For Quick Alerts
ALLOW NOTIFICATIONS  
For Daily Alerts

2017ರ ವಿಶ್ವದ ಟಾಪ್ 10 ಐಟಿ ಕಂಪನಿಗಳು

ಜಗತ್ತಿನಾದ್ಯಂತ ಐಟಿ ಅಥವಾ ಮಾಹಿತಿ ತಂತ್ರಜ್ಞಾನವೇ ವ್ಯವಹಾರಗಳನ್ನು ಮುನ್ನಡೆಸುತ್ತಿದೆ ಎಂದರೆ ತಪ್ಪಾಗಲಾರದು. ಅಪಾರ ಸಮಯ ಬಳಸಿಕೊಳ್ಳುತ್ತಿದ್ದ ನೂರಾರು ಸಂಗತಿಗಳು ನಮ್ಮ ಕೈ ಬೆರಳುಗಳ ತುದಿಯಲ್ಲಿಯೇ ಆಗುವಂತೆ ಸಾಧ್ಯವಾಗಿಸಿದ್ದು ಐಟಿ.

By Siddu
|

ಜಗತ್ತಿನಾದ್ಯಂತ ಐಟಿ ಅಥವಾ ಮಾಹಿತಿ ತಂತ್ರಜ್ಞಾನವೇ ವ್ಯವಹಾರಗಳನ್ನು ಮುನ್ನಡೆಸುತ್ತಿದೆ ಎಂದರೆ ತಪ್ಪಾಗಲಾರದು. ನಾವು ಇದುವರೆಗೆ ನಂಬಿಕೊಂಡು ಬಂದಿದ್ದ, ಅಪಾರ ಸಮಯ ಬಳಸಿಕೊಳ್ಳುತ್ತಿದ್ದ ನೂರಾರು ಸಂಗತಿಗಳು ನಮ್ಮ ಕೈ ಬೆರಳುಗಳ ತುದಿಯಲ್ಲಿಯೇ ಆಗುವಂತೆ ಸಾಧ್ಯವಾಗಿಸಿದ್ದು ಐಟಿ. ಇಂದು ಹಲವಾರು ಉದ್ಯಮಗಳು ಐಟಿ ತಂತ್ರಜ್ಞಾನದ ಮೂಲಕವೇ ಹೆಚ್ಚು ಜನರನ್ನು ತಲುಪಿ ಹೆಚ್ಚು ಲಾಭವನ್ನು ಗಳಿಸಲು ಯತ್ನಿಸುತ್ತಿವೆ. ಈ ಬೇಡಿಕೆಯನ್ನು ಪೂರೈಸಲು ವಿಶ್ವದಾದ್ಯಂತ ನೂರಾರು ಐಟಿ ಸಂಸ್ಥೆಗಳು ತಲೆಯೆತ್ತಿವೆ. ವಿಶ್ವದ ದಿಗ್ಗಜರಾದ ಐಬಿಎಮ್, ಆಕ್ಸೆಂಚರ್, ಹೆಚ್ ಪಿ ಎಂಟರ್ ಪ್ರೈಸ್, ಒರಾಕಲ್ ನಂತಹ ಸಂಸ್ಥೆಗಳ ಜೊತೆಜೊತೆಗೆ ಕ್ಯಾಪ್ ಜೆಮಿನಿ, ಕಾಗ್ನಿಜೆಂಟ್, ಟಿಸಿಎಸ್ ಮೊದಲಾದ ಸಂಸ್ಥೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ಟಾಪ್ 10 ಐಟಿ ಕಂಪನಿಗಳು

ಈ ಸಂಸ್ಥೆಗಳ ಲಾಭದ ಹಿಂದೆ ಬಹಳ ಚುರುಕುಬುದ್ದಿ ಇರುವ ವ್ಯಕ್ತಿಗಳು ನೇರವಾಗಿ ಕಾರಣರಾಗಿದ್ದಾರೆ. ಇವರ ಸಂಸ್ಥೆಯ ಲಾಭದ ಕುರಿತಾದ ಅಪಾರ ಪಾಂಡಿತ್ಯ ಹಾಗೂ ದೂರದೃಷ್ಟಿ ಹಾಗೂ ಸಕರಾತ್ಮಕ ಉದ್ಯೋಗದ ಸಂಸ್ಕೃತಿಯೂ ಈ ಲಾಭಕ್ಕೆ ನೆರವಾಗಿದೆ. ಇಂದು ವಿಶ್ವದ ಬಹುತೇಕ ಎಲ್ಲಾ ಪ್ರಮುಖ ಸಂಸ್ಥೆಗಳು ಹಾಗೂ ಸರ್ಕಾರಿ ವಿಭಾಗಗಳು ತಮ್ಮ ಸೇವೆಯನ್ನು ಉನ್ನತೀಕರಿಸಿ ಐಟಿ ಮೂಲಕವೇ ನಿರ್ವಹಿಸುತ್ತಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾಹಿತಿಯನ್ನು ಸಂಗ್ರಹಿಸಿ ನೀಡುವುದು, ಸಮಾಲೋಚನೆ, ಈಗಿರುವ ವ್ಯವಸ್ಥೆಗಳಿಗೆ ಪರ್ಯಾಯ ಐಟಿ ಪರಿಹಾರ ಇತ್ಯಾದಿಗಳನ್ನು ಈ ಸಂಸ್ಥೆಗಳು ಒದಗಿಸುತ್ತಿವೆ. ಪ್ರಸ್ತುತ ಇಡಿಯ ಜಗತ್ತನ್ನೇ ಈ ಜಾಲದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿರುವ ಉದ್ಯಮ ಇನ್ನೂ ಕೆಲವು ವರ್ಷಗಳವರೆಗಾದರೂ ಬೇಡಿಕೆಯ ಉತ್ತುಂಗದಲ್ಲಿಯೇ ಇರುವುದು ನಿಶ್ಚಿತವಾಗಿದೆ.

