For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

By Siddu
|

ಹೂಡಿಕೆದಾರರ ಗುರಿ ಮತ್ತು ಹೂಡಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಆಯ್ಕೆಗಳಿರುತ್ತವೆ. ಇಕ್ವಿಟಿ, ಬಂಗಾರ, ಡೆಬ್ಟ್ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಹಣ ಹೂಡಬಹುದು. ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಮತ್ತು ಬಂಡವಾಳದ ಅಪಾಯವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ.

 

ಇಲ್ಲಿ ವಿಭಿನ್ನ ವಿಧದ ಮ್ಯೂಚುವಲ್ ಫಂಡ್ ಗಳ ವಿವತ ನೀಡಲಾಗಿದೆ.

1. ಇಕ್ವಿಟಿ ಫಂಡ್ಸ್

1. ಇಕ್ವಿಟಿ ಫಂಡ್ಸ್

ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲಾಗುವು ಫಂಡ್ಸ್ ಗಳನ್ನು ಇಕ್ವಿಟಿ ಫಂಡ್ಸ್ ಎನ್ನುವರು. ಇಕ್ವಿಟಿ ಫಂಡ್ಸ್ ಗಳು ಹೆಚ್ಚು ರಿಸ್ಕ್ ಇರುವ ಫಂಡ್ ಗಳಾಗಿದ್ದು, ಇವುಗಳ ಆದಾಯ ಷೇರುಪೇಟೆಯೊಂದಿಗೆ ಸಂಬಂಧ ಹೊಂದಿರುತ್ತದೆ. ದೀರ್ಘಾವಧಿಯ ಬೆಳವಣಿಗೆ ಬಯಸುವ ಹೂಡಿಕೆದಾರರಿಗೆ ಇವು ಅತ್ಯುತ್ತಮವಾಗಿವೆ.

2. ಡೈವರ್ಸಿಫೈಡ್ ಫಂಡ್ಸ್

2. ಡೈವರ್ಸಿಫೈಡ್ ಫಂಡ್ಸ್

ಬೇರೆ ಬೇರೆ ವಲಯದ ಕಂಪನಿ ಮತ್ತು ಮಾರ್ಕೆಟ್ ಕ್ಯಾಪಿಟಲೈಜೆಷನ್ ಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ವೈವಿಧ್ಯಮಯ ಪ್ರಯೋಜನಗಳನ್ನು ಡೈವರ್ಸಿಫೈಡ್ ಫಂಡ್ಸ್ ಒದಗಿಸುತ್ತದೆ. ಯಾವುದೇ ನಿರ್ದಿಷ್ಟ ವಲಯಕ್ಕೆ ಸೀಮಿತವಾಗಲು ಬಯಸದ ಹೂಡಿಕೆದಾರರಿಗೆ ತುಂಬಾ ಉಪಯುಕ್ತ.

3. ಸೆಕ್ಟರ್ ಫಂಡ್ಸ್
 

3. ಸೆಕ್ಟರ್ ಫಂಡ್ಸ್

ಹೆಸರೇ ಸೂಚಿಸುವಂತೆ ಪ್ರಾಥಮಿಕವಾಗಿ ಒಂದು ನಿರ್ಧಿಷ್ಟ ಬಿಸಿನೆಸ್ ವಲಯ ಅಥವಾ ಇಂಡಸ್ಟ್ರಿಯ ಕಂಪನಿಗಳ ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಡೈವರ್ಸಿಫೈಡ್ ಫಂಡ್ಸ್ ಗಳಿಗೆ ಹೋಲಿಕೆ ಮಾಡಿದರೆ ಇವು ಸಲ್ಪ ಅಪಾಯಕಾರಿ. ಆದರೆ ಹೆಚ್ಚು ಆದಾಯವನ್ನು ನೀಡಬಲ್ಲವು. ನಿರ್ಧಿಷ್ಟ ಬಿಸಿನೆಸ್ ವಲಯ ಅಥವಾ ಇಂಡಸ್ಟ್ರಿ ಕಂಪನಿಗಳ ಕಾರ್ಯಕ್ಷಮತೆ ಬಗ್ಗೆ ಹೂಡಿಕೆದಾರರು ಗಮನಹರಿಸಬೇಕು. ಜತೆಗೆ ಸರಿಯಾದ ಸಮಯದಲ್ಲಿ ನಿರ್ಗಮಿಸಬೇಕು.

4. ಇಂಡೆಕ್ಸ್ ಫಂಡ್ಸ್

4. ಇಂಡೆಕ್ಸ್ ಫಂಡ್ಸ್

ಜನಪ್ರಿಯವಾದ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳಾದ CNX ನಿಪ್ಟಿ, ಎಸ್&ಪಿ ಬಿಎಸ್ಇ ಸೂಚ್ಯಂಕಗಳಲ್ಲಿ ಈ ಫಂಡ್ಸ್ ಗಳನ್ನು ಹೂಡಿಕೆ ಮಾಡಲಾಗುತ್ತದೆ. ಇಂಡೆಕ್ಸ್ ಫಂಡ್ಸ್ ಮೌಲ್ಯವು ಬೆಂಚ್ಮಾರ್ಕ್ ಸೂಚ್ಯಂಕಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸೂಚ್ಯಂಕದಲ್ಲಿನ ಏರಿಕೆ ಮತ್ತು ಕುಸಿತಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ.

5. ಟ್ಯಾಕ್ಸ್ ಸೇವಿಂಗ್ ಫಂಡ್ಸ್

5. ಟ್ಯಾಕ್ಸ್ ಸೇವಿಂಗ್ ಫಂಡ್ಸ್

ಟ್ಯಾಕ್ಸ್ ಸೇವಿಂಗ್ ಫಂಡ್ಸ್ ಹೂಡಿಕೆದಾರರಿಗೆ ತೆರಿಗೆ ಸೌಲಭ್ಯ ನೀಡುತ್ತದೆ. ತೆರಿಗೆ ಇಲಾಖೆಯ ಸೆಕ್ಸನ್ 80C ಅಡಿಯಲ್ಲಿ ಈ ಪ್ರಯೋಜನ ಲಭ್ಯವಿದೆ. ದೀರ್ಘಾವಧಿಯ ಲಾಭ ಮತ್ತು ತೆರಿಗೆ ಪ್ರಯೋಜನ ಬಯಸುವ ಹೂಡಿಕೆದಾರರು ಇವನ್ನು ಆಯ್ಕೆ ಮಾಡಬಹುದು.

6. ಡೆಬ್ಟ್ ಫಂಡ್ಸ್/ಫಿಕ್ಸೆಡ್ ಇನ್ಕಮ್ ಫಂಡ್ಸ್

6. ಡೆಬ್ಟ್ ಫಂಡ್ಸ್/ಫಿಕ್ಸೆಡ್ ಇನ್ಕಮ್ ಫಂಡ್ಸ್

ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ...

English summary

What are the Types of Mutual Funds

Based on your goals and your investment horizon, Mutual Funds give you the option to invest your money across various asset classes like equity, debt and gold. This allows you to diversify your investments and strive to reduce your portfolio risk.
Story first published: Friday, June 2, 2017, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X