ಜಿಎಸ್ಟಿ ಸಿಹಿಸುದ್ದಿ! 200 ಪದಾರ್ಥಗಳ ತೆರಿಗೆ ಕಡಿತ; ಇಲ್ಲಿದೆ ಶೇ. 28, 18, 12 ವ್ಯಾಪ್ತಿಗೆ ಬರುವ ಸರಕುಗಳ ಪಟ್ಟಿ

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ದಿನನಿತ್ಯ ಬಳಕೆಯ ಸರಕುಗಳ ಜಿಎಸ್ಟಿ ದರ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದ್ದು, ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸ ದರಗಳು ಇದೇ ನವೆಂಬರ್ 15ರಿಂದ ಜಾರಿಯಾಗಲಿವೆ.

  ಸುಮಾರು 200 ಪದಾರ್ಥಗಳ ಸರಕು ಮತ್ತು ಸೇವೆ ತೆರಿಗೆ (ಜಿಎಸ್ಟಿ) ಯನ್ನು ಬದಲಾವಣೆ ಮಾಡಲಾಗಿದೆ. ಜಿಎಸ್ಟಿ ಎಫೆಕ್ಟ್: ಯಾವುದು ದುಬಾರಿ, ಯಾವುದು ಅಗ್ಗ..?

  ಶೇ. 28ರ ವ್ಯಾಪ್ತಿ

  ಈ ಹಿಂದಿನಂತೆ ಜಿಎಸ್ಟಿ ಶೇ. 28ರ ವ್ಯಾಪ್ತಿಯಲ್ಲಿ 228 ಸರಕುಗಳ ಪೈಕಿ 178 ಸರಕುಗಳನ್ನು ಶೇ. 18ರ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಕೇವಲ 50 ಐಷಾರಾಮಿ ಸರಕುಗಳು ಮಾತ್ರ ಶೇ. 28ರ ವ್ಯಾಪ್ತಿಯಲ್ಲಿ ಇರಲಿವೆ. ಕೇವಲ ದುಶ್ಚಟ ಮತ್ತು ದುಷ್ಪರಿಣಾಮ ಉಂಟು ಮಾಡುವ ವಸ್ತುಗಳಿಗೆ ಮಾತ್ರ ಶೇ. 28ರ ತೆರಿಗೆ ವಿಧಿಸಬೇಕು ಎಂಬ ವಿಚಾರದಲ್ಲಿ ಸರ್ವಾನುಮತ ವ್ಯಕ್ತವಾಗಿದೆ. ಪೇಂಟ್, ಸಿಮೆಂಟ್, ವಾಷಿಂಗ್‌ ಮೆಸಿನ್‌ಗಳು ಮತ್ತು ಏರ್‌ ಕಂಡೀಷನರ್‌ಗಳಂತಹ ಸರಕುಗಳಿಗೆ ಶೇ. 28ರ ತೆರಿಗೆ ವಿಧಿಸಲಾಗುತ್ತದೆ. (ಪೋಟೊ ಕೃಪೆ: The Times Of India) ಜಿಎಸ್ಟಿ ಜಾರಿ: ಜನಸಾಮಾನ್ಯರಿಗೇನು ಲಾಭ? ಯಾವುದು ದುಬಾರಿ, ಯಾವುದು ಅಗ್ಗ..?

  ಶೇ. 18ರ ವ್ಯಾಪ್ತಿ

  ಮೊದಲು ಶೇ. 28ರ ವ್ಯಾಪ್ತಿಯಲ್ಲಿದ್ದ ಚಾಕಲೇಟ್‌, ಶ್ಯಾಂಪೂ ಕೈಗಡಿಯಾರ, ಚೂಯಿಂಗ್ ಗಮ್‌, ಪ್ಲೈವುಡ್, ಕಾಸ್ಮೆಟಿಕ್, ವಾಸ್ ಬಸಿನ್, ಹಾಸಿಗೆ, ಡಿಟರ್ಜೆಂಟ್ ಹೀಗೆ ಹಲವು ದಿನಬಳಕೆಯ ಸರಕುಗಳ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದೆ. (ಪೋಟೊ ಕೃಪೆ: The economic times) ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

