ಕರ್ನಾಟಕ ಬಜೆಟ್ 2018: ಸಿದ್ದರಾಮಯ್ಯರವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಕರ್ನಾಟಕ ಸರ್ಕಾರದ ಕೊನೆಯ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ 13ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ರಾಜ್ಯದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಪರ ಬಜೆಟ್ ಮಂಡನೆ ಸರ್ಕಾರ ಉದ್ದೇಶ. ಈ ನಮ್ಮ ಬಜೆಟ್ ನವ ಕರ್ನಾಟಕ ನಿರ್ಮಾಣದ ಮುನ್ನುಡಿಯಾಗಲಿದೆ ಎನ್ನುವುದು ಸಿದ್ದರಾಮಯ್ಯನವರ ಆಶಯ.

  ಅದೇನೆ ಇರಲಿ, 2018ರ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ..

  ಹಸಿವು ಮುಕ್ತ ರಾಜ್ಯ

  ರಾಜ್ಯ ಸರ್ಕಾರ ನಮ್ಮ ನಾಡನ್ನು ಹಸಿವು ಮುಕ್ತ ರಾಜ್ಯಕ್ಕಾಗಿ ಹೋರಾಡಿದೆ. ನಾಡಿನಲ್ಲಿ ಯಾರೂ ಕೂಡ ಹಸಿದು ಮಲಗಬಾರದು. ಹಸಿವಿನ ವಿರುದ್ದದ ಹೋರಾಟದಲ್ಲಿ ರಾಜ್ಯ ಸರ್ಕಾರ ಗೆದ್ದಿರುವುದು ನಮಗೆ ತೃಪ್ತಿ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

  ಕೃಷಿ ವಲಯಕ್ಕೆ ಬಂಪರ್

  ಕೃಷಿ ವಲಯಕ್ಕೆ ರೂ. 5080 ಕೋಟಿ ಅನುದಾನ ನೀಡಲಾಗಿದೆ. ಪ್ರತ್ಯೇಕ ಬಜೆಟ್ ಮಂಡನೆ ಕೂಡ ಮಹತ್ವದ್ದು.
  ಕೃಷಿ ವಲಯ ಶೇ. 4.9ರಷ್ಟು ಬೆಳವಣಿಗೆ ದರ ಸಾಧಿಸುವ ಗುರಿ ಇದೆ.

  ಪಶುಸಂಗೋಪನೆ ಅನುದಾನ

  ರಾಜ್ಯದ ಪಶುಸಂಗೋಪನೆ ಅಭಿವೃದ್ದಿಗಾಗಿ ರೂ. 2245 ಕೋಟಿ ಅನುದಾನ ಮೀಸಲು.

  ಮೀನುಗಾರಿಕೆ ಹಾಗು ಜಲಸಂಪನ್ಮೂಲ ಅನುದಾನ

  ಜಲಸಂಪನ್ಮೂಲ ಇಲಾಖೆಗೆ ರೂ. 15,929 ಕೋಟಿ ಹಾಗು ಮೀನುಗಾರಿಕೆಗಾಗಿ 337 ಕೋಟಿ ಅನುದಾನ ಮೀಸಲು ಇಡಲಾಗಿದೆ.

  ರೈತರ ಸಾಲಮನ್ನಾ, ಕೃಷಿ ಹೊಂಡ

  ಬಹುನಿರೀಕ್ಷಿತವಾಗಿ ರೈತರ ಸಾಲದ ಹೊರೆ ಕಡಿಮೆ ಮಾಡಲು ರೂ. 8,165 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ರೂ. 5.88 ಲಕ್ಷ ರೈತರಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಕೆಗೆ ಸಹಾಯಧನ ಕಲ್ಪಿಸಲಾಗಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಅಳವಡಿಸಲು ರೂ. 203 ಕೋಟಿ ವೆಚ್ಚ ಮಾಡಲಾಗಿದೆ.
  ರೂ. 1898 ಕೋಟಿ ಅನುದಾನದಲ್ಲಿ ಕೃಷಿ ಹೊಂಡ, ಪಾಲಿ ಹೌಸ್ ನಿರ್ಮಾಣ ಹಾಗು ರೂ. 1.9 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.

