For Quick Alerts
ALLOW NOTIFICATIONS  
For Daily Alerts

ಹಳೆ ಸಾಲದ ವರ್ಗಾವಣೆಯೊಂದಿಗೆ ಟಾಪಪ್ ಸಾಲದ ಬೋನಸ್

ಗೃಹಸಾಲ ಬ್ಯಾಲೆನ್ಸ್ ವರ್ಗಾವಣೆ(home loan balance transfer) ಮಾಡಲು ಬಯಸಿದಲ್ಲಿ, ಕೇವಲ ಕಡಿಮೆ ಬಡ್ಡಿದರ ಮಾತ್ರ ನಿಮ್ಮ ಆದ್ಯತೆ ಆಗಿರಬಾರದು. ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸುವ ಕೈಗೆಟಕುವ ಟಾಪ್ ಅಪ್(ಅಗ್ಗದ) ಸಾಲಗಳನ್ನು ಬಳಸಿ ಅಗತ್ಯ.

|

ಮನೆ ಕೊಳ್ಳುವುದು ಪ್ರತಿಯೊಬ್ಬರ ಕನಸು. ಆ ಕನಸು ನನಸಾಗಲು ಜೀವಮಾನವಿಡಿ ಕೂಡಿಟ್ಟ ಹಣವನ್ನೆಲ್ಲ ಆ ಕನಸಿನ ಮನೆಗೆ ಸುರಿದಿರುತ್ತೇವೆ. ಅದರ ಮೇಲೆ ಬ್ಯಾಂಕ್ ಸಾಲ ಎಂಬ ಹೊರೆ ಹೆಗಲೇರಿ ಕುಳಿತಿರುತ್ತದೆ. ಪ್ರತಿ ತಿಂಗಳು ಕಂತು ಕಟ್ಟಿಕಟ್ಟಿ ವಯಸ್ಸಾಗುವುದರೊಳಗೆ ಹಣೆಯ ಮೇಲೆ ನೆರಿಗೆಗಳು ಮೂಡಿರುತ್ತವೆ.

 

ಸಾಲ ಮುಗಿಯುವುದಾದರೂ ಎಂತು? ಸಾಲದ ಹೊರೆ ಇಳಿಸಿಕೊಳ್ಳುವುದಾದರೂ ಹೇಗೆ? ಬದುಕನ್ನು ಇನ್ನಷ್ಟು ಸಹ್ಯವಾಗಿಸಿಕೊಳ್ಳುವ ದಾರಿಯಾದರೂ ಯಾವುದು? ಇದಕ್ಕೆ ದಾರಿ ಖಂಡಿತವಿದೆ. ಅದು ಬಾಕಿಯಿರುವ ಮನೆಸಾಲವನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ವರ್ಗಾವಣೆ ಮಾಡುವುದು.

 

ಸಾಲ ವರ್ಗಾವಣೆ ಮಾಡುವಾಗ ಯಾರು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಾರೆ ಎಂಬುದೊಂದೇ ಮಾನದಂಡವಾಗಬಾರದು. ಬದಲಿಗೆ, ಆ ಬ್ಯಾಂಕ್ ನೀಡುವ ಟಾಪಪ್ ಸಾಲವನ್ನು ಸದುಪಯೋಗಪಡಿಸಿಕೊಂಡು ನಮ್ಮ ಇತರೆ ಕಮಿಟ್ಮೆಂಟ್ ಗಳನ್ನು ಕೂಡ ಪೂರೈಸುವ ಬಗ್ಗೆ ಜಾಣತನದಿಂದ ಯೋಚಿಸಬೇಕು.