2017ರ ಪ್ರಮುಖ ಹತ್ತು ಐಟಿ ಸಂಸ್ಥೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ..

10. ಇನ್ಫೋಸಿಸ್

10. ಇನ್ಫೋಸಿಸ್

ವಿಶ್ವದ ಟಾಪ್ 10 ಸಂಸ್ಥೆಗಳ ಪಟ್ಟಿಯಲ್ಲಿ ಭಾರತೀಯ ಎರಡು ಸಂಸ್ಥೆಗಳಿದ್ದು, ಇದರಲ್ಲೊಂದು ನಮ್ಮ ಕರ್ನಾಟಕದವರದ್ದೇ ಆದ ನಾರಾಯಣ ಮೂರ್ತಿ ಹಾಗು ಸುಧಾ ಮೂರ್ತಿ ದಂಪತಿಗಳ ಇನ್ಫೋಸಿಸ್. ಕೆಲ ವರ್ಷಗಳ ಹಿಂದೆ ಕೇವಲ ಇನ್ನೂರೈವತ್ತು ಡಾಲರುಗಳ ಬಂಡವಾಳದೊಂದಿಗೆ ಪುಣೆಯ ಆರು ಇಂಜಿನಿಯರ್ ಸ್ನೇಹಿತರೊಂದಿಗೆ ಮೂರ್ತಿಯವರು ಸ್ಥಾಪಿಸಿದ ಅಪ್ಪಟ ಭಾರತೀಯ ಐಟಿ ಸಂಸ್ಥೆ ಕೇವಲ ಆರು ವರ್ಷಗಳಲ್ಲಿ ಅಮೇರಿಕಾದ ಬೋಸ್ಟನ್ ನಗರದಲ್ಲಿ ಕಛೇರಿಯನ್ನು ಕೊಂಡು ಮಾರುಕಟ್ಟೆಯನ್ನು ವಿಸ್ತರಿಸುವಷ್ಟು ಏಳಿಗೆ ಕಂಡಿದೆ.

ಪ್ರಸ್ತುತ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ದವಾಗಿರುವ ನಮ್ಮ ಬೆಂಗಳೂರಿನಲ್ಲಿಯೇ ಮುಖ್ಯ ಕಛೇರಿಯನ್ನು ಹೊಂದಿರುವ ಈ ಸಂಸ್ಥೆ ಕಳೆದ ವರ್ಷ 10 ಬಿಲಿಯನ್ ಡಾಲರ್ (10 ಸಾವಿರ ಕೋಟಿ) ಸಂಪಾದಿಸುವ ಮೂಲಕ ಭಾರತದ ದಿಗ್ಗಜ ಸಂಸ್ಥೆಯಾಗಿತ್ತು.
ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಪಟ್ಟಿಯಲ್ಲಿಯೂ ಸ್ಥಾನ ಪಡೆದಿರುವ ಈ ಸಂಸ್ಥೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಈ ಸಂಸ್ಥೆ ಆಟೋಮೇಶನ್ ಹಾಗೂ ಇತರ ಐಟಿ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಭರವಸೆಯೊಂದಿಗೆ ಹೇಳಿದ ಮಾತನ್ನು ಉಳಿಸಿಕೊಳ್ಳುವ ಮೂಲಕ ಗ್ರಾಹಕರ ಮನ ಗೆದ್ದಿದೆ. ಇದಕ್ಕೆ ಸಂಸ್ಥೆ ಅಳವಡಿಸಿರುವ "ಇನ್ಫೋಸಿಸ್ ಮನ' ಎಂಬ ಕಾರ್ಯಕ್ರಮವೇ ಕಾರಣವಾಗಿದೆ. ಅಲ್ಲದೇ ತನ್ನ ಉದ್ಯೋಗಿಗಳಿಗೆ ಅರ್ಹ ಸಂಭಾವನೆಯನ್ನೂ ನೀಡುವ ಮೂಲಕ ಉದ್ಯೋಗಿಗಳು ಹೆಚ್ಚು ಹೆಚ್ಚಾಗಿ ಸಂಸ್ಥೆಯ ಏಳ್ಗೆಯತ್ತ ತಮ್ಮ ದೇಣಿಗೆ ನೀಡುವುದನ್ನು ಕಾಣಬಹುದು. ಅಲ್ಲದೇ ಈ ಸಂಸ್ಥೆ 70:30 ರೂಪುರೇಷೆ ಅಥವಾ ಎಪ್ಪತ್ತರಷ್ಟು ಸೇವೆಯನ್ನು ಭಾರತದಲ್ಲಿಯೂ ಉಳಿದ ಮೂವತ್ತರಷ್ಟು ಸೇವೆಗಳನ್ನು ವಿಶ್ವದ ಇತರ ಕಡೆಗಳಿಂದಲೂ ಪಡೆಯುತ್ತದೆ.