  ರೈತರಿಗೆ ಸಾಲ, ಸಣ್ಣ ನೀರಾವರಿ

  ಸಣ್ಣ ನೀರಾವರಿಗಾಗಿ ರೂ. 2090 ಕೋಟಿ ಅನುದಾನ ಮೀಸಲು.
  ಹಲವಾರು ಸಮಸ್ಯೆಗಳ ಸಿಲುಕಿರುವ ರೈತರಿಗೆ ಶೇ. 3ರ ಬಡ್ಡಿದರದಲ್ಲಿ ರೂ. 10 ಲಕ್ಷ ಸಾಲ ಬಿಡುಗಡೆ. ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುವುದು.

  ಸಹಕಾರ ಕ್ಷೇತ್ರ

  ಸಹಕಾರ ಕ್ಷೇತ್ರದ ಅಭಿವೃದ್ದಿಗಾಗಿ ರೂ. 1663 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು.

  ಕೃಷಿಭಾಗ್ಯ ಯೋಜನೆ

  ಕೃಷಿಭಾಗ್ಯ ಯೋಜನೆ ಜಾರಿ ತಂದಿರುವ ಸರ್ಕಾರ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಅವಕಾಶ ನೀಡುವ ಉದ್ದೇಶ ಹೊಂದಿದೆ. ಕೃಷಿ ಇಲಾಖೆಗೆ ರೂ. 429 ಕೋಟಿ ಅನುದಾನ ಮೀಸಲು. ಕೃಷಿಭಾಗ್ಯ ಯೋಜನೆಗೆ ರೂ. 600 ಕೋಟಿ ಅನುದಾನ, ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಾರರಿಗೆ ರೂ. 24 ಕೋಟಿ ಅನುದಾನ ಮೀಸಲು.

  ವಿದ್ಯಾರ್ಥಿಗಳಿಗೆ ಉಚಿತ ಪಾಸ್

  ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಲಾಗುವುದು. 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಾಸುಗಳನ್ನು ನೀಡುವ ಗುರಿ ಇದೆ.

  ಮಹಿಳಾ ಸುರಕ್ಷತೆ

  ಮಹಿಳಾ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, 1000 ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು.

  ಕಂದಾಯ ಇಲಾಖೆ ಅನುದಾನ

  ಕಂದಾಯ ಇಲಾಖೆಗೆ ರೂ. 6642 ಕೋಟಿ ಅನುದಾನ ಮೀಸಲು. ಮದ್ಯದ ಮೇಲಿನ ಸುಂಕವನ್ನು ಶೇ. 8ರಷ್ಟು ಏರಿಕೆ.

  ಕುರಿಸಾಕಾಣೆಗೆ ಪ್ರೋತ್ಸಾಹ

  ರಾಜ್ಯದಲ್ಲಿ ಕುರಿ ಮತ್ತು ಆಡು ಸಾಕಣೆ ಉದ್ಯಮ ಲಾಭದಾಯಕವಾಗಿದ್ದು, 25ಸಾವಿರ ಘಟಕ ಸ್ಥಾಪನೆ ಮಾಡಲಾಗುವುದು. ಮೇವಿನ ಕೊರತೆ ನೀಗಿಸಲು ಮೇವು ಬೆಳೆ ಉತ್ಪಾದನೆ, ರಸ ಮೇವು ಉತ್ಪಾದನೆಗೆ ಆದ್ಯತೆ ನೀಡವುದಕ್ಕಾಗಿ ರಾಜ್ಯ 'ಮೇವು ಭದ್ರತಾ ನೀತಿ' ರೂಪಿಸಲಾಗುತ್ತದೆ
  ಅಲೆಮಾರಿ ಸಮುದಾಯಗಳು ತಮ್ಮ ಆಡು, ಕುರಿ ಸಾಕಲು ಅಗತ್ಯ ಸಹಹಾರ ನೀಡಲಾಗುವುದು.