ಹಳೆ ಸಾಲದ ವರ್ಗಾವಣೆಯೊಂದಿಗೆ ಟಾಪಪ್ ಸಾಲದ ಬೋನಸ್

ಈಗಂತೂ ಬ್ಯಾಂಕುಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪೈಪೋಟಿಗೆ ಬಿದ್ದವರಂತೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಕಡಿಮೆ ಬಡ್ಡಿದರದಲ್ಲಿ ನಮಗೆ ಹೊರೆಯಾಗಲಾರದಂತೆ ಸಾಲದ ಕಂತು ಕಟ್ಟುವುದು ಮಾತ್ರವಲ್ಲ, ಇನ್ನಷ್ಟು ಹೆಚ್ಚಿಗೆ ಅವಧಿ ಮತ್ತು ಅತ್ಯುತ್ತಮ ಸೇವೆಗಳು, ಇನ್ನಿತರ ಲಾಭಗಳು ಸಿಕ್ಕರೆ ಯಾರು ಬೇಡಂತಾರೆ ಹೇಳಿ?

ಈ ಸಾಲ ವರ್ಗಾವಣೆಯ ಪ್ರಮುಖ ಲಾಭವೇನೆಂದರೆ, ಸಾಲದ ಬಾಕಿ ಹಣವನ್ನು ವರ್ಗಾವಣೆ ಮಾಡುವುದರ ಜೊತೆಗೆ, ಜಾಸ್ತಿ ಹೊರೆಯಾಗದಂತೆ ಟಾಪಪ್ ಸಾಲ(ಹೆಚ್ಚುವರಿ ಸಾಲ)ವನ್ನೂ ಕೆಲ ಬ್ಯಾಂಕುಗಳು ನೀಡುತ್ತವೆ. ಇದು ಇತರ ಹಣಕಾಸಿನ ಹೊರೆಗಳನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ಆದರೆ ಈ ಹೆಚ್ಚುವರಿ ಸಾಲವನ್ನು ನಮ್ಮ ಪ್ರಸ್ತುತ ಕಂತನ್ನು ಪರಿಶೀಲಿಸಿ, ನಮಗೆ ಹೆಚ್ಚುವರಿ ಕಂತು ಕಟ್ಟಲು ಸಾಧ್ಯವೆ ಎಂಬುದನ್ನು ಪರಿಗಣಿಸಿಯೇ ನೀಡಲಾಗುತ್ತದೆ. ಟಾಪಪ್ ಸಾಲವನ್ನು ಪಡೆಯುವುದು ಸರಳ. ಏಕೆಂದರೆ, ಈಗಾಗಲೆ ಸಾಲ ಪಡೆದಿರುವುದರಿಂದ ಹೆಚ್ಚುವರಿ ದಾಖಲಾತಿಗಳನ್ನು ಸಲ್ಲಿಸುವ ಅಗತ್ಯವೂ ಇರುವುದಿಲ್ಲ.

ಇತರ ವೈಯಕ್ತಿಕ ಸಾಲ, ಚಿನ್ನದ ಸಾಲ ಅಥವಾ ಆಸ್ತಿಯನ್ನು ಒತ್ತೆಯಿಟ್ಟು ಪಡೆಯುವ ಸಾಲದ ಬಡ್ಡಿದರಕ್ಕಿಂತ ಟಾಪಪ್ ಸಾಲದ ಬಡ್ಡಿದರ ಕಮ್ಮಿಯಿರುತ್ತದೆ. ಮನೆಗೆ ಬಣ್ಣಸುಣ್ಣ ಮಾಡಿಸಲು, ಒಪ್ಪಓರಣ ಮಾಡಿಸಲು, ಫರ್ನಿಚರ್ ಗಳನ್ನು ಕೊಳ್ಳಲು, ಅಥವಾ ಇನ್ನಾವುದೇ ಉಪಯೋಗಕ್ಕಾಗಿ ಬಳಸಿಕೊಳ್ಳಬಹುದು.