ಸಂಸ್ಥೆಯ ಮುಖ್ಯ ಸೇವೆಗಳಲ್ಲಿ ಅಪ್ಲಿಕೇಶನ್ ಗಳ ಹೊರಗುತ್ತಿಗೆ ಪ್ರಮುಖವಾಗಿದೆ. ಅಪ್ಲಿಕೇಶನ್ ಅಭಿವೃದ್ಧಿ ಮತ್ತು ನಿರ್ವಹಣೆ, ಕ್ಲೌಡ್, ಇನ್ಫೋಸಿಸ್ ವ್ಯಾಲಿಡೇಶನ್ ಸೇವೆ, ಹೊಸ ಸಂಸ್ಥೆಗೆ ಅಗತ್ಯವಿರುವ ಅಡಿ ರಚನೆ (ಮೂಲಸೌಕರ್ಯ ನಿರ್ವಹಣೆ) ಹಾಗೂ ಸೆಕ್ಯುರಿಟಿ ಇತ್ಯಾದಿ. ಇದರ ಹೊರತಾಗಿ Infosys Information Platform, EdgeVerve, Infosys Finacle, Panaya, ಹಾಗೂ Skava ಎಂಬ ಸಿದ್ಧ ರೂಪದ ವ್ಯವಸ್ಥೆಗಳನ್ನೂ ನಿರ್ಮಿಸಿ ಮಾರಾಟ ಮಾಡುತ್ತಿದೆ.

ವಹಿವಾಟು : 79919 ಮಿಲಿಯನ್ ಡಾಲರ್
ನಿವ್ವಳ ಲಾಭ : 11872 ಮಿಲಿಯನ್ ಡಾಲರ್  ಬೆಂಗಳೂರಿನ ಟಾಪ್ 10 ಸಾಪ್ಟ್‌ವೇರ್ ಕಂಪನಿಗಳು

9. ಕ್ಯಾಪ್ ಜೆಮಿನಿ

9. ಕ್ಯಾಪ್ ಜೆಮಿನಿ

ಇದು ಯೂರೋಪಿನ ಪ್ರಮುಖ ಐಟಿ ಕನ್ಸಲ್ಟೆನ್ಸಿ ಸಂಸ್ಥೆಯಾಗಿದ್ದು, ಪ್ಯಾರಿಸ್ ನಲ್ಲಿ ಮುಖ್ಯ ಕಚೇರಿ ಹೊಂದಿದೆ. 1967ರಲ್ಲಿ ಪ್ರಾರಂಭವಾದ ಇದರ ಸಂಸ್ಥಾಪಕರು ಸರ್ಗಿ ಕಾಂಫ್. (Serge Kampf)
ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಸಂಸ್ಥೆ ವಿಶ್ವದ ಪ್ರಮುಖ ಐಟಿ ಸಂಸ್ಥೆಯಾಗಿದ್ದು ನಲವತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ನೀಡುತ್ತಿದೆ. ಪ್ರಾರಂಭವಾದ ಬಳಿಕ ತನ್ನದೇ ಸೇವೆಗಳನ್ನು ಒದಗಿಸುತ್ತಿದ್ದ ಇಪ್ಪತ್ತೈದಕ್ಕೂ ಹೆಚ್ಚು ಸಂಸ್ಥೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡು ಈಗ ದೈತ್ಯರೂಪ ಪಡೆದಿದೆ.

ಈ ಸಂಸ್ಥೆಯ ಸೇವೆಗಳು ವಿವಿಧ ಕ್ಷೇತ್ರಗಳಲ್ಲಿ ಹರಡಿವೆ. ವಿದ್ಯುತ್, ದೂರಸಂಪರ್ಕ, ರಾಸಾಯನಿಕಗಳು, ವಸ್ತುಗಳ ನಿರ್ಮಾಣ, ಚಿಲ್ಲರೆ ಮಾರಾಟ, ವಿತರಣೆ, ಹಣಕಾಸಿನ ಸೌಲಭ್ಯ, ವಿಮೆ ಹಾಗೂ ಜೀವ ವಿಜ್ಞಾನ.

ಭಾರತದ ಐಟಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಾ ಬಂದಿರುವ ಸಂಸ್ಥೆ ಭಾರತದಲ್ಲಿಯೂ ತನ್ನ ಸೇವೆಗಳನ್ನು ಮುಂದುವರೆಸಲು ಉತ್ಸುಕತೆ ತೋರಿರುವ ಕಾರಣ ಇಂದು ಈ ಸಂಸ್ಥೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಮೂಲಕ ಏಷ್ಯಾದ ಇತರ ದೇಶಗಳ ಮಾರುಕಟ್ಟೆಗೂ ಲಗ್ಗೆಯಿಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಸಂಸ್ಥೆ ನೀಡುವ ಪ್ರಮುಖ ಸೇವೆಗಳು ಹೀಗಿವೆ-
• ಅಪ್ಲಿಕೇಶನ್ ಅಭಿವೃದ್ಧಿ
• ವಾಣಿಜ್ಯ ಸೇವೆ
• ಕನ್ಸಲ್ಟಿಂಗ್
• ಅಡಿರಚನೆಯ ನಿರ್ವಹಣೆ/ಮೂಲಸೌಕರ್ಯ ನಿರ್ವಹಣೆ
• ಮೊಬೈಲಿಟಿ, ಕ್ಲೌಡ್ ಸಂಗ್ರಹಣೆ ಇತ್ಯಾದಿ.