  ವಿದ್ಯುತ್ ಕೇಂದ್ರಗಳ ಸ್ಥಾಪನೆ

  ವಿದ್ಯುತ್ ಸಮಸ್ಯೆ ನಿವಾರಣೆಗಾಗಿ 34 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು.

  ಸಾರಿಗೆ ಇಲಾಖೆಗೆ 9271 ಕೋಟಿ

  ಸಾರಿಗೆ ಇಲಾಕೆ, ಲೋಕೋಪಯೋಗಿ ಹಾಗು ಬಂದರು ಇಲಾಖೆಗೆ ರೂ. 9271 ಕೋಟಿ ಅನುದಾನ. ಇಂಧನ ಇಲಾಖೆಗೆ ರೂ. 14136 ಕೋಟಿ ಅನುದಾನ ಮೀಸಲಿಡಲಾಗಿದೆ.

  ಲೈವ್ ಮ್ಯೂಸಿಯಂ ನಿರ್ಮಾಣ

  ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ರೇಷ್ಮೆ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ. ಚನ್ನಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಲೈವ್ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು.

  ಶಾಲೆಗಳ ನಿರ್ಮಾಣ

  ಸರ್ಕಾರಿ ಶಾಲೆಗಳ ನವೀಕರಣಕ್ಕೆ ಆಧ್ಯತೆ ನೀಡಲಾಗಿದ್ದು, 100 ಸಂಯೋಜಿತ ಕರ್ನಾಟಕ ಸಾರ್ವಜನಿಕ ಸಾಲೆಗಳ ನಿರ್ಮಾಣ. ಪ್ರತಿ ಶಾಲೆಗೆ ರೂ. 5 ಲಕ್ಷದಂತೆ ರೂ. 5 ಕೋಟಿ ವೆಚ್ಚ ಮಾಡಲಾಗುವುದು. ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ.

  ಮಲ್ಟಿ ಲೇವೆಲ್ ಕಾರ್ ಪಾರ್ಕಿಂಗ್

  ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ಬಳಿ ರೂ. 20 ಕೋಟಿ ವೆಚ್ಚದಲ್ಲಿ ಮಲ್ಟಿ ಲೇವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ. ಐಟಿಬಿಟಿ ವಲಯಕ್ಕೆ ರೂ. 247 ಕೋಟಿ ಅನುದಾನ.

  ವನ್ಯಜೀವಿಗಳ ದಾಳಿಗೆ ಪರಿಹಾರ

  ವನ್ಯಜೀವಿಗಳ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ. ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕ್ರಮ, ರೈತರಿಗೆ ಸಸಿ ವಿತರಣೆ, ವನ್ಯಜೀವಿಗಳ ರಕ್ಷಣೆಗೆ ಕಾರ್ಯಕ್ರಮ.

  ಕೊಂಕಣಿ, ಬಸವ ಅಧ್ಯಯನ ಪೀಠ

  ಧಾರವಾಡ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ, ಮೈಸೂರು ವಿವಿಯಲ್ಲಿ ಬಸವ ಪೀಠ ಸ್ಥಾಪನೆ, ರಾಣಿ ಚೆನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ. ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ.

  ಸರ್ಕಾರಿ ಕಾಲೇಜು ಶುಲ್ಕವಿಲ್ಲ

  ಪದವಿ, ಪದವಿಪೂರ್ವ, ಸ್ನಾತಕೋತ್ತರ ಪದವಿ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶುಲ್ಕ ಇರುವುದಿಲ್ಲ.

  ಆರೋಗ್ಯ ಕರ್ನಾಟಕ ಯೋಜನೆ

  ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿ ತರಲಾಗುವುದು. ವರ್ಷಾಂತ್ಯದ ಒಳಗೆ ಯುನಿವರ್ಷಲ್ ಹೇಲ್ತ್ ಕವರೇಜ್ ಜಾರಿ. ಪ್ರಾಥಮಿಕ ಆರೋಗ್ಯ ಕೇಂ ದ್ರಗಳಾನ್ನು ಮೇಲ್ದರ್ಜೆಗೆರಿಸಲು ಕ್ರಮ.

