For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಐಟಿ, ಬಿಪಿಒ ವಲಯದ 7 ಲಕ್ಷ ಉದ್ಯೋಗ ಕಡಿತ!

2022ರ ಹೊತ್ತಿಗೆ ಮಾಹಿತಿ ತಂತಂತ್ರಜ್ಞಾನ (ಐಟಿ) ಮತ್ತು ಬಿಪಿಒ ಕ್ಷೇತ್ರದಲ್ಲಿನ ಕಡಿಮೆ ಕೌಶಲ್ಯದ 7 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕಾ ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ ರಿಸರ್ಚ್‌ ವರದಿ ಮಾಡಿದೆ.

By Siddu
|

2022ರ ಹೊತ್ತಿಗೆ ಮಾಹಿತಿ ತಂತಂತ್ರಜ್ಞಾನ (ಐಟಿ) ಮತ್ತು ಬಿಪಿಒ ಕ್ಷೇತ್ರದಲ್ಲಿನ ಕಡಿಮೆ ಕೌಶಲ್ಯದ 7 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕಾ ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ ರಿಸರ್ಚ್‌ ವರದಿ ಮಾಡಿದೆ.

ಈಗಾಗಲೇ ಹಲವು ಸಂಸ್ಥೆಗಳು, ಐಟಿ ಕಂಪನಿಗಳು ಸಿಬ್ಬಂದಿಗಳನ್ನು ಕೆಲಸದಿದಂದ ವಜಾ ಮಾಡುತ್ತಿರುವುದು ಉದ್ಯೋಗಿಗಳಲ್ಲಿ ಕಳವಳವನ್ನುಂಟು ಮಾಡಿದೆ.

ಕೆಲಸ ಕಳೆದುಕೊಳ್ಳಲು ಕಾರಣ

ಕೆಲಸ ಕಳೆದುಕೊಳ್ಳಲು ಕಾರಣ

ಆಟೋಮೆಷನ್ (ಸ್ವಯಂಚಾಲಿತ ವ್ಯವಸ್ಥೆ ಅಳವಡಿಕೆ) ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಳಕೆಯಲ್ಲಿನ ಹೆಚ್ಚಳದ ಫಲವಾಗಿ ಕಡಿಮೆ ಕೌಶಲ್ಯವಿರುವ ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಎಲ್ಲರ ಪಾಲಿಗೂ ಕೆಟ್ಟ ಸುದ್ದಿಯಲ್ಲ!

ಎಲ್ಲರ ಪಾಲಿಗೂ ಕೆಟ್ಟ ಸುದ್ದಿಯಲ್ಲ!

ಕಡಿಮೆ ಕೌಶ್ಯಲವಿರುವವರ ಪಾಲಿಗೆ ಇದು ಕೆಟ್ಟ ಸುದ್ದಿಯಾದರೂ, ಈ ವಲಯಗಳಲ್ಲಿನ ಎಲ್ಲರ ಪಾಲಿಗೂ ಕೆಟ್ಟ ಸುದ್ದಿಯಲ್ಲ. ಇದೇ ಸಂದರ್ಭದಲ್ಲಿ ಮಧ್ಯಮ ಮತ್ತು ಗರಿಷ್ಠ ಮಟ್ಟದ ವೃತ್ತಿಕೌಶಲದ ಅಗತ್ಯವಿರುವ ಉದ್ಯೋಗ ಅವಕಾಶಗಳು ಹೆಚ್ಚಳಗೊಳ್ಳಲಿವೆ. ವೃತ್ತಿಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳು ಜಾಗತಿಕ ಮಟ್ಟದಲ್ಲಿ ಪ್ರತಿಫಲನಗೊಳ್ಳುತ್ತಿವೆ.

