For Quick Alerts
ALLOW NOTIFICATIONS  
For Daily Alerts

2030ರ ಹೊತ್ತಿಗೆ 80 ಕೋಟಿ ಉದ್ಯೋಗ ಕಡಿತ

2030ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 800 ದಶಲಕ್ಷ ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಂಶೋಧನಾ ಘಟಕ ಮೆಕಿನ್ಸೆ ಮತ್ತು ಕಂಪನಿ (McKinsey & Co.) ಹೇಳಿದೆ.

By Siddu
|

2030ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 800 ದಶಲಕ್ಷ ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಂಶೋಧನಾ ಘಟಕ ಮೆಕಿನ್ಸೆ ಮತ್ತು ಕಂಪನಿ (McKinsey & Co.) ಹೇಳಿದೆ.

ಪ್ರಸ್ತುತ ದಿನಗಳಲ್ಲಿ ಕಂಪನಿಗಳ ಅನುಭವಿಸುತ್ತಿರುವ ನಷ್ಟ, ಆಟೊಮೇಷನ್(ಸ್ವಯಂಚಾಲಿತ ವ್ಯವಸ್ಥೆ ಅಳವಡಿಕೆ) , ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ,) ಕ್ಲೌಡ್ ಕಂಪ್ಯೂಟಿಂಗ್, ಬದಲಾದ ಹೊಸ ತಂತ್ರಜ್ಞಾನ, ಅಸಮರ್ಥ ಕೌಶಲ್ಯರಹಿತ ನೌಕರರು ಇವೇಲ್ಲವೂ ಉದ್ಯೋಗ ಕಡಿತಕ್ಕೆ ನಾಂದಿ ಹಾಡಿವೆ. ದೇಶದ 7 ದೈತ್ಯ ಕಂಪನಿಗಳು ಇನ್ನುಮುಂದೆ ಉದ್ಯೋಗ ನೀಡುತ್ತಿಲ್ಲ!!

ಉದ್ಯೋಗ ಕಡಿತಕ್ಕೆ ಕಾರಣ

ಉದ್ಯೋಗ ಕಡಿತಕ್ಕೆ ಕಾರಣ

ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!

ಯಾರ ಮೇಲೆ ಪರಿಣಾಮ

ಯಾರ ಮೇಲೆ ಪರಿಣಾಮ

ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವರದಿ ಮಾಡಿದೆ. ಆಟೊಮೇಷನ್ ಎಲ್ಲೆಡೆ ಪಸರಿಸುವುದರಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ.
ಯಂತ್ರ ನಿರ್ವಾಹಕರು, ಫಾಸ್ಟ್ ಫುಡ್ ಕಾರ್ಮಿಕರು ಮತ್ತು ಬ್ಯಾಂಕು-ಕಛೇರಿ ನೌಕರರು ಹೆಚ್ಚು ಪರಿಣಾಮ ಅನುಭವಿಸಲಿದ್ದಾರೆ.

ಪರ್ಯಾಯ ಮಾರ್ಗ

ಪರ್ಯಾಯ ಮಾರ್ಗ

ರೋಬೋಟ್ಸ್ ಮತ್ತು ಆಟೊಮೇಷನ್ ಪರಿಣಾಮದಿಂದಾಗಿ ಮುಂದಿನ 13 ವರ್ಷಗಳಲ್ಲಿ ಸುಮಾರು 800 ಮಿಲಿಯನ್ ನೌಕರರು ಕೆಲಸ ಕಳೆದುಕೊಳ್ಳುವುದರಿಂದ ಹೊಸ ಉದ್ಯೋಗಗಳ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ವರದಿ ಮಾಡಿದೆ.

ಹೊಸ ಕೌಶಲ್ಯ ಕಲಿಯಬೇಕು

ಹೊಸ ಕೌಶಲ್ಯ ಕಲಿಯಬೇಕು

ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಕಾರ್ಮಿಕರು ಹೊಸ ತಂತ್ರಜ್ಞಾನ ಹಾಗು ಕೌಶಲ್ಯಗಳನ್ನು ಕಲಿಯುತ್ತಿರಬೇಕಾಗುತ್ತದೆ ಎಂದು ಮೈಕಲ್ ಚುಯಿ ಸಂಸ್ಥೆ ಸಂದರ್ಶನವೊಂದರಲ್ಲಿ ಹೇಳಿದೆ.

English summary

800 million workers worldwide may lose their jobs by 2030

As many as 800 million workers worldwide may lose their jobs to robots and automation by 2030, equivalent to more than a fifth of today’s global labor force.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X