ್ಚಿ ಬೀಳಿಸುವ ಸೈಬರ್ ದಾಳಿಗಳು ಕೂಡ ಯಾವುದೇ ಮಹಾಯುದ್ದಗಳಿಗಿಂತ ಕಡಿಮೆಯಲ್ಲ..! ಇಂತಹ ಯುದ್ದಗಳು ದೇಶಗಳ ಆಂತರಿಕ ಭದ್ರತೆ, ತಂತ್ರಾಂಶ, ಆರ್ಥಿಕ ಸ್ಥಿರತೆ, ಹಣಕಾಸು ವ್ಯವಸ್ಥೆಯನ್ನೇ ಬುಡಮೇಲು ಮಾಡಿ ದೇಶದ ಆರ್ಥವ್ಯವಸ್ಥೆಗೆ ಕೊಡಲಿಪೆಟ್ಟು ಕೊಟ್ಟು ಬುಡಮೇಲೆ ಮಾಡುತ್ತವೆ. ಇದರಿಂದ ಉಂಟಾಗುವ ಆರ್ಥಿಕ ಮತ್ತು ತಾಂತ್ರಿಕ ನಷ್ಟ ಅಷ್ಟಿಷ್ಟಲ್ಲ.

ದಾರ್ಶನಿಕರ ಭವಿಷ್ಯ!

ಹೌದು., ವಿಶ್ವದಲ್ಲಿ ಅಶಾಂತಿ, ಗದ್ದಲ ಮತ್ತು ಯುದ್ದಗಳಾಗುವ ಸಾಧ್ಯತೆಗಳಿದೆ ಎಂದು ಕಳೆದ ದಸರಾ ಹಬ್ಬದ ಮೈಲಾರದ ಕಾರ್ಣಿಕೋತ್ಸವದ ಸಂದರ್ಭದಲ್ಲಿ ಕಾರ್ಣಿಕರು ಭವಿಷ್ಯ ನುಡಿದಿದ್ದರು.

ಅಮೆರಿಕಾದ ಸ್ವಯಂಘೋಷಿತ ದೇವಮಾನವರೊಬ್ಬರು ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಮಹಾಯುದ್ದ ಆರಂಭವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದರು. ವಿಶ್ವದ ಅನೇಕ ಬಲಾಢ್ಯ ದೇಶಗಳ (ಅಮೆರಿಕಾ, ರಷ್ಯಾ ಮತ್ತು ಕೊರಿಯಾ) ನಡುವೆ ನಡೆಯಲಿರುವ ಮೂರನೇ ಮಹಾಯುದ್ದಕ್ಕೆ ಚೀನಾದಂತ ಇತರ ದೇಶಗಳೂ ಕೈಜೋಡಿಸುವ ಮೂಲಕ ಜನಜೀವನ ಭೀಕರ ನರಕವಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದಾರೆ.

ಏಪ್ರಿಲ್ 23ರಂದು ಭವಿಷ್ಯ ನುಡಿದಿದ್ದ ದಾರ್ಶನಿಕರೊಬ್ಬರೂ ಇಪ್ಪತ್ತು ದಿನಗಳಲ್ಲಿ ಅಂದರೆ ಮೇ 13ರಂದು ಮೂರನೇ ಮಹಾಯುದ್ದ ಆರಂಭವಾಗಲಿದೆ ಎಂದು ಹೇಳಿದ್ದರು. ಈ ಯುದ್ದದಲ್ಲಿ ಪರಮಾಣುಗಳ ಬಳಕೆ ಯಥೇಚ್ಚವಾಗಿ ಇರಲಿದೆ ಎಂದಿದ್ದರು.

ಹಾಗಾದ್ರೆ ಇದು ಮುನ್ಸೂಚನೆಯೇ..?