  ಶೇ. 12ರ ವ್ಯಾಪ್ತಿ

  ಈ ಮೊದಲು ಶೇ. 28ರ ವ್ಯಾಪ್ತಿಯಲ್ಲಿದ್ದ ಗೋಧಿ ಗ್ರೈಂಡರ್, ಟ್ಯಾಮಕ್ ಗಳು, ಶಸ್ತ್ರಸಜ್ಜಿತ ವಾಹನಗಳು ಶೇ. 12ರ ವ್ಯಾಪ್ತಿಯಲ್ಲಿ ಬರಲಿವೆ. ಜತೆಗೆ ಶೇ. 18 ರ ವ್ಯಾಪ್ತಿಯಲ್ಲಿದ್ದ ಪಾಸ್ತಾ, ಕಾಟನ್, ಸೆಣಬಿನ ಕೈಚೀಲ, ಡಯಾಬಿಟಿಕ್ ಪದಾರ್ಥಗಳು ಶೇ. 12ರ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ.

  ಸುದ್ದಿಗೋಷ್ಠಿಯಲ್ಲಿ ವಿವರಣೆ

  ಸೌಂದರ್ಯ ಪ್ರಸಾಧನ, ಪೌಷ್ಟಿಕ ಪಾನೀಯಗಳು, ಚಾಕೊಲೇಟ್‌ಗಳು, ಫೇಶಿಯಲ್ ಮೇಕಪ್‌ ಸಾಧನಗಳು, ಶೇವಿಂಗ್ ಮತ್ತು ಆಫ್ಟರ್‌ ಶೇವಿಂಗ್ ವಸ್ತುಗಳು, ಶಾಂಪೂ ದುರ್ಗಂಧ ನಿವಾರಕಗಳು, ವಾಷಿಂಗ್ ಪೌಡರ್‌, ಡಿಟರ್ಜೆಂಟ್‌, ಗ್ರಾನೈಟ್‌ ಮತ್ತು ಮಾರ್ಬಲ್ ಇತ್ಯಾದಿ ಸರಕುಗಳು ಶೇ. 18ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

  ಹೋಟೆಲ್‌/ರೆಸ್ಟೊರೆಂಟ್ ಅಗ್ಗ

  ಹವಾನಿಯಂತ್ರಿತ (ಎ.ಸಿ) ಮತ್ತು ಹವಾನಿಯಂತ್ರಣ ರಹಿತ (ನಾನ್‌ ಎ.ಸಿ) ರೆಸ್ಟೊರೆಂಟ್‌ಗಳಿಗೆ ಶೇ. 5ರಷ್ಟು ಏಕರೂಪದ ತೆರಿಗೆ ದರ ವಿಧಿಸಲು ನಿರ್ಧರಿಸಲಾಗಿದೆ. ರೂ. 7,500 ಮತ್ತು ಅದಕ್ಕಿಂತ ಹೆಚ್ಚಿನ ದರದಲ್ಲಿ ದಿನದ ಕೋಣೆ ಬಾಡಿಗೆ ವಿಧಿಸುವ ಪಂಚತಾರಾ ಹೋಟೆಲ್‌ಗಳಿಗೆ ಶೇ. 18, ರೂ. 7,500ಕ್ಕಿಂತ ಕಡಿಮೆ ಬಾಡಿಗೆ ವಿಧಿಸುವ ರೆಸ್ಟೊರೆಂಟ್‌ಗಳಿಗೆ ಶೇ. 5 ಮತ್ತು ಕೇಟರಿಂಗ್ ಸೌಲಭ್ಯಕ್ಕೆ ಶೇ. 18ರಷ್ಟು ಜಿಎಸ್ಟಿ ಜಾರಿಯಾಗಲಿದೆ ಎಂದು ಅರುಣ್‌ ಜೇಟ್ಲಿ ಹೇಳಿದ್ದಾರೆ.