ವಹಿವಾಟು : 13311 ಮಿಲಿಯನ್ ಡಾಲರ್
ನಿವ್ವಳ ಲಾಭ: 977 ಮಿಲಿಯನ್ ಡಾಲರ್

8. ಕಾಗ್ನಿಜೆಂಟ್

8. ಕಾಗ್ನಿಜೆಂಟ್

1996 ರವರೆಗೂ ಈ ಸಂಸ್ಥೆ ಚೆನ್ನೈ ಮೂಲದ, ಕುಮಾರ್ ಮಹದೇವ ಎಂಬುವರ ಮಾಲಿಕತ್ವದ Dun & Bradstreet ಎಂಬ ಸಂಸ್ಥೆಯೊಂದರ ತಾಂತ್ರಿಕ ವಿಭಾಗವಾಗಿತ್ತು. ಬಳಿಕ ಇದು ಸ್ವತಂತ್ರ ಸಂಸ್ಥೆಯಾಗಿ ಬೆಳೆಯಿತು. ಇದರ ಮುಖ್ಯ ಸೇವೆಗಳೆಂದರೆ ಮಾಹಿತಿ ತಂತ್ರಜ್ಞಾನ, ಮಾಹಿತಿ ರಕ್ಷಣೆ, ITO ಹಾಗೂ BPO ಸೇವೆಗಳು (ಇದರಲ್ಲಿ ವಾಣಿಜ್ಯ ಹಾಗೂ ತಾಂತ್ರಿಕ ಸಲಹೆಗಳೂ ಸೇರಿವೆ), ತಾಂತ್ರಿಕ ವ್ಯವಸ್ಥೆ ಏಕೀಕರಣ, ಅಗತ್ಯಕ್ಕೆ ತಕ್ಕ ವ್ಯವಸ್ಥೆಯನ್ನು ನಿರ್ಮಿಸಿ ನಿರ್ವಹಿಸುವುದು, ಐಟಿ ವ್ಯವಸ್ಥೆ ಮೂಲಸೌಕರ್ಯ ನಿರ್ವಹಣೆ, ಅಂಕಿ ಅಂಶ ನಿರ್ವಹಣೆ ಇತ್ಯಾದಿ.
ವಹಿವಾಟು :13487 ಮಿಲಿಯನ್ ಡಾಲರುಗಳು
ನಿವ್ವಳ ಲಾಭ : 1553 ಮಿಲಿಯನ್ ಡಾಲರುಗಳು

7. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)

7. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)

ಇದೊಂದು ಭಾರತೀಯ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಐಟಿ ಹಾಗೂ ವಾಣಿಜ್ಯ ಸೇವೆಗಳನ್ನು ನೀಡುವ ಮೂಲಕ ಮಾಹಿತಿ ಕ್ಷೇತ್ರದಲ್ಲಿ ಸೇವೆ ನೀಡುವ ಟಾಟಾ ಸಮೂಹಕ್ಕೆ ಸೇರಿದ ಉಪಸಂಸ್ಥೆಯಾಗಿದೆ.
ಭಾರತದಲ್ಲಿ ಈ ಸಂಸ್ಥೆ ಸರ್ಕಾರಿ ಸಂಸ್ಥೆಗಳಿಗೆ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆ, ದೂರಸಂಪರ್ಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಪ್ರಮುಖ ವಿಭಾಗಗಳಿಗೆ ಐಟಿ ಸೇವೆಯನ್ನು ಒದಗಿಸುತ್ತಿದೆ. ಭಾರತ ಕೇಂದ್ರ ಸರ್ಕಾರದ ಬಹುತೇಕ ಎಲ್ಲಾ ಹಾಗೂ ವಿದೇಶಾಂಗ ಸಚಿವಾಲಯದ ಪಾಸ್ ಪೋರ್ಟ್ ಸೇವೆ, (ಪಾಸ್ ಪೋರ್ಟ್ ಸೇವಾ ಕೇಂದ್ರ) ಹಾಗೂ ರೈಲ್ವೇ ನಿಗಮದ IRCTC ಮೊದಲಾದ ಇಲಾಖೆಗಳ ತಾಣಗಳನ್ನು ನಿರ್ಮಿಸಿ ಅಭಿವೃದ್ದಿಗೊಳಿಸಿ ನಿರ್ವಹಿಸುತ್ತಾ ಬಂದಿದೆ. 1975 ರಲ್ಲಿ SECOM ಎಂಬ ಎಲೆಕ್ಟ್ರಾನಿಕ್ ರಕ್ಷಣಾ ವ್ಯವಸ್ಥೆಯ ಮೂಲಕ ಕಾರ್ಯರಂಭಿಸಿದ್ದು, ಬಳಿಕ ಸಾಫ್ಟ್ವೇರ್ ಹಾಗೂ ವ್ಯವಸ್ಥೆಗಳ ಅಭಿವೃದ್ದಿಯೊಂದಿಗೆ ಮುನ್ನಡೆ ಪಡೆಯುತ್ತಾ ಸಾಗಿತು. ನಂತರ ಭಾರತೀಯ ರೈಲ್ವೇಗೆ ERP ವ್ಯವಸ್ಥೆ ನೀಡುವ ಮೂಲಕ ಪ್ರಮುಖ ಹೆಜ್ಜೆಯನ್ನು ಇಟ್ಟಿತು. ಬಳಿಕ ಇತರ ಕ್ಷೇತ್ರಗಳಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತಾ ಸಾಗಿತು. ಆರೋಗ್ಯ, ಔಷಧಿ, ಔಷಧಿ ನಿರ್ಮಾಣ ಸಂಸ್ಥೆಗಳು ಮೊದಲಾದ ಆಧರಿಸಿದ ಮಾಹಿತಿಯನ್ನು ಕಲೆಹಾಕಿ ಸಂಸ್ಕರಿಸುವ ಪ್ರಥಮ ಭಾರತೀಯ ಸಂಸ್ಥೆಯಾಗಿಯೂ ಗುರುತಿಸಲ್ಪಟ್ಟಿತು. ಈಗ 67ಕ್ಕೂ ಹೆಚ್ಚು ಉಪವಿಭಾಗಗಳನ್ನು ಹೊಂದಿದೆ.

