For Quick Alerts
ALLOW NOTIFICATIONS  
For Daily Alerts

ರಿಯಲ್ ಎಸ್ಟೇಟ್ ಪ್ರಗತಿ ಏರುಮುಖ: ಸಮೀಕ್ಷೆ

ಪ್ರಸ್ತುತ ನಗದು ರಹಿತ ವ್ಯವಹಾರದ ಕಡೆ ಎಲ್ಲರೂ ಮುಖಮಾಡಿ ಸಾಗುತ್ತಿದ್ದು, ಸರ್ಕಾರಗಳು ಕೂಡ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುತ್ತಿವೆ.

|

ಪ್ರಸ್ತುತ ನಗದು ರಹಿತ ವ್ಯವಹಾರದ ಕಡೆ ಎಲ್ಲರೂ ಮುಖಮಾಡಿ ಸಾಗುತ್ತಿದ್ದು, ಸರ್ಕಾರಗಳು ಕೂಡ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುತ್ತಿವೆ. ಇವುಗಳಲ್ಲಿ ಹೆಚ್ಚಿನವು ಆನ್ಲೈನ್ ವಹಿವಾಟುಗಳು ನಡೆಯುತ್ತಿದ್ದು, ಅದರಲ್ಲೂ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ರಿಯಲ್ ಎಸ್ಟೇಟ್ ತುಂಬಾ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. (ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ!)

ಆನ್‌ಲೈನ್‌ ವೆಬ್ಸೈಟ್ ಅವಲಂಬನೆ

ಆನ್‌ಲೈನ್‌ ವೆಬ್ಸೈಟ್ ಅವಲಂಬನೆ

ಇದೀಗ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ಪ್ರಾಮುಖ್ಯತೆ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಮನೆ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ವೆಬ್ಸೈಟ್ಗಳನ್ನು ಹೆಚ್ಚೆಚ್ಚು ಅವಲಂಬಿಸುತ್ತಿದ್ದಾರೆ. ಜತೆಗೆ ಯುವಜನತೆ ಹಣ ಹೂಡಿಕೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಗ್ರಾಹಕರ ವರ್ತನೆ

ಗ್ರಾಹಕರ ವರ್ತನೆ

ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ತಿರುವನಂತಪುರಂ ನಗರಗಳಲ್ಲಿ ಸಂಭವನೀಯ ಮನೆ ಖರೀದಿದಾರರ ಗ್ರಾಹಕ ನಡವಳಿಕೆಯನ್ನು OLX-Kantar TNS ವರದಿ ಮಾಡಿದೆ. ಬೆಂಗಳೂರಿನಲ್ಲಿರುವವರು ಜಿಮ್, ಈಜುಕೊಳ ಮತ್ತು ಭದ್ರತೆಯಂತಹ ಉತ್ತಮ ಸೌಕರ್ಯಗಳನ್ನು ನೋಡುತ್ತಿದ್ದರೆ, ಹೈದರಾಬಾದ್ ಮನೆ ಖರೀದಿದಾರರು ಹೂಡಿಕೆ ಮಾಡಲು ಸುರಕ್ಷಿತ ಸ್ಥಳವನ್ನು ಹುಡುಕುತ್ತಾರೆ ಎಂದು ವರದಿ ಹೇಳಿದೆ.

ಒಎಲ್ಎಕ್ಸ್, ಟಿಎನ್ಎಸ್ ಸಮೀಕ್ಷೆ

ಒಎಲ್ಎಕ್ಸ್, ಟಿಎನ್ಎಸ್ ಸಮೀಕ್ಷೆ

ಗ್ರಾಹಕರಿಂದ ಗ್ರಾಹಕರಿಗೆ(consumer to consumer) ಆನ್‌ಲೈನ್‌ ಮಾರುಕಟ್ಟೆ ತಾಣವಾಗಿರುವ ಒಎಲ್ಎಕ್ಸ್ ಹಾಗೂ ಸಂಶೋಧನಾ ಸಂಸ್ಥೆ ಕಂಟಾರ್ ಟಿಎನ್ಎಸ್ ಜತೆಯಾಗಿ ರಿಯಲ್ ಎಸ್ಟೇಟ್ ಸಮೀಕ್ಷೆ ನಡೆಸಿ ವರದಿ ಮಾಡಿವೆ. ಹೊಸ ಮನೆಗಳ ಮಾಹಿತಿ ಮತ್ತು ಮನೆ ಖರೀದಿದಾರರ ಸಂಖ್ಯೆಯಲ್ಲಿ ಏರಿಕೆ ದಾಖಲಾಗಿದೆ ಎಂದು ಸಂಸ್ಥೆ ಹೇಳಿದೆ.

English summary

Investment, safe locality key factors while buying a house: Report

For those in Hyderabad, a desire to make a safe investment followed closely by the wish to live in a safe location are the two key reasons driving residential property purchase, revealed a new survey.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X