For Quick Alerts
ALLOW NOTIFICATIONS  
For Daily Alerts

ಯಾವ ಕಂಪನಿ ತನ್ನ ಪ್ರತಿ ಉದ್ಯೋಗಿಗಳಿಂದ ಅತಿಹೆಚ್ಚು ಹಣ ಸಂಪಾದಿಸುತ್ತದೆ ಗೊತ್ತೆ?

|

ಸಾಫ್ಟ್ವೇರ್ ಅಥವಾ ಟೆಕ್ ಕಂಪನಿಗಳು ಎಂದರೆ ಅವು ಹಣ ಮುದ್ರಿಸುವ ಯಂತ್ರಗಳಂತೆ ಭಾಸವಾಗುತ್ತವೆ! ಸಾಫ್ಟ್ವೇರ್ ಉದ್ಯೋಗಿ ಎಂದಾಕ್ಷಣ ತಿಂಗಳಿಗೆ ಲಕ್ಷಕ್ಕೆ ಕಡಿಮೆಯಿಲ್ಲದಂತೆ ದುಡಿಯುವವರು ಎಂಬ ಅಭಿಪ್ರಾಯಕ್ಕೆ ನಾವು ಬಂದು ಬಿಡುತ್ತೇವೆ.

ವಾಸ್ತವವಾಗಿ ಈ ಸಂಸ್ಥೆಗಳು ಹಲವಾರು ವರ್ಷದ ಕಠಿಣ ಪರಿಶ್ರಮ, ಸಂಶೋಧನೆ ಹಾಗೂ ಅಭಿವೃದ್ದಿ, ಸ್ಪರ್ಧೆಯಲ್ಲಿ ಜಯಗಳಿಸುವ ಛಲ, ಹೂಡುವ ಹಣ ನಷ್ಟವಾಗುವ ಭೀತಿ ಮೊದಲಾದ ಹತ್ತು ಹಲವು ಸಂದರ್ಭಗಳನ್ನು ಎದುರಿಸಿ ಮುಂದೆ ಬಂದಿರುತ್ತವೆ. ಇದರ ಪ್ರತಿಫಲ ಈಗ ದೊರಕುತ್ತಿದ್ದು ಉದ್ಯೋಗಿಗಳು ಉತ್ತಮ ವೇತನ ಪಡೆಯಲು ಸಾಧ್ಯವಾಗುತ್ತಿದೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ಬನ್ನಿ, ಯಾವ ಸಂಸ್ಥೆ ತನ್ನ ಉದ್ಯೋಗಿಗಳಿಂದ ಎಷ್ಟು ಸಂಪಾದಿಸುತ್ತವೆ ಎಂಬುದನ್ನು ನೋಡೋಣ ಬನ್ನಿ..

1. ಆಪಲ್ (1.9 ಮಿಲಿಯನ್ ಡಾಲರ್)
 

1. ಆಪಲ್ (1.9 ಮಿಲಿಯನ್ ಡಾಲರ್)

ವಿಶ್ವದಲ್ಲಿ ಅಗ್ರಸ್ಥಾನದಲ್ಲಿರುವ ಆಪಲ್ ಕಂಪನಿ ತನ್ನ ಪ್ರತಿ ಉದ್ಯೋಗಿಯಿಂದ ಗರಿಷ್ಠ ಲಾಭವನ್ನು ಗಳಿಸುವ ಸಂಸ್ಥೆ ಆಗಿದೆ. ಸಂಸ್ಥೆಯಲ್ಲಿ ಒಟ್ಟು 1,16,000 ಉದ್ಯೋಗಿಗಳಿದ್ದು, ಪ್ರತಿ ಉದ್ಯೋಗಿಯಿಂದ ಸುಮಾರು 1.9 ಮಿಲಿಯನ್ ಡಾಲರುಗಳಷ್ಟು ಲಾಭ ಮಾಡುತ್ತಿದೆ. ಜಾಗತಿಕವಾಗಿ ಪ್ರತಿ ಉದ್ಯೋಗಿಯ ಮೇಲೆ ಒಂದು ಸಂಸ್ಥೆ ಗಳಿಸುವ ಗರಿಷ್ಠ ಮೊತ್ತ ಇದಾಗಿದೆ. ಉದ್ಯಮ (ಬಿಸಿನೆಸ್) ಅಭಿವೃದ್ಧಿಪಡಿಸುವುದು ಹೇಗೆ?

