For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ನೀರಿನ ಎಟಿಎಂ ಘಟಕಗಳ ಸ್ಥಾಪನೆ

ವಿಶ್ವದ ಅತಿದೊಡ್ಡ ಮದ್ಯ ತಯಾರಕ ಸಂಸ್ಥೆ 'ಅನಹೀಸರ್-ಬುಷ್ ಇನ್ಬೆವ್'(Anheuser-Busch InBev) ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರಿನ್ನು ಪೂರೈಸಲು ನೀರಿನ ಎಟಿಎಂಗಳನ್ನು ತೆರೆಯುತ್ತಿದೆ.

By Siddu
|

ವಿಶ್ವದ ಅತಿದೊಡ್ಡ ಮದ್ಯ ತಯಾರಕ ಸಂಸ್ಥೆ 'ಅನಹೀಸರ್-ಬುಷ್ ಇನ್ಬೆವ್' (Anheuser-Busch InBev) ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರಿನ್ನು ಪೂರೈಸಲು ನೀರಿನ ಎಟಿಎಂಗಳನ್ನು ತೆರೆಯುತ್ತಿದೆ.

 

ಜಲಧಾರಾ ಸಹಯೋಗ

ಜಲಧಾರಾ ಸಹಯೋಗ

ಅನಹೀಸರ್-ಬುಷ್ ಇನ್ಬೆವ್ ಭಾರತೀಯ ಅಂಗಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದ್ದು, ಇದು ಜಲಧಾರಾ ಪೌಂಡೇಶನ್ ಸಹಯೋಗದಲ್ಲಿ ನೀರು ಪೂರೈಸಲಿದೆ.
ಈಗಾಗಲೇ ಮೈಸೂರಿನಲ್ಲಿ ಒಂದು ಎಟಿಎಂ ಘಟಕ ತನ್ನ ಬ್ರೆವರಿ (ಸಾರಾಯಿ ಭಟ್ಟಿ) ಎದುರು ಸ್ಥಾಪಿಸಿದೆ.

ನೀರಿನ ಎಟಿಎಂ ಎಲ್ಲೆಲ್ಲಿ?

ನೀರಿನ ಎಟಿಎಂ ಎಲ್ಲೆಲ್ಲಿ?

ಬೆಂಗಳೂರಿನ ಬಿನ್ನಿಟೇಟ್, ಕಾಡುಗೋಡಿ ಮತ್ತು ವನರ್ಪೇಟ್ ಹೀಗೆ ಮೂರು ಸ್ಥಳಗಳಲ್ಲಿ ನೀರಿನ ಎಟಿಎಂಗಳನ್ನು ಸ್ಥಾಪಿಸಲಾಗಿದೆ. ಜನರ ಪ್ರತಿಕ್ರಿಯೆ ಬಗ್ಗೆ ಈ ವಾರ ಅವಲೋಕನ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರದೇಶಗಳ ಆಯ್ಕೆ ಮಾನದಂಡ
 

ಪ್ರದೇಶಗಳ ಆಯ್ಕೆ ಮಾನದಂಡ

ಕಾವೇರಿ ನೀರು ಅಥವಾ ಸ್ವಚ್ಛ ನೀರು ಹೊಂದಿರದ ಕಾರಣ ಬಿನ್ನಿಟೇಟ್, ಕಾಡುಗೋಡಿ ಮತ್ತು ವನರ್ಪೇಟ್ ಪ್ರದೇಶಗಳನ್ನು ಗುರುತಿಸಲಾಗಿದೆ . ಆಂಧ್ರಪ್ರದೇಶದ ತನ್ನ ಬ್ರೆವರಿ ಘಟಕದ ಬಳಿ ಒಂದು ನೀರಿನ ಎಟಿಎಂ ಸ್ಥಾಪಿಸಲು ಯೋಜಿಸಿದೆ. ಜತೆಗೆ ಹೆಚ್ಚಿನ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ.

ಸಿಎಸ್ಆರ್ ಫಂಡ್ ಬಳಕೆ

ಸಿಎಸ್ಆರ್ ಫಂಡ್ ಬಳಕೆ

ಬಿಯರ್ ಮತ್ತು ಸಾಪ್ಟ್ ಡ್ರಿಂಕ್ ಉತ್ಪಾದನೆ, ಮಾರಾಟದಲ್ಲಿ ತೊಡಗಿರುವ ಅನಹೀಸರ್-ಬುಷ್ ಇನ್ಬೆವ್ ಸಂಸ್ಥೆ ನೀರಿನ ಪೂರೈಕೆಗಾಗಿ ಅದರ ಸಿಎಸ್ಆರ್ ಫಂಡ್ ಬಳಸಿಕೊಳ್ಳುತ್ತಿದೆ.

English summary

AB InBev installing water ATMs in Karnataka

Anheuser-Busch InBev is installing water ATMs in Karnataka and Andhra Pradesh in areas that do not have access to safe and clean drinking water.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X