  ಎಸಿ, ನಾನ್ ಎಸಿ ಹಿಂದಿನ ತೆರಿಗೆ

  ಪ್ರಸ್ತುತ ಹವಾನಿಯಂತ್ರಣ ರಹಿತ ರೆಸ್ಟೊರೆಂಟ್‌ಗಳಲ್ಲಿ ಶೇ. 12ರಷ್ಟು, ಹವಾನಿಯಂತ್ರಿತ ರೆಸ್ಟೊರೆಂಟ್ಸ್‌ಗಳಲ್ಲಿ ಶೇ. 18 ಹಾಗು ಪಂಚತಾರಾ ಹೋಟೆಲ್‌ಗಳಲ್ಲಿ ಶೇ. 28ರಷ್ಟು ತೆರಿಗೆ ವಿಧಿಸಲ್ಪಡುತ್ತಿತ್ತು.

  ತೀವ್ರ ವಿರೋಧದ ಪರಿಣಾಮ

  ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಸರಕುಗಳ ಮೇಲಿನ ಗರಿಷ್ಠ ತೆರಿಗೆ ದರಕ್ಕೆ ಜನರು ಹಾಗು ಪ್ರತಿಪಕ್ಷಗಳ ತೀವ್ರ ವಿರೋಧ ಮಾಡಿದ್ದವು. ಜುಲೈ 1ರಿಂದ ಜಾರಿಗೆ ಜಿಎಸ್ಟಿ ತೆರಿಗೆ ವ್ಯವಸ್ಥೆಯಲ್ಲಿ ವಿನಾಯಿತಿಗೆ ಒಳಪಟ್ಟ ಸರಕುಗಳ ಜತೆಗೆ (ಶೂನ್ಯ ತೆರಿಗೆ), ಶೇ 5, 12, 18 ಮತ್ತು 28ರ ತೆರಿಗೆ ದರ ವಿಧಿಸಲಾಗಿತ್ತು.

  ಐತಿಹಾಸಿಕ ನಿರ್ಧಾರ

  ಜಿಎಸ್ಟಿ ವ್ಯಾಪ್ತಿ ಬದಲಾವಣೆಯಿಂದಾಗಿ ಜಿಎಸ್ಟಿ ಮಂಡಳಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ವರ್ಣಿಸಲಾಗಿದೆ. ಕೇವಲ 50 ಸರಕುಗಳನ್ನು ಮಾತ್ರ ಶೇ. 28ರ ತೆರಿಗೆ ಪಟ್ಟಿಯಲ್ಲಿ ಉಳಿಸಿದ್ದು, ಉಳಿದೆಲ್ಲ ವಸ್ತುಗಳನ್ನು ಶೇ. 18ರ ತೆರಿಗೆ ಮಿತಿಗೆ ಒಳಪಡಿಸಲಾಗಿದೆ. ಈ ತೆರಿಗೆ ಕಡಿತದಿಂದ ವಾರ್ಷಿಕ 20,000 ಕೋಟಿ ಕಂದಾಯ ಕೊರತೆಯಾಗಲಿದೆ ಎನ್ನಲಾಗಿದೆ.

  ಜನಸಾಮಾನ್ಯರಿಗೆ ರಿಲ್ಯಾಕ್ಸ್!

  ಜುಲೈ 1ರಿಂದ ಜಿಎಸ್ಟಿ ಜಾರಿ ಬಂದ ನಂತರದಲ್ಲಿ ಇದು ಅತಿ ದೊಡ್ಡ ತೆರಿಗೆ ಕಡಿತವಾಗಿದೆ. ಶೇ. 0 ತೆರಿಗೆಯಿಂದ ಹಿಡಿದು ಶೇ. 28ರ ವರೆಗೆ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಇದು ದಿನನಿತ್ಯದ ಸರಕುಗಳ ಮೇಳೆ ಕೊಂಚ ರಿಲ್ಯಾಕ್ಸ್ ನೀಡಲಿದೆ. ಈಗ ಇದರ ವ್ಯಾಪ್ತಿ ಹಿಗ್ಗಿದೆ.

  English summary

  GST tax rates:Only 50 items to face 28% GST tax rates: Here are the complete details

  The Goods and Services Tax (GST) Council on Friday slashed tax on over 200 items, reduced the levy on restaurants to 5 per cent, left only 50 products under the highest 28 per cent slab, and increased the composition limit for small businesses, as it undertook a comprehensive overhaul of the new tax regime.
  Story first published: Saturday, November 11, 2017, 12:46 [IST]
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more