For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್: 4-5 ಲಕ್ಷ ಹೂಡಿಕೆದಾರರಿಗೆ ಐಟಿ ಇಲಾಖೆ ನೋಟಿಸ್

By Siddu
|

ದೇಶದಲ್ಲಿ ಬಿಟ್ ಕಾಯಿನ್ ವಹಿವಾಟು ಹೆಚ್ಚಾಗುತ್ತಾ ಸಾಗಿದ್ದು, ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸುವಂತೆ ಮಾಡಿದೆ. ಬಿಟ್ ಕಾಯಿನ್ ವ್ಯವಹಾರದತ್ತ ಹೆಚ್ಚೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಕಾನೂನಿನ ಮಾನ್ಯತೆ ಇಲ್ಲದಿರುವ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಿರುವ 4-5 ಲಕ್ಷ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.

ಬಿಟ್ ಕಾಯಿನ್ ಬಗ್ಗೆ ಎಲ್ಲರೂ ಕೇಳುವ ಪ್ರಶ್ನೆಗಳೇನು ಗೊತ್ತೆ?

ಈಗಾಗಲೇ ಕಳೆದ ವಾರ ದೇಶದಲ್ಲಿನ ಅನೇಕ ಡಿಜಿಟಲ್ ಕರೆನ್ಸಿ ವಿನಿಮಯ ಕೇಂದ್ರಗಳ ಮೇಲೆ ಐ.ಟಿ ದಾಳಿ ನಡೆಸಲಾಗಿತ್ತು. ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ 20 ಲಕ್ಷ ಜನರು ನೋಂದಣಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರಸ್ತುತ ಬಿಟ್ ಕಾಯಿನ್ ವ್ಯವಹಾರ ಕಾನೂನುಬಾಹೀರವಾಗಿದ್ದು, ಅವುಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ಬಗ್ಗೆ ಐಟಿ ಇಲಾಖೆ ಕ್ರಮ ಕೈಗೊಂಡಿದೆ.

 

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಬಿಟ್ ಕಾಯಿನ್: 4-5 ಲಕ್ಷ ಹೂಡಿಕೆದಾರರಿಗೆ ಐಟಿ ಇಲಾಖೆ ನೋಟಿಸ್

English summary

Bitcoins: I-T notices to 4-5 lakh Bitcoins investores across the country

Widening its probe into bitcoin investments and trade, the Income Tax (IT) department is set to issue notices to 4 to 5 lakh high networth individuals (HNI) across the country who were trading on the exchanges of this unregulated virtual currency.
Company Search
COVID-19