ವಹಿವಾಟು :17330 ಮಿಲಿಯನ್ ಡಾಲರ್
ನಿವ್ವಳ ಲಾಭ : 4003 ಮಿಲಿಯನ್ ಡಾಲರ್

6. SAP

6. SAP

Enterprise Resource Planning (ERP) ಅಥವಾ ಉದ್ಯಮ ಸಂಪನ್ಮೂಲ ಯೋಜನೆ ಎಂಬ ಹೆಸರಿನ ಈ ಸಂಸ್ಥೆ ಜರ್ಮನಿಯ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಮೂಲತಃ ಮಾಹಿತಿ ಸಂಸ್ಕರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.
SAP ನ ದೀರ್ಘರೂಪವೆಂದರೆ Systems, Applications and Products, ಅಂದರೆ ಈ ಸಂಸ್ಥೆ ನೀಡುವ ಸೇವೆಗಳ ಹೃಸ್ವರೂಪವೂ ಆಗಿದೆ. 1972ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಈಗ 180 ರಾಷ್ಟ್ರಗಳಿಗೆ ವಿಸ್ತರಿಸಿ ಮೂರು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದರಲ್ಲಿ 80% ಕ್ಕೂ ಹೆಚ್ಚು ಸಂಸ್ಥೆಗಳು ಮಧ್ಯಮ ಹಾಗೂ ಚಿಕ್ಕ ಮಟ್ಟದ ವ್ಯಾಪಾರಿ ಸಂಸ್ಥೆಗಳಾಗಿವೆ.
ಇಂದು ವಿಶ್ವದ ಮುಕ್ಕಾಲು ಭಾಗಕ್ಕೂ ಹೆಚ್ಚು ವಾಣಿಜ್ಯ ವಹಿವಾಟುಗಳು ಸ್ಯಾಪ್ ವ್ಯವಸ್ಥೆಯ ಮೂಲಕವೇ ನಡೆಸಲ್ಪಡುತ್ತವೆ. 2016ರಲ್ಲಿ ವಿಶ್ವದ ಮೂರನೆಯ ಅತಿದೊಡ್ಡ ಸಾಫ್ಟ್ವೇರ್ ಸ್ಥಾನದಲ್ಲಿದ್ದು, ಇದಕ್ಕೂ ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಹಾಗೂ ಒರಾಕಲ್ ಸಂಸ್ಥೆಗಳಿದ್ದವು.
ಈಗ ಈ ಸಂಸ್ಥೆ ತನ್ನ ಸೇವೆಯನ್ನು ಅಂತರ್ಜಾಲ ಆಧಾರಿತ ಸಂಗ್ರಹಣ ಅಥವಾ ಕ್ಲೌಡ್ ಸಂಗ್ರಹಣೆಯನ್ನು ಒದಗಿಸುವ ವ್ಯವಸ್ಥೆಗಳಿಗೂ ವಿಸ್ತರಿಸಿದೆ.

