For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್: ಈ ವರ್ಷ 20 ಸಾವಿರ ಉದ್ಯೋಗಿಗಳ ನೇಮಕ

ಐಟಿ ವಲಯದ ಪ್ರಮುಖ ಸಂಸ್ಥೆ ಇನ್ಫೊಸಿಸ್ ಪ್ರಸಕ್ತ ಸಾಲಿನಲ್ಲಿ 20 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ‌ ಹೇಳಿದೆ.

By Siddu
|

ಐಟಿ ವಲಯದ ಪ್ರಮುಖ ಸಂಸ್ಥೆ ಇನ್ಫೊಸಿಸ್ ಪ್ರಸಕ್ತ ಸಾಲಿನಲ್ಲಿ 20 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ‌ ಹೇಳಿದೆ.

 

ಸಿಬ್ಬಂದಿಗಳ ಕಳಪೆ ಸಾಧನೆ ಮತ್ತು ಕಾರ್ಯನಿರ್ವಹಣೆ ಆಧಾರದ ಮೇಲೆ ಕೇವಲ 400 ಸಿಬ್ಬಂದಿಗಳನ್ನು ವಜಾ ಮಾಡುತ್ತಿರುವುದಾಗಿ ಇನ್ಫೊಸಿಸ್ ಸಿಒಒ ಯು.ಬಿ. ಪ್ರವೀಣ್ ರಾವ್‌ ತಿಳಿಸಿದ್ದಾರೆ.

ತಪ್ಪು ವರದಿ ಬೇಡ

ತಪ್ಪು ವರದಿ ಬೇಡ

ಇನ್ಫೊಸಿಸ್ ನಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗಿಗಳ ಕಡಿತ ಮತ್ತು ವಜಾ ಮಾಡಲಾಗುತ್ತಿದೆ ಎನ್ನುವ ವರದಿಗಳನ್ನು ಯು.ಬಿ. ಪ್ರವೀಣ್ ರಾವ್‌ ಅಲ್ಲಗಳೆದಿದ್ದು, ಅವು ಉತ್ಪ್ರೇಕ್ಷೆಯಿಂದ ಕೂಡಿರುವ ತಪ್ಪು ವರದಿಗಳು ಎಂದಿದ್ದಾರೆ.

ಇನ್ಫೊಸಿಸ್ ಮುಂಚೂಣಿ

ಇನ್ಫೊಸಿಸ್ ಮುಂಚೂಣಿ

ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಇನ್ಫೊಸಿಸ್ ಮುಂಚೂಣಿಯಲ್ಲಿದೆ. ಉದ್ಯೋಗಿಗಳ ಕೌಶಲ್ಯ, ಕಾರ್ಯಕ್ಷಮತೆ ಆಧಾರದ ಮೇಲೆ ಕೆಲ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವುದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ ಹಾಗಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

20 ಸಾವಿರ ಸಿಬ್ಬಂದಿ ನೇಮಕ
 

20 ಸಾವಿರ ಸಿಬ್ಬಂದಿ ನೇಮಕ

ಇನ್ಫೊಸಿಸ್ ಕಳೆದ ವರ್ಷದಲ್ಲೂ ಕೂಡ 20 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿತ್ತು. ಈ ವರ್ಷವೂ ಕೂಡ 20 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಮೊದಲ 6 ತಿಂಗಳಲ್ಲಿ ಹತ್ತು ಸಾವಿರ ಜನರಿಗೆ ನಂತರದಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ಇನ್ಫೊಸಿಸ್ ಸಿಒಒ ಯು.ಬಿ. ಪ್ರವೀಣ್ ರಾವ್‌ ತಿಳಿಸಿದ್ದಾರೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

English summary

IT layoffs: Infosys says reports overhyped; to hire 20,000 this year

IT services major Infosys today said it will hire 20,000 people this year as against only 400 people being asked to leave on performance grounds and termed reports of large-scale job losses as "overstated".
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X