For Quick Alerts
ALLOW NOTIFICATIONS  
For Daily Alerts

2ನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಹೆಚ್ಚಳ ನಿರೀಕ್ಷೆ: ಫಿಕ್ಕಿ

ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ. 6.2ಕ್ಕೆ ಏರಿಕೆಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ನಡೆಸಿದ ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.

|

ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ. 6.2ಕ್ಕೆ ಏರಿಕೆಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ನಡೆಸಿದ ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.

 

ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿ ನಂತರದಲ್ಲಿ ಆರ್ಥಿಕತೆಯ ಮೇಲೆ ಉಂಟಾದ ಋಣಾತ್ಮಕ ಪರಿಣಾಮಗಳು ಕಡಿಮೆಯಾಗುತ್ತಿರುವುದರಿಂದ ಒಟ್ಟು ಆಂತರಿಕ ಉತ್ಪಾದನೆ ಏರಿಕೆಯಾಗಲಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರವು ಮೂರು ವರ್ಷಗಳ ಕನಿಷ್ಠ ಮಟ್ಟ ಶೇ. 5.7ಕ್ಕೆ ಕುಸಿದಿತ್ತು. 'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಗ್ರಾಹಕರಿಗೆ ಸಿಗಲಿರುವ ಪ್ರಯೋಜನಗಳೇನು?

ಫಿಕ್ಕಿ ಆರ್ಥಿಕ ಸಮೀಕ್ಷೆ

ಫಿಕ್ಕಿ ಆರ್ಥಿಕ ಸಮೀಕ್ಷೆ

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನಡೆಸಿದ ಆರ್ಥಿಕ ಔಟ್ ಲುಕ್ ಸಮೀಕ್ಷೆಯಲ್ಲಿ ಹೊಸ ತೆರಿಗೆ ವ್ಯವಸ್ಥೆ ಸದ್ಯಕ್ಕೆ ಸ್ಥಿರಗೊಂಡಿರುವುದರಿಂದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ. 3ನೇ ತ್ರೈಮಾಸಿಕದಲ್ಲಿ ಶೇ. 6.7ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ.

ತಜ್ಞರು ಅಭಿಪ್ರಾಯ

ತಜ್ಞರು ಅಭಿಪ್ರಾಯ

ಜಿಡಿಪಿ ದರ ಹೆಚ್ಚಳಕ್ಕಾಗಿ ಉತ್ಪಾದನೆ ಹೆಚ್ಚಿಸುವ ಬಂಡವಾಳ ಹೂಡಿಕೆಯಂತ ಯೋಜನೆಗಳಿಗೆ ಆದ್ಯತೆ ನೀಡಬೇಕು. ದೇಶದಲ್ಲಿ ಒಟ್ಟಾರೆ ಬೇಡಿಕೆ ಹೆಚ್ಚಲು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಕುಗಳ ಉಪಭೋಗ ಹೆಚ್ಚಳಗೊಳ್ಳಬೇಕಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆ ಮಾನದಂಡ
 

ಸಮೀಕ್ಷೆ ಮಾನದಂಡ

ಫಿಕ್ಕಿ ಅಕ್ಟೋಬರ್‌ ತಿಂಗಳಲ್ಲಿ ಈ ಆರ್ಥಿಕ ಔಟ್ ಲುಕ್ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಆರ್ಥಿಕ ತಜ್ಞರು, ಉದ್ದಿಮೆಗಳು, ಬ್ಯಾಂಕಿಂಗ್‌ ಮತ್ತು ಸೇವಾ ವಲಯಗಳು ಭಾಗವಹಿಸಿದ್ದವು. ಸಮೀಕ್ಷೆ ವರದಿಯಲ್ಲಿ ಈ ಎಲ್ಲಾ ವಲಯಗಳ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿದೆ.

English summary

India GDP growth rate likely to improve to 6.2% in Q2: Ficci report

The adverse impact of demonetisation and GST appears to be bottoming out in the Indian economy, according to Ficci’s latest Economic Outlook Survey.
Story first published: Wednesday, November 29, 2017, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X