For Quick Alerts
ALLOW NOTIFICATIONS  
For Daily Alerts

ಬಜೆಟ್ ಬಂಪರ್! ಕೃಷಿ, ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಹೆಚ್ಚು ಸೌಲಭ್ಯ..

By Siddu
|

ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೃಷಿ, ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.

ಈಗಾಗಲೇ ಆರೋಗ್ಯ ಸುಧಾರಣೆಗಾಗಿ ಅನೇಕ ವಿಮಾ ಯೋಜನೆಗಳನ್ನು ಮೋದಿ ಸರ್ಕಾರ ಘೋಷಿಸಿದ್ದು, ನಿನ್ನೆಯ ಬಜೆಟ್ ನಲ್ಲಿ ಇನ್ನೂ ವೇಗೋತ್ಕರ್ಷ ಸಿಕ್ಕಿದೆ. ರೈತರನ್ನು ಸೆಳೆಯಲು ಕೃಷಿ ವಲಯಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರಯತ್ನಿಸಿದೆ.

ಕೃಷಿ ವಲಯ
 

ಕೃಷಿ ವಲಯ

- ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು, ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

- ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸರ್ಕಾರ ರೂ. 2,000 ಕೋಟಿ ಮೊತ್ತದಲ್ಲಿ ‘ಕೃಷಿ ಮಾರುಕಟ್ಟೆ ನಿಧಿ' ನಿಗದಿ

- ಬಿದಿರು ಕೃಷಿಗಾಗಿ ರೂ.1,290 ಮೊತ್ತದ ನಿಧಿ ಮೀಸಲು

- ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ, ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ.

- ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ. 100ರ ತೆರಿಗೆ ವಿನಾಯಿತಿ

- ‘ಆಪರೇಷನ್ ಗ್ರೀನ್' ಯೋಜನೆಗೆ ರೂ. 500 ಕೋಟಿ ಅನುದಾನ

ಕೇಂದ್ರ ಬಜೆಟ್ 2018: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ಮಾಹಿತಿ..

ಆರೋಗ್ಯ ವಲಯ

- ರಾಷ್ಟ್ರೀಯ ಆರೋಗ್ಯ ಯೋಜನೆ ಮೂಲಕ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನ

- ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ರೂ. 1200 ಕೋಟಿ ಅನುದಾನ ಬಿಡುಗಡೆ. ಅತಿಹೆಚ್ಚು ಮೊತ್ತದ ಆರೋಗ್ಯ ವಿಮೆ ಸೌಲಭ್ಯವನ್ನು 50 ಲಕ್ಷ ಜನರಿಗೆ ಈ ಯೋಜನೆಯಡಿ ನೀಡಲಾಗುವುದು.

- ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ರೂ. 40,000ಕ್ಕೆ ಹೆಚ್ಚಳ ಮಾಡಲಾಗಿದೆ.

- ಪ್ರತಿ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸಲಾಗುವುದು. ಈ ಯೋಜನೆ 10 ಕೋಟಿ ಕುಟುಂಬಗಳಿಗೆ ಸಿಗಲಿದೆ.

- ರೂ. 600 ಕೋಟಿ ಅನುದಾನದಡಿಯಲ್ಲಿ ಕ್ಷಯ ರೋಗಿಗಳಿಗಾಗಿ ‘ಆಯುಷ್ಮಾನ್ ಭಾರತ್' ಯೋಜನೆ ಪ್ರಾರಂಭ

- ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ

- ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ ಇದೆ.

ಕೇಂದ್ರ ಬಜೆಟ್ 2018: ಅರುಣ್ ಜೇಟ್ಲಿ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ವಿವರ..

ಶೈಕ್ಷಣಿಕ ವಲಯ

- ಬುಡಕಟ್ಟು, ವನವಾಸಿ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ನಿಲಯ ಸ್ಥಾಪನೆ

- ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೆ

- ಗ್ರಾಮೀಣ ಪ್ರದೇಶದಲ್ಲಿ ಬ್ಯ್ಲಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಸೌಲಭ್ಯ

- ಚೆನ್ನೈ ಐಐಟಿಯಲ್ಲಿ 5G ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುವುದು

- ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಸಾಧ್ಯತೆ

ಕೇಂದ್ರ ಬಜೆಟ್ 2018 ಹೆಚ್ಚಿನ ಮಾಹಿತಿ
 

ಕೇಂದ್ರ ಬಜೆಟ್ 2018 ಹೆಚ್ಚಿನ ಮಾಹಿತಿ

ಬಜೆಟ್ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕೇಂದ್ರ ಬಜೆಟ್ 2018-19 ಹೆಚ್ಚಿನ ಲೇಖನಗಳು

ಬಜೆಟ್ 2018: ಯಾವುದು ದುಬಾರಿ, ಯಾವುದು ಅಗ್ಗ?

ಅರುಣ್ ಜೇಟ್ಲಿ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ..

2018ರಲ್ಲಿ ತೆರಿಗೆ ಉಳಿತಾಯ ಮಾಡಲು ಈ 16 ವಿಧಾನಗಳು ನಿಮ್ಮದಾಗಿರಲಿ..

English summary

Union Budget 2018: Agriculture, Health and Education Sectors got High priority

Union Budget 2018: Agriculture, Health and Education Sectors got High priority.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more