2. ಫೇಸ್ಬುಕ್ (1.6 ಮಿಲಿಯನ್ ಡಾಲರ್)

2. ಫೇಸ್ಬುಕ್ (1.6 ಮಿಲಿಯನ್ ಡಾಲರ್)

ಈಗ ಫೇಸ್ಬುಕ್ ನಲ್ಲಿ ಒಂದು ಬಿಲಿಯನ್ ಗೂ ಹೆಚ್ಚು ಗ್ರಾಹಕರಿದ್ದು, ಕೆಲವೇ ಜನರಿಂದ ನಡೆಸಲ್ಪಡುತ್ತಿದೆ. ಇದರಲ್ಲಿ ಸುಮಾರು ಇಪ್ಪತ್ತು ಸಾವಿರ ಉದ್ಯೋಗಿಗಳಿದ್ದು, ಪ್ರತಿಯೊಬ್ಬರಿಂದಲೂ ಸಂಸ್ಥೆ ಸುಮಾರು 1.6 ಮಿಲಿಯನ್ ಡಾಲರ್ ಗಳಿಸುತ್ತಿದೆ.

3. ಆಲ್ಫಾಬೆಟ್ (1.3 ಮಿಲಿಯನ್ ಡಾಲರ್)

3. ಆಲ್ಫಾಬೆಟ್ (1.3 ಮಿಲಿಯನ್ ಡಾಲರ್)

ಕಳೆದ ಐದು ವರ್ಷಗಳಲ್ಲಿ ಈ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ. ಆದರೂ ಅತಿ ಹೆಚ್ಚು ಲಾಭ ಗಳಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಇದರಲ್ಲಿರುವ ಒಟ್ಟು ಎಪ್ಪತ್ತು ಸಾವಿರ ಉದ್ಯೋಗಿಗಳಿಂದ ಪ್ರತಿ ಉದ್ಯೋಗಿಯಿಂದಲೂ ಸುಮಾರು 1.3 ಮಿಲಿಯನ್ ಡಾಲರ್ ಗಳಿಸುತ್ತಿದೆ. ಇವರು ಭಾರತದ ಉದ್ಯಮವನ್ನು ಆಳಲಿರುವ ಯುವ ಉದ್ಯಮಿಗಳು!

4. ವೆರಿಸೈನ್ (1.2 ಮಿಲಿಯನ್ ಡಾಲರ್)
 

4. ವೆರಿಸೈನ್ (1.2 ಮಿಲಿಯನ್ ಡಾಲರ್)

ಈ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ವೆರಿಸೈನ್ ಪಡೆದಿದೆ. ಈ ಕಂಪನಿಯಲ್ಲಿ ಕೇವಲ 1,019 ಉದ್ಯೋಗಿಗಳಿದ್ದು, ಇದರ ಸೇವೆಗಳ ವ್ಯಾಪ್ತಿ ಮಾತ್ರ ಹೆಚ್ಚಿದೆ. ಎಸ್ಸೆಸ್ಸೆಲ್ ಸರ್ಟಿಫಿಕೇಟ್, ಡೊಮೈಲ್ ಲೆವೆಲ್ ರಿಜಿಸ್ಟ್ರೇಶನ್, DNS, DDoS ಮಿಟಿಗೇಶನ್, ಸೈಬರ್ ಅಟ್ಯಾಕ್ ವಿರುದ್ದ ರಕ್ಷಣೆ ಮೊದಲಾದ ಸೇವೆಗಳಿಗೆ ಪ್ರತಿ ಉದ್ಯೋಗಿಯಿಂದ ಸುಮಾರು 1.2 ಮಿಲಿಯನ್ ಡಾಲರ್ ಹತ್ತಿರ ಗಳಿಸುತ್ತಿದೆ.

5. ವೀಸಾ: (1.1 ಮಿಲಿಯನ್ ಡಾಲರ್)

5. ವೀಸಾ: (1.1 ಮಿಲಿಯನ್ ಡಾಲರ್)

ಹಣಕಾಸು ವಹಿವಾಟಿನ ಸಂಸ್ಥೆಗಳು ಬಹಳ ಹೆಚ್ಚಿನ ಲಾಭ ಗಳಿಸುತ್ತವೆ. ವೀಸಾ ಸಂಸ್ಥೆಯಲ್ಲಿ 11,300 ಉದ್ಯೋಗಿಗಳಿದ್ದು, ಪ್ರತಿ ಉದ್ಯೋಗಿಯಿಂದ ಸುಮಾರು 1.1 ಮಿಲಿಯನ್ ಡಾಲರ್ ಗಳಿಸುತ್ತದೆ.