  ಮಹಿಳೆಯರಿಗೆ ಸಾಲ

  ಮಹಿಳೆಯರ ಸಬಲೀಕರಣಕ್ಕಾಗಿ ಸಾಲದ ಗರಿಷ್ಟ ಮಿತಿಯನ್ನು ರೂ. 1 ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ. ನಗರ ಪ್ರದೇಶಗಳಲ್ಲಿ 259 ಅಂಗನವಾಡಿ ಕೇಂದ್ರಗಳ ಸ್ಥಾಪನೆ. ಒಂದು ಅಂಗನವಾಡಿಗಳ ಕಟ್ಟಡಗಳಾ ಉನ್ನತೀಕರಣ.

  ಅಲ್ಪಸಂಖ್ಯಾತರ ಕೇಂದ್ರ ಸ್ಥಾಪನೆ

  ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುವುದು.

  ಅಲ್ಪಸಂಖ್ಯಾತ ಸಮುದಾಯಗಳಿಗೆ ಬೃಹತ್ ಅನುದಾನ

  ಸವಿತಾ ಸಮಾಜ, ತಿಗಳ ಸಮಾಜ, ಮಡಿವಾಳ ಸಮಾಜಕ್ಕೆ ನೂರು ಕೋಟಿ ಅನುದಾನ ಮೀಸಲು.
  ಜೈನ್ ಮತ್ತು ಸಿಖ್ ಸಮುದಾಯಗಳಿಗಾಗಿ ರೂ. 80 ಕೋಟಿ ಅನುದಾನ. ಕ್ರಿಶ್ಚಿಯನ್ ಅಬ್ಯುದಯ ಹಾಗು ವಿವಿಉಧ ಯೋಜನೆಗಳ ಅನುಷ್ಟಾನಕ್ಕಾಗಿ ರೂ. 200 ಕೋಟಿ ಮೀಸಲು

  ಮಾಸಾಶನ ಹೆಚ್ಚಳ

  ವೃದ್ದಾಪ್ಯ ವೇತನ ಹೆಚ್ಚಳ, ವಿಧವಾ ವೇತನ, ಸಂಧ್ಯಾ ಸುರಕ್ಷ, ಮನಸ್ವಿನಿ, ಮೈತ್ರಿ ಯೋಜನೆಗಳ ತಿಂಗಳ ಪಿಂಚಣಿ ಮೊತ್ತ ರೂ. 500 ರಿಂದ 600 ಹೆಚ್ಚಳ. ಅಂಗವೈಕಲ್ಯಕ್ಕೆ ರೂ. 200 ಮಾಸಾಶನ ಹಾಗು ದಿವ್ಯಾಂಗರ ಮಾಸಾಶನ ಹೆಚ್ಚಳ.

  ಪತ್ರಕರ್ತರ ಭವನ ನಿರ್ಮಾಣ

  ಮಾದ್ಯಮ ಸಂಜೀವಿನಿ ಅಡಿ ಪತ್ರಕರ್ತರಿಗೆ ರೂ. 5 ಲಕ್ಷ ವಿಮೆ, ಬೆಂಗಳೂರಿನಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ಕಟ್ಟಡ ನಿರ್ಮಾಣ

  ಸಮಾಜ ಕಲ್ಯಾಣ ಇಲಾಖೆ, ಅಂಗನವಾಡಿ

  ಸಮಾಜ ಕಲ್ಯಾಣ ಇಲಾಖೆಗೆ ರೂ. 6528 ಕೋಟಿ ಅನುದಾನ ಮೀಸಲು.
  ನಗರ ಪ್ರದೇಶಗಳಲ್ಲಿ 250 ಅಂಗನವಾಡಿ ನಿರ್ಮಾಣ ಮಾಡಲು ರೂ. 17 ಕೋಟಿ ಅನುದಾನ ಮೀಸಲು.

  ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಬಂಪರ್

  ಬೆಂಗಳೂರು ನಗರನ್ನು ನೂರೆಂಟು ಕನಸುಗಳನ್ನು ಹೊತ್ತು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ, ಸಂದರ್ಶನಕ್ಕೆ ಬರುವ ಯುವತಿಯರಿಗಾಗಿ ಖಾಸಗಿ ಸಹಯೋಗದಲ್ಲಿ ಹಾಸ್ಟೇಲ್ ಸ್ಥಾಪನೆ ಮಾಡಲಾಗುವುದು.
  ಕೆಪಿಎಸ್ಸಿಯ ವಿವಿಧ ಉದ್ಯೋಗಳಿಗೆ ಅರ್ಜಿ ಸಲ್ಲಿಸುವ ಈಗೀರುವ ಶುಲ್ಕ ವಿನಾಯಿತಿಯನ್ನು ಮಹಿಳೆಯರಿಗೆ, ವಿಕಲಚೇತನರಿಗೆ ನೀಡಲಾಗುವುದು.

  ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ

  ಅನ್ಯಜಾತಿಯರ/ಬೇರೆ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುವ ಪ.ಜಾತಿ, ಪ.ಪಂಗಡ, ಅನ್ಯ ವರ್ಗದ ಯುವಕರಿಗೆ ರೂ. 2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು.

  ಓಬಿಸಿ ವರ್ಗಕ್ಕೆ ಬಂಪರ್

  ರಾಜ್ಯದ ಹಿಂದುಳಿದ ವರ್ಗಗಳಿಗೆ ರೂ. 3172 ಕೋಟಿ ಅನುದಾನ ಮೀಸಲು. ಎಸ್ಸಿ ಹಾಗು ಎಸ್ಟಿ ಯುವಕರು ಅನ್ಯಜಾತಿಯ ಹುಡುಗಿಗೆ ವಿವಾಹವಾದರೆ ರೂ. 2 ಲಕ್ಷ ಪ್ರೋತ್ಸಾಹಧನ.

  ದೇವದಾಸಿಯರ ಸಬಲೀಕರಣ

  ನಮ್ಮ ರಾಜ್ಯದಲ್ಲಿ ದೇವದಾಸಿಯರ ಸಬಲೀಕರಣ ಮಹತ್ವದ ವಿಚಾರವಾಗಿದ್ದು, ಅವರಿಗೆ ಸಾಲ ಹಾಗು ಸಹಾಯಧನ ನೀಡಲಾಗುವುದು. ದೇವದಾಸಿ ಸಮಾಜದ ಗಂಡಸರಿಗೆ ರೂ. 3 ಲಕ್ಷ ಪ್ರೋತ್ಸಾಹಧನ.

  ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಅನುದಾನ

  ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಪ್ರಾಧಿಕಾರಕ್ಕೆ ರೂ. 267 ಕೋಟಿ ಮೀಸಲು. ಕುಂಬಾರ ಜನಾಂಗದ ಅಭಿವೃದ್ದಿಗೆ ರೂ. 100 ಕೋಟಿ ಮೀಸಲು,
  ಹುಣಸೂರು ಮತ್ತು ಎಚ್ ಡಿ ಕೋಟೆಯಲ್ಲಿ ಆದಿವಾಸಿ ಸಮುದಾಯ ಭವನ ನಿರ್ಮಾಣ.

  ಮಹಿಳಾ ಮತ್ತು ಮಕ್ಕಳ ಕಲ್ಯಾಣ

  ಸರ್ಕಾರ ಪ್ರಸ್ತುತ ಹಣಕಾಸು ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರೂ. 5371 ಕೋಟಿ ಅನುದಾನ ಮೀಸಲು.

  ಕರ್ನಾಟಕ ನಾವೀನ್ಯತಾ ಪ್ರಾಧಿಕಾರ

  ರಾಜ್ಯದ ವಿವಿಧ ವಲಯಗಳಲ್ಲಿನ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ಸ್ಥಾಪನೆ ಮಾಡಲು ಮುಂದಾಗಿದೆ. ಉದ್ಯಮಗಳ ಉತ್ತೇಜನಕ್ಕಾಗಿ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಡಿಸೈನ್ ಸ್ಥಾಪನೆ ಮಾಡಲಾಗುವುದು.