ಹೆಚ್ಚುವರಿ ಸಾಲ ಅಥವಾ ಟಾಪಪ್ ಸಾಲ ಸಿಗುತ್ತದೆಂದು ಒಮ್ಮೆಗೇ ಧುಮುಕಿಬಿಡುವುದು ಅಥವಾ ಥಟ್ಟನೆ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಎಲ್ಲ ಸಾಧ್ಯಾಸಾಧ್ಯತೆಗಳನ್ನು ನೋಡಿ ಪಡೆದುಕೊಳ್ಳಬೇಕು. ಟಾಪಪ್ ಸಾಲಕ್ಕೆ ಹೋಗುವ ಮೊದಲು ಸಾಲಗಾರ ಯಾಕೆ ಸಾಲದ ಬಾಕಿಮೊತ್ತವನ್ನು ವರ್ಗಾವಣೆ ಮಾಡಲು ಇಚ್ಛಿಸುತ್ತಾನೆ ಎಂಬ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಸಾಲ ವರ್ಗಾವಣೆ ಮಾಡುವ ಸಂದರ್ಭ ಏಕೆ ಬರುತ್ತದೆ?

1. ಹಳೆ ಇಎಂಐ (ತಿಂಗಳ ಕಂತು) ತೀರ ಅಧಿಕವಾಗಿ ಇನ್ನು ಕಟ್ಟಲು ಸಾಧ್ಯವೇ ಇಲ್ಲ ಎಂಬ ಸಂದರ್ಭ ಒದಗಿಬಂದಾಗ ಸಾಲಗಾರರು ಸಾಲ ವರ್ಗಾವಣೆಗೆ ಇಚ್ಛಿಸುತ್ತಾರೆ.

2. ಯಾವುದೋ ಕಾರಣದಿಂದಾಗಿ ಆದಾಯ ಕುಂಠಿತವಾದಾಗ ಮತ್ತು ಒಪ್ಪಿಕೊಂಡಿರುವ ಸಾಲದ ಕಂತನ್ನು ಕಟ್ಟಲು ಕಷ್ಟವಾಗುತ್ತಿದೆ ಎನ್ನಿಸಿದಾಗ ವರ್ಗಾವಣೆ ಸಾಧ್ಯವಿದೆ.

3. ಬ್ಯಾಂಕಿನಿಂದ ಕಳಪೆ ಸೇವೆ, ಅವಶ್ಯಕತೆಯಿದ್ದಾಗ ಬ್ಯಾಂಕ್ ಸಿಬ್ಬಂದಿ ಲಭ್ಯವಾಗದಿರುವುದು ಅಥವಾ ಪರಿಣಾಮಕಾರಿಯಾಗಿ ಸಾಲದ ಖಾತೆಯನ್ನು ಆನ್ ಲೈನ್ ಮೂಲಕ ನಿಭಾಯಿಸಲು ವಿಫಲವಾದಾಗ.

4. ಸಾಲಗಾರ ಇಡೀ ಸಾಲವನ್ನು ಮರುಪಾವತಿಸಲು ಇಚ್ಛಿಸಿದರೂ ಬ್ಯಾಂಕ್ ಅಥವಾ ಸಾಲ ನೀಡಿದವರು ಸ್ವೀಕರಿಸಲು ನಿರಾಕರಿಸಿದಾಗ ಸಾಲ ವರ್ಗಾವಣೆ ಮಾಡಲು ಸಾಧ್ಯವಿದೆ.

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ನೊಂದಿಗೆ ಏನು ಪಡೆಯುತ್ತಿರಿ?

* ಕಡಿಮೆ ಇಎಂಐ ಸೌಲಭ್ಯದಿಂದ ಹಣಕಾಸಿನ ಲಾಭ ಹೆಚ್ಚು.

* ಉತ್ತಮ ಗ್ರಾಹಕರ ಸೇವೆ ಮತ್ತು ಇಎಂಐ ರಜಾಗಳಂಥ ಇತರ ಲಾಭಗಳನ್ನು ಪಡೆಯಬಹುದು.

