For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್‌, ಟ್ವಿಟರ್ ಮೂಲಕ ಎಲ್ಪಿಜಿ (ಗ್ಯಾಸ್ ಸಿಲಿಂಡರ್) ಬುಕಿಂಗ್ ಸೌಲಭ್ಯ!

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಸಿಹಿಸುದ್ದಿ!ಸಾಮಾಜಿಕ ಮಾದ್ಯಮಗಳಾದ ಫೇಸ್ ಬುಕ್ ಹಾಗು ಟ್ವಿಟರ್ ಮೂಲಕ ಅಡುಗೆ ಅನಿಲ (ಸಿಲಿಂಡರ್) ಬುಕ್ ಮಾಡಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

By Siddu
|

ಗ್ಯಾಸ್ ಸಿಲಿಂಡರ್ (ಎಲ್ಪಿಜಿ) ಬುಕ್ ಮಾಡುವ ಗ್ರಾಹಕರಿಗೆ ಸಿಹಿಸುದ್ದಿ!

ಸಾಮಾಜಿಕ ಮಾದ್ಯಮಗಳಾದ ಫೇಸ್ ಬುಕ್ ಹಾಗು ಟ್ವಿಟರ್ ಮೂಲಕ ಅಡುಗೆ ಅನಿಲ (ಸಿಲಿಂಡರ್) ಬುಕ್ ಮಾಡಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

ಈ ಹಿಂದೆ ದೂರವಾಣಿ ಇಲ್ಲವೆ ಸಂದೇಶಗಳ ಮೂಲಕ ಅಡುಗೆ ಅನಿಲ (ಸಿಲಿಂಡರ್) ಬುಕ್ ಮಾಡುತ್ತಿದ್ದರು. ಹಾಗಾಗಿ ಇನ್ನುಮುಂದೆ ಕರೆ ಅಥವಾ ಎಸ್ಎಂಎಸ್ ಮೂಲಕ ಸಿಲಿಂಡರ್ ಬುಕಿಂಗ್ ಮಾಡಬೇಕಿಲ್ಲ. 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

ಡಿಜಿಟಲಿಕರಣ ಉತ್ತೇಜನ

ಡಿಜಿಟಲಿಕರಣ ಉತ್ತೇಜನ

ಪ್ರಧಾನಿ ಮೋದಿಯವರು ಡಿಜಿಟಲಿಕರಣ ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಅದಕ್ಕೆ ಪೂರಕವಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಸ ಡಿಜಿಟಲ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಿದೆ.

ಸುಲಭವಾಗಿ ಸಿಲಿಂಡರ್ ಬುಕ್ ಮಾಡಲು ಹಾಗು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಉತ್ತೇಜಿಸಲು ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಗ್ಯಾಸ್ ಬುಕ್ ಮಾಡುವ ಸೌಲಭ್ಯ ಐಒಸಿ ಪರಿಚಯಿಸಿದೆ.
ಅದರಂತೆ ನೀವು ಫೇಸ್ ಬುಕ್, ಟ್ವಿಟರ್ ನಲ್ಲಿ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಬಹುದಾಗಿದೆ.

ಫೇಸ್ಬುಕ್ ಮೂಲಕ ಬುಕಿಂಗ್

ಫೇಸ್ಬುಕ್ ಮೂಲಕ ಬುಕಿಂಗ್

ಇಂಡೆನ್ ರೀಫಿಲ್ ಬುಕಿಂಗ್ ಅನ್ನು ಫೇಸ್ಬುಕ್ ಮೂಲಕ ಮುಂದಿನ ಹಂತಗಳ ಮೂಲಕ ಮಾಡಬಹುದು..

* ಫೇಸ್ಬುಕ್ ಗೆ ಲಾಗಿನ್ ಮಾಡಿ

* ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOCL) ನ ಅಧಿಕೃತ ಫೇಸ್ಬುಕ್ ಪುಟ @indianoilcorplimited ಗೆ ಭೇಟಿನೀಡಿ.

* ಬುಕ್ಪ್ ನೌ (book now) ಮೇಲೆ ಕ್ಲಿಕ್ ಮಾಡಿ

ಟ್ವಿಟರ್ ಮೂಲಕ ಬುಕಿಂಗ್

ಟ್ವಿಟರ್ ಮೂಲಕ ಬುಕಿಂಗ್

ಇಂಡೆನ್ ರೀಫಿಲ್ ಬುಕಿಂಗ್ ಅನ್ನು ಟ್ವಿಟರ್ ಮೂಲಕ ಈ ಕೆಳಗಿನಂತೆ ಮಾಡಬಹುದು:

* Tweet refill @indanerefill

- ಮೊದಲ ಬಾರಿ ನೋಂದಣಿಗೆ LPGID ಎಂದು ನೋಂದಣಿ ಮಾಡಿ

 

Read more about: lpg savings finance news
English summary

Forget phone and SMS, now book LPG cylinders through Facebook, Twitter

With Prime Minister Narendra Modi's push towards Digitisation, Indian Oil kicked off its new digital booking service.
Story first published: Tuesday, January 9, 2018, 17:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X