  ಪ್ರವಾಸೋದ್ಯಮಕ್ಕೆ 459 ಕೋಟಿ

  ಪ್ರವಾಸೋದ್ಯಮ ಇಲಾಖೆಗೆ ರೂ. 459 ಕೋಟಿ ಅನುದಾನ ಮೀಸಲಿರಿಸಲಾಗಿದ್ದು, ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ದಿಗಾಗಿ ಚಲನಚಿತ್ರ ಅಭಿವೃದ್ದಿ ನೀತಿ ಜಾರಿ ತರಲಾಗುವುದು. ಕಲೆ ಸಂಸ್ಕೃತಿ ಅಭಿವೃದ್ದಿಗೆ ಪ್ರೋತ್ಸಾಹ.

  ಮುಖ್ಯಮಂತ್ರಿ ಅನಿಲ ಯೋಜನೆಗೆ 1350 ಕೋಟಿ ಮೀಸಲು

  ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ರೂ. 1350 ಕೋಟಿ ಮೀಸಲು ಇಡಲಾಗಿದೆ. 30 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಡಿ ಗ್ಯಾಸ್ ಸ್ಟೌ ನೀಡಲಾಗುವುದು.
  ಆಹಾರ ಮತ್ತು ಸರಬರಾಜು ಇಲಾಖೆಗೆ ರೂ. 3882 ಕೋಟಿ ಅನುದಾನ ಮೀಸಲಿರಿಸಲಾಗಿದೆ.

  20 ಲಕ್ಷ ಮನೆ ನಿರ್ಮಾಣ

  ಮುಂದಿನ ಐದು ವರ್ಷಗಳಲ್ಲಿ ಸುಮಾರು 20 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, ವಸತಿ ಇಲಾಕೆಗೆ ರೂ. 39429 ಕೋಟಿ ಬಜೆಟ್ ಮೀಸಲಿಟ್ಟಿದೆ.

  ಓಬಿಸಿ ನಿರುದ್ಯೋಗಿಗಳಿಗೆ ಸಾಲ

  ಹಿಂದುಳಿದ ವರ್ಗಗಳ ನಿರುದ್ಯೋಗಿ ಪಧವಿದರರ ಸ್ವಯಂ ಉದ್ಯೋಗಕ್ಕಾಗಿ ರೂ. 10 ಲಕ್ಷದವರೆಗೆ ಸಾಲಸೌಲಭ್ಯ ನೀಡಲಾಗುವುದು. ಇಅದಕ್ಕೆ ವಾರ್ಷಿಕ ಬಡ್ಡಿದರ ಶೇ. 6. ಹಿಂದುಳಿದವರ ಉದ್ಯೋಗ ಮತ್ತು ಶಿಕ್ಷಣ ಉತ್ತೇಜನಕ್ಕಾಗಿ ಕ್ರಮ.

  ಗ್ರಾಮೀಣರಿಗೆ ಉದ್ಯೋಗ

  ಗ್ರಾಮೀಣ ಪ್ರದೇಶದವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, 30 ಎಕರೆ ಬಂಜರು ಭೂಮಿಯನ್ನು ಉದ್ಯಮ ವಲಯವನ್ನಾಗಿ ಘೋಷಣೆ ಮಾಡೈದೆ. ರೂ. 23 ಕೋಟಿ ಅನುದಾನದಲ್ಲಿ ಕಲಿಕಾ ಶ್ರೇಷ್ಟತಾ ಕೇಂದ್ರದ ಸ್ಥಾಪನೆ ಮಾಡಾಲಾಗುವುದು.

  English summary

  Karnataka Budget 2018: Complete details of Siddaramaiah's Budget..

  Karnataka Chief Minister Siddaramaiah, who also holds the Finance portfolio, would set a record of sorts on Friday by presenting his 13th state budget and 6th in a row.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more