* ಹೊಸ ಸಾಲದ ನಿಯಮಗಳಿಂದ ಅಗಾಧ ಲಾಭ ಪಡೆಯಬಹುದು.

* ನೀವು ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ಪಡೆಯಬಹುದು.

* ಮರುಪಾವತಿ ಅವಧಿಯನ್ನು ಹೆಚ್ಚಿಸಬಹುದು.

* ಅಲ್ಲದೆ ಹೆಚ್ಚುವರಿ ಸಾಲ ಪಡೆಯುವ ಅರ್ಹತೆ ಮತ್ತು ಅಗತ್ಯತೆ ನಿಮಗೆ ಇರುತ್ತದೆ.

ಸಾಲದ ವರ್ಗಾವಣೆಯಿಂದ ಹಲವಾರು ಲಾಭಗಳಿವೆ. ಆದರೆ, ಟಾಪಪ್ ಸಾಲ ಪಡೆಯುವುದರಿಂದ ಅದು ಹೆಚ್ಚು ಲಾಭದಾಯಕವಾಗಿ ಪರಿವರ್ತಿತವಾಗುತ್ತದೆ.

ಟಾಪ್ ಅಪ್ ಸಾಲದ ಪ್ರಯೋಜನ

1. ಬೇರೆ ಸಾಲಗಳಿಗೆ ಹೋಲಿಸಿದರೆ ಟಾಪಪ್ ಸಾಲದ ಬಡ್ಡಿದರ ಕಡಿಮೆ.

2. ಟಾಪ್ ಅಪ್ ಸಾಲದಿಂದ ಪಡೆಯಬಹುದಾದ ಹಣಕಾಸು ಬಳಕೆಗೆ ಮಿತಿಯಿಲ್ಲ.

3. ಅಸ್ತಿತ್ವದಲ್ಲಿರುವ ಮನೆ ಸಾಲ ಮೇಲೆ ಎರವಲು ಪಡೆಯಬಹುದು. ಇದಕ್ಕೆ ಹೆಚ್ಚುವರಿ ದಾಖಲೆಗಳನ್ನು ನೀಡಬೇಕಾದ ಅಗತ್ಯವೂ ಇರುವುದಿಲ್ಲ.

4. ಸಾಲ ಪಡೆಯುವುದು ತುಂಬಾ ಸುಲಭ ಮತ್ತು ವೇಗ. ಮತ್ತೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಯಾವುದೇ ಫಾರ್ಮ್ಯಾಲಿಟಿ ಪಾಲಿಸಬೇಕಾದ ಅಗತ್ಯವಿಲ್ಲ.

5. ಟಾಪ್ ಅಪ್ ಸಾಲ ದಿರ್ಘಾವಧಿಯನ್ನು ಹೊಂದಿವೆ. ಹಾಗಾಗಿ, ನಮಗೆ ಅನಕೂಲವಾಗುವ ರೀತಿಯಲ್ಲಿ ಅವಧಿಯನ್ನು ಹೆಚ್ಚಿಸಿಕೊಂಡು ಹೊರೆಯಾಗದಂತೆ ಸಾಲ ಪಾವತಿ ಮಾಡಬಹುದು.

ಟಾಪ್ ಅಪ್ ಸಾಲ ಪಡೆಯಲು ಅರ್ಹತೆ ಇದೆಯೆ?

ಟಾಪಪ್ ಸಾಲ ಪಡೆಯಲು, ಗೃಹ ಸಾಲ ಪಡೆಯುವಾಗ ಇರುವಂತಹ ಕೆಲ ಅರ್ಹತೆಗಳು ಇರಬೇಕಾಗುತ್ತದೆ.

1. ಭಾರತೀಯ ಮೂಲದ ನಾಗರಿಕನಾಗಿರಬೇಕು.

2. ವಯಸ್ಸು 25ರಿಂದ 62ರ ನಡುವಿನದಾಗಿರಬೇಕು.

3. ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕಿದ್ದು, ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿಬೇಕು.

