For Quick Alerts
ALLOW NOTIFICATIONS  
For Daily Alerts

'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಚಾಲನೆ, ಗ್ರಾಹಕರಿಗೆ ಸಿಗಲಿರುವ ಪ್ರಯೋಜನಗಳೇನು?

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು 500 ಮಿಲಿಯನ್ ಖಾತೆಗಳೊಂದಿಗೆ ಪ್ರಪಂಚದ ಅತಿದೊಡ್ಡ ಡಿಜಿಟಲ್ ಬ್ಯಾಂಕ್ ಆಗಿಸುವ ಗುರಿ ಹೊಂದಿದೆ.

By Siddu
|

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಇದು ಆನ್ಲೈನ್ ಹಣಕಾಸು ಸೇವೆಗಳಿಂದ ಹಿಡಿದು ಕ್ರೆಡಿಟ್ ಕಾರ್ಡ್ ಮತ್ತು ಸ್ಟಾಕ್ ಮಾರುಕಟ್ಟೆ ವ್ಯಾಪಾರದವರೆಗೆ ಸಂಪತ್ತು ನಿರ್ವಹಣಾ ಸೇವೆಗಳನ್ನು ಒದಗಿಸಲಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು 500 ಮಿಲಿಯನ್ ಖಾತೆಗಳೊಂದಿಗೆ ಪ್ರಪಂಚದ ಅತಿದೊಡ್ಡ ಡಿಜಿಟಲ್ ಬ್ಯಾಂಕ್ ಆಗಿಸುವ ಗುರಿ ಹೊಂದಿದೆ ಎಂದು ಸಂಸ್ಥೆ ಹೇಳಿದೆ.

ಪೇಟಿಎಂ ಸಂಸ್ಥೆಯ ಮುಂದಿನ ಗುರಿಗಳು, ಗ್ರಾಹಕರಿಗೆ ನೀಡಲಿರುವ ಸೇವಾ ಸೌಲಭ್ಯಗಳೇನು ಎಂಬುದನ್ನು ನೋಡೋಣ.. ಪೇಟಿಎಂ ಮೂಲಕ ಶೀಘ್ರದಲ್ಲಿ ಹಣ ವರ್ಗಾವಣೆ ಹೇಗೆ?

ಪೇಟಿಎಂ ಹೂಡಿಕೆ ಗುರಿ

ಪೇಟಿಎಂ ಹೂಡಿಕೆ ಗುರಿ

ಪೇಟಿಎಂ ಸಂಸ್ಥೆ ತನ್ನ ಡಿಜಿಟಲ್ ಪೇಮೆಂಟ್ಸ್, ಹಣಕಾಸು ಸೇವೆ ಮತ್ತು ಇ-ಕಾಮರ್ಸ್ ವಹಿವಾಟುಗಳ ವ್ಯಾಪ್ತಿ ವಿಸ್ತರಿಸಲು ರೂ. 20 ಸಾವಿರ ಕೋಟಿಯಷ್ಟು ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ. ಅಂದರೆ ಮುಂಬರುವ ಮೂರು ವರ್ಷಗಳಲ್ಲಿ ರೂ.18-20 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಲಾಗುವುದು ಎಂದು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ. ಪೇಟಿಎಂ ಬಳಸಿ ರೇಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಸೌಲಭ್ಯಗಳೇನು?

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಸೌಲಭ್ಯಗಳೇನು?