6. ಮಾಸ್ಟರ್ ಕಾರ್ಡ್ (906,000 ಡಾಲರ್)

6. ಮಾಸ್ಟರ್ ಕಾರ್ಡ್ (906,000 ಡಾಲರ್)

ವೀಸಾದಂತಹ ಇನ್ನೊಂದು ಸಂಸ್ಥೆಯಾದ ಮಾಸ್ಟರ್ ಕಾರ್ಡ್ ಸಂಸ್ಥೆಯಲ್ಲಿಯೂ ಸುಮಾರು 10,300 ಉದ್ಯೋಗಿಗಳಿದ್ದು ಪ್ರತಿ ಉದ್ಯೋಗಿಯಿಂದ 906,000 ಡಾಲರ್ ಗಳಿಸುತ್ತಿದೆ.

7. ಬ್ರಾಡ್ ಕಾಮ್ (843,000 ಡಾಲರ್)

7. ಬ್ರಾಡ್ ಕಾಮ್ (843,000 ಡಾಲರ್)

ಖ್ಯಾತ ನೆಟ್ವರ್ಕಿಂಗ್ ಸಂಸ್ಥೆಯಾದ ಬ್ರಾಡ್ ಕಾಮ್ 1991ರಲ್ಲಿ ಸ್ಥಾಪಿತವಾಗಿದ್ದು, ಇದು ಪ್ರತಿ ಉದ್ಯೋಗಿಯಿಂದ ಸುಮಾರು 843,000 ಡಾಲರ್ ಗಳಿಸುತ್ತಿದೆ.

8. ಲ್ಯಾಮ್ ರೀಸರ್ಚ್(785,000 ಡಾಲರ್)

8. ಲ್ಯಾಮ್ ರೀಸರ್ಚ್(785,000 ಡಾಲರ್)

ಹೆಚ್ಚಿನ ಜನರಿಗೆ ತಿಳಿದಿಲ್ಲದ ಸಂಸ್ಥೆಯಾದ ಲ್ಯಾಮ್ ರೀಸರ್ಚ್ ಎಲೆಕ್ಟ್ರಾನಿಕ್ ಉಪಕರಣಗಳ ಜೀವಾಳವಾದ ಇಂಟಿಗ್ರೇಟೆಡ್ ಸರ್ಕಿಟ್ ಗಳಿಗೆ ಸೆಮಿಕಂಡಕ್ಟರುಗಳನ್ನು ಒದಗಿಸುತ್ತದೆ. ಈ ಸಂಸ್ಥೆಯಲ್ಲಿ 9,100 ಉದ್ಯೋಗಿಗಳಿದ್ದಾರೆ. ಪ್ರತಿ ಉದ್ಯೋಗಿಯಿಂದ 785,000 ಡಾಲರ್ ಗಳಿಸುತ್ತಿದೆ.

9. ಕ್ವಾಲ್ ಕಾಮ್ (772,000 ಡಾಲರ್)

9. ಕ್ವಾಲ್ ಕಾಮ್ (772,000 ಡಾಲರ್)

ಕ್ವಾಲ್ ಕಾಮ್ ಕೂಡ ಇನ್ನೊಂದು ಸೆಮಿಕಂಡಕ್ಟರ್ ಹಾಗೂ ಟೆಲಿಕಮ್ಯೂನಿಕೇಶನ್ ಉತ್ಪನ್ನಗಳು ತಯಾರಿಸುವ ಸಂಸ್ಥೆಯಾಗಿದ್ದು, ಇದರಲ್ಲಿ 33,500 ಉದ್ಯೋಗಿಗಳಿದ್ದಾರೆ. ಪ್ರತಿ ಉದ್ಯೋಗಿಯಿಂದ ಸಂಸ್ಥೆ 772,000 ಡಾಲರ್ ಗಳಿಸುತ್ತಿದೆ.

10. ಮೈಕ್ರೋಸಾಫ್ಟ್ (748,000 ಡಾಲರ್)

10. ಮೈಕ್ರೋಸಾಫ್ಟ್ (748,000 ಡಾಲರ್)

ಹತ್ತನೇ ಸ್ಥಾನದಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಸಂಸ್ಥೆ ಇದೆ. ಮೇಲಿನ ಎಲ್ಲಾ ಕಂಪನಿಗಳಿಗೆ ಹೋಲಿಸಿದರೆ ಇದು ಅತಿಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.

ಇದರಲ್ಲಿ 1,24,000 ರಷ್ಟು ಭಾರೀ ಸಂಖ್ಯೆಯ ಉದ್ಯೋಗಿಗಳಿದ್ದು, ಪ್ರತಿ ಉದ್ಯೋಗಿಯಿಂದ 748,000 ಡಾಲರ್ ಗಳಿಸುತ್ತಿದೆ.

English summary

Here’s How Much Money These Top Companies Make Per Employee

Top tech companies are moneymaking machines — thanks to years of innovation, investments in R&D, and deep moats against the competition, they can earn some serious revenues. And while employees at these companies are well-paid, what’s staggering is how much money these companies can make her employee.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more