ಇವುಗಳೊಂದಿಗೆ ಕೆಳಗಿನ ಸಂಗತಿಗಳನ್ನೂ ಪಾಲಿಸುತ್ತಿರಬೇಕು

1. 1ರಿಂದ 2 ವರ್ಷ ಸಾಲದ ಕಂತನ್ನು ನಿರಂತರವಾಗಿ ತುಂಬಿರಬೇಕು.

2. ಉತ್ತಮ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿರಬೇಕು.

ಟಾಪಪ್ ಸಾಲವನ್ನು ಪಡೆಯುವ ಮುನ್ನ ನೀವು ತಿಳಿಯಬೇಕಾದುದೇನು?

1. ನೀವು ಪಡೆದಿರುವ ಮನೆ ಸಾಲದ ಶೇಕಡಾವಾರು ಲೆಕ್ಕದಲ್ಲಿ ಟಾಪಪ್ ಸಾಲ ಸಿಗುತ್ತದೆ. ಮನೆಯ ಸಾಲ ಮತ್ತು ಮೌಲ್ಯದ ಅನುಪಾತದ ಆಧಾರದ ಮೇಲೆ ಇದು ನಿರ್ಧಾರವಾಗುತ್ತದೆ.

2. ಟಾಪಪ್ ಸಾಲದ ಅವಧಿ ನೀವು ಮನೆ ಸಾಲದ ಅವಧಿಯನ್ನು ಮೀರುವಂತಿಲ್ಲ.

ಟಾಪ್ ಅಪ್ ಲೋನ್ ಯಾವುದಕ್ಕೆ ಬಳಸಬಹುದು?

1. ಬಿಸಿನೆಸ್ ಬಂಡವಾಳ ಭರಿಸಲು

2. ವಿವಾಹ ವೆಚ್ಚ ಭರಿಸಲು.

3. ಮಕ್ಕಳ ಶಿಕ್ಷಣ ವೆಚ್ಚ ಭರಿಸಲು.

4. ಮನೆ ನಿರ್ವಹಣೆ ಅಥವಾ ನವೀಕರಣ.

5. ವೈದ್ಯಕೀಯ ವೆಚ್ಚ ಭರಿಸಲು.

6. ಇನ್ನಿತರ ಅಗತ್ಯಗಳಿಗಾಗಿ.

ಯಾವ ಹಣಕಾಸು ಸಂಸ್ಥೆ ಹೆಚ್ಚು ಲಾಭದಾಯಕವಾಗುತ್ತದೆ ಎಂದು ಪರಿಶೀಲಿಸಿದಾಗ ಬಜಾಜ್ ಫೈನಾನ್ಸ್ ನಿಮ್ಮ ಮನೆಯ ಕನಸು ಮತ್ತು ಆಸೆ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿದೆ. ಸಾಲದ ವರ್ಗಾವಣೆಯನ್ನು ಬಜಾಜ್ ಫೈನಾನ್ಸ್ ನೊಂದಿಗೆ ಮಾಡಿರಿ ಮತ್ತು ಕಡಿಮೆ ಬಡ್ಡಿದರ, ಮನೆಗೆ ಸೇವೆ, 3 ಇಎಂಐ ರಜಾಗಳಂಥ ಹಲವಾರು ಸವಲತ್ತುಗಳನ್ನು ಪಡೆಯಬಹುದು. ಬಜಾಜ್ ಫೈನಾನ್ಸ್ ಗೆ ಸಾಲವನ್ನು ವರ್ಗಾಯಿಸಿದರೆ ಟಾಪಪ್ ಸಾಲ ಕೂಡ ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಸಿಗುತ್ತದೆ.

English summary

Why getting a top up loan when doing a home loan balance transfer is a great financing tool?

When looking to do a home loan balance transfer, let lower interest not be your only priority. You can also make the most of affordable top-up loans that you may use to fulfil all your needs!
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X