* ವೇಗವಾಗಿ ಮತ್ತು ಕಾಗದರಹಿತ ಖಾತೆ ತೆರೆಯಬಹುದು.
* ನೆಫ್ಟ್(NEFT), ಐಎಂಪಿಎಸ್(IMPS)‌ ಆರ್ಟಿಜಿಎಸ್(RTGS) ಸೇರಿದಂತೆ ಉಚಿತ ಆನ್‌ಲೈನ್‌ ವಹಿವಾಟು ಸೇವೆ ಒದಗಿಸಲಿದೆ.
* ಗರಿಷ್ಠ ರೂ. 1 ಲಕ್ಷದ ವರೆಗೆ ಪೇಮೆಂಟ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶವಿದೆ.
* ಶೂನ್ಯ ಮಿನಿಮಮ್ ಬ್ಯಾಲೆನ್ಸ್ ಸೌಲಭ್ಯ ಮತ್ತು ಆನ್ಲೈನ್ ವಹಿವಾಟು ಶುಲ್ಕ ಇರುವುದಿಲ್ಲ.
* ಪೇಟಿಎಂ ಪೇಮೆಂಟ್ ಬ್ಯಾಂಕ್‌ ರುಪೇ ಡೆಬಿಟ್ ಕಾರ್ಡ್ ಸೌಲಭ್ಯ ಒದಗಿಸಲಿದೆ.
* ಪೇಮೆಂಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ.
* ಗ್ರಾಹಕರಿಗೆ ಡೆಬಿಟ್ ಕಾರ್ಡ್‌ ಒದಗಿಸಲಾಗುತ್ತಿದ್ದು, ಪೇಟಿಎಂ ಪೇಮೆಂಟ್ ಬ್ಯಾಂಕ್‌ ಎಟಿಎಂ ಮೂಲಕ 5 ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಬಹುದು. ಮೆಟ್ರೊ ಮತ್ತು ನಾನ್ ಮೆಟ್ರೊ ಎಟಿಎಂ ಗಳಲ್ಲಿ ಮೂರು ಬಾರಿ ಉಚಿತವಾಗಿ ಹಣ ಪಡೆಯಬಹುದು. ನಂತರದ ಪ್ರತಿ ವಹಿವಾಟಿಗೆ ರೂ. 20 ಶುಲ್ಕ ವಿಧಿಸಲಾಗುತ್ತದೆ.

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

1. ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ.
2. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿ
3. ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ.
4. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ.
5. ಬಿಲ್ ವಿವರವನ್ನು ಪರಿಶೀಲಿಸಿ.
6. ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ.
7. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ.
8. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ.
9. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ. 10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

ಏರ್‌ಟೆಲ್‌ ಮತ್ತು ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌

ಏರ್‌ಟೆಲ್‌ ಮತ್ತು ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌

ಈಗಾಗಲೇ ಏರ್‌ಟೆಲ್‌ ಮತ್ತು ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ ಸೇವೆಯನ್ನು ಆರಂಭಿಸಿದ್ದು, ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಶೇ. 7.3 ಹಾಗೂ ಅಂಚೆ ಪೇಮೆಂಟ್ ಬ್ಯಾಂಕ್‌ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿವೆ. ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಆರಂಭ

ಪೇಟಿಎಂ ಸೇವೆಗಳಲ್ಲಿ ಏರಿಕೆ

ಪೇಟಿಎಂ ಸೇವೆಗಳಲ್ಲಿ ಏರಿಕೆ

ನೋಟು ನಿಷೇಧದ ನಂತರದಲ್ಲಿ ಪೇಟಿಎಂನ ಮೊಬೈಲ್‌ ವಾಲೆಟ್ ಒದಗಿಸುವ ರೀಚಾರ್ಜ್‌ ಸೇವೆ, ಬಿಲ್‌ ಪಾವತಿ ಸೇವೆ, ಇ-ಕಾಮರ್ಸ್, ಟಿಕೆಟ್‌ ಕಾಯ್ದಿರಿಸುವಿಕೆ ಮುಂತಾದ ಹಲವು ಸೇವೆಗಳಲ್ಲಿ ಗಣನೀಯ ಏರಿಕೆಯಾಗಿದೆ.

English summary

Paytm Payments Bank launched: What are the Benefits?

Paytm's Payments Bank is officially official now. Union Finance Minister Arun Jaitley inaugurated the service at an event in New Delhi on Tuesday. Paytm Payments Bank is notably India's mobile-first bank with which you will be able to make online transactions at zero cost.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X