For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್: ಭಾರತ್ ಫೋನ್ ಮೂಲಕ ಅನಿಯಮಿತ ಕರೆ, ಡೇಟಾ ಸೌಲಭ್ಯ!

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಟಿಲಿಕಾಂ ಸಂಸ್ಥೆ ಬಿಎಸ್ಎನ್ಎಲ್, ಮೈಕ್ರೊಮ್ಯಾಕ್ಸ್ ಜತೆಗೂಡಿ 4g ವೋಲ್ಟ್ ಭಾರತ್ ಫೋನ್ ಬಿಡುಗಡೆ ಮಾಡಿದೆ.

By Siddu
|

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಟಿಲಿಕಾಂ ಸಂಸ್ಥೆ ಬಿಎಸ್ಎನ್ಎಲ್, ಮೈಕ್ರೊಮ್ಯಾಕ್ಸ್ ಜತೆಗೂಡಿ 4g ವೋಲ್ಟ್ ಭಾರತ್ ಫೋನ್ ಬಿಡುಗಡೆ ಮಾಡಿದೆ.

ಭಾರತ್‌ ಫೋನ್‌ ಖರೀದಿದಾರರು ಪ್ರತಿ ತಿಂಗಳ ರೂ. 97 ಯೋಜನೆಯಡಿಯಲ್ಲಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯಗಳನ್ನು ಪಡೆಯಲಿದ್ದಾರೆ. ವೋಡಾಫೋನ್ ನಿಂದ 90GB ಡೇಟಾ, ಅನ್‍ಲಿಮಿಟೆಡ್ ಕರೆ ಆಫರ್!!

ಭಾರತ್‌ ಫೋನ್‌

ಭಾರತ್‌ ಫೋನ್‌

ರೂ. 2,200 ಬೆಲೆಯ ಭಾರತ್‌ ಫೋನ್‌ 3g ಸಂಪರ್ಕ ಸೌಲಭ್ಯ ಕೂಡ ಒಳಗೊಂಡಿದೆ. ಸ್ವದೇಶಿ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಮೈಕ್ರೊಮ್ಯಾಕ್ಸ್ ಜತೆಗೂಡಿ ಭಾರತ್ ಫೋನ್ ಬಿಡುಗಡೆ ಮಾಡುತ್ತಿವೆ.

ಗ್ರಾಮೀಣ ಗ್ರಾಹಕರಿಗೆ ಲಾಭ

ಗ್ರಾಮೀಣ ಗ್ರಾಹಕರಿಗೆ ಲಾಭ

ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅಗ್ಗದ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯ ಸಿಗಲಿದೆ. ಜನವರಿಯಿಂದ ಬಿಎಸ್ಎನ್ಎಲ್ 4g ಸೇವೆ ನೀಡಲಿದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ.

ಉಚಿತ ರೋಮಿಂಗ್ ಸೌಲಭ್ಯ

ಉಚಿತ ರೋಮಿಂಗ್ ಸೌಲಭ್ಯ

ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಿಎಸ್ಎನ್ಎಲ್ ಸಂಸ್ಥೆ ದೆಹಲಿ ಮತ್ತು ಮುಂಬೈ ಹೊರತುಪಡಿಸಿ 98 ಮಿಲಿಯನ್ ಮೊಬೈಲ್ ಚಂದಾದಾರರನ್ನು ಮತ್ತು 16 ಮಿಲಿಯನ್ ಲ್ಯಾಂಡ್ಲೈನ್ ​​ಗ್ರಾಹಕರನ್ನು ಹೊಂದಿದೆ.
ಬಿಎಸ್ಎನ್ಎಲ್ ಅನಿಯಮಿತ ಕರೆ ಮತ್ತು ಡೇಟಾ ಸೇವೆ ಜತೆಗೆ ರೋಮಿಂಗ್ ಸಂದರ್ಭದಲ್ಲಿ ಒಳಬರುವ ಮತ್ತು ಹೊರ ಹೋಗುವ ಕರೆಗಳನ್ನು ಉಚಿತವಾಗಿ ನೀಡಲಿದೆ ಎಂದು ಮೈಕ್ರೊಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಹೇಳಿದ್ದಾರೆ.

English summary

BSNL offers unlimited calling, data on Bharat phone for Rs97 per month

State-owned telecom firm BSNL Tuesday launched unlimited calling and a data plan for Rs97 a month for the buyers of Micromax’s 4G VoLTE enabled Bharat phone.
Story first published: Thursday, October 19, 2017, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X