31% ಕಡಿಮೆ, 57% ಹೆಚ್ಚಳ

31% ಕಡಿಮೆ, 57% ಹೆಚ್ಚಳ

ಹಲವು ವರದಿಗಳನ್ವಯ ಮುಂದಿನ ಕೆಲ ವರ್ಷಗಳಲ್ಲಿ ಐಟಿ ಮತ್ತು ಬಿಪಿಒ ಕ್ಷೇತ್ರದ ಕಡಿಮೆ ಕೌಶಲದ ಉದ್ಯೋಗಗಳು ಜಾಗತಿಕವಾಗಿ ಶೇ. 31ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಮಧ್ಯಮ ಕೌಶಲದ ಶೇ. 13ರಷ್ಟು ಉದ್ಯೋಗಗಳು ಮತ್ತು ಉನ್ನತ ಕೌಶಲದ ಶೇ. 57 ಉದ್ಯೋಗಾವಕಾಶಗಳು ಏರಿಕೆಯಾಗುವ ನಿರೀಕ್ಷೆಯಿದೆ.

ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

ಭಾರತ, ಅಮೆರಿಕಾ, ಇಂಗ್ಲೆಂಡ್ ದೇಶಗಳ ಮೇಲೆ ಕೃತಕ ಬುದ್ದಿಮತ್ತೆ ಹೆಚ್ಚು ಪರಿಣಾಶಮ ಬೀರಲಿದೆ. ಆಟೋಮೆಷನ್ (ಸ್ವಯಂಚಾಲಿತ ವ್ಯವಸ್ಥೆ) ಅಳವಡಿಕೆಯಿಂದ ಜಾಗತಿಕವಾಗಿ 7.5ರಷ್ಟು ಉದ್ಯೋಗಾವಕಾಶ ಕಡಿಮೆಯಾಗಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಾಡಿಕೆ ಕೆಲಸಗಳನ್ನು ಕಸಿದುಕೊಳ್ಳಲಿದೆ.

ಉದ್ಯೋಗ ಸೃಷ್ಟಿ ಬಹುದೊಡ್ಡ ಸವಾಲು

ಉದ್ಯೋಗ ಸೃಷ್ಟಿ ಬಹುದೊಡ್ಡ ಸವಾಲು

ಮುಂಬರಲಿರುವ 5 ವರ್ಷಗಳವರೆಗೆ ಉದ್ಯೋಗ ಕಡಿಮೆಯಾಗುವ ಪರಿಸ್ಥಿಯನ್ನು ಹೇಗೋ ನಿಭಾಯಿಸಬಹುದಾಗಿದೆ. ಆದರೆ ತದನಂತರದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಬಹುದೊಡ್ಡ ಸವಾಲಾಗಲಿದೆ ಎಂದು ಸಂಸ್ಥೆ ವರದಿ ಮಾಡಿದೆ.

ಐಟಿ ವಲಯದಲ್ಲಿ 1 ಲಕ್ಷ ಉದ್ಯೋಗ!

ಐಟಿ ವಲಯದಲ್ಲಿ 1 ಲಕ್ಷ ಉದ್ಯೋಗ!

ಆದರೂ, 2022ರ ಹೊತ್ತಿಗೆ ಭಾರತದಲ್ಲಿ ಐಟಿ ಮತ್ತು ಬಿಪಿಒ ವಲಯದ ಮಧ್ಯಮ ಕೌಶಲದ ಉದ್ಯೋಗಗಳು 9 ಲಕ್ಷದಿಂದ 10 ಲಕ್ಷದವರೆಗೆ ಅಂದರೆ ಒಂದು ಲಕ್ಷದಷ್ಟು ಹೆಚ್ಚಾಗಲಿವೆ. ಉನ್ನತ ಕೌಶಲದ ಉದ್ಯೋಗಗಳು 3.20 ಲಕ್ಷದಿಂದ 5.10 ಲಕ್ಷದವರೆಗೆ ಹೆಚ್ಚಲಿವೆ ಎನ್ನಲಾಗಿದೆ.

English summary

7 Lakh IT Jobs In India Under Threat

About 7 lakh low-skilled workers in IT and BPO industry in India are likely to lose their jobs to automation and artificial intelligence by 2022, says a report by US-based research firm HfS Research.
Story first published: Friday, September 8, 2017, 12:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X