For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ 20 ಸಾವಿರ ನೇಮಕಾತಿಗೆ ನಿರ್ಧಾರ

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಪ್ರಸಕ್ತ ಸಾಲಿನಲ್ಲಿ ಕ್ಯಾಂಪಸ್ ನೇಮಕಾತಿಯಲ್ಲಿ 20 ಸಾವಿರ ಕೌಶಲ್ಯಭರಿತ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.

By Siddu
|

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಪ್ರಸಕ್ತ ಸಾಲಿನಲ್ಲಿ ಕ್ಯಾಂಪಸ್ ನೇಮಕಾತಿಯಲ್ಲಿ 20 ಸಾವಿರ ಕೌಶಲ್ಯಭರಿತ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಗ್ರಾಹಕರು ಡಿಜಿಟಲ್, ಕ್ಲೌಡ್, ಅನಾಲಿಟಿಕ್ಸ್ ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು, ಅಂತಹ ಕೌಶಲ್ಯವುಳ್ಳ ಉದ್ಯೋಗಿಗಳನ್ನು ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

ಇನ್ಫೋಸಿಸ್ 20 ಸಾವಿರ ನೇಮಕಾತಿಗೆ ನಿರ್ಧಾರ

ಇನ್ಫೋಸಿಸ್ ಪ್ರಸಕ್ತ ಕ್ಯಾಂಪಸ್ ನೇಮಕಾತಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಮುಂದಿನ ವರ್ಷವೂ ಇದೇ ಮಟ್ಟದಲ್ಲಿ ನೇಮಕಾತಿ ನಡೆಯಲಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಮತೋಲಿತ ಮಟ್ಟ ಕಾಯ್ದುಕೊಂಡು ಬರಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ದೇಶದ ಪ್ರಮುಖ ಐಟಿ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಬೆನ್ನಲ್ಲೇ ಇನ್ಫೊಸಿಸ್‌ನ ಈ ನಿರ್ಧಾರ ಪ್ರಕಟಗೊಂಡಿದ್ದು, ಉದ್ಯೋಗಿಗಳಲ್ಲಿ ಭರವಸೆ ಮೂಡಿದೆ. ಈಗಾಗಲೇ ಅಮೆರಿಕದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರ ಉದ್ಯೋಗಿಗಳನ್ನು ನೇಮಕಾತಿ ಮಾಡುವುದಾಗಿ ಇನ್ಫೋಸಿಸ್ ತಿಳಿಸಿದೆ. ಮಾಹಿತಿ ತಂತ್ರಜ್ಞಾನ(I.T) ವಲಯದಲ್ಲಿ 2 ಲಕ್ಷ ಉದ್ಯೋಗ ಕಡಿತ!

English summary

Infosys to hire nearly 20,000 engineers from campuses

Infosys, the second largest information technology (IT) services firm in the country, will maintain its annual campus hiring at 20,000 this year, but is looking at engineers with new skills such as digital and analytics.IT firms in the country have witnessed technology and business shifts in the past few ye
Story first published: Friday, May 19, 2017, 13:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X