ವಹಿವಾಟು :22062 ಮಿಲಿಯನ್ ಡಾಲರ್
ನಿವ್ವಳ ಲಾಭ : 3634 ಮಿಲಿಯನ್ ಡಾಲರ್

5. ಆಕ್ಸೆಂಚರ್

5. ಆಕ್ಸೆಂಚರ್

1989ರಲ್ಲಿ ಆಂಡರ್ಸನ್ ಕನ್ಸಲ್ಟಿಂಗ್ ಎಂಬ ಹೆಸರಿನೊಂದಿಗೆ ಪ್ರಾರಂಭವಾದ ಈ ಸಂಸ್ಥೆ 32883 ಮಿಲಿಯನ್ ಡಾಲರುಗಳೊಂದಿಗೆ ಈಗ ಐದನೆಯ ಸ್ಥಾನ ಪಡೆದಿದೆ.
ಇದರ ಸೇವೆಗಳಲ್ಲಿ ವಾಣಿಜ್ಯ ಪರಿಹಾರ, ತಾಂತ್ರಿಕ ಸಲಹೆ, ನೂತನ ಕಾರ್ಯವಿಧಾನ ಸೇವೆ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಮೊಬೈಲ್ ಸೇವೆಗಳಿಗೆ ಮೀಸಲಾದ ಆಕ್ಸೆಂಚರ್ ಡಿಜಿಟಲ್ ಸೇವೆಗಳು ಪ್ರಮುಖವಾಗಿವೆ. ಇದರ ಇನ್ನೊಂದು ಸಹಸಂಸ್ಥೆಯಾದ ಅವನೇಡ್ ಸಹಾ ಮೈಕ್ರೋಸಾಫ್ಟ್ ತಳಹದಿಯ ಮೇಲೆ ಕಾರ್ಯನಿರ್ವಹಿಸುವ ಐಟಿ ವ್ಯವಸ್ಥೆಗಳ ಕುರಿತು ಸಲಹೆ ನೀಡುವ ಸೇವೆಯನ್ನು ಸಲ್ಲಿಸುತ್ತಿದೆ.
ಮೊಬೈಲ್ ಅಪ್ಲಿಕೇಶನ್ ಲೋಕದಲ್ಲಿಯೂ ಇದುವರೆಗೆ ಆಪಲ್ ಐಒಎಸ್, ಆಂಡ್ರಾಯ್ಡ್ ಹಾಗೂ ವಿಂಡೋಸ್ ಕಾರ್ಯಾಚರಣೆಗೆ ಹೊಂದುವ 2,800ಕ್ಕೂ ಹೆಚ್ಚು ಆಪ್ ಗಳನ್ನು ಸಿದ್ಧಪಡಿಸಿದೆ.

ವಹಿವಾಟು :32883 ಮಿಲಿಯನ್ ಡಾಲರ್
ನಿವ್ವಳ ಲಾಭ : 4350 ಮಿಲಿಯನ್ ಡಾಲರ್

 

4. ಒರಾಕಲ್

4. ಒರಾಕಲ್

ಮೈಕ್ರೋಸಾಫ್ಟ್ ಸಂಸ್ಥೆ ಯ ಹಿಂದೆ ಎರಡನೆಯ ಸ್ಥಾನದಲ್ಲಿರುವ ಈ ಸಂಸ್ಥೆ ವಿಶೇಷವಾಗಿ ಅಂಕಿ ಅಂಶಗಳ ವಿಶ್ಲೇಷಣೆಯನ್ನು ಆಧರಿಸಿದ ಕಂಪ್ಯೂಟರ್ ವ್ಯವಸ್ಥೆಗಳನ್ನು ಒದಗಿಸುವ ಸಂಸ್ಥೆಯಾಗಿದೆ.
IBM'ನ DB2ನ ಯಶಸ್ವಿ ವ್ಯವಸ್ಥೆಗೆ ಸೆಡ್ಡು ಹೊಡೆಯುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಡೇಟಾಬೇಸ್ ವ್ಯವಸ್ಥೆಯನ್ನು ಈಗ ಒರಾಕಲ್ ಹೊಂದಿದೆ. ಯುನಿಕ್ಸ್ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುವ PL/SQL ಅಥವಾ ಸ್ಟ್ರಕ್ಚರಲ್ ಕ್ವೆರಿ ಲಾಂಗ್ವೇಜ್ ಎಂಬ ವ್ಯವಸ್ಥೆ ಬಳಸುವ ಅಂಕಿ ಅಂಶ ಆಧಾರಿತ ಪ್ರೋಗ್ರಾಂಗಳು ಈಗಾಗಲೇ ಯಶಸ್ವಿಯಾಗಿದ್ದು ಸಂಚಲನ ಮೂಡಿಸಿದೆ. ಪ್ರಸ್ತುತ ಈ ಸಂಸ್ಥೆ ತನ್ನ RDBMS ಎಂಬ ಹೊಸ ವ್ಯವಸ್ಥೆಯನ್ನು ಬಿಡುಗಡೆಗೊಳಿಸಿದೆ. Oracle 12c ಎಂಬ ಹೆಸರಿನ ಈ ಹೊಸ ಸಾಫ್ಟ್ವೇರ್ ನಲ್ಲಿ ಸಿ ಅಂದರೆ ಕ್ಲೌಡ್ ಎಂದಾಗಿದ್ದು ಇಲ್ಲಿ ಮಾಹಿತಿ ಸಂಗ್ರಹಣೆ ಅಂತರ್ಜಾಲವನ್ನು ಆಧರಿಸಿದೆ. ಈ ಮೂಲಕ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಒಂದೇ ಸಮಾನವಾದ ಅಂಕಿ ಅಂಶಗಳನ್ನು ಹಂಚಿಕೊಂಡು ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆಯಬಹುದು.
ವಹಿವಾಟು : 37047 ಮಿಲಿಯನ್ ಡಾಲರ್
ನಿವ್ವಳ ಲಾಭ : 8901 ಮಿಲಿಯನ್ ಡಾಲರ್

3. ಹ್ಯೂಲೆಟ್ ಪ್ಯಾಕರ್ಡ್ (HP Enterprise)

3. ಹ್ಯೂಲೆಟ್ ಪ್ಯಾಕರ್ಡ್ (HP Enterprise)