ಏನೇ ಆಗಲಿ, ದಾರ್ಶನಿಕರು ಭವಿಷ್ಯ ನುಡಿದ ಪ್ರಕಾರ ಯುದ್ದ ಆಗುತ್ತದೋ ಅಥವಾ ಇಲ್ಲವೋ ಎರಡನೇ ವಿಚಾರ. ಆದರೆ ಈಗ ಸೈಬರ್ ಯುದ್ಧವಂತೂ ಆರಂಭವಾಗಿದೆ. ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳ ಮೇಲೆ ಮೂರನೇ ಮಹಾಯುದ್ದದಂತೆ ದಾಳಿ ಮಾಡಿಯಾಗಿದೆ.! ಇದರಲ್ಲಿ ಭಾರತ, ಅಮೆರಿಕ, ಇಂಗ್ಲೆಂಡ್, ರಷ್ಯಾ, ಜರ್ಮನಿಯಂತಹ ಪ್ರಮುಖ ದೇಶಗಳು ಒಳಗೊಂಡಿವೆ.

ವಿಶ್ವವೇ ಬೆಚ್ಚಿ ಬಿದ್ದಿದೆ!!
 

ವಿಶ್ವವೇ ಬೆಚ್ಚಿ ಬಿದ್ದಿದೆ!!

ಸೈಬರ್ ಹ್ಯಾಕರ್ ಗಳ ಈ ಭಯಾನಕ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಇನ್ನೇನೂ ಕಾದಿದೆ, ಇದಕ್ಕೆ ಭರಿಸಬೇಕಾಗಿರುವ ನಷ್ಟಗಳೇನು, ಈ ದಾಳಿಯನ್ನು ತಡೆದು ರಕ್ಷಣೆ ಪಡೆಯುವುದಾದರೂ ಹೇಗೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಬೆಂಬಿಡದ ಭೂತದಂತೆ ಕಾಡುತ್ತಿವೆ... ಇಂತಹ ಸಂದರ್ಭದಲ್ಲಿ ಸೈಬರ್ ದಾಳಿ ಏನಿದು? ಯಾರು ಮಾಡ್ತಾರೆ? ಯಾಕ್ ಮಾಡ್ತಾರೆ? ಅವರ ಉದ್ದೇಶಗಳೇನು? ದೇಶಗಳಿಗಾಗುವ ನಷ್ಟಗಳೇನು? ಯಾವ ದೇಶದಲ್ಲಿ ಏನು ಸಮಸ್ಯೆಯಾಗಿದೆ? ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿ ಇರುತ್ತದೆ. ಅಂತಹ ರೋಚಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ದಾಳಿಯಾಗಿದ್ದು ಯಾವಾಗ?

ಇಂತಹ ಸೈಬರ್ ದಾಳಿಗಳೇನು ಹೊಸತಲ್ಲ. Great Hacker War, LulzRaft, Operation Ababil, TV5Monde April, 2015 cyberattack, Vulcanbot, Shamoon, 2007 cyberattacks on Estonia, 2010 cyberattacks on Burma, 2008 cyberattack on United States, Cyber attack during the Paris G20 Summit, GhostNet, Moonlight Maze, OpIsrael, Cyberattacks during the Russo-Georgian War ನಂತಹ ನೂರಾರು ದಾಳಿಗಳು ಈಗಾಗಲೇ ನಡೆದಿವೆ. ಆದರೆ ಈ ವನ್ನಾ ಕ್ರೈ ಎನ್ನುವ ದಾಳಿ ಮಾತ್ರ ಭಯಾನಕ! ಇದು ಮಾಲ್‍ವೇರ್‍ನ 100ಕ್ಕೂ ಹೆಚ್ಚು ದೇಶಗಳ ಕೋಟಿ ಕೋಟಿ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿದೆ. ಶುಕ್ರವಾರ ರಾತ್ರಿಯಿಂದ ಈ ದಾಳಿ ಆರಂಭವಾಗಿದ್ದು, ಬಹುತೇಕ ರಾಷ್ಟ್ರಗಳು ತಲ್ಲಣಗೊಂಡಿವೆ.

