For Quick Alerts
ALLOW NOTIFICATIONS  
For Daily Alerts

ಸೋಲಾರ್ ಕ್ಷೇತ್ರಕ್ಕೆ ಬಾಬಾ ರಾಮದೇವ್ ರ ಪತಂಜಲಿ ಎಂಟ್ರಿ

ದೇಶದ ವೇಗದ ಚಲಿಸುವ ಗ್ರಾಹಕ ಸರಕುಗಳು (FMCG) ವಲಯದಲ್ಲಿ ಸಂಚಲನ ಮೂಡಿಸಿದ ನಂತರ ಯೋಗ ಗುರು ಬಾಬಾ ರಾಮದೇವ್ ಈಗ ಮೂಲಸೌಕರ್ಯ ವಿಭಾಗಕ್ಕೂ ಕಾಲಿಡುತ್ತಿದ್ದಾರೆ.

By Siddu
|

ದೇಶದ ವೇಗದ ಚಲಿಸುವ ಗ್ರಾಹಕ ಸರಕುಗಳು (FMCG) ವಲಯದಲ್ಲಿ ಸಂಚಲನ ಮೂಡಿಸಿದ ನಂತರ ಯೋಗ ಗುರು ಬಾಬಾ ರಾಮದೇವ್ ಈಗ ಮೂಲಸೌಕರ್ಯ ವಿಭಾಗಕ್ಕೂ ಕಾಲಿಡುತ್ತಿದ್ದಾರೆ.

ಸೋಲಾರ್ ಕ್ಷೇತ್ರಕ್ಕೆ ಬಾಬಾ ರಾಮದೇವ್ ರ ಪತಂಜಲಿ ಎಂಟ್ರಿ

ಪ್ರಸ್ತುತ ಪತಂಜಲಿ ಕಂಪನಿ ಸೋಲಾರ್ ಉಪಕರಣಗಳ ತಯಾರಿಕೆಗೆ ಮುಂದಾಗಿದ್ದು, ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿರುವ ಈ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ಬಂದಂತಾಗಿದೆ.

ಬಾಬಾ ರಾಮದೇವ್ ಪತಂಜಲಿ ಸಂಸ್ಥೆ ಮೂಲಕ ಸೌರ ಉಪಕರಣಗಳ ತಯಾರಿಕೆಗೆ ಯೋಜನೆ ರೂಪಿಸಿದ್ದು, ಸೋಲಾರ್ ವಲಯಕ್ಕೆ ಪ್ರವೇಶಿಸುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಪತಂಜಲಿಯ ಯಶಸ್ಸಿನ ನಾಗಾಲೋಟಕ್ಕೆ ಕಾರಣಗಳೇನು ಗೊತ್ತೆ?

ಸ್ವದೇಶಿ ಚಳುವಳಿಯ ಭಾಗವಾಗಿ ಸೋಲಾರ್ ಉಪಕರಣಗಳನ್ನು ತಯಾರಿಸಲು ಪತಂಜಲಿ ಮುಂದಾಗಿದೆ. ಸೋಲಾರ್ ಮೂಲಕ ಭಾರತದ ಪ್ರತಿಯೊಂದು ಮನೆಗೂ ವಿದ್ಯೂತ್ ಪೂರೈಕೆ ಮಾಡಬೇಕಾಗಿದೆ. ಅದನ್ನು ನಿರೂಪಿಸಲು ನಾವು ಪ್ರಯತ್ನವನ್ನು ಪ್ರಾರಂಭಿಸಿದ್ದೇವೆ ಎಂದು ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಪತಂಜಲಿ 100 ಕೋಟಿ ಹೂಡಿಕೆ
ಪತಂಜಲಿ ಸೋಲಾರ್ ಉಪಕರಣಗಳ ತಯಾರಿಕೆಗೆ ರೂ. 100 ಕೋಟಿ ಹೂಡಿಕೆ ಮಾಡಿದ್ದು, ಗ್ರೇಟರ್ ನೋಯ್ಡಾದಲ್ಲಿ ಕೆಲವೇ ದಿನಗಳಲ್ಲಿ ಉಪಕರಣಗಳ ತಯಾರಿಕೆ ಆರಂಭವಾಗಲಿದೆ. ಇದಕ್ಕೆ ಪೂರಕವಾಗಿ ಈ ವರ್ಷದ ಆರಂಭದಲ್ಲಿಯೇ ಅಡ್ವಾನ್ಸ್ ನೇವಿಗೇಷನ್ ಅಂಡ್ ಸೋಲಾರ್ ಟೆಕ್ನಾಲಜೀಸ್ ಸಂಸ್ಥೆಯನ್ನು ಪತಂಜಲಿ ಸ್ವಾಧೀನಪಡಿಸಿಕೊಂಡಿದೆ.

ಸೋಲಾರ್ ಕ್ಷೇತ್ರಕ್ಕೆ ಬಾಬಾ ರಾಮದೇವ್ ರ ಪತಂಜಲಿ ಎಂಟ್ರಿ

English summary

Baba Ramdev’s Patanjali to diversify into solar power business

Yoga guru Baba Ramdev’s Patanjali Ayurved Ltd, the consumer goods products upstart, is poised to diversify into solar power equipment manufacturing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X