50123 ಹಾಗೂ 3161 ಮಿಲಿಯನ್ ಡಾಲರುಗಳ ವಹಿವಾಟು ಹಾಗೂ ಲಾಭಗಳೊಂದಿಗೆ ಹೆಚ್ ಪಿ ಸಂಸ್ಥೆ ಮೂರನೇ ಸ್ಥಾನದಲ್ಲಿದೆ. ಇದರ ಪ್ರಮುಖ ಕ್ಷೇತ್ರಗಳಲ್ಲಿ ಸರ್ವರ್ ಗಳು, ಕಂಪ್ಯೂಟರ್ ಜಾಲ ನಿರ್ವಹಣೆ, ಸಾಫ್ಟ್ವೇರ್ ಸೇವೆ, ಪ್ರಿಂಟರುಗಳು ಇತ್ಯಾದಿ ಸೇರಿವೆ. 2008 ರಲ್ಲಿ ಹೆಚ್ ಪಿ Electronic Data Systems ಎಂಬ ಸಂಸ್ಥೆಯೊಡನೆ ವಿಲೀನಗೊಂಡು HPE ಎಂದು ತನ್ನ ಹೆಸರನ್ನು ಬದಲಿಸಿಕೊಂಡಿತು. 2009ರಲ್ಲಿ 380000 ಕ್ಕೂ ಹೆಚ್ಚು ಸರ್ವರುಗಳನ್ನು ಅರವತ್ತಕ್ಕೂ ಹೆಚ್ಚು ದೇಶಗಳ ಎರಡು ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಒದಗಿಸುವ ಮೂಲಕ ದಾಖಲೆ ಸೃಷ್ಟಿಸಿತು.

2015ರಲ್ಲಿ ಈ ಸಂಸ್ಥೆ ಹೆಚ್ ಪಿ ಮೂಲ ಸಂಸ್ಥೆಯಿಂದ ಪ್ರತ್ಯೇಕಗೊಂಡು ಸ್ವಂತ ಬಹುರಾಷ್ಟ್ರೀಯ ಸಂಸ್ಥೆಯಾಗಿ ಮುನ್ನಡೆಯಿತು. ಈಗ ಈ ಸಂಸ್ಥೆ ಐಟಿ ಅಡಿರಚನೆಯ ಹೊರಗುತ್ತಿಗೆ, Applications & Business Services (ABS) ಎಂಬ ಸೇವೆಯ ಮೂಲಕ ಅಪ್ಲಿಕೇಶನ್ ಸಾಪ್ಟ್ ವೇರ್ ಗಳ ನಿರ್ಮಾಣ, ಸಂಘಟನೆ ಹಾಗೂ ಈಗಿರುವ ವ್ಯವಸ್ಥೆಗಳನ್ನು ಉನ್ನತೀಕರಿಸುವ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ.

ವಹಿವಾಟು : 50123 ಮಿಲಿಯನ್ ಡಾಲರ್
ನಿವ್ವಳ ಲಾಭ : 3161 ಮಿಲಿಯನ್ ಡಾಲರ್

2. ಮೈಕ್ರೊಸಾಫ್ಟ್

2. ಮೈಕ್ರೊಸಾಫ್ಟ್

ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರತಿ ಮನೆಮನೆಗೂ ಒದಗಿಸುವ ಮೂಲಕ ವಿಶ್ವದ ಅತಿದೊಡ್ಡ ಸಾಫ್ಟ್ವೇರ್ ಸಂಸ್ಥೆಯಾದ ಎಂಎಸ್ ಕ್ರಾಂತಿಯನ್ನೇ ಉಂಟು ಮಾಡಿತ್ತು. ಮೈಕ್ರೋ ಕಂಪ್ಯೂಟರ್ ಹಾಗೂ ಸಾಫ್ಟ್ವೇರ್ ಗಳ ಮೊದಲೆರಡು ಅಕ್ಷರಗಳ ಹೃಸ್ವರೂಪವಾದ ಮೈಕ್ರೋಸಾಫ್ಟ್ ನ ಪ್ರಮುಖ ಉತ್ಪನ್ನಗಳೆಂದರೆ ಎಂಎಸ್ ಆಫಿಸ್, ಸರ್ವರುಗಳು, ಡಿಜಿಟಲ್ ಮಾರುಕಟ್ಟೆ, ಮೊಬೈಲ್ ಫೋನುಗಳು ಹಾಗೂ ವಿಂಡೋಸ್ ಒ.ಎಸ್. ಇತ್ಯಾದಿ. ಅಲ್ಲದೆ ಪಿಸಿಗಳಿಗೆ ಅಗತ್ಯವಿರುವ ಕಾರ್ಯಾಚರಣೆ ವ್ಯವಸ್ಥೆ ಅಥವಾ ಒಎಸ್ ಗಳನ್ನು ನಿರ್ಮಿಸಲು ಐಬಿಎಂ ಗೆ ನೆರವಾಗುವ ಮೂಲಕ ಪ್ರಾರಂಭವಾದ ಇದರ ಸೇವೆ ಮುಂದೆ ತನ್ನದೇ ಆದ ಮೈಕ್ರೋಸಾಫ್ಟ್ ವಿಂಡೋಸ್ ಗೆ ಮುಂದುವರೆಯಿತು. ಇಂದು ವಿಶ್ವದಾದ್ಯಂತ ಮಿಲಿಯಗಟ್ಟಲೇ ಪಿಸಿಗಳಲ್ಲಿ ಬಳಸಲ್ಪಡುತ್ತಿದೆ.
ಪ್ರಸ್ತುತ ವಿಂಡೋಸ್ 10 ವ್ಯವಸ್ಥೆಯನ್ನು ನಾನೂರು ಮಿಲಿಯನ್ ಪಿಸಿಗಳು ಬಳಸುತ್ತಿವೆ ಹಾಗೂ ಅತಿ ಕಡಿಮೆ ಸಮಯದಲ್ಲಿ ವೇಗವಾಗಿ ಅತಿ ಹೆಚ್ಚು ಬಳಕೆದಾರರನ್ನು ಪಡೆದ ಹೆಗ್ಗಳಿಕೆ ಪಡೆದಿದೆ.