ಏನಿದು ವನ್ನಾಕ್ರೈ? ಯಾಕೆ ಅಷ್ಟೊಂದು ಭಯ?

ಇಲ್ಲಿಯವರೆಗೆ ಹ್ಯಾಕರ್‍ಗಳು ಮಾಡಿದ ದಾಳಿಗಳ ಪ್ರಕಾರ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿದ ನಂತರ ಸಿಸ್ಟ್ಂ ನಲ್ಲಿರುವ ಮಾಹಿತಿ, ತಂತ್ರಾಂಶಗಳನ್ನು ಕದಿಯುತ್ತಿದ್ದರು. ಆದರೆ wannacry ransomware ದಾಯಳಿ ವೈಖರಿ ಭಿನ್ನ ಹಾಗೂ ಭಾರೀ ಅಪಾಯಕಾರಿ. ಈ ಮಾಲ್ವೇರ್ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ನಡೆಸಿದರೆ ಮಾಹಿತಿಯನ್ನು ಕದಿಯುವುದರ ಜತೆಗೆ ನಿಮ್ಮ ಸಿಸ್ಟಂನಲ್ಲಿರುವ ದಾಖಲೆಗಳನ್ನು ಲಾಕ್ ಮಾಡಿ ಬಿಡುತ್ತದೆ. ಕಾರಣ, ಹ್ಯಾಕರ್ ಗಳ ದುರುದ್ದೇಶ! ಹೌದು ಹ್ಯಾಕರ್ ಗಳು ಹೇಳಿದ ಸಮಯದೊಳಗೆ, ಕೇಳಿದಷ್ಟು ಹಣವನ್ನು ಪಾವತಿಸದೇ ಇದ್ದರೆ ಈ ದಾಖಲೆಗಳನ್ನೆಲ್ಲ ಪುಡಿಪುಡಿ(ಡಿಲೀಟ್) ಮಾಡಿಬಿಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಾರೆ. ಹೀಗಾಗಿ ಇದು ಮೂರನೇ ಮಹಾಯುದ್ದದ ಮುಖವಾಡವೇ ಎಂಬ ಗೊಂದಲ!!

ದಾಳಿ ನಡೆಸಿದವರು ಯಾರು?

ಈ ವನ್ನಾಕ್ರೈ ಎಂಬ ಕುತಂತ್ರಾಂಶ ಬಳಸಿ ಸೈಬರ್(ಮಾಲ್ವೇರ್) ದಾಳಿ ನಡೆಸಿದವರು ಯಾರು ಎನ್ನುವುದು ಸರಿಯಾಗಿ ತಿಳಿದು ಬಂದಿಲ್ಲ. ಆದರೆ ದಾಳಿ ನಡೆಸಿದ ವ್ಯಕ್ತಿಗಳು ರಾನ್ಸ್‍ಂವೇರ್ ತಂತ್ರಾಂಶ ಬಳಸಿ ಫೈಲ್ ಗಳನ್ನು ಲಾಕ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ವನ್ನಾಕ್ರೈ ದಾಳಿ ಭಾನುವಾರದ ವೇಳೆಗೆ ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ.

ಅಮೆರಿಕಾ ಕಾರಣ!

