For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್ ನಂತೆ ರಿಲಯನ್ಸ್ ಜಿಯೋ ಸಂಸ್ಥೆಯಿಂದ ಜಿಯೋಕಾಯಿನ್!

By Siddu
|

ರಿಲಯನ್ಸ್ ಜಿಯೋ ಸಂಸ್ಥೆ ಜಿಯೋಕಾಯಿನ್ (JioCoin) ಹೆಸರಿನ ಸ್ವತಂತ್ರ ಕ್ರಿಪ್ಟೋಕರೆನ್ಸಿ ಅಭಿವೃದ್ಧಿಪಡಿಸುತ್ತಿದೆ ಎಂದು ಮಿಂಟ್ ವರದಿ ಮಾಡಿದೆ.

ಮುಖೇಶ್ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಜಿಯೋಕಾಯಿನ್ ಯೋಜನೆಯನ್ನು ಮುನ್ನಡೆಸಲಿದ್ದಾರೆ. ಯುವ ವೃತ್ತಿಪರರ 50 ಸದಸ್ಯರ ತಂಡ ಕರೆನ್ಸಿಗೆ ಅಗತ್ಯವಾದ ಬ್ಲಾಕ್ಚೈನ್ (Blockchain) ತಂತ್ರಜ್ಞಾನದಲ್ಲಿ ಕೆಲಸ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಕ್ರಿಪ್ಟೋಗ್ರಫಿ ಜನಪ್ರಿಯತೆ
 

ಕ್ರಿಪ್ಟೋಗ್ರಫಿ ಜನಪ್ರಿಯತೆ

ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಗಳಾಗಿದ್ದು, ಕ್ರಿಪ್ಟೋಗ್ರಫಿಯನ್ನು ಸುರಕ್ಷತೆ ಹಾಗು ವ್ಯವಹಾರಗಳ ಪರಿಶೀಲನೆಗೆ ಬಳಸಲಾಗುತ್ತದೆ. ಅದರ ಜನಪ್ರಿಯತೆಯು ಕಳೆದ ವರ್ಷಗಳಲ್ಲಿ ಬೆಳೆದಿದೆ. ಅತ್ಯಂತ ಜನಪ್ರಿಯ ಒಂದೇ ಕ್ರಿಪ್ಟೊಕರೆನ್ಸಿ ಡಿಸೆಂಬರ್ ನಲ್ಲಿ ಸುಮಾರು 16,000 ಡಾಲರ್ಗೆ ಏರಿತು.

ಆರ್ಬಿಐ ಎಚ್ಚರಿಕೆ

ಆರ್ಬಿಐ ಎಚ್ಚರಿಕೆ

ಭಾರತೀಯ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಬಿಟ್ ಕಾಯಿನ್ ಕರೆನ್ಸಿಗಳ ವಿರುದ್ಧ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಸರಕಾರವು ಅದನ್ನು ಪೋಂಜಿ ಯೋಜನೆಗಳಿಗೆ(ponzi schemes) ಹೋಲಿಸಿದೆ. ವ್ಯಾಪಾರಿಗಳಲ್ಲಿ "ಖಾಯಂ ಹಣದ ನಷ್ಟ" ಸೇರಿದಂತೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ಯುವ ಉದ್ಯೋಗಿಗಳ ನೇಮಕಕ್ಕೆ ಚಿಂತನೆ

ಯುವ ಉದ್ಯೋಗಿಗಳ ನೇಮಕಕ್ಕೆ ಚಿಂತನೆ

ಆಕಾಶ್ ಅಂಬಾನಿ ಮುನ್ನಡೆಸಲಿರುವ ಜಿಯೋಕಾಯಿನ್ ಯೋಜನೆಗೆ 25 ವರ್ಷ ವಯಸ್ಸಿನ 50 ಯುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ ಎನ್ನಲಾಗಿದೆ. ಈ ತಂಡವು ಜಿಯೋಕಾಯಿನ್ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಿದೆ.

English summary

Reliance Jio may be developing its own cryptocurrency, the JioCoin

Reliance Jio Infocomm Ltd may be creating its own cyptocurrency called JioCoin, Mint reported on Friday.
Company Search
COVID-19