ವಹಿವಾಟು : 50123 ಮಿಲಿಯನ್ ಡಾಲರ್
ನಿವ್ವಳ ಲಾಭ : 16000 ಮಿಲಿಯನ್ ಡಾಲರ್

1. ಐಬಿಎಂ

1. ಐಬಿಎಂ

ಐಬಿಎಂ ಎಂದೇ ಜನಪ್ರಿಯವಾಗಿರುವ International Business Machine ಸಂಸ್ಥೆ ವಿಶ್ವದ ಅತಿದೊಡ್ಡ ಐಟಿ ಸಂಸ್ಥೆಯಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇದರ ಮುಖ್ಯ ಕಚೇರಿ ಅಮೇರಿಕಾದ ನ್ಯೂಯಾರ್ಕ್ ನಗರದ ಆರ್ಮಾರ್ಕ್ ನಲ್ಲಿದೆ.
1900ರ ಪ್ರಾರಂಭದಲ್ಲಿಯೇ ಮೊದಲ ಟ್ಯಾಬ್ಯುಲೇಟರ್, ಪ್ರಿಂಟರ್ ಹಾರ್ಡ್ ಡಿಸ್ಕ್ ಡ್ರೈವ್ ಹಾಗೂ ಫ್ಲಾಪಿ ಡಿಕ್ಸ್ ಗಳ ಮೂಲಕ ಪ್ರಾರಂಭವಾದ ಇದರ ಉತ್ಪನ್ನಗಳು ನಿಧಾನವಾಗಿ ಎಪ್ಪತ್ತರ ದಶಕದಲ್ಲಿ ಕಾರ್ಯಾಚರಣೆ ವ್ಯವಸ್ಥೆಯ ಕಡೆಗೆ ಮುಂದುವರೆಯಿತು.

2000 ಇಸವಿಯ ಸಮಯದಲ್ಲಿ ತನ್ನ ಪಿಸಿ ವಿಭಾಗವನ್ನು ಲೆನೋವೋ ಸಂಸ್ಥೆಗೆ ವಹಿಸಿಕೊಟ್ಟು ತನ್ನ ಸೇವೆಯನ್ನು ಸಾಫ್ಟ್ವೇರ್ ಹಾಗೂ ಸಮಾಲೋಚನೆ ಸೇವಯತ್ತ ಕೇಂದ್ರೀಕರಿಸಿತು. ಇಂದು ವಿಶ್ವದ ಶೇ. 97ಕ್ಕೂ ಹೆಚ್ಚು ಬ್ಯಾಂಕುಗಳು ಐಬಿಎಂ ಆಧಾರಿತ ವ್ಯವಸ್ಥೆಯನ್ನೇ ನೆಚ್ಚಿಕೊಂಡಿವೆ. ಇದು ವಿಶ್ವದ ಅತಿದೊಡ್ಡ ಆನ್ಲೈನ್ ವಹಿವಾಟು ನಡೆಸಲು ಕಾರಣವಾಗಿದೆ. ಇಂದು ಅಂತರ್ಜಾಲ ಆಧಾರಿತ ಕ್ಲೌಡ್ ಮಾಹಿತಿ ಸಂಗ್ರಹಣೆಯ ವಿಭಾಗದಲ್ಲಿಯೂ ಐಬಿಎಂ ಮುಂಚೂಣಿಯಲ್ಲಿದ್ದು, ಐಬಿಎಂ ಕ್ಲೌಡ್ ಅಂಬ ಅಂತರ್ಜಾಲ ಸಂಗ್ರಹಣೆ ವ್ಯವಸ್ಥೆ ಸಂಸ್ಥೆಗಳಿಗೆ ವರದಾನವಾಗಿದೆ. ಅಲ್ಲದೇ ಗ್ಲೋಬಲ್ ಬಿಸಿನೆಸ್ ಸರ್ವಿಸ್ ಹಾಗೂ ಗ್ಲೋಬಲ್ ಟೆಕ್ನಾಲಜಿ ಸರ್ವಿಸ್ ಎಂಬ ಎರಡು ವಾಹಿನಿಗಳ ಮೂಲಕ ಸಮಾಲೋಚಕ ಹಾಗೂ ಸಂಶೋಧನೆಗಳನ್ನು ನಡೆಸಲು ಅನುಕೂಲ ಮಾಡಿಕೊಡುವ ಐಬಿಎಂ ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯಾಗಿದೆ.

ವಹಿವಾಟು :79919 ಮಿಲಿಯನ್ ಡಾಲರ್
ನಿವ್ವಳ ಲಾಭ : 11872 ಮಿಲಿಯನ್ ಡಾಲರ್

English summary

Top 10 Information Technology (IT) Companies in World 2017

Information technology is driving and powering the businesses across the world today. IT is changing the way things are done and processed. These are the biggest and top IT Companies in World 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X