ಇದೀಗ ಇನ್ನೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು, ಈ ಸೈಬರ್ ದಾಳಿಯ ಬಗ್ಗೆ ಮತ್ತೊಂದು ಮತ್ತು ಮತ್ತಷ್ಟು ಕುತೂಹಲದ ಬಾಗಿಲು ತೆರೆದಿದೆ.!! ಯೆಸ್, ವಿಶ್ವದ ಅನೇಕ ದೇಶಗಳ ಸಂಸ್ಥೆಗಳ ಕಾರ್ಯಚಟುವಟಿಕೆ ಮೇಲೆ ಗೂಢಚರ್ಯೆ ನಡೆಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‌ಎಸ್‌ಎ) ಅಭಿವೃದ್ಧಿಪಡಿಸಿದ್ದ 'ಎಟರ್ನಲ್‌ಬ್ಲೂ' ತಂತ್ರಾಂಶವನ್ನು ಬಳಸಿ ಹ್ಯಾಕರ್‌ಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರೋಕ್ಷವಾಗಿ ಈ ದಾಳಿಗೆ ಅಮೆರಿಕಾ ಕಾರಣವಾಗಿದೆ ಎನ್ನಲಾಗಿದೆ.!! ಆದರೆ ಈ ಆರೋಪವನ್ನು ಅಮೆರಿಕ ಎನ್‍ಎಸ್‍ಎ ನಿರಾಕರಿಸಿದೆ.

ವನ್ನಾಕ್ರೈ ಎಲ್ಲೆಲ್ಲಿ ಸಮಸ್ಯೆಯಾಗಿದೆ?

ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‍ಎಚ್‍ಎಸ್) ಸೇರಿದ 37ಕ್ಕೂ ಆಸ್ಪತ್ರೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ವೈದ್ಯರು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಜಪಾನಿನ ಅಟೋಮೊಬೈಲ್ ಕಂಪೆನಿ ನಿಸ್ಸಾನ್, ಅಮೆರಿಕದ ಅಂಚೆ ಮತ್ತು ಸರಕು ಸಾಗಣೆಯ ಫೆಡ್ ಎಕ್ಸ್ ಕಂಪೆನಿ, ರಷ್ಯಾದ ಕೇಂದ್ರಿಯ ಬ್ಯಾಂಕ್ ಮತ್ತು ದೂರ ಸಂಪರ್ಕಗಳು, ಸ್ಪೇನಿನ ಟೆಲಿಫೋನಿಕಾ ಸೇರಿದಂತೆ ಪ್ರಮುಖ ಕಂಪೆನಿಗಳ ಕಂಪ್ಯೂಟರ್ ಗಳ ಮೇಲೆ ವನ್ನಾಕ್ರೈ ದಾಳಿ ನಡೆದಿದೆ.

ಭಾರತದದಲ್ಲಿ ಎಲ್ಲಿ ವನ್ನಾಕ್ರೈ ದಾಳಿ?

ಆಂಧ್ರಪ್ರದೇಶದ ಪೊಲೀಸ್ ಇಲಾಖೆಯ ಮೇಲೆ ವನ್ನಾ ಕ್ರೈ ಸೈಬರ್ ದಾಳಿ ನಡೆದಿದೆ. ಸುಮಾರು 25 ಪ್ರತಿಶತ ಕಂಪ್ಯೂಟರ್ ಗಳು ಈ ಮಾಲ್‍ವೇರ್ ದಾಳಿಗೆ ತುತ್ತಾಗಿವೆ. ವಿಂಡೋಸ್ ಎಕ್ಸ್ ಪಿ ಆಪರೇಟಿಂಗ್ ಸಿಸ್ಟಮ್ ಬಳಸುವ ಕಂಪ್ಯೂಟರ್ ಗಳು ಹೆಚ್ಚೆಚ್ಚು ತೊಂದರೆಗೆ ಒಳಗಾಗಿವೆ. ದಾಳಿಯ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತಾ, ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಸೆಕ್ಯೂರಿಟಿ ಅಪ್‍ಡೇಟ್ ನೀಡಿದೆ.

ವನ್ನಾಕ್ರೈ ಸೈಬರ್ ಹ್ಯಾಕರ್ ಗಳ ಬೇಡಿಕೆ ಏನು?

ಬಿಟ್‍ಕಾಯಿನ್ ರೂಪದಲ್ಲಿ ತಾವು ತಿಳಿಸಿದ ನಂಬರಿಗೆ 300 ಡಾಲರ್(ಸುಮಾರು ರೂ. 19,000) 3 ದಿನಗಳೊಳಗೆ ಒಳಗಡೆ ನೀಡಬೇಕು. ಈ ಡೆಡ್‍ಲೈನ್ ಮೀರಿದರೆ 6 ದಿನಗಳ ಒಳಗಡೆ 600 ಡಾಲರ್(ಸುಮಾರು 38,500) ನೀಡಬೇಕಾಗುತ್ತದೆ. ಒಂದು ವೇಳೆ ಬೇಡಿಕೆ ಇಟ್ಟ ಹಣ ಪಾವತಿ ಮಾಡದಿದ್ದರೆ ಎಲ್ಲ ದಾಖಲೆಗಳನ್ನು ಡಿಲಿಟ್ ಮಾಡಲಾಗುವುದು ಎಂದು ಹ್ಯಾಕರ್ ಗಳು ಬೆದರಿಕೆ ಹಾಕಿದ್ದಾರೆ.

ಏನಿದು ಬಿಟ್‍ಕಾಯಿನ್?

ಪ್ರತಿ ದೇಶದಲ್ಲಿ ಆಯಾ ಆಯಾ ದೇಶಗಳ ಕರೆನ್ಸಿ ಇರುವ ಹಾಗೆ, ಅಂದರೆ ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರ್ ಇರುವ ಹಾಗೆ ಇಂಟರ್ನೆಟ್‌ನಲ್ಲಿ ಬಿಟ್‍ಕಾಯಿನ್ ಬಳಕೆಯಾಗುತ್ತದೆ. ಈ ಕರೆನ್ಸಿ/ಹಣ ಕಣ್ಣಿಗೆ ಕಾಣುವುದಿಲ್ಲ. ಈ ಬಿಟ್ ಕಾಯಿನ್ ಪರಿಚಯಿಸಿದ ವ್ಯಕ್ತಿ ಯಾರು ಎನ್ನುವುದು ಕೂಡ ತಿಳಿದಿಲ್ಲ. ಇದನ್ನುಸರ್ಕಾರ ಅಥವಾ ಯಾವುದೇ ಬ್ಯಾಂಕ್ ನವರು ನಿಯಂತ್ರಿಸಲು ಆಗುವುದಿಲ್ಲ. ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸಿದವರು ಯಾರು ಎಂಬ ಮಾಹಿತಿ ಕೂಡ ಸಿಗುವುದಿಲ್ಲ.

ಸೈಬರ್ ದಾಳಿ ಕಂಡುಹಿಡಿಯುವುದು ಹೇಗೆ?

ಹ್ಯಾಕರ್ಸ್ ಇ-ಮೇಲ್ ಗಳಿಗೆ ಅಟ್ಯಾಚ್ ಆಗಿ ಈ ಮಾಲ್ವೇರ್ ಹರಿಯಬಿಡುತ್ತಾರೆ. ಈ ಮೇಲ್ ಓಪನ್ ಮಾಡಿದ ತಕ್ಷಣ ಕಂಪ್ಯೂಟರ್ ಮಾತ್ರ ಅಲ್ಲದೇ ನಿಮ್ಮ ಕಂಪ್ಯೂಟರ್ ಜತೆಗೆ ಸಂಪೂರ್ಣ ಡಿನ್ಎಸ್(ಡೊಮೈನ್ ನೇಮ್ ಸಿಸ್ಟಂಗೆ) ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್‍ಗಳು ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಸ್ಕ್ರೀನ್ ನಲ್ಲಿ ಕಾಣುತ್ತದೆ. ಹೀಗಾಗಿ ಇಂತಹ ಮೇಲ್ ಬಂದಾಗ ಜಾಣ್ಮೆಯಿಂದಿರುವುದು ಒಳಿತು.

ವನ್ನಾಕ್ರೈ ದಾಳಿ ಎದುರಿಸುವುದು ಹೇಗೆ?

ಹ್ಯಾಕರ್‍ಗಳು ವನ್ನಾಕ್ರೈ ತಂತ್ರಾಂಶಗಳ ಮೂಲಕ ಕಂಪ್ಯೂಟರ್ ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಮಾರ್ಪಡಿಸುತ್ತಾರೆ. ಹೀಗೆ ದಾಳಿಗೆ ಒಳಗಾಗುವ ಕಂಪ್ಯೂಟರ್ ಗಳ ಫೈಲ್ ಗಳನ್ನು ಓಪನ್ ಮಾಡಲು ಸಾಧ್ಯವಿರುವುದಿಲ್ಲ. ಹೀಗಾಗಿ ಅವರು ಬೇಡಿಕೆ ಇಟ್ಟಷ್ಟು ಹಣವನ್ನು ನೀಡಬೇಕು ಇಲ್ಲವೇ ದಾಖಲೆಗಳನ್ನು ಕಳೆದುಕೊಳ್ಳಲು ಸಿದ್ಧರಾರಾಗಬೇಕು.

ಅಂತಹ ಸಂದರ್ಭಗಳಲ್ಲಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಉತ್ತಮ.

1. ಉತ್ತಮವಾದ ಆಂಟಿ ವೈರಸ್ ಸಾಫ್ಟ್‌ವೇರ್ ಅಪ್ಡೇಟ್/ಇನ್ ಸ್ಟಾಲ್ ಮಾಡಿಕೊಳ್ಳಿ

2. ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆಯ (ಒಎಸ್) ಸುರಕ್ಷತಾ ಸೌಲಭ್ಯದ (ಸೆಕ್ಯುರಿಟಿ ಪ್ಯಾಚ್‌) ಪರಿಷ್ಕೃತ ಆವೃತ್ತಿ ಅಳವಡಿಸಿಕೊಳ್ಳಿ.

3. ಬೇರೆ ಡಿವೈಸ್ ಗಳಲ್ಲಿ ಬ್ಯಾಕ್ ಅಪ್ ಡೇಟಾ ಇರಿಸುವುದು ಉತ್ತಮ. ಪ್ರಮುಖ ಕಡತಗಳ ಆಫ್‍ಲೈನ್ ಡೇಟಾಬೇಸ್ ನಿರಂತರವಾಗಿ ಅಪ್‍ಡೇಟ್ ಮಾಡುತ್ತಿರಿ.

4. ಎಂಟರರ ಪ್ರೈಸ್ ಎಡ್ಜ್ ಅಥವಾ ಪೆರಿಮೀಟರ್ ನೆಟ್ವರ್ಕ್ ಡಿವೈಸ್ [UDP 137, 138 and TCP 139, 445] ನ ಮೂಲಕ ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ SMB ಪೋರ್ಟ್ ಗಳನ್ನು ಬ್ಲಾಕ್ ಮಾಡಿ, ಇಲ್ಲವೇ SMBv1 ನಿಷ್ಕ್ರಿಯ ಮಾಡಿ. ವಿಂಡೋಸ್ ಎಕ್ಸ್ ಪಿ, ವಿಸ್ಟಾ, ಸರ್ವರ್ 2008 ಮತ್ತು ಸರ್ವರ್ 2003 ಆಪರೇಟಿಂಗ್ ಸಿಸ್ಟಂ ಬಳಸುತ್ತಿದರೆ ಈ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ಡೇಟ್ ಮಾಡಿ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ. 'ಭಾರತ, ಚೀನಾ, ಪಾಕಿಸ್ತಾನ' ಆರ್ಥಿಕ ಸಮರದಲ್ಲಿ ಯಾರಿಗೆ ಗೆಲುವು?

English summary

WannaCry ransomware cyber attack: What are the impacts of cyber attacks on economy?

Barring sporadic incidents in a few states, most institutions and industries across India continue to remain insulated from the effects of the 'WannaCry' ransomware cyberattack+ that has affected computers in approximately 100 countries worldwide.
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more